Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ರಕ್ತದಾನ ಮಾಡುವುದರಿಂದ ಆಗುವ ಅಪಾರ ಆರೋಗ್ಯದ ಉಪಯೋಗಗಳನ್ನ ಪಡೆಯಿಡರಿ ..!

ರಕ್ತದಾನ ಮಾಡುವುದರಿಂದ ಎಷ್ಟೊಂದು ಆರೋಗ್ಯಕರ ಪ್ರಯೋಜನಗಳಿವೆ ಆದರೆ ಕೆಲ ಮಂದಿಗೆ ರಕ್ತದಾನ ಮಾಡುವುದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ ಅನ್ನುವ ಯೋಚನೆಯಲ್ಲಿ ಇರುತ್ತಾರೆ. ಆದಕಾರಣವೆ ಇಂತಹ ಎಲ್ಲ ಗೊಂದಲಗಳಿಂದಾನೆ ಇಂದಿಗೂ ಕೂಡ ಯಾವುದೆ ಅವಶ್ಯಕವಿರುವ ವ್ಯಕ್ತಿಗೆ ಅವಶ್ಯಕ ರಕ್ತ ದೊರೆಯದೆ ಇರುವುದು, ಅನೇಕ ಮಂದಿ ರಕ್ತ ಸಿಗದೆ ಸಾವನ್ನಪ್ಪಿರುವ ನಿದರ್ಶನಗಳು ಕೂಡ ಇವೆ.

ಆದರೆ ಇಂದಿನ ಮಾಹಿತಿಯನ್ನ ನೀವು ಸಂಪೂರ್ಣವಾಗಿ ತಿಳಿಯಿರಿ ರಕ್ತದಾನ ಮಾಡುವುದರಿಂದ ಏನೆಲ್ಲಾ ಆರೋಗ್ಯಕರ ಲಾಭಗಳಿವೆ ಎಂಬುದನ್ನ ತಿಳಿಯುವುದರೊಂದಿಗೆ ಯಾವ ವ್ಯಕ್ತಿ ಎಷ್ಟು ಪ್ರಮಾಣದಲ್ಲಿ ರಕ್ತವನ್ನು ನೀಡಬಹುದು ಮತ್ತು ರಕ್ತದಾನ ಮಾಡುವಾಗ ನಾವು ತಿಳಿದುಕೊಳ್ಳಬೇಕಾಗಿರುವ ಕೆಲವೊಂದು ವಿಚಾರಗಳು ಏನು ಅನ್ನೋ ಪ್ರತಿ ಮಾಹಿತಿಯನ್ನು ತಿಳಿಯುವುದು ಇವತ್ತಿನ ಈ ಉಪಯುಕ್ತ ಲೇಖನದಲ್ಲಿ.

ಮೊದಲನೆಯದಾಗಿ ಈ ರಕ್ತದಾನವನ್ನು ಮಹಿಳೆಯರು ಮತ್ತು ಗಂಡಸರು ಇಬ್ಬರು ಕೂಡ ಮಾಡಬಹುದು ಆದರೆ ಹದಿನೆಂಟು ವರ್ಷ ಮೇಲ್ಪಟ್ಟ ಮಂದಿ ಮಾತ್ರ ರಕ್ತದಾನ ಮಾಡಲು ಸಾಧ್ಯ ಇನ್ನೂ ರಕ್ತದಾನ ಮಾಡುವಂತೆ ವ್ಯಕ್ತಿಯಲ್ಲಿ ಹಿಮೊಗ್ಲೋಬಿನ್ ಸುಮಾರು 12.5 ಪ್ರತಿಶತದಷ್ಟು ಇರಲೇಬೇಕು ಅಂಥವರಲ್ಲಿ ಮಾತ್ರ ಈ ರಕ್ತವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಒಬ್ಬ ವ್ಯಕ್ತಿಯಲ್ಲಿ ಕೇವಲ ಮುನ್ ನೂರ ಐವತ್ತು ಎಂಎಲ್ ನಷ್ಟು ರಕ್ತವನ್ನು ಮಾತ್ರ ತೆಗೆದುಕೊಳ್ಳುವುದಕ್ಕೆ ಸಾಧ್ಯ ಇದಕ್ಕೂ ಮೀರಿ ರಕ್ತವನ್ನ ತೆಗೆದುಕೊಳ್ಳುವುದಿಲ್ಲ.

ವ್ಯಕ್ತಿಯ ತೂಕ ನಲ್ವತ್ತೈದು ಕೆ ಜಿ ಗಿಂತ ಹೆಚ್ಚು ಇರಬೇಕು ಆಗಲೇ ಅಂತಹ ವ್ಯಕ್ತಿಯಿಂದ ರಕ್ತವನ್ನು ತೆಗೆದು ಕೊಳ್ಳಲು ಸಾಧ್ಯ. ರಕ್ತವನ್ನು ನೀಡಿದ ವ್ಯಕ್ತಿ 1ಗಂಟೆಗಳ ವರೆಗೂ ವಿಶ್ರಾಂತಿಯನ್ನು ತೆಗೆದುಕೊಳ್ಳಲೇಬೇಕು ಮತ್ತು ರಕ್ತ ಕೊಟ್ಟು ಇಪ್ಪತ್ತ್ 4ಗಂಟೆಗಳ ಕಾಲ ಯಾವುದೇ ರೀತಿಯ ಲಸಿಕೆ ಅನ್ನು ತೆಗೆದುಕೊಳ್ಳುವಂತಿಲ್ಲ. ಇನ್ನು ಯಾರೆಲ್ಲ ರಕ್ತದಾನವನ್ನು ಮಾಡುವುದು ನಿಷೇಧ ಅಂತಾ ಹೇಳುವುದಾದರೆ, ಧೂಮಪಾನ ಮದ್ಯಪಾನ ಮಾಡಿದಂಥ ವ್ಯಕ್ತಿಗಳು ಹಾಲುಣಿಸುವ ಮಹಿಳೆಯರು ಗರ್ಭಾವಸ್ಥೆಯಲ್ಲಿರುವ ಹೆಣ್ಣುಮಕ್ಕಳು ಮತ್ತು ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಂದ ,

ಬಳಲುತ್ತಿರುವವರು ಯಾವುದೇ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಚಿಕಿತ್ಸೆ ಯನ್ನು ಪಡೆದುಕೊಳ್ಳುತ್ತ ಇದ್ದವರು ಕೂಡ ರಕ್ತದಾನ ಮಾಡುವುದಕ್ಕೆ ಸಾಧ್ಯವಿಲ್ಲ ಕಾಮಾಲೆ ಹೆಚ್ ಐವಿ ಇಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ಕೂಡ ರಕ್ತದಾನ ಮಾಡುವಂತಿಲ್ಲ ಚಿಕನ್ ಗುನ್ಯಾ ಮಲೇರಿಯಾ ಇಂತಹ ಸಮಸ್ಯೆಗಳಿಂದ ಬಳಲುವವರು ಕೂಡ ರಕ್ತದಾನ ಮಾಡುವಂತಿಲ್ಲ.

ರಕ್ತ ದಾನ ಮಾಡುವಂತಹ ವ್ಯಕ್ತಿ ಈ ಹಿಂದೆ 3ತಿಂಗಳುಗಳ ಕಾಲ ರಕ್ತದಾನವನ್ನು ಮಾಡಿರಬಾರದು. ರಕ್ತದಾನವನ್ನು ಗಂಡಸರಾದರೆ 3ತಿಂಗಳಿಗೊಮ್ಮೆ ಮಾಡಬಹುದು ಹೆಣ್ಣುಮಕ್ಕಳಾದರೆ 6ತಿಂಗಳಿಗೊಮ್ಮೆ ಮಾಡಬಹುದು. ಈ ರೀತಿಯಾಗಿ ರಕ್ತದಾನ ಮಾಡುವುದರಲ್ಲಿ ಕೂಡ ಕೆಲವೊಂದು ನಿಯಮಗಳಿರುತ್ತವೆ. ಇವತ್ತಿನ ಈ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ತಪ್ಪದೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಇನ್ನು ಕೆಲವರಿಗೆ ಅಂತೂ ಅಪಘಾತಕ್ಕೆ ಒಳಗಾದಾಗಲೇ ರಕ್ತದಾನದ ಮಹತ್ವ ತಿಳಿಯುತ್ತದೆ. ಏನಂತೀರ ಫ್ರೆಂಡ್ಸ್ ಇಂದಿನ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ತಪ್ಪದೆ ಮಾಹಿತಿಗೆ ಒಂದು ಲೈಕ್ ಮಾಡಿ ಹಾಗೂ ಕಮೆಂಟ್ ಮಾಡಿ ನಿಮ್ಮ ಅನಿಸಿಕೆಯನ್ನು ತಪ್ಪದೇ ಕಾಮೆಂಟ್ ಮಾಡುವುದನ್ನು ಮರೆಯದಿರಿ ಶುಭ ದಿನ ಆರೋಗ್ಯದಿಂದಿರಿ ಧನ್ಯವಾದ.