Categories
ಭಕ್ತಿ ಮಾಹಿತಿ ಸಂಗ್ರಹ

ರಾಘವೇಂದ್ರ ಸ್ವಾಮಿಗಳು ತನ್ನ ಶಿಷ್ಯ ಅಪ್ಪಣ್ಣನಿಗಾಗಿ ಪ್ರತಿ ನಿತ್ಯ ಬೆಳ್ಳಗೆ ಈ ಪವಾಡ ಈಗಲೂ ಕೂಡ ಮಾಡುತ್ತಾ ಇದ್ದಾರೆ

ನಮಗೆ ನಿಮಗೆ ಎಲ್ಲರಿಗೂ ಗೊತ್ತಿರುವ ಹಾಗೆ ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಯವರ ದೇವಸ್ಥಾನವಿದೆ. ಇಲ್ಲಿ ದಿನಕ್ಕೆ ಸಾವಿರಾರು ಜನ ರಾಘವೇಂದ್ರ ಸ್ವಾಮಿಯವರ ದರ್ಶನವನ್ನು ಮಾಡಲು ಬರುತ್ತಾರೆ. ರಾಘವೇಂದ್ರ ಸ್ವಾಮಿ ಅವರ ಪವಾಡವನ್ನು ತಿಳಿಯಲು ಇಲ್ಲಿಗೆ ಸಾವಿರಾರು ಜನರು ತಂಡೋಪತಂಡವಾಗಿ ಬರುತ್ತಾರೆ.

ಮಂತ್ರಾಲಯವು ರಾಯಚೂರಿನ ಹತ್ತಿರ ಇದೆ. ಹಾಗೆ ತುಂಗಭದ್ರ ನದಿ ಇದರ ಪಕ್ಕದಲ್ಲಿ ಹರಿಯುತ್ತದೆ . ನೂರಾರು ವರ್ಷಗಳ ಹಿಂದೆ ಇಲ್ಲಿನ ದಂಪತಿಗಳಿಗೆ ಮಕ್ಕಳು ಆಗುವುದಿಲ್ಲ, ತಮಗೆ ಮಕ್ಕಳು ಆಗುವುದಿಲ್ಲ ಎಂದು ಅವರು ದೇವಸ್ಥಾನದ ಅಡಿಯಲ್ಲಿ ದೇವರನ್ನು ಗೋಗರೆಯುತ್ತಾರೆ.

ಹಾಗೆ ಗೋಗರೆದಾಗ ತಂದೆತಾಯಿಗಳಿಗೆ ದೇವರು ಪ್ರತ್ಯಕ್ಷವಾಗಿ ಅಶರೀರ ವಾಣಿಯಲ್ಲಿ ನಿಮಗೆ ಹುಟ್ಟುವಂತಹ ಮಗ ಪ್ರಪಂಚಕ್ಕೆ ಮಾರ್ಗದರ್ಶಿ ಆಗುವಂತಹ ಮಗ ಹುಟ್ಟುತ್ತಾನೆ ಎಂದು ಹೇಳಿ ಬಿಡುತ್ತಾರೆ. ಆ ದಂಪತಿಗಳಿಗೆ ಹುಟ್ಟಿದಂತಹ ಮಗನೇ ಶ್ರೀ ರಾಘವೇಂದ್ರ ಸ್ವಾಮೀಜಿ.

ಇವರು ಹುಟ್ಟು ಬೆಳೆದ ಮೇಲೆ ಆಧ್ಯಾತ್ಮಿಕವಾಗಿ ಅತಿಹೆಚ್ಚು ಪ್ರಭಾವಿತರಾಗುತ್ತಾರೆ. ಈಗಲೂ ಸಹ ರಾಘವೇಂದ್ರ ಸ್ವಾಮಿ ಮಂತ್ರಾಲಯದಲ್ಲಿ ಬೆಳಗಿನ ಜಾವದಲ್ಲಿ ಒಂದು ಜ್ಯೋತಿ ಮಂತ್ರಾಲಯದಿಂದ ಈ ಹಳ್ಳಿಗೆ ಹೋಗುತ್ತದೆಯಂತೆ.

ಯಾಕೆ ಗೊತ್ತಾ.ಹೌದು  ಸ್ನೇಹಿತರ ಈಗಲೂ ಕೂಡ ಮಂತ್ರಾಲಯದ ಬೆಳಗ್ಗೆ ಸುಮಾರು ಐದು ಗಂಟೆಗೆ ಒಂದು ಜ್ಯೋತಿ ದೇವಸ್ಥಾನದ  ಹಿಡಿದು ತುಂಗಭದ್ರ ನದಿಯನ್ನು ದಾಟಿ ಬಿಚ್ಚಾಲೆ ಎನ್ನುವ ಗ್ರಾಮಕ್ಕೆ ಹೋಗುತ್ತದೆ.

ಈ ತರದ ವಿಸ್ಮಯಕರವಾದ ಜ್ಯೋತಿಯನ್ನು ಕೆಲವು ಭಕ್ತರು ನೋಡಿದ್ದಾರೆ. ಜ್ಯೋತಿ ಮಂತ್ರಾಲಯ ದಿಂದ ಈ ಬಿಚ್ಚಾಲೆ ಎನ್ನುವ ಗ್ರಾಮಕ್ಕೆ ಹೋಗುವುದಾದರೂ ಯಾಕೆ ಅನ್ನುವ ಪ್ರಶ್ನೆಗೆ ಉತ್ತರ , ಶ್ರೀ ರಾಘವೇಂದ್ರ ಸ್ವಾಮೀಜಿ ಅವರು  ತನ್ನ ಶಿಷ್ಯನಿಗೆ ಕೊಟ್ಟಂತಹ ಒಂದು ಮಾತು ಇದರಿಂದಾಗಿ ಪ್ರತಿ ದಿನವೂ ರಾಘವೇಂದ್ರ ಸ್ವಾಮೀಜಿಯವರು ಜ್ಯೋತಿ ರೂಪದಲ್ಲಿ ಈ ಗ್ರಾಮಕ್ಕೆ ಬರುತ್ತಾರೆ ಎನ್ನುವ ಮಾತಿದೆ.

ಈ ವಿಚಾರ ಗ್ರಾಮಕ್ಕೆ ತುಂಬಾ ವಿಶೇಷತೆ ಇದೆ, ಅದು ಏನಪ್ಪಾ ಅಂದರೆ ಶ್ರೀ ರಾಘವೇಂದ್ರ ಸ್ವಾಮೀಜಿ ಅವರು ಮೋಕ್ಷಕ್ಕಾಗಿ ಹಲವಾರು ಸ್ಥಳ ಸುತ್ತಿ ಕೊನೆಗೆ ಅವರಿಗೆ ಮೋಕ್ಷ ಪಡೆಯುವುದಕ್ಕಾಗಿ ಒಂದು ಜಾಗ ಹುಡುಕುತ್ತಿರುತ್ತಾರೆ, ಆ ಜಾಗವನ್ನು ಹುಡುಕುತ್ತಿರುವಾಗ ಅವರಿಗೆ ಕಂಡುಬಂದ ಅಂತಹ ಒಳ್ಳೆಯ ಪ್ರದೇಶ ಎಂದರೆ ಅದು ಬಿಚ್ಚಾಲೆ ಎನ್ನುವ ಹಳ್ಳಿ. ಅವರು ಕೊನೆಗೆ ಬಿಚ್ಚಾಲೆ ಇರುವ ಹಳ್ಳಿಗೆ ಬರುತ್ತಾರೆ ಅಲ್ಲಿ ಅಪ್ಪಣ್ಣಚಾರಿ ಎನ್ನುವಂತಹ ಭಕ್ತನನ್ನು ಭೇಟಿಯಾಗುತ್ತಾರೆ.

ಶ್ರೀ ರಾಘವೇಂದ್ರ ಸ್ವಾಮೀಜಿ ಅವರನ್ನು ನೋಡಿ ಅಪ್ಪಣ್ಣ ಚಾರಿ ತುಂಬಾ ಭಾವುಕರಾಗಿ ಅವರನ್ನು ಪೂಜೆ ಮಾಡಲು ಶುರು ಮಾಡಿಬಿಡುತ್ತಾರೆ, ಅಪ್ಪಣ್ಣಾಚಾರ್ಯರು ಎಷ್ಟು ಹಚ್ಚಿಕೊಂಡಿರುತ್ತಾರೆ ಎಂದರೆ ರಾಘವೇಂದ್ರ ಸ್ವಾಮೀಜಿ ಅವರಿಗೆ ಕಿಂಚಿತ್ತೂ ಪ್ರಾಬ್ಲಮ್ ಬಂದರೂ ಕೂಡ ಅದನ್ನು ಅವರಿಗೆ ಸಹಿಸಿಕೊಳ್ಳುವುದಿಲ್ಲ ಅಷ್ಟೊಂದು ಅವರು ಅವರನ್ನು ಹಚ್ಚಿಕೊಂಡಿರುತ್ತಾರೆ.

ಒಂದು ದಿನ  ಶ್ರೀ ರಾಘವೇಂದ್ರ ಸ್ವಾಮೀಜಿಯವರು ತನ್ನ ಸ್ವಇಚ್ಛೆಯಿಂದಾಗಿ ಶ್ರೀ ಹರಿ ಕೃಪೆ ಅಂತೆ ಮಂಚಾಲೆ ಎನ್ನುವ ಗ್ರಾಮಕ್ಕೆ ಹೋಗಿ ಅಲ್ಲಿಯೇ ಬೃಂದಾವನ ಆಗುವ ಯೋಜನೆಯನ್ನು ಹೊಂದಿರುತ್ತಾರೆ.  ಆದರೆ ಈ ವಿಷಯವನ್ನು ಅಪ್ಪಣ್ಣ ಚಾರಿ ಅವರಿಗೆ ಹೇಳಿದರೆ ನಿಜವಾಗಲೂ ಅವರು ಅತ್ತು ಕರೆದು ಇದನ್ನು ಮಾಡುವುದಕ್ಕೆ ಬಿಡುವುದಿಲ್ಲ ಎಂದು,

ಅವರಿಗೆ ಹೇಳದೆ ಹೋಗಿ ಬಿಡುತ್ತಾರೆ. ಆದರೆ  ಅಪ್ಪಣ್ಣ ಚಾರ್ಯ ಅವರಿಗೆ ರಾಘವೇಂದ್ರ ಸ್ವಾಮೀಜಿಯವರು ಬೃಂದಾವನ ಆಗುತ್ತದೆ ಅನ್ನುವ ವಿಷಯ ತಿಳಿದು ಓಡೋಡಿ ಬರುತ್ತಾರೆ ಆದರೆ ಅವರು ಬರುತ್ತಿರುವ ಜಾಗದಲ್ಲಿ ತುಂಗಭದ್ರ ನದಿ ತುಂಬಿ ತುಳುಕುತ್ತಿರುತ್ತದೆ, ಅದನ್ನು ನೋಡಿ ಮತ್ತೆ ಅಳುತ್ತಾರೆ ಆ ಸಮಯದಲ್ಲಿ ಒಂದು ಅಚ್ಚರಿ ಉಂಟಾಗುತ್ತದೆ ,

ಅವರ ಮೈಮೇಲೆ ಇದ್ದಂತಹ ಒಂದು ಶಾಲು ನದಿಯಲ್ಲಿ  ಮೇಲೆ ನಿಂತು ಬಿಡುತ್ತದೆ ಅದರ ಮೇಲೆ ಅವರು ಕೂತು ಮಂತ್ರವನ್ನು ಪಠಿಸುತ್ತಾ ಬರುತ್ತಾರೆ. ಅವರು ಯಾವಾಗ ಅಲ್ಲಿಗೆ ಬರುತ್ತಾರೆ ಆದರೆ ಹಿಂದೆಯೇ ಅವರ ಬೃಂದಾವನ ಆಗಿಬಿಡುತ್ತದೆ. ಇದನ್ನು ನೋಡಿದ ಅಂತಹ ಅಪ್ಪಣ್ಣಾಚಾರ್ಯರು ತುಂಬಾ ಅಳುತ್ತಾರೆ ಗೋಗರೆಯುತ್ತಾರೆ ಇದನ್ನು ಸಹಿಸಲಾಗದೆ ಬೃಂದಾವನದಲ್ಲಿ ಇರುವ ರಾಘವೇಂದ್ರ ಸ್ವಾಮೀಜಿಯವರು ಅಪ್ಪಣ್ಣ ಚಾರ್ಯ ಅವರೊಂದಿಗೆ ಮಾತನಾಡಲು ಶುರು ಮಾಡುತ್ತಾರೆ.

ನಾನು ಎಲ್ಲೇ ಇದ್ದರೂ ಹಾಗೂ ನನ್ನ ಆತ್ಮವು ಜ್ಯೋತಿ ರೂಪದಲ್ಲಿ  ಪ್ರತಿ ದಿನ ನೀನೆ ಇರುವ ಸ್ಥಳದಲ್ಲಿ ಬಂದು ಹೋಗುತ್ತೇನೆ ಎನ್ನುವ ಒಂದು ಮಾತನ್ನು ಅಪ್ಪಣ್ಣ ಚಾರಿ ಅವರಿಗೆ ಕೊಡುತ್ತಾರೆ. ಅದೇ ಮಾತಿನ ಪ್ರತಿಫಲವಾಗಿ ಈಗಲೂ ಕೂಡ ಶ್ರೀ ರಾಘವೇಂದ್ರ ಸ್ವಾಮಿ ಮಂತ್ರಾಲಯದ ಬೃಂದಾವನ ದಿಂದ ದಿನಾಗಲು ಬಿಚ್ಚಾಲೆ ಎನ್ನುವ ಗ್ರಾಮಕ್ಕೆ ದಿವ್ಯಜ್ಯೋತಿ ಹೋಗುತ್ತದೆ ಅಲ್ಲಿ ಪ್ರತಿ ನಿತ್ಯ ಅಪ್ಪಣ್ಣ ಚಾರ್ಯರು ಪೂಜೆ ಮಾಡುತ್ತಾರೆ ಆದರೆ ಇದು ಸೂಕ್ಷ ಆಗಿದ್ದು ದೇವರ ಕಾರ್ಯಗಳು ಸಾಮಾನ್ಯ ಮನುಷ್ಯನ ಕಣ್ಣಿಗೆ ಕಾಣಿಸುವುದಿಲ್ಲ.

kannadaa inspiration story anda Kannada Health Tips kannada inspiration story and Kannada Health Tips