Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ರಾತ್ರಿ ಊಟದ ನಂತರ ಒಂದು ಚಮಚ ಇದನ್ನ ತಿಂದರೆ ಬೊಜ್ಜು ಕರಗುವುದೇ ಗೊತ್ತಾಗುವುದಿಲ್ಲ…!

ಸಣ್ಣ ಆಗಲು ಬಯಸುವವರು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಪ್ರಯೋಜನವಿಲ್ಲದ ಔಷಧಿಯನ್ನು ಹುಡುಕಿಕೊಂಡು ಹೋಗುತ್ತಾರೆ, ಆದರೆ ನಮ್ಮ ಮನೆಯ ಅಡುಗೆ ಮನೆಯೇ ನಮಗೆ ಸಿದ್ಧ ಔಷಧಗಳನ್ನು ನೀಡುವ ಒಂದು ಶಾಪ್ ಆಗಿದೆ, ಈ ಅಡುಗೆ ಕೋಣೆಯಲ್ಲಿಯೇ ಸಿಗುವ ಅನೇಕ ಪದಾರ್ಥಗಳಲ್ಲಿ ಅಡಗಿದೆ ಬಹು ಉಪಯೋಗಿ ಆರೋಗ್ಯಕರ ಲಾಭಗಳು ಅದನ್ನೇ ನಾನು ಈ ದಿನದ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡಲು ಇಚ್ಛಿಸುತ್ತೇನೆ.

ಅಂತಹ ಅನೇಕ ಪದಾರ್ಥಗಳಲ್ಲಿ ಒಂದಾದ ಅಗಸೆ ಬೀಜದ ಪ್ರಯೋಜನವನ್ನು ತಿಳಿಸಿಕೊಡುವುದರ ಜೊತೆಗೆ ಈ ಅಗಸೆ ಬೀಜವನ್ನು ಹೇಗೆ ಬೊಜ್ಜನ್ನು ಕರಗಿಸಲು ಬಳಸುವುದು ಎಂಬುದನ್ನು ತಿಳಿಸಿಕೊಡುತ್ತೇನೆ, ಇದೇ ರೀತಿಯಲ್ಲಿ ಅಗಸೆ ಬೀಜವನ್ನು ಬಳಸಿ ಉತ್ತಮ ಆರೋಗ್ಯದ ಜೊತೆಗೆ ಸಣ್ಣಗಾಗಲು ಇದು ಸಹಕರಿಸುತ್ತದೆ ಹಾಗೆ ತೂಕವನ್ನು ಕೂಡ ಇಳಿಸುತ್ತದೆ.

ಅಗಸೆ ಬೀಜ ಇದರ ನೋವು ಹೆಚ್ಚಾಗಿ ದಕ್ಷಿಣ ಭಾಗದಲ್ಲಿ ಜನರು ಬಳಸುವುದಿಲ್ಲ, ಈ ಅಗಸೆ ಬೀಜವನ್ನು ಹೆಚ್ಚಾಗಿ ಉತ್ತರ ಕರ್ನಾಟಕದ ಮಂದಿ ಬಳಸುತ್ತಾರೆ. ಚಟ್ನಿಯಲ್ಲಿ ಅಥವಾ ಇನ್ನು ಯಾವುದಾದರೂ ಖಾದ್ಯಗಳಲ್ಲಿ ಬಳಸುವ ಈ ಅಗಸೆ ಬೀಜದಲ್ಲಿ ಅಗಾಧವಾದ ಔಷಧೀಯ ಗುಣವಿದ್ದು ಬಹಳಾನೇ ಪ್ರಯೋಜನಕಾರಿ ಅಂಶವೂ ಇದರಲ್ಲಿ ಅಡಗಿರುವುದನ್ನು ನಾವು ಗಮನಿಸಬಹುದಾಗಿದೆ.

ಅಗಸೆ ಬೀಜವನ್ನು ಹೇಗೆ ಬಳಸಬೇಕು ಯಾವಾಗ ಬಳಸಬೇಕು ಎಂಬುದನ್ನು ಇದೀಗ ತಿಳಿಯೋಣ ಈ ಅಗಸೆ ಬೀಜವನ್ನು ಈ ಕ್ರಮದಲ್ಲಿ ಸೇವಿಸುತ್ತಾ ಬಂದರೆ ಸಾಕು ತೂಕದಲ್ಲಿ ಇಳಿಕೆಯಾಗುವುದನ್ನು ನೀವೇ ಗಮನಿಸಬಹುದು, ಹಾಗೆ ಅಗಸೆ ಬೀಜವನ್ನು ಈ ಕ್ರಮದಲ್ಲಿ ಬಳಸುವುದರಿಂದ ಹೊಟ್ಟೆ ಸುತ್ತಲಿನ ಅನಗತ್ಯ ಕೊಬ್ಬು ಕೂಡಾ ಕರಗುತ್ತದೆ, ಜೊತೆಗೆ ನಾವು ಯಾವುದೇ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳಿಲ್ಲದೆ ಸಣ್ಣಗಾಗಲು ಈ ಅಗಸೆ ಬೀಜದ ಪುಡಿ ಸಹಕರಿಸುತ್ತದೆ.

ಸಣ್ಣಗಾಗಲು ಬಯಸುವವರು ಹೆಚ್ಚಾಗಿ ಊಟ ಬಿಟ್ಟು ಅಥವಾ ಊಟ ಕಡಿಮೆ ಮಾಡಿ ಸಣ್ಣಗಾಗಲು ಬಯಸುತ್ತಾರೆ, ಇದರಿಂದ ಗ್ಯಾಸ್ಟ್ರಿಕ್ ನಂತಹ ಸಮಸ್ಯೆ ಎದುರಾಗಬಹುದು, ಒಂದು ಬಾರಿಗೆ ಈ ಗ್ಯಾಸ್ಟಿಕ್ ಸಮಸ್ಯೆ ಬಂದರೆ ಜೀವನ ಪರ್ಯಂತ ತೊಂದರೆಗಳನ್ನು ಅನುಭವಿಸುತ್ತಲೇ ಇರಬೇಕಾಗುತ್ತದೆ. ಆದ ಕಾರಣ ಊಟ ಬಿಡುವುದು ಊಟ ಕಡಿಮೆ ಮಾಡುವುದು ಇವೆಲ್ಲವೂ ಕೂಡ ಸಣ್ಣಗಾಗುವುದಕ್ಕೆ ಪರಿಹಾರವೂ ಅಲ್ಲವೇ ಅಲ್ಲ.

ಈ ಅಗಸೆ ಬೀಜವನ್ನು ಹುರಿದಿಟ್ಟುಕೊಂಡು ಪುಡಿ ಮಾಡಿಕೊಳ್ಳಿ ಅಥವಾ ಅಗಸೆ ಬೀಜವನ್ನು ಹುರಿಯದೆ ಹಾಗೆಯೂ ಪುಡಿ ಮಾಡಿ ಇಟ್ಟುಕೊಳ್ಳಬಹುದು, ಆದರೆ ಈ ಪುಡಿ ಮಾಡಿ ಇಟ್ಟುಕೊಂಡಂತಹ ಅಗಸೆ ಬೀಜವನ್ನು ಕೇವಲ ಎರಡರಿಂದ ಮೂರು ದಿನಗಳವರೆಗೆ ಮಾತ್ರ ಶೇಖರಿಸಿ ಇಟ್ಟುಕೊಳ್ಳಬಹುದು, ಅದಾದ ನಂತರ ಅಗಸೆ ಬೀಜದ ಪುಡಿ ಕೆಡುವ ಸಾಧ್ಯತೆ ಇರುತ್ತದೆ.

ಆದ ಕಾರಣ ಎರಡರಿಂದ ಮೂರು ದಿನಗಳವರೆಗೂ ಶೇಖರಿಸಿ ಇಟ್ಟುಕೊಳ್ಳಬಹುದಾದಷ್ಟು ಪ್ರಮಾಣದ ಅಗಸೆ ಬೀಜವನ್ನು ಪುಡಿ ಮಾಡಿ ಇಟ್ಟುಕೊಳ್ಳಿ, ನಂತರ ಈ ಅಗಸೆ ಬೀಜದ ಪುಡಿಯನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬಿಸಿ ನೀರಿಗೆ ಬೆರೆಸಿ ಕುಡಿಯುತ್ತಾ ಬಂದರೆ, ಅನಗತ್ಯ ಕೊಬ್ಬು ಕರಗುವುದರ ಜತೆಗೆ ಇನ್ನು ಸಾಕಷ್ಟು ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳಬಹುದಾಗಿದೆ.

ಈ ದಿನ ತಿಳಿಸಿದ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ನಾನು ಭಾವಿಸುತ್ತೇನೆ, ಹಾಗೆ ಯಾರು ಅನಗತ್ಯ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುತ್ತಾರೊ, ಪ್ರತಿನಿತ್ಯ ಅದನ್ನೇ ಯೋಚಿಸುವ ಅವಶ್ಯಕತೆ ಬೇಡ. ಇದಕ್ಕಾಗಿ ಸರಿಯಾದ ಸಮಯಕ್ಕೆ ಊಟ ಮತ್ತು ಸ್ವಲ್ಪ ಯೋಗ ಅಥವಾ ಎಕ್ಸಸೈಸ್ ಹಾಗೆ ನಾನು ಈ ದಿನ ತಿಳಿಸಿದಂತಹ ಪರಿಹಾರವನ್ನು ಮಾಡಿ ಸಾಕು ಒಳ್ಳೆ ಆರೋಗ್ಯದೊಂದಿಗೆ ತೂಕ ಇಳಿಸಿಕೊಳ್ಳಬಹುದು.