Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ರಾತ್ರಿ ಕಡಲೆಕಾಳು ನೆನೆಸಿಟ್ಟು ಬೆಳಗ್ಗೆ ತಿಂದರೆ ಏನೆಲ್ಲಾ ಲಾಭಗಳು ಇದೆ ಗೊತ್ತಾ..!

ಸಾಕಷ್ಟು ಮಂದಿಗೆ ಬಾದಾಮಿ ಗೋಡಂಬಿ ಪಿಸ್ತಾ ಇವುಗಳ ಮಹತ್ವ ತಿಳಿದಿದೆ ಮತ್ತು ಇವುಗಳಲ್ಲಿ ಇರುವಂತಹ ಪೋಷಕಾಂಶಗಳ ಬಗ್ಗೆ ತಿಳಿದಿದೆ ಯಾಕೆಂದರೆ ಇದು ಅಷ್ಟೊಂದು ದುಬಾರಿ ಬೆಲೆಯಲ್ಲಿ ಇದೆ ಅದಕ್ಕಾಗಿ ಅದರಲ್ಲಿ ಸಾಕಷ್ಟು ಪೋಷಕಾಂಶಗಳು ಇದೆ ಅಂತ ಜನ ನಂಬಿರುತ್ತಾರೆ. ಆದರೆ ನಿಮಗಿದು ಗೊತ್ತಾ ಕಡಲೆ ಕಾಳುಗಳಲ್ಲಿ ಎಷ್ಟೆಲ್ಲ ಆರೋಗ್ಯಕರ ಲಾಭಗಳಿವೆ ಅಂತ. ಕಡಿಮೆ ಬೆಲೆ ಇರ ಬಹುದು ಆದರೆ ಕಡಲೆ ಕಾಳುಗಳ ಪ್ರಯೋಜನವನ್ನು ನಾವು ಪಡೆದುಕೊಳ್ಳುತ್ತ ಬಂದರೆ .

ಅಗಾಧವಾದ ಆರೋಗ್ಯಕರ ಲಾಭಗಳನ್ನು ನಾವು ಪಡೆದುಕೊಳ್ಳಬಹುದು. ಅದೇನು ಅಂತ ತಿಳಿಸುತ್ತೇವೆ ಇಂದಿನ ಮಾಹಿತಿಯಲ್ಲಿ ಸಾಮಾನ್ಯವಾಗಿ. ನಮ್ಮ ಹಿಂದಿನವರ ಪದ್ದತಿಯ ಬಗ್ಗೆ ಹೇಳುವುದಾದರೆ ಅವರ ಆಹಾರ ಪದ್ಧತಿಯೂ ಬಹಳ ಔಷಧೀಯ ಗುಣ ದಿಂದ ಕೂಡಿತ್ತು. ಈ ಕಾರಣದಿಂದಲೇ ಅವರು ಅಷ್ಟು ಗಟ್ಟುಮುಟ್ಟಾಗಿ ಇರಲು ಕಾರಣವಾಗಿತ್ತು.

ಆದರೆ ನಾವು ಅವರ ಒಂದು ಆಹಾರ ಪದ್ದತಿಯನ್ನು ಪಾಲಿಸಿಕೊಂಡು ಬಂದದ್ದೇ ಆದಲ್ಲಿ ಉತ್ತಮ ಆರೋಗ್ಯವನ್ನು ಪಡೆದುಕೊಂಡು ಸಾಕಷ್ಟು ಕಾಲ ಮಾತ್ರೆಗಳು ಚಿಕಿತ್ಸೆಯನ್ನು ಪಡೆದುಕೊಳ್ಳದೆ ಆರೋಗ್ಯದಿಂದ ಇರಬಹುದು ಅದೇ ರೀತಿಯಲ್ಲಿ ಕಡಲೆಕಾಳುಗಳು ಕೂಡ. ಪೂರ್ವಜರು ಕಡಲೆ ಕಾಳುಗಳನ್ನು ಕೂಡ ನೆನೆಸಿಟ್ಟು ಸೇವನೆ ಮಾಡ್ತಾ ಇದ್ರಂತೆ. ಅದೇ ರೀತಿಯಲ್ಲಿ ಈ ಕಡಲೆಕಾಳುಗಳನ್ನು ನಾವೂ ಆಹಾರದಲ್ಲಿ ಬಳಕೆ ಮಾಡುತ್ತೇವೆ ಅಷ್ಟೇ ಯಾವತ್ತಾದರೂ ಕಡಲೆ ಕಾಳುಗಳನ್ನು ನೆನೆಸಿಟ್ಟು ಸಾಮಾನ್ಯವಾಗಿ ಹೆಸರು ಕಾಳು ಹುರುಳಿ ಕಾಳುಗಳನ್ನು ಮೊಳಕೆ ಕಟ್ಟಿಸಿ ತಿಂದಿದ್ದೇವೆ ಆದರೆ ಎಂದಾದರೂ ನೀವು ಕಡಲೆ ಕಾಳುಗಳನ್ನು ನೆನೆಸಿಟ್ಟು ತಿಂದಿದ್ದೀರಾ.

ಕೇವಲ ಬೆರಳೆಣಿಕೆ ಮಂದಿಗೆ ಮಾತ್ರ ಗೊತ್ತು ಕಡಲೆಕಾಳಿನ ಮಹತ್ವ ಆದಕಾರಣವೇ ಕೆಲವರು ಉಪವಾಸ ಮಾಡಿದಾಗ ಸಂಕಷ್ಟಿಯ ದಿವಸ ದಂದು ದೇವಸ್ಥಾನಗಳಲ್ಲಿ ಗಣಪತಿಯ ನೈವೇದ್ಯೆಗೆ ಕಡಲೆ ಕಾಳುಗಳನ್ನು ನೆನೆಸಿಟ್ಟು ಅದನ್ನು ಪ್ರಸಾದವಾಗಿ ನೀಡುವುದುಂಟು. ಆದ್ದರಿಂದಲೆ ನಾವು ಉತ್ತಮ ಆರೋಗ್ಯವನ್ನು ಪಡೆದುಕೊಳ್ಳುವುದಕ್ಕಾಗಿ ಕಡಲೆ ಕಾಳುಗಳನ್ನು ನೆನೆಸಿಟ್ಟು ಸೇವನೆ ಮಾಡುತ್ತ ಬರುವುದರಿಂದ ರಕ್ತದಲ್ಲಿ ಹೆಚ್ಚಾಗಿರುವ ಎಲ್ ಡಿ ಎಲ್ ಅಂಶವನ್ನು ಕಡಿಮೆ ಮಾಡಲು ಸಹಕರಿಸುತ್ತದೆ ಕಡಲೆ ಕಾಳು. ನೀವು ಕಡಲೆ ಕಾಳುಗಳನ್ನು ಬೆಳಿಗ್ಗೆ ತಿನ್ನಬೇಕು ಅಂತ ಏನೂ ಇಲ್ಲ. ನಿಮಗೆ ಏನಾದರೂ ತಿನ್ನಬೇಕು ಎನಿಸಿದಾಗ ನೆನೆಸಿದ ಕಡಲೆ ಕಾಳುಗಳನ್ನು ಸೇವಿಸಿ ತಿಂಡಿ ಆದ ನಂತರ ಸಂಜೆಯ ಸಮಯದಲ್ಲಿ ಈ ನೆನೆಸಿದ ಕಡಲೆ ಕಾಳುಗಳನ್ನ ನೀವು ಸೇವನೆ ಮಾಡುತ್ತ ಬಂದದ್ದೇ ಆದಲ್ಲಿ ನಿಮಗೆ ಸಾಕಷ್ಟು ಪೌಷ್ಟಿಕಾಂಶ ದೊರೆತು ನಿಶ್ಶಕ್ತಿ ದೂರವಾಗುತ್ತದೆ.

ಹಾಗಾದರೆ ಕಡಲೆಕಾಳುಗಳ ಈ ಉಪಯುಕ್ತ ಮಾಹಿತಿಯನ್ನು ತಿಳಿದ ನಂತರ ನೀವು ಕೂಡ ಈ ಕಡಲೆಕಾಳುಗಳನ್ನು ತಿನ್ನೋದನ್ನು ಮಿಸ್ ಮಾಡುವುದಿಲ್ಲ ಅಲ್ವಾ ಫ್ರೆಂಡ್ಸ್ ನಿಮಗೆ ಶಕ್ತಿಯನ್ನು ನೀಡುವುದರಿಂದ ಹಿಡಿದು ಅನೇಕ ಅನಾರೋಗ್ಯ ಸಮಸ್ಯೆಗಳನ್ನು ಪರಿಹಾರ ಮಾಡುವುದರಲ್ಲಿ ಸಹಕಾರಿಯಾಗಿರುವ ಕಡಲೆ ಕಾಳುಗಳನ್ನು ಆಹಾರದಲ್ಲಿ ಮಾತ್ರ ಬಳಸುವುದಲ್ಲ, ಈ ಕಡಲೆ ಕಾಳುಗಳನ್ನು ನೆನೆಸಿಟ್ಟು ಸೇವನೆ ಮಾಡುತ್ತಾ ಬನ್ನಿ ಉತ್ತಮ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಿ ಆರೋಗ್ಯದಿಂದಿರಿ ಮತ್ತು ತಪ್ಪದೆ ಈ ಉಪಯುಕ್ತ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಎಲ್ಲರಿಗೂ ಶುಭವಾಗಲಿ ಶುಭ ದಿನ ಧನ್ಯವಾದ.