Categories
ಭಕ್ತಿ ಮಾಹಿತಿ ಸಂಗ್ರಹ

ರಾತ್ರಿ ಸಮಯದಲ್ಲಿ ಮನೆಯಲ್ಲಿ ಸೊಲ್ಪ ಅನ್ನ ಉಳಿಸಬೇಕು ಯಾಕೆ ಗೊತ್ತಾ ..! ಹೊಂದಿರುವ ರಹಸ್ಯ !

ನಮಸ್ಕಾರ ವೀಕ್ಷಕರೇ ಪ್ರತಿದಿನ ನಾವು ಒಂದಲ್ಲ ಒಂದು ದೇವರನ್ನು ಪೂಜಿಸುತ್ತಿರುತ್ತೇವೆ. ಹಾಗೆ ನಾವು ಊಟ ಮಾಡುವಂತಹ ಅನ್ನವನ್ನು ಕೂಡ ನಾವು ಪೂಜನೀಯ ಭಾವದಿಂದ ಕಾಣಬೇಕಾಗುತ್ತದೆ ಮತ್ತು ಪರಬ್ರಹ್ಮ ಸ್ವರೂಪಿ ಆಗಿರುವ ಈ ಅನ್ನವನ್ನು ಮನೆಯಲ್ಲಿ ಯಾವತ್ತಿಗೂ ಕೂಡ ಖಾಲಿ ಮಾಡಬಾರದು,

ಹೌದು ಅದೇನೆಂದರೆ ನಾವು ಅನ್ನ ಮಾಡುವಂತಹ ಪಾತ್ರೆಯನ್ನು ಯಾವತ್ತಿಗೂ ಖಾಲಿ ಮಾಡಬಾರದು, ಹಾಗೆ ರಾತ್ರಿ ಅನ್ನ ಮಾಡುವಂತಹ ಸಮಯದಲ್ಲಿ ಸ್ವಲ್ಪ ಹೆಚ್ಚು ಅನ್ನವನ್ನು ಮಾಡಿ, ನಾವು ಮಲಗುವ ಮುನ್ನ ಒಂದು ಹಿಡಿ ಅನ್ನವನ್ನು ಮನೆಯಲ್ಲಿ ಇರಿಸಿ ಮಲಗಬೇಕು.

ನಾವು ಪಾಲಿಸುವಂತಹ ಅನೇಕ ಆಚಾರ ಪದ್ಧತಿಗಳಲ್ಲಿ ಈ ಒಂದು ವಿಚಾರವು ಕೂಡಾ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಅದೇನೆಂದರೆ ರಾತ್ರಿ ಸಮಯದಲ್ಲಿ ಯಾವತ್ತಿಗೂ ಅನ್ನದ ಪಾತ್ರೆಯನ್ನು ಖಾಲಿ ಮಾಡಿ ಇಡಬಾರದು, ಒಂದು ಹಿಡಿ ಅನ್ನವನ್ನಾದರೂ ಈ ಅನ್ನದ ಪಾತ್ರೆಯಲ್ಲಿ ಇರಿಸಿಯೇ ಮಲಗಬೇಕು.

ಹಾಗೂ ಈ ಒಂದು ವಿಚಾರವನ್ನು ಯಾಕೆ ನಾನು ನಿಮಗೆ ಇಂದಿನ ಮಾಹಿತಿ ತರಿಸಿ ಕೊಡುತ್ತಿದ್ದೇನೆ ಅಂದರೆ ನಮ್ಮ ಹಿರಿಯರು ಪಾಲಿಸುತ್ತಿದ್ದ ಅನೇಕ ವಿಚಾರಗಳಲ್ಲಿ ಈ ಒಂದು ವಿಚಾರವು ಕೂಡ ಮುಖ್ಯವಾಗಿದ್ದು ಇಂದಿನ ಮಾಹಿತಿಯಲ್ಲಿ, ಈ ಒಂದು ವಿಚಾರವನ್ನು ಕುರಿತು ಹೆಚ್ಚಿನ ವಿವರಗಳನ್ನು ತಿಳಿದು, ಮುಂದಿನ ದಿನಗಳಲ್ಲಿ ಇದನ್ನು ಪಾಲನೆ ಮಾಡಿ.

ಪೂರ್ವಜರ ಕಾಲದಲ್ಲಿ ಯಾತ್ರಾರ್ಥಿಗಳು ರಾತ್ರಿ ಸಮಯದಲ್ಲಿ ಕಾಲ್ನಡಿಗೆಯಲ್ಲಿ ಪುಣ್ಯ ಕ್ಷೇತ್ರಗಳಿಗೆ ಹೋಗುತ್ತಿದ್ದರು, ಆಗ ತಡವಾದರೆ ಹಳ್ಳಿಗಳಲ್ಲಿ ತಂಗುತ್ತಿದ್ದರು ಕೆಲವರ ಮನೆಯಲ್ಲಿ ಆಶ್ರಯ ಪಡೆದುಕೊಳ್ಳುತ್ತಿದ್ದರು, ಈ ಕಾರಣದಿಂದಾಗಿಯೇ ನಮ್ಮ ಪೂರ್ವಜರು ಮನೆಯಲ್ಲಿ ಸ್ವಲ್ಪ ಅನ್ನವನ್ನು ಉಳಿಸಿ ಮಲಗುತ್ತಿದ್ದರು ಯಾಕೆ ಅಂದರೆ ಯಾವಾಗ ಯಾರು ಮನೆಯಲ್ಲಿ ಆಶ್ರಯ ಪಡೆದುಕೊಳ್ಳಲು ಬರುತ್ತಾರೆ ಎಂಬುದು ತಿಳಿಯುತ್ತ ಇರಲಿಲ್ಲ ಆದರೆ ಮನೆಗೆ ಬಂದ ಯಾತ್ರಾರ್ಥಿಗಳಿಗೆ ಉಪವಾಸ ಮಲಗಿಸಬಾರದು ಎಂದು ಅಥವ ಮನೆಯಲ್ಲಿ ಊಟವಿಲ್ಲ ಎಂದು ಹೇಳಬಾರದು ಎಂಬ ಕಾರಣಕ್ಕಾಗಿ ರಾತ್ರಿ ಸಮಯದಲ್ಲಿ ಹೆಚ್ಚು ಅನ್ನವನ್ನು ಮಾಡಿ ಇಡುತ್ತಿದ್ದರು.

ಆ ದಿನ ಯಾರೂ ಯಾತ್ರಾರ್ಥಿಗಳು ಮನೆಗೆ ಬರಲಿಲ್ಲ ಆಂದರೆ ಮಾರನೆ ದಿವಸ ಅದನ್ನು ಮೂಕ ಪ್ರಾಣಿಗಳಿಗೆ ಅಥವಾ ಮನೆಗೆ ಭಿಕ್ಷೆಯನ್ನು ಕೇಳಿಕೊಂಡು ಯಾರಾದರೂ ಬಂದರೆ ಅಂತಹವರಿಗೆ ಅನ್ನುವ ದಾನ ಮಾಡುತ್ತಿದ್ದರು, ಅಂದಿನಿಂದ ಈ ಒಂದು ಪದ್ಧತಿ ಶುರುವಾದದ್ದು ಇಂದಿಗೂ ಕೂಡ ಕೆಲವರು ಈ ಒಂದು ಪದ್ಧತಿ ಅನ್ನು ಪಾಲಿಸುವುದು ಉಂಟು, ಆದರೆ ಸಿಟಿ ಕಡೆ ಹಾಗಲ್ಲ ವಿದ್ಯಾವಂತರು ಖರ್ಚು ವೆಚ್ಚಗಳನ್ನು ಲೆಕ್ಕ ಹಾಕಿ ಜೀವನವನ್ನು ನಡೆಸುತ್ತಾರೆ, ರಾತ್ರಿ ಅನ್ನ ಉಳಿಯುತ್ತದೆ ಎಂದು ಸ್ವಲ್ಪವೇ ಆಹಾರವನ್ನು ತಯಾರಿಸಿ ಇಟ್ಟುಕೊಂಡು ಊಟವನ್ನು ಮಾಡುತ್ತಾರೆ.

ಆದರೆ ಹಿರಿಯರಿಂದ ಮನೆಯಲ್ಲಿ ಈ ರೀತಿ ಆಗುವುದಿಲ್ಲ, ಹಿರಿಯರು ಹೇಳುವ ಹಾಗೆ ಮನೆಯಲ್ಲಿ ಸ್ವಲ್ಪ ಅನ್ನವನ್ನೂ ಉಳಿಸಿಯೇ ಮಲಗುತ್ತಾರೆ, ಮಾರನೆ ದಿವಸ ಅದನ್ನು ಪ್ರಾಣಿಗಳಿಗೆ ನೀಡುತ್ತಾರೆ. ಹಾಗಾದರೆ ನಮ್ಮ ಹಿರಿಯರು ಪಾಲಿಸುತ್ತಿದ್ದ ಈ ಒಂದು ಪದ್ಧತಿಯ ಹಿಂದಿರುವ ಕಾರಣವನ್ನು ನಿಮಗೆ ಇಂದಿನ ಮಾಹಿತಿಯಲ್ಲಿ ತಿಳಿಸಿದ್ದೇನೆ, ಮಾಹಿತಿ ಅನ್ನು ತಿಳಿದ ನಂತರ ನಿಮ್ಮ ಅನಿಸಿಕೆ ಅನ್ನು ತಪ್ಪದ ನಮಗೆ ಕಾಮೆಂಟ್ ಮಾಡಿ ಇನ್ನು ಹಲವಾರು ಆಚಾರ ವಿಚಾರ ಪದ್ಧತಿಗಳ ಬಗ್ಗೆ ಮಾಹಿತಿ ಅನ್ನು ತಿಳಿದುಕೊಳ್ಳುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೊ ಮಾಡಿ ಶುಭ ದಿನ ಧನ್ಯವಾದ.