Categories
ಮಾಹಿತಿ ಸಂಗ್ರಹ

ಲಾರಿ ಚಾಲಕ ಮಾರುವೇಷದಲ್ಲಿ ಕರ್ನಾಟಕದ ಸಿಂಗಂ ರವಿಚನ್ನನವರ್ , ಸಿಕ್ಕಿಬಿದ್ದ ಭ್ರಷ್ಟ ಅಧಿಕಾರಿಗಳು… ಆಗಿದ್ದು ಏನು ಗೊತ್ತ

ರವಿಚನ್ನನವರ್ ಅವರು ನಮ್ಮ ಕರ್ನಾಟಕ ರಾಜ್ಯದಲ್ಲಿ ಒಬ್ಬ ದಕ್ಷ ಅಧಿಕಾರಿ ಅಂತ ಹೆಸರುವಾಸಿಯಾಗಿದ್ದಾರೆ ಅದಲ್ಲದೆ ಇವರು ಅಧಿಕಾರ ಚಲಾಯಿಸುವ ಅಂತಹ ಸಂದರ್ಭದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿರುವ ಹಾಗೆ ನೋಡಿಕೊಳ್ಳುವ ಅಂತಹ ಒಬ್ಬ ದಕ್ಷ ಅಧಿಕಾರಿ,

ಅಂತ ನಾವು ಹೇಳಬಹುದು. ಇವರು ಎಲ್ಲಿ ಅಧಿಕಾರವನ್ನು ಬಯಸುತ್ತಾರೆಯೇ ಅಲ್ಲಿ ಜನರು ಇವರನ್ನು ಸಿಕ್ಕಾಪಟ್ಟೆ ಪ್ರೀತಿ ಮಾಡುತ್ತಾರೆ ಇದರಿಂದಾಗಿ ಇವರಿಗೆ ಜನರ ಮೇಲೆ ಹೆಚ್ಚಿನ ಜವಾಬ್ದಾರಿ ಹಾಗೂ ಸರ್ಕಾರಕ್ಕೆ ಏನಾದರೂ ಒಂದು ಸೇವೆಯನ್ನು ಮಾಡಬೇಕೆಂದು ಯಾವಾಗಲೂ ಯೋಚನೆ ಮಾಡುತ್ತಾ ಇರುತ್ತಾರೆ. 

ಸದ್ಯದ ಮಟ್ಟಿಗೆ  ನಮ್ಮ ರವಿಚನ್ನನವರ್ ಬೆಂಗಳೂರಿನಲ್ಲಿ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿದ್ದು ಸದ್ಯದ ಪರಿಸ್ಥಿತಿಯಲ್ಲಿ ಜನರಿಗೆ ಅನಾನುಕೂಲ ಆಗದೆ ಇರುವ ಹಾಗೆ ನೋಡಿಕೊಳ್ಳುವ ಅಂತಹ ಒಂದು ದೊಡ್ಡ ಜವಾಬ್ದಾರಿಯನ್ನು ಮಾಡುತ್ತಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ದೇಶಕ್ಕೆ ದೇಶವೇ ಎಲ್ಲರೂ ಹಾಕಿ ಜನರು ಅತಂತ್ರ ಸ್ಥಿತಿಯಲ್ಲಿ ಇದ್ದಾರೆ ಇಂಥ ಪರಿಸ್ಥಿತಿಯಲ್ಲೂ ಕೂಡ ಕೆಲವೊಂದು ಭ್ರಷ್ಟ ಅಧಿಕಾರಿಗಳು ಜನರಿಂದ ಹಣವನ್ನು ಕೇಳುತ್ತಿದ್ದಾರೆ. 

ಈ ರೀತಿಯಾದಂತಹ ಒಂದು ಮಾಹಿತಿಯನ್ನು ಪಡೆದುಕೊಂಡಂತಹ ರವಿಚನ್ನನವರ್ ಬೆಂಗಳೂರಿನಲ್ಲಿ ಮತ್ತೆ ಅಬ್ಬರಿಸಿದ್ದಾರೆ, ಬೆಂಗಳೂರಿನ ಗ್ರಾಮಾಂತರ ಎಸ್ಪಿ ಆಗಿರುವಂತಹ ರವಿ ಚನ್ನನವರ್ ಲಾರಿ ಚಾಲಕನ ಮಾರುವೇಷದಲ್ಲಿ ಹೊರಟು ಭ್ರಷ್ಟ ಆರ್ಟಿಓ ಅಧಿಕಾರಿಗಳನ್ನು ರೆಡ್ ಹ್ಯಾಂಡಾಗಿ ಹಿಡಿಯುತ್ತಾರೆ. 

ತಮಿಳುನಾಡು ಹಾಗೂ ಕರ್ನಾಟಕ ಬಾರ್ಡರ್ ಅಂತ ಕರೆಯಲ್ಪಡುವ ಹತ್ತಿ ಬೆಲೆಯಲ್ಲಿ ಈ ರೀತಿಯಾದಂತಹ ಒಂದು ಘಟನೆ ನಡೆದಿದೆ, ಒಬ್ಬ ಹೋಂಗಾರ್ಡ್ ಹಾಗೂ ಒಬ್ಬ ಆರ್ಟಿಓ ಇನ್ಸ್ಪೆಕ್ಟರ್ ಇಬ್ಬರು ಸೇರಿ ಗಡಿನಾಡಿನಲ್ಲಿ ಬರೆದಿರುವಂತಹ ಕೆಲವೊಂದು ಲಾರಿಗಳು ಹಾಗೂ ಕೆಲವೊಂದು ವಾಹನವನ್ನು ಹಿಡಿದು ಅವರಿಂದ 500 ಅಥವಾ 400 ರೂಪಾಯಿಗಳನ್ನು ವಸೂಲಿ ಮಾಡುತ್ತಿದ್ದರು, ಅದಲ್ಲದೇ ತಾತ್ಕಾಲಿಕವಾಗಿ ಪ್ರವೇಶವನ್ನು ಕೊಡುವಂತಹ ಒಂದು ನೆಪವನ್ನ ಹೇಳಿ ಕೆಲವೊಂದು ಲಾರಿಗಳಿಂದ ಹಣವನ್ನು ವಸೂಲಿ ಮಾಡುತ್ತಿದ್ದರು. 

ಈ ಸಮಯದಲ್ಲಿ ಮಾರುವೇಷದಲ್ಲಿ ಬಂದಂತಹ ರವಿಚನ್ನನವರ್ ಅವರು ಭ್ರಷ್ಟ ಅಧಿಕಾರಿಗಳನ್ನು ಅದೇ ಜಾಗದಲ್ಲಿ ಹಿಡಿದು ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ, ಗದಗ ಮೂಲದವರಾದ ರುವಂತಹ ರವಿ ಚನ್ನಣ್ಣನವರ್ ಈಗಾಗಲೇ ಹಲವಾರು ಜಿಲ್ಲೆಗಳಲ್ಲಿ ಕೆಲಸಗಳನ್ನು ಮಾಡಿ ಅಲ್ಲಿನ ಜನರ ಹತ್ತಿರ ಒಳ್ಳೆಯ ಅಭಿಪ್ರಾಯವನ್ನು ಪಡೆದಿದ್ದಾರೆ. ಇವರ ಸದ್ಯದ ಮಟ್ಟಿಗೆ ಧಾರವಾಡ ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಯಲ್ಲಿ ತಮ್ಮ ಕೆಲಸವನ್ನು ನಿರ್ವಹಿಸಿ ಅಲ್ಲಿ ಜನರ ಒಳ್ಳೆಯ ಅಭಿಪ್ರಾಯವನ್ನು  ಸಂಪಾದಿಸಿದ್ದಾರೆ. 

ಇವರ ಒಂದು ನಡತೆ ಹಾಗೂ ತಮ್ಮ ಅಧಿಕಾರದಲ್ಲಿರುವ ತೋರಿಸುವಂತಹ ಒಂದು ದಕ್ಷತೆ ಕನ್ನಡಿಗರಿಗೆ ನಿಜವಾಗಲೂ ತೋರಿಸುವಂತಹ ಒಂದು ಹೆಮ್ಮೆಯ ವಿಚಾರ ಅಂತ ಹೇಳಬಹುದು, ಯಾವಾಗಲೂ ಕರ್ನಾಟಕ ಹಾಗೂ ಕರ್ನಾಟಕ ಜನರ ಬಗ್ಗೆ ಕಾಳಜಿಯನ್ನು ವಹಿಸುವಂತಹ ಈ ರೀತಿಯಾದಂತಹ ಪೊಲೀಸ್ ಆಫೀಸರ್ ನಿಜವಾಗಲೂ ನಮ್ಮ ಕರ್ನಾಟಕಕ್ಕೆ ಸಿಕ್ಕಿದ್ದು ನಮ್ಮ ಅದೃಷ್ಟವಂತ ನಾವು ಹೇಳಬಹುದು.