Categories
ಭಕ್ತಿ ಮಾಹಿತಿ ಸಂಗ್ರಹ

ವಿಷ್ಣು ಪುರಾಣದಲ್ಲಿ ಹೇಳಿರುವ ಹಾಗೆ ನಿಮ್ಮ ಜೀವನದಲ್ಲಿ ಸುಖ ಶಾಂತಿ ದೊರಕುವುದಕ್ಕೆ ಈ ತರಹ 4 ನಿಯಮ ಪಾಲಿಸಿದರೆ ಇವುಗಳು ನಿಮಗೆ ಪ್ರಾಪ್ತಿಯಾಗುತ್ತದೆ ? ಏನು ಅಂತ ತಿಳ್ಕೊಳ್ಳಿ !!!

ವಿಷ್ಣು ಪುರಾಣ ವನ್ನು ನೀವು ಮೆಲುಕು ಹಾಕಿದರೆ ವಿಷ್ಣು ಪುರಾಣದಲ್ಲಿ ಹಲವಾರು ತರವಾದ ವಿಚಾರಗಳನ್ನು ಹೇಳಿದ್ದಾರೆ, ಅದರಲ್ಲಿ ಕೆಲವು ವಿಷಯಗಳು ಮನುಷ್ಯನ ಜೀವನಕ್ಕೆ ಅತಿ ಹೆಚ್ಚು ಉಪಯೋಗಕ್ಕೆ ಒಳಗಾಗುತ್ತದೆ.

ಇವತ್ತು ನಾವು ನಿಮಗೆ ತಿಳಿಸಿ ಕೊಡುವಂತಹ ಸುದ್ದಿ ಏನಪ್ಪಾ ಅಂದರೆ ನಿಮ್ಮ ಜೀವನದಲ್ಲಿ ಸುಖ ಶಾಂತಿಯಿಂದ ಇರಲು ವಿಷ್ಣು ಪುರಾಣದಲ್ಲಿ ಹೇಳಿರುವ ಅಂತಹ  ಆ ನಾಲ್ಕು ನಿಯಮಗಳು ಏನು ಅಂತ. ಕೆಳಗೆ ಕೊಟ್ಟಿರುವಂತಹ ನಾಲ್ಕು ನಿಯಮಗಳನ್ನು ಪಾಲನೆ ಮಾಡಿ ನಿಮ್ಮ ಜೀವನದಲ್ಲಿ  ಸುಖವನ್ನು ಅನುಭವಿಸಿ.

ನೀವೇನಾದರೂ ಸ್ಮಶಾನಕ್ಕೆ ಹೋದರೆ ಬಂದ ಮೇಲೆ ಸ್ನಾನ ಮಾಡಲೇಬೇಕುವೈಜ್ಞಾನಿಕವಾಗಿ ಹೇಳುವುದಾದರೆ ನಾವೇನಾದರೂ ಸ್ಮಶಾನಕ್ಕೆ ಹೋಗಿ ಬಂದರೆ ನಮ್ಮ ಮನಸ್ಸಿನಲ್ಲಿ ಅದೇನು ತರನಾದ ಭಾವೋದ್ವೇಗಕ್ಕೆ ಒಳಗಾಗಿ ಇರುತ್ತೇವೆ ಹಾಗೂ ಯೋಚನೆಗಳಿಗೆ ಒಳಗಾಗಿರುತ್ತೇವೆ.

ಹಾಗೆ  ಆಧ್ಯಾತ್ಮಿಕವಾಗಿ ನೋಡಿದರೂ ಕೂಡ ನಾವು ಸ್ಮಶಾನಕ್ಕೆ ಹೋಗಿ ಬಂದಾಗ ನಾವು ಋಣಾತ್ಮಕ ಶಕ್ತಿಯ ಪ್ರಭಾವಕ್ಕೆ ಒಳಗಾಗಿ ಇರುತ್ತೇವೆ. ಹಾಗೆಯೇ ನಾವು ಸ್ಮಶಾನಕ್ಕೆ ಹೋದಾಗ ನಮ್ಮ ಮನಸ್ಸು ತುಂಬಾ ದುಃಖದಲ್ಲಿ ಇರುತ್ತದೆ ಹಾಗೂ ಮನಸ್ಸಿಗೆ ಸಂಬಂಧಿಸಿದಂತಹ ಸಮಸ್ಯೆಗಳಿಂದ ಇರುತ್ತೇವೆ. ನೀವು ಮನೆಗೆ ಬಂದಾಕ್ಷಣ ಸ್ಥಾನ ಮಾಡುವುದರಿಂದ ನಿಮ್ಮ ಮನಸ್ಸಿನಲ್ಲಿ ಹಾಗೂ ದೇಹದಲ್ಲಿ ಒಳಗಾಗಿರುವ ಅಂತಹ ಋಣಾತ್ಮಕ ಶಕ್ತಿ ನಿವಾರಣೆಯಾಗುತ್ತದೆ.

ಯಾವ ಮಹಿಳೆಯರು ಆದರೂ ಕೂಡ ರಾತ್ರಿ ಹೊತ್ತು ತಲೆಯನ್ನು ಕೆದರಿಕೊಂಡು ಮಲಗಬಾರದು ರಾತ್ರಿ ಹೊತ್ತು ಮಹಿಳೆಯರು ತಲೆಗೂದಲನ್ನು ಕೆದರಿಕೊಂಡು ಮಲಗುವುದರಿಂದ ಅವರಿಗೆ ಋಣಾತ್ಮಕ ಶಕ್ತಿ ಗಳು ಪ್ರಭಾವ ಬೀರುವಲ್ಲಿ ಸಫಲವಾಗುತ್ತವೆ. ಹಾಗೂ ಋಣಾತ್ಮಕ ಶಕ್ತಿ ಗಳು ಅವರನ್ನು ಆಕರ್ಷಿಸುತ್ತವೆ. ಇದರಿಂದ ಅವರ ದೇಹದ ಆರೋಗ್ಯಕ್ಕೆ ಹಾಗೂ ಮನಸ್ಸಿನ ಆರೋಗ್ಯವೂ ಕೂಡ ತೊಂದರೆ ಆಗುವ ಲಕ್ಷಣಗಳು ಇರುತ್ತವೆ. ಇದರಿಂದ ಮಲಗುವ ಮೊದಲು ಸೂಚಿಯಾಗಿ ಹಾಗೂ ತಲೆಯನ್ನು ಕೆದರಿ ಕೊಳ್ಳದ ಮಲಗಬೇಕು.

ಮೂರು ರಸ್ತೆಗಳು ಸೇರುವ ಅಂತಹ ಜಾಗದಲ್ಲಿ ಅವಶ್ಯಕತೆ ಇಲ್ಲದೆ ಹೋಗಬಾರದು.ವು ಗಮನಿಸಬಹುದು ಮೂರು ರಸ್ತೆಗಳು ಕೂಡಿರುವ ಅಂತಹ ಜಾಗದಲ್ಲಿ ನಿಂಬೆ ಹಣ್ಣುಗಳು ಹಾಗೂ ಕೆಲವು ಮಾಟ ಮಂತ್ರಗಳಿಗೆ ಬಳಸುವಂತಹ ವಸ್ತುಗಳು ನೀವು ನೋಡಿರುತ್ತೀರಿ. ಏಕೆಂದರೆ ಮೂರು ರಸ್ತೆಗಳು ಇರುವಂತಹ ಜಾಗದಲ್ಲಿ ನಕರಾತ್ಮಕ ಶಕ್ತಿಗಳು ಹೆಚ್ಚಾಗಿರುತ್ತವೆ ಇದರಿಂದ ಮಾಟ ಮಂತ್ರ ಮಾಡುವವರು ಈ ರಸ್ತೆಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ನೀವು ಈ ತರದ ಜಾಗಕ್ಕೆ ಏಕಾಂಗಿಯಾಗಿ ಹೋಗುವುದು ಅದರಲ್ಲೂ ರಾತ್ರಿ ಅಲ್ಲಿಗೆ ಹೋಗುವುದು ಒಳ್ಳೆಯದು ಅಲ್ಲ.

ರಾತ್ರಿ ಹೊತ್ತು ಮಲಗುವಾಗ ಸೆಂಟುಗಳು ಅಥವಾ ಪರಿಮಳವನ್ನು ಬೀರುವಂತಹ ಸುಗಂಧ ದ್ರವ್ಯಗಳನ್ನು ಬಳಕೆ ಮಾಡಬಾರದುನೀವು ರಾತ್ರಿ ಹೊತ್ತು ಮಲಗುವಾಗ ಯಾವುದೇ ತರನಾದ ಸೆಂಟುಗಳು ಅಥವಾ ಪರಿಮಳವನ್ನು ಬೀರುವಂತಹ ಸುಗಂಧಗಳನ್ನು ಬಳಕೆ ಮಾಡಿದರೆ ನಿಮಗೆ ಋಣಾತ್ಮಕ ಶಕ್ತಿ ಗಳು ಆಕರ್ಷಿಸುತ್ತವೆ ಹಾಗೆ ನಿಮ್ಮ ಮನಸ್ಸಿನ ಮೇಲೆ ಪ್ರಭಾವವನ್ನು ಬೀರುತ್ತವೆ. ಇದರಿಂದ ಮಾರನೇ ದಿನ ಎದ್ದಾಗ ನಿಮ್ಮ ಮನಸ್ಸು ಚೆನ್ನಾಗಿರುವುದಿಲ್ಲ ಹಾಗೂ ಅವತ್ತಿನ ದಿನ ನಿಮಗೆ ಕೆಟ್ಟದಾಗಿರುತ್ತದೆ. ಆದ್ದರಿಂದ ನೀವು ಮಧ್ಯರಾತ್ರಿಯಲ್ಲಿ ಯಾವುದೇ ತರಹದ ಸುಗಂಧ ದ್ರವ್ಯವನ್ನು ಯೂಸ್ ಮಾಡದೆ ಇರುವುದು ಒಳ್ಳೆಯದು.