Categories
ಭಕ್ತಿ ಮಾಹಿತಿ ಸಂಗ್ರಹ

ವಿಷ್ಣು ಮನುಷ್ಯ ರೂಪದಲ್ಲೇ ಅವತಾರ ಎತ್ತಿದ್ದು ಯಾಕೆ ಗೊತ್ತಾ… ಕೂತೂಹಲಕಾರಿ ವಿಚಾರ

ಭೂಮಿಯ ಮೇಲೆ ವಿಷ್ಣು ಯಾಕೆ ಸಾಮಾನ್ಯ ಮನುಷ್ಯನ ರೂಪದಲ್ಲಿಯೇ ಜನಿಸಿದ ಹಾಗೂ ರಾವಣನನ್ನು ಸಂಹರಿಸಲು ರಾಮನು ಹೇಗೆ ಭೂಮಿಗೆ ಬಂದ ಅನ್ನೋದರ ಮಾಹಿತಿಯನ್ನು ತಿಳಿಯೋಣ ಇದೊಂದು ಲೇಖನವನ್ನು ಪೂರ್ತಿಯಾಗಿ ತಿಳಿಯಿರಿ .

ಹೇಗೆ ರಾಮನ ಅವತಾರ ಭೂಮಿ ಮೇಲೆ ಜನನವಾಯಿತು ಅನ್ನುವುದನ್ನು ತಿಳಿಯೋಣ ನೀವು ಕೂಡ ರಾಮನ ಭಕ್ತರಾಗಿದ್ದರೆ ತಪ್ಪದೇ ಈ ಒಂದು ಮಾಹಿತಿಯನ್ನು ತಿಳಿದು ಹರೇರಾಮ ಎಂದು ಕಮೆಂಟ್ ಮಾಡಿ .

ಅದು ತ್ರೇತಾಯುಗ ಆಯೋಗದಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಅತ್ಯಾಚಾರ ಅಧರ್ಮ ಇವೆಲ್ಲವೂ ತಲೆ ಎತ್ತಿ ನಿಂತಿತ್ತು ಆಗ ದೇವಾನು ದೇವತೆಗಳಿಂದ ಏನು ಮಾಡೋಕೆ ಸಾಧ್ಯವಾಗುತ್ತಿರಲಿಲ್ಲ.

ರಾವಣನು ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯವನ್ನು ನಡೆಸುತ್ತಾ ಅತ್ಯಾಚಾರವನ್ನೂ ಎಸಗಿ ಸಮಾಜದಲ್ಲಿ ಅಧರ್ಮವೇ ಮೇಲು ಎಂಬ ಭಾವನೆ ಯನ್ನಿಟ್ಟುಕೊಂಡು ಅಟ್ಟಹಾಸವನ್ನು ಮೆರೆಯುತ್ತಿದ್ದ ರಾವಣ . ಈ ಸಂದರ್ಭದಲ್ಲಿ ಭೂಮಿ ತಾಯಿ ಬ್ರಹ್ಮ ಋಷಿಮುನಿಗಳು ವಿಷ್ಣುವಿನ ಮುಂದೆ ಬಂದು ಬೇಡಿಕೊಳ್ಳುತ್ತಾರೆ ರಾವಣನ ಅಟ್ಟಹಾಸವನ್ನು ತಡೆಯಲು ಸಾಧ್ಯವಾಗುತ್ತಿಲ್ಲ.

ಅವನನ್ನು ಸಂಹರಿಸಲು ರಾಕ್ಷಸರು ನಾಗದೇವತೆಗಳ ಹಾಗೂ ಋುಷಿ ಮುನಿಗಳಿಂದ ದೇವಾನು ದೇವತೆಗಳಿಂದ ಸಾಧ್ಯವಾಗುತ್ತಿಲ್ಲ ಇವರ ಸಂಹಾರ ಹೇಗೆ ಎಂಬ ಮಾತುಗಳನ್ನು ಆಡಿ ಪರಿಹಾರವನ್ನು ಕೇಳಿಕೊಳ್ಳುತ್ತಾರೆ .

ದೇವಾನು ದೇವತೆಗಳು . ರಾವಣನು ಬ್ರಹ್ಮ ಮತ್ತು ಶಿವನಿಂದ ವರವನ್ನು ಪಡೆದುಕೊಂಡಿದ್ದಾನೆ ಮತ್ತು ಈ ರಾಕ್ಷಸ ರಾಜ ರಾವಣನನ್ನು ವಾನರ ಮತ್ತು ಮನುಷ್ಯರಿಂದ ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ.

ಎಂಬ ವರವನ್ನು ಪಡೆದುಕೊಂಡಿರುವ ರಾವಣನನ್ನು ಸಂಹಾರ ಮಾಡುವುದಾದರೂ ಹೇಗೆ ಎಂಬ ಅಳಲನ್ನು ತೋಡಿಕೊಂಡ ದೇವಾನುದೇವತೆಗಳು ಮಧ್ಯೆ ಈಶ್ವರನು ಪ್ರತ್ಯಕ್ಷನಾಗಿ ರಾವಣನ ಸಂಹಾರ ನಡೆಯಬೇಕಿದೆ ಎಂಬುದನ್ನು ಹೇಳುತ್ತಾರೆ .ಶಿವನ ಮಾತನ್ನು ಒಪ್ಪಿಕೊಂಡ ವಿಷ್ಣು ಅಯೋಧ್ಯೆಯ ರಾಜನಾದ ದಶರಥ ಮಹಾರಾಜನ ಮಗನಾಗಿ ಹುಟ್ಟಿ ಮನುಷ್ಯನ ರೂಪದಲ್ಲಿಯೇ ರಾಕ್ಷಸರ ರಾಜ ರಾವಣನನ್ನು ಸಂಹರಿಸುತ್ತಾನೆ ಎಂಬ ಮಾತನ್ನು ನೀಡುತ್ತಾರೆ ವಿಷ್ಣು .

ಕುಲದೇವರ ಬಳಿ ಸಂತಾನವನ್ನು ಬೇಡುತ್ತಿದ್ದ ದಶರಥ ಮಹಾರಾಜನು ಒಮ್ಮೆ ವಸಿಷ್ಠ ಮುನಿಗಳ ಭಾಗ್ಯ ಮಾತನಾಡುವಾಗ ವಸಿಷ್ಠ ಮುನಿಗಳು ದಶರಥನಿಗೆ ಇವತ್ತು ಉತ್ತರಾಯಣದಲ್ಲಿ ಸೂರ್ಯ ಪ್ರವೇಶ ಮಾಡುತ್ತಿದ್ದಾನೆ ಈ ಸಂದರ್ಭದಲ್ಲಿ ನೀನು ಯಾಗ ಮಾಡಿದರೆ ನೀನು ಅಂದುಕೊಂಡಿದ್ದೆಲ್ಲ ಆಗುತ್ತದೆ ಎಂಬ ಮಾತುಗಳನ್ನು ಹೇಳುತ್ತಾರೆ ವಸಿಷ್ಠರು .

ನನಗೆ ಒಬ್ಬ ಪುತ್ರ ಬೇಕೆಂಬ ತಮ್ಮ ಆಸೆಯನ್ನು ಹೇಳಿಕೊಳ್ಳುತ್ತಾರೆ ಆಗ ವಸಿಷ್ಠರು ಅಥರ್ವವೇದ ತಜ್ಞರಾದ ಶೃಂಗ ಮುನಿಯನ್ನು ನೀನು ಕರೆದು ಇಂದಿನ ದಿನ ಯಾಗ ಮಾಡಿಸು ಆಗ ನೀನು ಅಂದುಕೊಂಡಿದ್ದೆಲ್ಲ ಆಗುತ್ತದೆ ಎಂದು ಹೇಳುತ್ತಾರೆ ಆಗ ರಾಜನು ಭಿಕ್ಷುಕನ ವೇಷವನ್ನು ಧರಿಸಿ ಶೃಂಗ ಮುನಿ ಬಳಿ ಹೋಗಿ ಯಾಗ ಮಾಡಲು ಕೇಳಿಕೊಳ್ಳುತ್ತಾರೆ ರಾಜನ ಈ ಗುಣವನ್ನು ಕಂಡು ಶೃಂಗ ಮುನಿಗಳು ಯಾಗ ಮಾಡಲು ಒಪ್ಪುತ್ತಾರೆ .

ನಂತರ ಯಾಗ ಮಾಡುವಾಗ ಅಗ್ನಿಯೂ ಪ್ರತ್ಯಕ್ಷನಾಗಿ ದಶರಥ ಮಹಾರಾಜನಿಗೆ ಒಂದು ಮಡಿಕೆಯಲ್ಲಿ ಕರನ್ನು ಕೊಡುತ್ತಾರೆ ಇದನ್ನು ನಿನ್ನ ರಾಣಿಯರಿಗೆ ಕುಡಿಸು ಅನ್ನೋ ಮಾತನ್ನು ಕೂಡ ಹೇಳಿ ಮಾಯವಾಗುತ್ತಾರೆ .ಯಾಗವು ಮುಗಿದ ನಂತರ ಕರನ್ನು ತನ್ನ ರಾಣಿಯರಿಗೆ ದಶರಥನು ಕೊಡುತ್ತಾರೆ ನಂತರ ದಶರಥನ ರಾಣಿಯರು ಗರ್ಭ ಧರಿಸುತ್ತಾರೆ ರಾಮ ಲಕ್ಷ್ಮಣ ಭರತ ಶತ್ರುಘ್ನರು ಜನಿಸುತ್ತಾರೆ ಅದರಲ್ಲಿ ಕೌಸಲ್ಯೆಯ ಮಗನಾಗಿ ರಾಮನು ಜನಿಸುತ್ತಾನೆ .

ರಾಮ ಲಕ್ಷ್ಮಣರು ಮತ್ತು ಭರತ ಶತ್ರುಘ್ನರು ಎರಡು ದೇಹ ಒಂದು ಮನಸ್ಸಿನಂತೆ ಇರುತ್ತಾರೆ ಮತ್ತು ರಾಮನ ಜನನವಾದ ನಂತರ ಬ್ರಹ್ಮನು ಇಂದ್ರ ಮತ್ತು ದೇವಾನುದೇವತೆಗಳಿಗೆ ಕರೆಸಿ ವಿಷ್ಣು ಭೂಮಿ ಮೇಲೆ ಜನ್ಮವನ್ನು ತಾಳಿದ್ದಾರೆ ನೀವು ವಾನರ ರಾಗಿ ಅವರ ಸೇವೆಯನ್ನು ಮಾಡಬೇಕೆಂದು ಹೇಳುತ್ತಾರೆ .

ಹೀಗೆ ರಾಮನು ಭೂಮಿ ಮೇಲೆ ಮನುಷ್ಯನ ರೂಪದಲ್ಲಿ ಜನಿಸಿ ಧರ್ಮ ಮತ್ತು ಸತ್ಯವನ್ನು ಉಳಿಸಬೇಕು ಗೆಲ್ಲಿಸಬೇಕೆಂದು ರಾವಣನನ್ನು ಸಂಹರಿಸುತ್ತಾನೆ .