Categories
ಭಕ್ತಿ ಮಾಹಿತಿ ಸಂಗ್ರಹ

ಶವ ಸಂಸ್ಕಾರ ಮಾಡಿದ ನಂತರ ಸ್ನಾನ ಮಾಡುವುದು ಯಾಕೆ ಅನ್ನೋದರ ಬಗ್ಗೆ ಗೊತ್ತ ನಿಮಗೆ …

ನಮ್ಮ ಭಾರತ ದೇಶದಲ್ಲಿ ಎಷ್ಟೊಂದು ಮೂಢನಂಬಿಕೆಗಳಿವೆ ಎಂಬುದು ಎಲ್ಲರಿಗೂ ತಿಳಿದಿದೆ ಪ್ರತಿಯೊಂದರಲ್ಲೂ ಕೂಡ ಮೂಢನಂಬಿಕೆಗಳು ಇದೇ ಹಿಂದಿನ ಜನ ಅದನ್ನು ಯೋಚನೆ ಮಾಡದೆ ನಂಬುತ್ತಿದ್ದರು. ಆದರೆ ಈಗಿನ ಯುವಪೀಳಿಗೆ ಆ ವಿಷಯ ವಿಚಾರಗಳನ್ನು ನಂಬುವುದಿಲ್ಲ ಎಲ್ಲದಕ್ಕೂ ಕೂಡ ಸಾಕ್ಷಿಯನ್ನು ಕೇಳುತ್ತಾರೆ .

ಮತ್ತು ಸರಿ ಯಾವುದು ತಪ್ಪು ಯಾವುದು ಎಂಬುದರ ಬಗ್ಗೆ ಆಲೋಚಿಸುತ್ತಾರೆ ಆದರೆ ಸಾಧ್ಯವಾದಷ್ಟು ಮಟ್ಟಿಗೆ ಎಲ್ಲವೂ ಕೂಡ ನಿಗೂಢ ವಾದವೂ ಯಾವುದಕ್ಕೂ ಕೂಡಾ ತಿರುಳಿರುವುದಿಲ್ಲ ಎಂದು ಈಗಿನ ಯುವಕರು ನಂಬುವುದಿಲ್ಲ ಆದರೆ ಎಲ್ಲವೂ ಕೂಡ ಆ ಮೂಢನಂಬಿಕೆಯ ಜೊತೆಗೆ ಕೆಲವೊಂದು ವೈಜ್ಞಾನಿಕ ಕಾರಣಗಳನ್ನು ಹೊಂದಿರುತ್ತದೆ ಅಂಥದ್ದೇ ಒಂದು ಮೂಢನಂಬಿಕೆ ಎಂದುಕೊಂಡಿರುವ ವೈಜ್ಞಾನಿಕ ಕಾರಣವಿರುವ ವಿಷಯದ ಬಗ್ಗೆ ನಾನು ಈ ದಿನ ನಿಮ್ಮೊಂದಿಗೆ ಚರ್ಚಿಸುತ್ತೇನೆ ಸಾಧ್ಯವಾದಷ್ಟು ಎಲ್ಲರೂ ಕೂಡ ಈ ಮಾಹಿತಿಯನ್ನು ಶೇರ್ ಮಾಡಿ .

ಸ್ನೇಹಿತರೇ ಸಾಮಾನ್ಯವಾಗಿ ನಾವು ಒಂದು ಸಾವಿಗೆ ಅಥವಾ ಒಂದು ಶವ ಸಂಸ್ಕಾರಕ್ಕೆ ಹೋಗಿದ್ದೇವೆ ಎಂದರೆ ಮನೆಯಲ್ಲಿ ಮೊದಲು ಹೇಳುವ ಮಾತೆಂದರೆ ಸ್ನಾನ ಮಾಡಿಕೊಂಡು ಒಳಗೆ ಬಾ ಎಂದು ಹೇಳುತ್ತಾರೆ ಅದಕ್ಕೆ ನಮ್ಮಿಂದ ಮತ್ತೆ ಅವರಿಗೆ ಪ್ರಶ್ನೆ ಹೋಗುತ್ತದೆ ಯಾಕೆ ಸ್ನಾನ ಮಾಡದೇ ಬಂದರೆ ಏನಾಗುತ್ತದೆ ಎಂಬ ಪ್ರಶ್ನೆ ಬರುತ್ತದೆ.

ಅದಕ್ಕೆ ಅವರು ಕೊಡುವ ಉತ್ತರ ಹೇಳಿದ್ದನ್ನು ಮಾಡಬೇಕು ಅದು ಪದ್ಧತಿ ಎಂದು ಗದರುತ್ತಾರೆ ಇದು ಎಲ್ಲರಿಗೂ ತಿಳಿದಿದೆ ಸಾಮಾನ್ಯವಾಗಿ ಅವರು ಯಾಕೆ ಸ್ನಾನ ಮಾಡಿಕೊಂಡು ಬರಬೇಕು ಎಂಬುದಕ್ಕೆ ಕಾರಣವನ್ನು ಹೇಳುವುದಿಲ್ಲ ಅದನ್ನು ಪದ್ಧತಿ ಆಚರಣೆ ಎಂದು ನಮ್ಮ ಬಾಯಿ ಮುಚ್ಚಿಸುತ್ತಾರೆ.

ಆದ್ದರಿಂದ ನಾವು ಕೂಡ ಹಿರಿಯರ ಮಾತಿಗೆ ಬೆಲೆ ಕೊಡಬೇಕೆಂದು ಸುಮ್ಮನಾಗಿ ಸ್ನಾನವನ್ನು ಮಾಡಿಕೊಂಡು ಬರುತ್ತೇವೆ ಅದು ಕೂಡ ಅವರು ಹೇಳುವುದು ನಾವು ಶವಸಂಸ್ಕಾರಕ್ಕೆ ಯಾವ ಬಟ್ಟೆ ಧರಿಸಿದ್ದೆವು ಆ ಬಟ್ಟೆಯಲ್ಲಿ ಆ ಬಟ್ಟೆಯ ಮೇಲೆ ಸ್ನಾನ ಮಾಡಿಕೊಂಡು ಬರಬೇಕು ಎಂದು ಹೇಳುತ್ತಾರೆ ನಾವು ಆಗಲಿ ಎಂದು ಒಪ್ಪಿ ಸ್ನಾನ ಮಾಡಿಕೊಂಡು ಬರುತ್ತೆವೆ.

ಇದು ಮೂಢನಂಬಿಕೆ ಎಂದು ಕೆಲವರು ಆಚರಣೆ ಮಾಡುವುದಿಲ್ಲ ಆದರೆ ಇದಕ್ಕೆ ವೈಜ್ಞಾನಿಕ ಕಾರಣ ಇದೆ ಎಂದರೆ ನಂಬುವುದು ಅಸಾಧ್ಯ ಅಲ್ಲವೇ ಸ್ನೇಹಿತರೇ ಇದಕ್ಕೆ ಒಂದು ಮುಖ್ಯವಾದಂತಹ ವೈಜ್ಞಾನಿಕ ಕಾರಣವಿದೆ ಅದೇನೆಂದರೆ ನಾವು ಶವ ಸಂಸ್ಕಾರಕ್ಕೆಂದು ಹೋಗಿದ್ದಾಗ ಸತ್ತ ದೇಹ ಕೊಳೆತಿರುತ್ತದೆ ಅದರಲ್ಲಿ ಅನೇಕ ಕ್ರಿಮಿ ಕೀಟಗಳು ಇರುತ್ತವೆ ಅವು ಗಾಳಿಗೆ ನಮ್ಮ ದೇಹದ ಮೇಲೆ ಕೂರುವಂಥ ಸಾಧ್ಯತೆ ಇರುತ್ತದೆ ಅಥವಾ ನಮ್ಮ ಬಟ್ಟೆಯ ಮೇಲೆ ಕೂರುವಂಥ ಸಾಧ್ಯತೆ ಇರುತ್ತದೆ.

ಆದ್ದರಿಂದ ನಾವು ಮನೆಗೆ ಬಂದ ತಕ್ಷಣ ಆ ಬಟ್ಟೆಯ ಮೇಲೆ ಸ್ನಾನ ಮಾಡಬೇಕೆಂದು ಹಿರಿಯರು ಹೇಳುತ್ತಾರೆ ಆದರೆ ಹಿರಿಯರಿಗೆ ಇದರ ವೈಜ್ಞಾನಿಕ ಕಾರಣ ತಿಳಿದಿರುವುದಿಲ್ಲ ಅದು ಒಂದು ಪದ್ಧತಿಯಂತೆ ಹಿರಿಯರು ಆಚರಣೆ ಮಾಡಿಕೊಂಡು ಬಂದಿರುತ್ತಾರೆ ಕೆಲವೊಂದು ಆಚರಣೆಗಳೇ ಹೀಗೆ ನಮಗೆ ವೈಜ್ಞಾನಿಕ ಕಾರಣಗಳು ತಿಳಿದಿರುವುದಿಲ್ಲ ಅವು ಮೂಢನಂಬಿಕೆ ಎಂದು ನಾವು ಬಿಡಲು ಪ್ರಯತ್ನಿಸುತ್ತೇವೆ ಯಾವುದೇ ಒಂದು ಪದ್ಧತಿಯನ್ನು ಹಿರಿಯರು ನಡೆಸಿಕೊಂಡು ಬಂದಿದ್ದಾರೆ ಎಂದರೆ ಅದಕ್ಕೆ ಅವರದೇ ಆದಂತಹ ಕೆಲವೊಂದು ಕಾರಣಗಳಿರುತ್ತವೆ ಎಲ್ಲವನ್ನೂ ಪ್ರಶ್ನೆ ಮಾಡುವ ಬದಲು ಅದು ಏಕೆ ಹೀಗಿರಬಹುದು ಎಂಬ ಉತ್ತರವನ್ನು ನಾವೇ ಕಂಡುಕೊಳ್ಳಲು ಪ್ರಯತ್ನಿಸಬೇಕು ಸಾಧ್ಯವಾದಷ್ಟು ಮಟ್ಟಿಗೆ ಎಲ್ಲದಕ್ಕೂ ಉತ್ತರ ಕಂಡು ಹಿಡಿದು ಎಲ್ಲರಿಗೂ ಕೂಡ ತಿಳಿಸೋಣ ಶುಭ ದಿನ ಧನ್ಯವಾದಗಳು .

2 replies on “ಶವ ಸಂಸ್ಕಾರ ಮಾಡಿದ ನಂತರ ಸ್ನಾನ ಮಾಡುವುದು ಯಾಕೆ ಅನ್ನೋದರ ಬಗ್ಗೆ ಗೊತ್ತ ನಿಮಗೆ …”

Leave a Reply