Categories
ಭಕ್ತಿ ಮಾಹಿತಿ ಸಂಗ್ರಹ

ಶಿವನ ಬಗ್ಗೆ ಎಲ್ಲರಿಗೂ ಗೊತ್ತು ಆದರೆ ಶಿವನ ತಂಗಿಯ ಬಗ್ಗೆ ಯಾರಿಗಾದರೂ ಗೊತ್ತಾ?

ಶಿವನು ಸೃಷ್ಟಿಯ ಮೂಲ ಕರ್ತ ಎಂದು ಹೇಳುತ್ತಾರೆ, ಸೃಷ್ಟಿಯಲ್ಲಿ ಇರುವಂತಹ ಎಲ್ಲಾ ಪಂಚ ಭೂತಗಳಿಗೂ ಅಧಿಪತಿ ಆಗಿರುವಂತಹ ಈ ಶಿವನಿಗೆ ಹಲವಾರು ತರನಾದ ಹೆಸರಿಂದ ಕರೆಯುತ್ತಾರೆ. ಬೋಲೆನಾಥ್ ಶಂಕರ, ಮಹಾದೇವ ಎಂದು ಹಲವಾರು ನಾಮಧೇಯದಿಂದ ಶಿವನಿಗೆ ಹೆಸರನ್ನು ಇಟ್ಟಿದ್ದಾರೆ.

ಇವತ್ತು ನಾವು ನಿಮಗೆ ಪರಮಾತ್ಮ ಶಿವನ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಕೊಡಲಿದ್ದೇವೆ ಶಿವನಿಗೆ ಹೆಂಡತಿ ಇರುವುದು ಎಲ್ಲರಿಗೂ ಗೊತ್ತು ಆದರೆ ಶಿವನಿಗೆ ತಂಗಿ ಕೂಡ ಇದ್ದಾಳೆ.

ಎಂದು ಕೆಲವು ಜನರಿಗೆ ಗೊತ್ತಿರುವುದಿಲ್ಲ. ಇವತ್ತು ನಾವು ನಿಮಗೆ ಆ ಪರಮಾತ್ಮ ಶಿವನ ತಂಗಿಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಕೊಡಲಿದ್ದೇವೆ.

ನೀವು ಪುರಾಣವನ್ನು ಮೆಲುಕು ಹಾಕಿದರೆ ಪ್ರತಿಯೊಬ್ಬ ಋಷಿಮುನಿಗಳು ತಪಸ್ಸು ಮಾಡುವುದು  ಹೆಚ್ಚಾಗಿ ಶಿವ ಪರಮಾತ್ಮನ ವರವನ್ನು ಪಡೆಯುವುದಕ್ಕೋಸ್ಕರ. ಇನ್ನೊಂದು ಅಸಲಿ ವಿಷಯ ಇದೆ ಏನಪ್ಪಾ ಅಂದರೆ ಶಿವನಿಗೆ ಒಬ್ಬಳು ತಂಗಿ ಇದ್ದಾಳೆ ಅವಳ ಹೆಸರು ಏನು ಅಂದರೆ ದೇವಿ ಅಸಾವರಿ.

ಈ ತಂಗಿ ಎಲ್ಲಿಂದ ಬಂದಳೋ ಹಾಗೂ ಹೇಗೆ ಬಂದಳು ಎನ್ನುವ ಪ್ರಶ್ನೆಗೆ ಉತ್ತರ ವಿಚಿತ್ರವಾಗಿದೆ. ಶಿವನು ಪಾರ್ವತಿಯನ್ನು ಮದುವೆಯಾಗಿ ಕೈಲಾಸಕ್ಕೆ ಕರೆದುಕೊಂಡು ಬರುತ್ತಾನೆ.  ಆದರೆ ಕೈಲಾಸದಲ್ಲಿ ಪಾರ್ವತಿಯನ್ನು ಬಿಟ್ಟರೆ ಯಾವ ಮಹಿಳೆಯರೂ ಕೂಡ ಇರುವುದಿಲ್ಲ ಎಲ್ಲರೂ ಗಂಡಸರು ಇರುತ್ತಾರೆ.

ಇದನ್ನು ಕಂಡಂತಹ ಪಾರ್ವತಿ ಕೈಲಾಸದಲ್ಲಿ ಯಾವ ಮಹಿಳೆಯೂ ಇಲ್ಲ ಕೇವಲ ಗಂಡಸರು ಇದ್ದಾರೆ ಎಂದು ಶಿವನಿಗೆ ಹೇಳುತ್ತಾಳೆ. ಆದರೆ ಕೈಲಾಸದಲ್ಲಿ ಇರುವಂತಹ ಎಲ್ಲಾ ಗಂಡಸರು ಪಾರ್ವತಿಯನ್ನು ತಂಗಿಯಂತೆ ನೋಡಿಕೊಳ್ಳುತ್ತಾರೆ ಹಾಗೆ ಅತ್ಯುತ್ತಮವಾಗಿ ಅವಳ ಸೇವೆಯನ್ನು ಮಾಡುತ್ತಾರೆ.

ಆದರೂ ಕೂಡ ಪಾರ್ವತಿಗೆ ತೃಪ್ತಿ ಕೊಡದ ಕಾರಣ ಇಲ್ಲಿ ಮಹಿಳೆಯೊಬ್ಬಳು ಇದ್ದರೆ ತುಂಬಾ ಚೆನ್ನಾಗಿರುತ್ತದೆ ಎಂದು ಶಿವನಿಗೆ ಬೇಡಿಕೊಳ್ಳುತ್ತಾಳೆ. ಹೀಗೆ ಶಿವನು ತನ್ನ ಹೆಂಡತಿ ಬೇಡಿಕೆಗೆ ಒಪ್ಪಿ ತನ್ನ ದೇಹದಲ್ಲಿ ಇರುವಂತಹ  ಆಶಾವಾರಿ ಯನ್ನು ಸೃಷ್ಟಿ ಮಾಡುತ್ತಾನೆ.

ಆದರೆ ಹೀಗೆ ಸೃಷ್ಟಿ ಮಾಡಿದಂತಹ ಆಶಾವಾರಿ ಮನುಷ್ಯನ ರೂಪದಲ್ಲಿ ಇದ್ದರೂ ಹೊರತು, ಹುಲಿಯ ಚರ್ಮವನ್ನು ಹೊಂದಿರುತ್ತಾರೆ ಹಾಗೆ ನೋಡಲು ವಿಕಾರವಾಗಿ ಇರುತ್ತಾರೆ. ಹೀಗೆ ಜನ್ಮ ತಾಳಿದ ಅಂತಹ  ಆಶಾವಾರಿ ಯನ್ನು ಪಾರ್ವತಿಯು ತನ್ನ ಮನೆಗೆ ಕರೆದುಕೊಂಡು ಹೋಗಿ ಅವಳ ವೇಷ ಭೂಷ ವನ್ನು ಚೇಂಜ್ ಮಾಡುತ್ತಾರೆ.

ಆದರೆ ಆಶಾವಾರಿ ರಿಗೆ ಹೆಚ್ಚು ಹಸಿವು ಇರುತ್ತದೆ. ಕೈಲಾಸದಲ್ಲಿ ಇರುವಂತಹ ಎಲ್ಲಾ ಆಹಾರಗಳನ್ನು ತಿಂದು ತೇಗುತ್ತಾರೆ. ಆದರೂ ಕೂಡಆಶಾವಾರಿ  ದೇವಿ ತೃಪ್ತಿಯನ್ನು ಹೊಂದುವುದಿಲ್ಲ.

ಹೀಗೆ ನಡೆದಂತಹ ಘಟನೆಯನ್ನು ಪಾರ್ವತಿಯು ಶಿವನ ಗೆ ವಿವರಿಸಿದ್ದಾಳೆ. ಅವಾಗ ಶಿವನ ಆಶಾವಾರಿ ಯನ್ನು ಅಲ್ಲಿಂದ ಬೇರೆ ಕಡೆಗೆ ಕಳಿಸುತ್ತಾನೆ. ಇದು ಶಿವನ ತಂಗಿಯ ಸಂಪೂರ್ಣವಾದ ಕಥೆಯಾಗಿದೆ.

ನಿಮಗೆ ಏನಾದರೂ ಈ ಕಥೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರಿಗೆ ಈ ವಿಚಾರದ ಬಗ್ಗೆ ಹಂಚಿಕೊಳ್ಳಿ ಹಾಗು ಕಾಮೆಂಟ್ ಮಾಡುವುದನ್ನು ಮರೆಯಬೇಡಿ ಶೇರ್ ಮಾಡುವುದನ್ನು ಮರೆಯಬೇಡಿ.