Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಶೀತದ ದೇಹಕ್ಕೆ ಹಾಗು ಶುಗರ್ ಸಮಸ್ಸೆಯನ್ನ ನಿಯಂತ್ರಿಸಬಲ್ಲ ಒಂದು ಅದ್ಭುತವಾದ ಗಿಡ ಇದು …

ಸಾಮಾನ್ಯಕ್ಕೆ ನಮ್ಮ ಸುತ್ತಮುತ್ತ ಇರುವ ಪ್ರತಿಯೊಂದು ಗಿಡ ಮರಗಳಿಗೂ ಕೂಡ ಅದರಂತೆ ಆದಂತಹ ಕೆಲವೊಂದು ಗುಣಸ್ವಭಾವಗಳು ಇರುವುದನ್ನು ಕಾಣಬಹುದಾಗಿದೆ,

ಯಾವ ಗಿಡ ಮರಗಳನ್ನು ನೋಡಿದರೂ ಕೂಡ ಒಂದಲ್ಲ ಒಂದು ರೀತಿಯಾದಂತಹ ಔಷಧಿ ಗುಣಗಳಿರುವುದನ್ನು ನಾವು ಗಮನಿಸಬಹುದಾಗಿದೆ ಅಂತಹ ಗಿಡಗಳು ನಮ್ಮ ಸುತ್ತಮುತ್ತ ಲಕ್ಷಾಂತರ ಇವೆ ಆದರೆ ಅವುಗಳ ಅರಿವು ಮಾತ್ರ ನಮಗೆ ಸ್ವಲ್ಪವೂ ಇರುವುದಿಲ್ಲದನ್ನು ಗಮನಿಸಬಹುದಾಗಿದೆ.

ಅಂಥದ್ದೇ ಒಂದು ಪ್ರಮುಖವಾದ ಗಿಡಗಳಲ್ಲಿ ಎಕ್ಕದ ಗಿಡದ ಬಗ್ಗೆ ನಾನು ಈ ದಿನ ನಿಮಗೆ ತಿಳಿಸಿಕೊಡುತ್ತೇನೆ ಈ ಎಕ್ಕದ ಗಿಡವನ್ನು ಹಿಂದಿನ ಕಾಲದಿಂದಲೂ ನಾವು ಯಾವ ಯಾವ ಕಾರಣಗಳಿಂದಾಗಿ ಬಳಸುತ್ತಿದ್ದೇವೆ ಮತ್ತು ಅದರಿಂದ ನಮಗೆ ಏನೆಲ್ಲಾ ಉಪಯೋಗಗಳಿವೆ ಎಂಬ ಸಂಪೂರ್ಣ ಮಾಹಿತಿಯನ್ನು ನೀವು ಇಲ್ಲಿ ತಿಳಿದುಕೊಳ್ಳಿ.

ಸ್ನೇಹಿತರೇ ಸಾಮಾನ್ಯವಾಗಿ ಈ ಎಕ್ಕದ ಗಿಡ ನಮ್ಮ ಸುತ್ತಮುತ್ತ ಖಾಲಿ ಪ್ರದೇಶಗಳಲ್ಲೆಲ್ಲ ಬೆಳೆದಿರುವುದನ್ನು ನಾವು ಗಮನಿಸಬಹುದಾಗಿದೆ ಆದರೆ ಈ ಎಕ್ಕದ ಗಿಡದಿಂದ ಇರುವ ಉಪಯೋಗ ಮಾತ್ರ ನಮಗೆ ತಿಳಿದಿಲ್ಲ,

ನಮ್ಮ ಪೂರ್ವಜರು ಅಥವಾ ನಮ್ಮ ಹಿರಿಯರು ಎತ್ತರ ಗಿಡವನ್ನು ಒಂದು ದೈವಿಕ ಗಿಡ ಅಂದರೆ ದೈವ ಶಕ್ತಿ ಇರುವ ಗಿಡ ಎಂದು ಭಾವಿಸಿ ಅದಕ್ಕೆ ಪೂಜೆ ಮಾಡುತ್ತಿದ್ದನ್ನು ನಾವು ಗಮನಿಸಬಹುದು ಅಲ್ಲದೆ ಎಕ್ಕದ ಗಿಡ ಎಂದರೆ ಅದು ಶಿವನಿಗೆ ಪ್ರಿಯವಾದ ಗಿಡ ಎಂದರು ಕೂಡ ತಪ್ಪಾಗುವುದಿಲ್ಲ ಅದನ್ನು ಸಂಸ್ಕೃತದಲ್ಲಿ ಅರ್ಕ ಎಂದು ಕೂಡ ಕರೆಯುತ್ತಾರೆ.

ಇದು ಪೂಜೆಗೆ ಮಾತ್ರ ಸೀಮಿತವಲ್ಲ ಇದರಿಂದ ಅನೇಕ ವೈದ್ಯಕೀಯ ಅಂಶಗಳನ್ನು ಕೂಡ ನಾವು ಪಡೆಯಬಹುದು ಅದರಲ್ಲಿ ಮುಖ್ಯವಾಗಿ ನಮ್ಮ ದೇಹ ತಂಪಾಗಿದ್ದರೆ ಅಂದರೆ ಅದರ ಉಷ್ಣತೆಯನ್ನು ಹೆಚ್ಚಿಸಲು ಎಕ್ಕದ ಗಿಡ ಸಹಾಯ ಮಾಡುವುದನ್ನು ನಾವು ಗಮನಿಸಬಹುದು ಎಕ್ಕದ ಗಿಡವನ್ನು ಸಾಮಾನ್ಯವಾಗಿ ವಿಷ ಎಂದು ಕೂಡ ಕೆಲವರು ಭಾವಿಸುತ್ತಾರೆ.

ಅದರಿಂದ ಹೇಗೆ ನಮ್ಮ ದೇಹದ ಉಷ್ಣತೆಯನ್ನು ಹೆಚ್ಚು ಮಾಡಿಕೊಳ್ಳುವುದು ಎಂದು ಯೋಚಿಸುತ್ತಿದ್ದೀರಾ, ಅದನ್ನು ತಿನ್ನಲೇಬೇಕು ಎಂಬ ನಿಯಮಗಳೇನಿಲ್ಲ ಎಕ್ಕದ ಗಿಡದ ಒಂದು ಎಲೆಯನ್ನು ನಾವು ರಾತ್ರಿ ಮಲಗುವ ಮುನ್ನ ನಮ್ಮ ಪಾದಗಳಿಗೆ ಕಟ್ಟಿದರೆ ಸಾಕು ಅದು ಒಂದು ಕಾಟನ್ ಬಟ್ಟೆಯಿಂದ ಕಟ್ಟಬೇಕು ಅಷ್ಟೇ ಆ ರೀತಿ ಕಟ್ಟುವುದರಿಂದಾಗಿ ನಮ್ಮ ದೇಹದಲ್ಲಿ ಶೀತಾಂಶ ಕಡಿಮೆಯಾಗಿ ಉಷ್ಣಾಂಶ ಹೆಚ್ಚಾಗುತ್ತದೆ ಅದು ಐದು ಆರು ದಿನ ಮಾಡಬೇಕು ಅದು ನಿಯಮಿತವಾಗಿ ಮಾಡುವುದರಿಂದ ಉಷ್ಣತೆಯನ್ನು ಅತಿ ಬೇಗ ಹೆಚ್ಚು ಮಾಡಿಕೊಳ್ಳಬಹುದು.

ಇದರಿಂದ ಆಗುವ ಮತ್ತೊಂದು ಪ್ರಮುಖವಾದ ಉಪಯೋಗ ಎಂದರೆ ಮಧುಮೇಹವನ್ನು ಕಂಟ್ರೋಲ್ ಮಾಡುವ ಅಂಶವನ್ನು ಈ ಎಕ್ಕದ ಗಿಡ ಹೊಂದಿದೆ ಎಂದರೂ ತಪ್ಪಾಗಲಾರದು ಅದು ಹೇಗೆ ಗೊತ್ತೆ, ನಮ್ಮ ಎರಡೂ ಪಾದಕ್ಕೂ ಕೂಡ ಎಕ್ಕದ ಗಿಡದ ಎರಡು ಎಲೆಗಳನ್ನು ಕಾಟನ್ ಬಟ್ಟೆಯನ್ನು ಉಪಯೋಗಿಸಿ ಕಟ್ಟಿ ದಿನಕ್ಕೆ ಎರಡು ಮೂರು ತಾಸು ಬಿಡುವುದರಿಂದಾಗಿ ಮಧುಮೇಹ ಕಂಟ್ರೋಲ್ ಆಗುತ್ತದೆ ಎಂಬ ನಂಬಿಕೆ ಸಹ ಇದೇ.

ಇದರ ಜೊತೆಯಲ್ಲಿ ನಮ್ಮ ಅಂಗಾಲಿನಲ್ಲಿ ಸಾಮಾನ್ಯವಾಗಿ ಅಣ್ಣೆ ಆಗುವುದನ್ನು ಕಾಣಬಹುದಾಗಿದೆ ಅಂದರೆ ಪಾದದ ಕೆಳಗೆ ಚರ್ಮವು ಗಟ್ಟಿ ಆಗುವುದನ್ನು ಗಮನಿಸಬಹುದು, ಆ ರೀತಿ ಗಟ್ಟಿಯಾದ ಚರ್ಮದ ಮೇಲೆ ಈ ಎಕ್ಕದ ಗಿಡದ ಹಾಲನ್ನು ಹಾಕುವುದರಿಂದಾಗಿ ಚರ್ಮವು ಮೃದುವಾಗುತ್ತದೆ ಇದನ್ನು ಚೆನ್ನಾಗಿರುವ ಚರ್ಮದ ಮೇಲೆ ಹಾಕಬಾರದು ಹಾಗೇ ಹಾಕಿದರೆ ಚರ್ಮ ಸುಡುವ ಸಾಧ್ಯತೆ ಇರುತ್ತದೆ ಆದ್ದರಿಂದ ಸ್ವಲ್ಪ ಜಾಗರೂಕತೆಯಿಂದ ಈ ಹಾಲನ್ನು ಚರ್ಮದ ಮೇಲೆ ಹಾಕಬೇಕು ಇದನ್ನು ಉಪಯೋಗ ಮಾಡುವುದರಲ್ಲಿ ತಪ್ಪೇನೂ ಇಲ್ಲ ಧನ್ಯವಾದಗಳು.