Categories
ಭಕ್ತಿ ಮಾಹಿತಿ ಸಂಗ್ರಹ

ಸಂಜೆ ವೇಳೆ ಮನೆಯಲ್ಲಿ ದೇವರಿಗೆ ದೀಪ ಹಚ್ಚುವುದರಿಂದ ಮನೆಯಲ್ಲಿ ಆಗುವ ಬದಲಾವಣೆಗಳೇನು ಗೊತ್ತೆ..!

ಸಂಜೆ ಸಮಯದಲ್ಲಿ ದೇವರಿಗೆ ಪೂಜೆ ಮಾಡುವುದರಿಂದ ವಾತಾವರಣದಲ್ಲಿ ಆಗುವ ಬದಲಾವಣೆಗಳೇನು ಅನ್ನುವುದನ್ನು ತಿಳಿಯೋಣ, ಅಂದರೆ ಸಂಜೆ ಸಮಯದಲ್ಲಿ ಪೂಜೆ ಮಾಡುವುದರಿಂದ ಮನೆಯಲ್ಲಿ ಪೂಜೆ ಮಾಡುವುದರಿಂದ ಮನೆಯ ವಾತಾವರಣದಲ್ಲಿ ಆಗುವ ಬದಲಾವಣೆಗಳು ಏನು, ಈ ಸಂಜೆ ಸಮಯದಲ್ಲಿ ಯಾಕೆ ಪೂಜೆ ಮಾಡಬೇಕು ಅನ್ನೋದನ್ನು ತಿಳಿಯೋಣ.

ಇವತ್ತಿನ ಈ ಮಾಹಿತಿಯಲ್ಲಿ. ನಮ್ಮ ಸಂಪ್ರದಾಯದ ಪ್ರಕಾರ ನಾವು ದಿನದಲ್ಲಿ ಎರಡು ಬಾರಿ ಪೂಜೆಯನ್ನು ಮಾಡಬೇಕಾಗುತ್ತದೆ ಹಾಗೆ ಈ ದಿನದಲ್ಲಿ ಎರಡು ಬಾರಿ ಪೂಜೆ ಮಾಡುವಾಗ, ಈ ಎರಡೂ ಪೂಜಾ ಸಮಯವೂ ಅದರದ್ದೆ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿರುವುದನ್ನು ನಾವು ಗಮನಿಸಬಹುದಾಗಿದೆ.

ಬೆಳಿಗ್ಗೆ ಸಮಯದಲ್ಲಿ ನಾವು ದೇವರಿಗೆ ಪೂಜೆ ಮಾಡುವುದರಿಂದ ಇದರಿಂದ ಆಗುವ ಪ್ರಯೋಜನಗಳು ಅಂದರೆ ನಮ್ಮ ಇಷ್ಟಾರ್ಥಗಳನ್ನು ನೆರವೇರಿಸು ಎಂದು ಬೇಡಿ ಕೊಳ್ಳುವುದಕ್ಕಾಗಿ ನಮ್ಮ ತೊಂದರೆಗಳನ್ನು ಜೀವನದಲ್ಲಿ ಉಂಟಾಗುತ್ತಿರುವ ಸಮಸ್ಯೆಗಳಿಗೆ ಪರಿಹಾರವನ್ನು ನೀಡು ಎಂದು ಹೇಳಿಕೊಳ್ಳುವುದಕ್ಕೆ ಬೆಳಿಗ್ಗೆ ಸಮಯದಲ್ಲಿ ಪೂಜೆ ಮಾಡಲಾಗುತ್ತದೆ ಹಾಗೆ ಸಂಜೆ ಸಮಯದಲ್ಲಿ ಪೂಜೆ ಮಾಡುವ ಕಾರಣ ಏನು ಅಂದರೆ ಸಂಜೆ ಸಮಯದಲ್ಲಿ ಮನೆಗೆ ಶ್ರೀ ಲಕ್ಷ್ಮೀದೇವಿ ಕೃಷ್ಣವೇಷ ಮಾಡ್ತಾಳೆ ಈ ಸಮಯದಲ್ಲಿ ನಾವು ಮನೆಯಲ್ಲಿ ಪೂಜೆ ಮಾಡುವುದರಿಂದ ಲಕ್ಷ್ಮೀದೇವಿಯ ಕೃಪಕಟಾಕ್ಷ ಆಗುತ್ತದೆ.

ಮನೆಯಲ್ಲಿರುವ ಜ್ಯೇಷ್ಠಾಲಕ್ಷ್ಮೀ ಆಚೆ ಹೋಗಬೇಕು ಅಂದರೆ ದಾರಿದ್ರ್ಯ ಲಕ್ಷ್ಮಿಯು ಮನೆಯಿಂದ ಆಚೆ ಹೋಗಬೇಕು ಶ್ರೀ ಸಾಕ್ಷಾತ್ ಲಕ್ಷ್ಮಿ ದೇವಿಯ ಮನೆಗೆ ಪ್ರವೇಶ ಮಾಡಬೇಕು ಅಂದರೆ ಈ ಸಂಜೆ ಸಮಯದಲ್ಲಿ ಅಂದರೆ ಕುದ್ರೋಳಿಯ ಸಮಯದಲ್ಲಿ ನಾವು ಮನೆಯಲ್ಲಿ ಪೂಜೆಯನ್ನು ಮಾಡಲೇಬೇಕು ಇಲ್ಲದಿದ್ದರೆ, ಈ ಲಕ್ಷ್ಮೀದೇವಿಯ ಸ್ಥಿರ ನಿವಾಸದ ಬದಲು ಜ್ಯೇಷ್ಠಾಲಕ್ಷ್ಮೀ ವಾಸ ಮನೆಯಲ್ಲಿ ಆಗುತ್ತದೆ, ಇದರಿಂದ ಮನೆಯಲ್ಲಿ ಅನೇಕ ಕಿರಿಕಿರಿ ಉಂಟಾಗುತ್ತದೆ ತೊಂದರೆಗಳು ಸಮಸ್ಯೆಗಳು ಉಂಟಾಗುತ್ತಿರುತ್ತದೆ, ಜೊತೆಗೆ ಮಕ್ಕಳು ಕಿರಿಕಿರಿ ಮಾಡುವುದು ಅಥವಾ ಮನೆಯ ಸದಸ್ಯರಿಗೆ ಕಿರಿಕಿರಿ ಆಗುವುದು, ಇಂತಹ ಎಲ್ಲ ತೊಂದರೆಗಳು ಸನ್ನಿವೇಶಗಳು ಉಂಟಾಗುತ್ತಿರುತ್ತದೆ.

ಈ ಸನ್ನಿವೇಶಗಳು ಮನೆಯಲ್ಲಿ ಉಂಟಾಗಬಾರದು ಅಂದರೆ ಮನೆಯ ವಾತಾವರಣವೂ ನೆಮ್ಮದಿಯಿಂದ ಕೂಡಿರಬೇಕು ಅಂದರೆ ಸಂಜೆ ಸಮಯದಲ್ಲಿ ಪೂಜೆ ಮಾಡುವುದು ಪರಿಹಾರ ಆಗಿದೆ ಈ ಮನೆಯ ವಾತಾವರಣವನ್ನು ಸಕಾರಾತ್ಮಕತೆ ಯಿಂದ ಇರಿಸಬೇಕು ಅಂದರೆ, ಅದಕ್ಕೆ ಪರಿಹಾರ ಸಂಜೆ ಸಮಯದಲ್ಲಿ ಪೂಜೆಯನ್ನು ಮಾಡುವುದು. ಹೌದು ಸಂಜೆ ಸಮಯದಲ್ಲಿ ದೇವರ ಜಪ ಮಾಡುವುದು ದೇವರಿಗೆ ದೀಪಾರಾಧನೆ ಮಾಡುವುದು ಮತ್ತು ತುಳಸಿ ಗಿಡದ ಮುಂದೆ ಎಣ್ಣೆ ಅನ್ನು ಬಳಸಿ ದೀಪವನ್ನ ಹಚ್ಚುವುದು, ಈ ರೀತಿ ಮಾಡುವುದರಿಂದ ಮನೆಯಲ್ಲಿ ಜೇಷ್ಠ ಲಕ್ಷ್ಮಿಯ ನಿವಾಸ ಆಗುವುದಿಲ್ಲ, ಇದರ ಬದಲು ಲಕ್ಷ್ಮೀದೇವಿಯ ಅನುಗ್ರಹ ಆಗುತ್ತದೆ.

ಈ ಎಲ್ಲ ಕಾರಣಗಳಿಂದ ಮನೆಯಲ್ಲಿ ಸಂಜೆ ಸಮಯದಲ್ಲಿ ದೀಪಾರಾಧನೆ ನಾ ಮಾಡಲೇಬೇಕು ಈ ಒಂದು ಪದ್ಧತಿಯನ್ನು ಮಾಡಿದ್ದು ನಮ್ಮ ಪೂರ್ವಜರು ಅದನ್ನು ಅವರು ಕಟ್ಟುನಿಟ್ಟಿನಿಂದ ಪಾಲಿಸುತ್ತಿದ್ದರು ಹಾಗೆ ತಮ್ಮ ಪೀಳಿಗೆಯವರೆಗೂ ಕೂಡ ಈ ಒಂದು ವಿಚಾರದ ಬಗ್ಗೆ ತಿಳಿಸಿಕೊಟ್ಟಿದ್ದು, ಅನೇಕ ಪೀಳಿಗೆಯವರು ಈ ಪದ್ಧತಿಯನ್ನು ಪಾಲಿಸಿಕೊಂಡು ಬರುತ್ತಿದ್ದಾರೆ, ಆದರೆ ನಮ್ಮ ಇತ್ತೀಚಿನ ಪೀಳಿಗೆಯವರು ಸಂಜೆ ಸಮಯದಲ್ಲಿ ದೀಪಾರಾಧನೆ ಮಾಡುವುದನ್ನೆ ಮರೆತಿದ್ದಾರೆ, ಇದರಿಂದ ಮನೆಯಲ್ಲಿ ಕಿರಿಕಿರಿ ಉಂಟಾಗುವುದು ಸಂಜೆ ಸಮಯದಲ್ಲಿ ಜಗಳ ಆಗುವುದು, ಇಂತಹ ಎಲ್ಲ ತೊಂದರೆಗಳು ಸಮಸ್ಯೆಗಳು ಉಂಟಾಗುತ್ತದೆ. ಆದ ಕಾರಣ ಸಂಜೆ ಸಮಯದಲ್ಲಿ ದೀಪಾರಾಧನೆ ಅನ್ನು ಮಾಡಿ ಇಂತಹ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.