Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಸಕ್ಕರೆ ಬದಲಿಯಾಗಿ ಬೆಲ್ಲ ಉಪಯೋಗಿಸಿದರೆ ಆರೋಗ್ಯದ ದೃಷ್ಟಿಯಲ್ಲಿ ಹೇಗೆ ಉತ್ತಮ ಗೊತ್ತ ..!

ನೀವು ಸಕ್ಕರೆಯನ್ನು ಬಳಸುವುದಕ್ಕಿಂತ ಸಕ್ಕರೆ ಬಳಸುವುದನ್ನು ಬಿಟ್ಟು ಬೆಲ್ಲವನ್ನೇ ಬಳಸಿ ಹೌದು ಹಿಂದಿನ ಕಾಲದಲ್ಲಿ ಸಾಕಷ್ಟು ಸಿಹಿ ಪದಾರ್ಥಗಳಿಗೆ ಬೆಲ್ಲವನ್ನೇ ಬಳಸುತ್ತಾ ಇದ್ದರು ಇದರಿಂದ ಅವರಿಗೆ ಸಾಕಷ್ಟು ಆರೋಗ್ಯಕರ ಲಾಭಗಳು ಕೂಡ ಸಿಗುತ್ತಾ ಇತ್ತು ಆದರೆ ಇಂದಿನ ಮಂದಿ ಸಕ್ಕರೆಯ ರುಚಿಗೆ ಮೊರೆ ಹೋಗಿ ಸಕ್ಕರೆಯನ್ನ ತುಂಬಾ ಬಳಕೆ ಮಾಡುತ್ತಾ ಇದ್ದಾರೆ. ಆದರೆ ಸಂಶೋಧನೆಗಳು ಹೇಳುವ ಹಾಗೆ ಸಕ್ಕರೆ ಅಥವಾ ಬಳಸುವುದರಿಂದ ಇದು ನಮ್ಮ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡಬಹುದು ಎಂದು,

ಆದಕಾರಣ ಇಂದಿನ ಮಾಹಿತಿ ತಿಳಿದುಕೊಳ್ಳಿ ಬೆಲ್ಲದ ಮಹತ್ವವನ್ನು ಮತ್ತು ನೀವು ಸಕ್ಕರೆಯನ್ನು ತಿನ್ನುವುದಕ್ಕಿಂತ ತುಂಬ ಹೆಚ್ಚಿನ ಲಾಭವನ್ನು ಬೆಲ್ಲವನ್ನು ಸೇವಿಸುವುದರಿಂದ ಪಡೆದುಕೊಳ್ಳಬಹುದಾಗಿದೆ. ಮಾರುಕಟ್ಟೆಯಲ್ಲಿ ಈ ಬೆಲ್ಲ ಅನೇಕ ಬಣ್ಣಗಳಲ್ಲಿ ದೊರೆಯುತ್ತದೆ. ಆದರೆ ನಾವು ರಾಗಿ ಬಣ್ಣದ ಬೆಲ್ಲವನ್ನು ಬಳಸುವುದರಿಂದ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾದ ಲಾಭಗಳೂ ಇವೆ. ಇಂದಿನ ಮಾಹಿತಿ ಅಲ್ಲಿ ತಿಳಿಯೋಣ ಸಕ್ಕರೆಗಿಂತ ಬೆಲ್ಲ ಎಷ್ಟು ಮೇಲು ಎಂದು ಮತ್ತು ಇದು ಏನೆಲ್ಲಾ ಆರೋಗ್ಯಕರ ಲಾಭಗಳನ್ನು ನೀಡುತ್ತದೆ ಎನ್ನುವುದನ್ನು ಕೂಡ ತಿಳಿಯೋಣ. ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದು ಬೆಲ್ಲದ ಮಹತ್ವವನ್ನು ತಿಳಿದು ಮುಂದಿನ ದಿನಗಳಲ್ಲಿ ,

ಬೆಲ್ಲವನ್ನೇ ಬಳಸಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಿ. ಸಾಕಷ್ಟು ಜನ ಈಗಾಗಲೇ ಸಕ್ಕರೆಯ ರುಚಿ ಗೆ ಮೊರೆ ಹೋಗಿ ಬೆಲ್ಲದ ರುಚಿ ಅಂದರೆ ದೂರ ಉಳಿಯುತ್ತಾರೆ ಆದರೆ ನೀವು ಕಾಫಿ ಟೀ ಜ್ಯೂಸ್ ಗಳಲ್ಲಿ ಬೆಲ್ಲವನ್ನೇ ಬಳಸಿ ಸ್ವಲ್ಪ ಕಷ್ಟ ಅನಿಸಬಹುದು. ಆದರೆ ಮುಂದಿನ ದಿನಗಳಲ್ಲಿ ನಿಮಗೆ ಅದರಿಂದ ದೊರೆಯುವ ಆರೋಗ್ಯಕರ ಲಾಭಗಳನ್ನು ಗಮನಿಸಿದರೆ ಇದರ ರುಚಿ ಕೂಡ ನಿಮಗೆ ಇಷ್ಟ ಆಗುತ್ತದೆ ಮತ್ತು ಇನ್ನು ಮುಂದಿನ ದಿನಗಳಲ್ಲಿ ಬೆಲ್ಲವನ್ನೇ ಬಳಸುತ್ತೀರಾ.

ಬೆಲ್ಲದಲ್ಲಿ ಅನೇಕ ಪೋಷಕಾಂಶಗಳ ಜೊತೆ ಹೇರಳವಾದ ಕಬ್ಬಿಣಾಂಶ ಇದೆ ಎರೆದು ರಕ್ತಹೀನತೆಯ ನ ದೂರ ಮಾಡುತ್ತದೆ ಅಷ್ಟೇ ಅಲ್ಲ ರೋಗನಿರೋಧಕ ಶಕ್ತಿಯನ್ನು ಕೂಡ ವೃದ್ಧಿಸುತ್ತದೆ ಆದರೆ ನೀವು ಸಕ್ಕರೆಯನ್ನು ತಿಂದರೆ ಇದು ರೋಗ ನಿರೋಧಕ ಶಕ್ತಿಯನ್ನು ಕುಂಟಿತ ಮಾಡುವುದಲ್ಲದೆ ಅನೇಕ ಅನಾರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಜಂತು ಹುಳುವಿನ ಸಮಸ್ಯೆ ಮತ್ತು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಹೆಚ್ಚು ಮಾಡುವುದು ಈ ರೀತಿಯ ಸಮಸ್ಯೆಗಳಿಂದ ಇನ್ನೂ ಬೇರೆ ತರಹದ ಅನಾರೋಗ್ಯ ಸಮಸ್ಯೆಗಳು ಕೂಡ ಉಂಟಾಗಬಹುದು. ಆದಕಾರಣ ನೀವು ಸಕ್ಕರೆ ಬಳಸುವುದಕ್ಕಿಂತ ಬೆಲ್ಲವನ್ನು ಉಪಯೋಗಿಸಿದರೆ ತುಂಬಾ ಒಳ್ಳೆಯದು ಬೆಳಗ್ಗಿನ ಸಮಯದಲ್ಲಿ ಶೇಂಗಾ ಬೀಜವನ್ನು ನೆನೆಸಿಟ್ಟು ಶೇಂಗಾಬೀಜ ದೊಂದಿಗೆ ಬೆಲ್ಲವನ್ನು ತಿಂದರೆ ಸಾಕಷ್ಟು ಪ್ರೋಟಿನ್ಸ್ ಗಳು ದೊರೆಯುತ್ತದೆ ಮತ್ತು ನಿಶ್ಶಕ್ತಿ ದೂರವಾಗುತ್ತದೆ.

ಗರ್ಭಿಣಿ ಸ್ತ್ರೀಯರು ಕೂಡ ಸಕ್ಕರೆಯ ಬದಲು ಬೆಲ್ಲವನ್ನು ಬಳಸುವುದರಿಂದ ಹೊಟ್ಟೆಯಲ್ಲಿರುವ ಮಗುವಿನ ಆರೋಗ್ಯ ಉತ್ತಮವಾಗಿರುತ್ತದೆ ಮತ್ತು ನೀವು ಹಾಲಿಗೆ ಬೆಲ್ಲವನ್ನು ಬೆರೆಸಿ ತಿನ್ನುವುದಕ್ಕಿಂತ ಬೆಲ್ಲವನ್ನು ತಿಂದು ಅಥವಾ ಹಾಲನ್ನು ಕುಡಿದ ನಂತರ ಬೆಲ್ಲವನ್ನು ತಿನ್ನುವುದು ಒಳ್ಳೆಯದು. ಅಷ್ಟೇ ಅಲ್ಲ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳ ಪರಿಹಾರ ಮಾಡುತ್ತದೆ ಮತ್ತು ಕರುಳಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಕೂಡ ಪರಿಹಾರ ಮಾಡುವುದಲ್ಲದೆ ಬೆಲ್ಲ ಮಲಬದ್ಧತೆಯನ್ನು ದೂರ ಮಾಡುತ್ತದೆ. ಇದು ಶುಗರ್ ಬರದೆ ಇರುವ ಹಾಗೆ ಆರೋಗ್ಯವನ್ನು ಕಾಪಾಡುತ್ತದೆ. ಇದು ಬೆಲ್ಲದ ಮಹತ್ವ ನೀವು ಕೂಡ ಸಕ್ಕರೆಯನ್ನು ಬಿಟ್ಟು ಬೆಲ್ಲವನ್ನೆ ಬಳಸಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಿ ಧನ್ಯವಾದ.