Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಸನ್ ಟ್ಯಾನ್ ಅನ್ನು ಹೇಗೆ ತೆಗೆದುಹಾಕಬಹುದು ಈ ಮನೆ ಔಷದಿಯನ್ನ ಬಳಸಿ ನೋಡಿ ಸಾಕು .!

ಹಾಯ್ ಫ್ರೆಂಡ್ಸ್ ಇಂದಿನ ಮಾಹಿತಿಯಲ್ಲಿ ಸನ್ ಟ್ಯಾನ್ ಅನ್ನು ಹೇಗೆ ತೆಗೆದುಹಾಕಬಹುದು ಅನ್ನೋದು ಮಾಹಿತಿಯನ್ನು ತಿಳಿಯೋಣ ಕೆಲವರಿಗೆ ಕೈ ಕಾಲುಗಳು ತುಂಬಾ ಕಪ್ಪಾಗಿರುತ್ತದೆ ಅದನ್ನು ಕೆಲವರು ನಿರ್ಲಕ್ಷ್ಯ ಮಾಡ್ತಾರೆ ಆದರೆ ಇನ್ನೂ ಕೆಲವರು ತಮ್ಮ ಕೈ ಕಾಲುಗಳು ತುಂಬಾ ಕಪ್ಪಗಾಗಿದೆ ಎಂದು ತಮ್ಮ ಚರ್ಮದ ಬಗ್ಗೆ ತುಂಬಾ ಕಾಳಜಿ ಮಾಡ್ತಾರೆ. ಹಾಗಾದರೆ ನಿಮ್ಮ ಕೈ ಕಾಲು ಕೂಡ ಸನ್ ಟ್ಯಾನ್ನಿಂದ ಕಪ್ಪಗಾಗಿದೆಯ, ಇಂದಿನ ಈ ಮಾಹಿತಿಯನ್ನು ತಪ್ಪದೇ ತಿಳಿಯಿರಿ ನಾವು ತಿಳಿಸುತ್ತೇವೆ ಹೇಗೆ ಈ ಸನ್ ಟ್ಯಾನ್ನಿಂದ ಕಪ್ಪಾಗೆ ಆಗಿರುವ ಚರ್ಮವನ್ನು ಹೊಳಪಾಗಿಸುವುದು, ಕಾಂತಿಯುತವಾಗಿಸಿ ಕೊಳ್ಳುವುದು ಎಂದು.

ಈ ಮನೆ ಮದ್ದಿನಲ್ಲಿ ನಾವು ಬಳಸುತ್ತಿರುವುದು ಕೇವಲ ಮನೆಯಲ್ಲಿಯೇ ದೊರೆಯುವ ಪದಾರ್ಥಗಳು ಆಗಿರುತ್ತದೆ. ಆದಕಾರಣ ಪ್ರತಿಯೊಬ್ಬರೂ ಕೂಡ ಈ ಸುಲಭವಾದ ಸರಳವಾದ ಮನೆ ಮದ್ದನ್ನು ಪಾಲಿಸಬಹುದು. ಯಾಕೆ ಅಂದರೆ ಕೆಲವರು ಆಚೆ ದೊರೆಯುವ ಅನೇಕ ಕ್ರೀಮ್ ಗಳನ್ನು ತಂದು ಅದನ್ನು ತಮ್ಮ ಚರ್ಮಕ್ಕೆ ಬಳಸುವುದಕ್ಕೆ ಹೆದರುತ್ತಾರೆ. ಅದು ಚರ್ಮದ ಮೇಲೆ ಯಾವ ರೀತಿಯಲ್ಲಿ ಅಡ್ಡಪರಿಣಾಮ ಬೀರುತ್ತದೆ ಅಂತ. ಆದರೆ ನಾವು ಇಲ್ಲಿ ಬಳಸುವ ಪದಾರ್ಥ ಎಲ್ಲವೂ ನೈಸರ್ಗಿಕವಾದದ್ದು ಇದರಿಂದ ಯಾವುದೇ ಕಾರಣಕ್ಕೂ ಅಡ್ಡ ಪರಿಣಾಮ ಆಗುವುದಿಲ್ಲ.

ಸ್ಕ್ರಬ್ಬಿಂಗ್ :
ಮೊದಲಿಗೆ ಈ ಕೈಗಳು ಮತ್ತು ಕಾಲು ಕಪ್ಪಗೆ ಆಗಿರುವುದಕ್ಕೆ ಸನ್ ಟ್ಯಾನ್ ಆಗಿರುವುದಕ್ಕೆ ನಾವು ಸ್ಕ್ರಬ್ಬಿಂಗ್ ಮಾಡಬೇಕು. ಸ್ಕ್ರಬಿಂಗ್ ಮಾಡುವುದಕ್ಕೆ ನಮಗೆ ಬೇಕಾಗಿರುವುದು ಈ ಕೆಲವೊಂದು ಪದಾರ್ಥ ಅದೇನೆಂದರೆ ನಿಂಬೆ ಹಣ್ಣಿನ ರಸ ಮತ್ತು ಉಪ್ಪು ಅಷ್ಟೆ ಅರ್ಧ ಹೋಳು ನಿಂಬೆ ಹಣ್ಣಿನ ರಸವನ್ನು ತೆಗೆದುಕೊಂಡು ಅದಕ್ಕೆ ಅರ್ಧ ಚಮಚ ಉಪ್ಪನ್ನು ಬೆರೆಸಿ ಚೆನ್ನಾಗಿ ಮಿಶ್ರ ಮಾಡಬೇಕು ನಂತರ ಇದನ್ನು ಕೈಗಳ ಮೇಲೆ ಮತ್ತು ಕಾಲಿನ ಮೇಲೆ ಲೇಪನ ಮಾಡಿ ನಿಮಗೆ ಇನ್ನೂ ಹೆಚ್ಚು ಮಿಶ್ರಣ ಬೇಕು ಅಂದರೆ ಹೆಚ್ಚು ಪ್ರಮಾಣದಲ್ಲಿ ಈ ಪದಾರ್ಥವನ್ನು ತೆಗೆದುಕೊಳ್ಳಬಹುದು.

ಇದೀಗ ಸ್ಕ್ರಬ್ಬಿಂಗ್ ಮಾಡಿ ತಣ್ಣೀರಿನಿಂದ ಕೈಗಳನ್ನು ಸ್ವಚ್ಛ ಈ ರೀತಿ ನೀವು ವಾರದಲ್ಲಿ 2ಬಾರಿ ಸ್ಕ್ರಬ್ಬಿಂಗ್ ಮಾಡುವುದರಿಂದ ಕೈಮೇಲೆ ಮತ್ತು ಕಾರಿನ ಮೇಲೆ ಇರುವ ಡೆಡ್ ಸ್ಕಿನ್ ತೆಗೆದು ಹಾಕಲು ನೆರವಾಗುತ್ತದೆ ಈ ಉಪ್ಪು ಮತ್ತು ನಿಂಬೆ ಹಣ್ಣಿನ ರಸ ನಂತರ ಸ್ಕ್ರಬ್ಬಿಂಗ್ ಮಾಡಿದ ಮೇಲೆ ನಾವು ಪ್ಯಾಕ್ ಹಾಕಬೇಕು.

ಪ್ಯಾಕ್ ಮತ್ತು ಮಸಾಜ್ :
ಇದೀಗ ಪ್ಯಾಕ್ ಹಾಕೋದಕ್ಕೆ ಬೇಕಾಗಿರುವ ಪದಾರ್ಥಗಳು ಕಡಲೆಹಿಟ್ಟು ಅರಿಶಿನ ಅಲೋವೆರಾ ಜೆಲ್ ಮತ್ತು ರೋಸ್ ವಾಟರ್ ಹಾಗೆ ಹಸಿ ಹಾಲು. ಈ ಎಲ್ಲಾ ಪದಾರ್ಥಗಳನ್ನು ಮಿಶ್ರ ಮಾಡಿ ಕೈ ಮತ್ತು ಕಾಲುಗಳಿಗೆ ಮತ್ತು ದೇಹದಲ್ಲಿ ಯಾವ ಭಾಗದಲ್ಲಿ ಸನ್ ಟ್ಯಾನ್ ಆಗಿದೆ ಅಲ್ಲಿ ಇದನ್ನು ಲೇಪನ ಮಾಡಬೇಕು. ಹತ್ತು ನಿಮಿಷಗಳ ಬಳಿಕ ತಣ್ಣೀರನ್ನು ಬಳಸಿ ಸ್ವಚ್ಛ ಮಾಡಿ. ಇದರಿಂದ ತ್ವಚೆ ಒಳ್ಳೆಯ ಗ್ಲೊ ಬರುತ್ತದೆ ಮತ್ತು ಪ್ಯಾಕ್ ಹಾಕಿದ ಮೇಲೆ ಐದು ನಿಮಿಷಗಳವರೆಗೂ ಒಮ್ಮಲೆ ಮಸಾಜ್ ಮಾಡಬೇಕು ಇದರಿಂದ ಚರ್ಮ ಮೃದುವಾಗುತ್ತದೆ.

ಇವತ್ತಿನ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ 1ಲೈಕ್ ಮಾಡಿ ಶೇರ್ ಮಾಡಿ ಇನ್ನು ಮತ್ತೊಂದು ಸುಲಭವಾದ ಟಿಪ್ ಏನು ಅಂದರೆ ಚಳಿಗಾಲದಲ್ಲಿ ಒಡೆಯುವ ಈ ತುಟಿಗೆ ಅಂದು ಸುಲಭವಾದ ಮನೆಮದ್ದುಗಳನ್ನು ಮಾಡಿ ಅಂದರೆ ಕೆಲವರಿಗೆ ಚಳಿಗಾಲದಲ್ಲಿ ತುಟಿ ಒಡೆದು ಚರ್ಮ ಏಳುತ್ತಿರುತ್ತದೆ. ಅದಕ್ಕಾಗಿ ಆಲಿವ್ ಎಣ್ಣೆಗೆ ಸಕ್ಕರೆಯನ್ನು ಮಿಶ್ರ ಮಾಡಿ ತುಟಿಗೆ ಲೇಪನ ಮಾಡಿ, ಸ್ವಲ್ಪ ಸಮಯ ಮಸಾಜ್ ಮಾಡಿ ನಂತರ ತೊಳೆಯುವುದರಿಂದ ಈ ಒಡೆದ ತುಟಿ ನಿವಾರಣೆಯಾಗುತ್ತದೆ.