Categories
ಮಾಹಿತಿ

ಸಾಗರದ ಜನತೆಗೆ ಮತ್ತೆ ಬರಲಿದೆ ದೊಡ್ಡ ಸಂಕಷ್ಟ , ಮುಳುಗಡೆಯಾಗಲಿವೆ ಹತ್ತಾರು ಹಳ್ಳಿಗಳು, ಕಲ್ಲೊಡ್ಡು ಎನ್ನುವಂತಹ ಜಲಾಶಯದಿಂದ ಹಲವಾರು ಜನರಿಗೆ ಬರಲಿದೆ ಸಂಕಷ್ಟ…

ಶಿವಮೊಗ್ಗ ಜಿಲ್ಲೆಯಲ್ಲಿ ಇರುವಂತಹ ಸಾಗರ ತಾಲೂಕಿನಲ್ಲಿ ಇರುವಂತಹ ಜನರು ತುಂಬಾ ಮುಗ್ಧರು, ಇಲ್ಲಿ ಹಲವಾರು ಜನರು ಬದುಕುತ್ತಿರುವುದು ಅಂತಹ ರೀತಿಯನ್ನು ನೋಡಿದರೆ ನಿಮಗೆ ನಿಜವಾಗಲೂ ಆಶ್ಚರ್ಯವಾಗುತ್ತದೆ, ಇವರಿಗೆ ಕೇವಲ ಆಧಾರವಾಗಿರುವ ಅಂತಹ ಭೂಮಿ ಹಾಗೂ ಅದರ ಬೆಳೆ ಎಂದರೆ ಅಡಿಕೆ ಹಾಗು ಭತ್ತ. ಆದರೆ ಸದ್ಯಕ್ಕೆ ಸಾಗರ ತಾಲೂಕಿನಲ್ಲಿ ಕಲ್ಲೊಡ್ಡು ಎನ್ನುವಂತಹ ಜಲಾಶಯ ಬರುತ್ತದೆ ಎನ್ನುವಂತಹ ಮಾತು ಎಲ್ಲೆಡೆ ಹೆಚ್ಚಾಗಿದೆ, ಇದರಿಂದಾಗಿ ಅನೇಕ ಹಳ್ಳಿಗಳು ಮುಳುಗಡೆಯಾಗುವ ಅಂತಹ ಸಂದರ್ಭ ಬರುತ್ತಾ ಇದೆ ಇದಕ್ಕೆ ಪುನಃಚೇತನ ನೀಡುವ ಹಾಗೆ ಜಲಾಶಯವನ್ನು ಮಾಡುತ್ತೇವೆ ಎನ್ನುವಂತಹ ಆಶ್ವಾಸನೆಯನ್ನು ಸರ್ಕಾರ ಮಾಡಿದೆ ಆದರೆ ಸಾಗರದ ಜನತೆಗೆ ಆಗುವಂತಹ ನ್ಯಾಯವನ್ನು ಯಾರು ಕೂಡ ಗಮನಿಸುತ್ತಿಲ್ಲ. 

ಸಾಗರ ತಾಲೂಕಿನ ಗಡಿಪ್ರದೇಶ ಆಗಿರುವ ಬರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವಂತಹ ಕುಂದೂರು ಸಮೀಪದ ಕಲ್ಲೂರು ಜಲಾಶಯ ನಿರ್ಮಾಣಕ್ಕೆ ಸದ್ಯ ಸರ್ಕಾರ ಹಣವನ್ನು ಬಿಡುಗಡೆ ಮಾಡಿದೆ. ಇದರಿಂದಾಗಿ ಸಿಕ್ಕಾಪಟ್ಟೆ ವಿರೋಧವನ್ನು ವ್ಯಕ್ತ ಮಾಡುತ್ತಿರುವಂತಹ ಸಾಗರದ ಜನತೆ ದಿನದಿಂದ ದಿನಕ್ಕೆ ಇದರ ಒಂದು ಕಾವು ಹೆಚ್ಚಾಗತೊಡಗಿದೆ. ಅದಲ್ಲದೆ ಕಲ್ಲೂರು ವಿರೋಧ ಸಮಿತಿಯು ಕೂಡ ರಚನೆಯಾಗಿದೆ ,ಇದರ ಸಂಬಂಧವಾಗಿ ಸೋಮವಾರ ದಿನದಂದು ಕಡ್ಲಿಕೊಪ್ಪ ಎನ್ನುವಂತ ಹಳ್ಳಿಯಲ್ಲಿ ಮೀಟಿಂಗ್ ಕೂಡ ಕರೆಯಲಾಗಿತ್ತು . 

ಸಾಗರ ತಾಲೂಕಿನ ಬರೂರು ಗ್ರಾಮದ ವ್ಯಾಪ್ತಿಯಲ್ಲಿ ಬರುವ ಅನೇಕ ಹಳ್ಳಿಗಳು ಅಂದರೆ ಕುಂದೂರು, ಕೋರ್ಲಿಕೊಪ್ಪ, ಮಿಡಿನಾಗರ, ಹೀಗೆ ಅನೇಕ ಹಳ್ಳಿಗಳು ಈ ಜಲಾಶಯದ ಹತ್ತಿರ ಬರುತ್ತವೆ ಹಾಗೂ ಈ ಪ್ರದೇಶಗಳು ತಗ್ಗು ಪ್ರದೇಶಗಳ ಆಗಿರುವುದರಿಂದ ಜಲಾಶಯ ಮಾಡಿದ ನಂತರ ಈ ಹಳ್ಳಿಗಳು ಸಂಪೂರ್ಣವಾಗಿ ನಾಶವಾಗುವಂತಹ ಪರಿಸ್ಥಿತಿ ಉಂಟಾಗುತ್ತದೆ. ಸದ್ಯಕ್ಕೆ ಬಿಎಸ್ ಯಡಿಯೂರಪ್ಪ ಅವರು ಈ ಜಲಾಶಯದ ಕಾರ್ಯಾಚರಣೆಗೆ ಶಂಕುಸ್ಥಾಪನೆ ಮಾಡಿದ್ದು 20 ಕೋಟಿ ಆಗುವಂತಹ ಅಂದಾಜು ಪಟ್ಟಿಯನ್ನು ಸಿದ್ಧ ಮಾಡಿದ್ದಾರೆ . 

ಈ ಜಲಾಶಯ ಮಾಡುವುದರಿಂದ ಶಿಕಾರಿಪುರ ತಾಲೂಕಿನಲ್ಲಿ ಬರುವಂತಹ ಅನೇಕ ಹಳ್ಳಿಗಳಿಗೆ ನೀರಿನ ಸೌಲಭ್ಯ ಆಗುತ್ತದೆ ಹಾಗೂ ಅಲ್ಲಿನ ಜನರಿಗೆ ಕೃಷಿ ಮಾಡುವುದಕ್ಕೆ ನೀರಿನ ಸೌಲಭ್ಯ ಒದಗಿಸಿ ಕೊಡಲಾಗುತ್ತದೆ ಎನ್ನುವಂತಹ ನಿಟ್ಟಿನಿಂದ ಈ ರೀತಿಯಾದಂತಹ ಒಂದು ಯೋಜನೆಗೆ ಕೈ ಹಾಕಿದ್ದಾರೆ. 

ಈ ಜಲಾಶಯದ ನಿರ್ಮಾಣದಿಂದ ಸಾಗರದ ಜನತೆಗೆ ಆಗುವಂತಹ ಅನಾನುಕೂಲಗಳು ಆದರೂ ಯಾವುವು ?

ಹೀಗೆ ಶಿಕಾರಿಪುರದಲ್ಲಿ ತಾಲೂಕಿಗೆ ಅವಶ್ಯಕತೆ ಉಂಟುಮಾಡುವಂತಹ ಈ ಜಲಾಶಯವನ್ನು ಏನಾದರೂ ಮಾಡಿದರೆ ಸಾಗರ ತಾಲೂಕಿನಲ್ಲಿ ಇರುವಂತಹ ಅನೇಕ ಹಳ್ಳಿಗಳು ಮುಳುಗಡೆಯಾಗುತ್ತವೆ, ಅಂದರೆ ಕುಂದೂರು, ಮಡಿವಾಳ ಕಟ್ಟೆ, ಮುತ್ತಲ ಬೈಲು, ಮಿಡಿನಾಗರ, ಉತ್ತನಹಳ್ಳಿ , ತೆಪ್ಪಗೋಡು, ಬರೂರು,  ಕಲ್ಕೊಪ್ಪ , ಪರ್ಸೆ ಕೊಪ್ಪ ಎನ್ನುವಂತಹ ಹಳ್ಳಿಗಳು ಸಂಪೂರ್ಣವಾಗಿ ಮುಳುಗಡೆಯಾಗುವ ಅಂತಹ ಭೀತಿ ಎದುರಾಗಿದೆ. ಇಲ್ಲಿನ ಗ್ರಾಮಸ್ಥರು ಅವರ ಸ್ಥಳೀಯ ಶಾಸಕರಿಗೆ ಈ ಜಲಾಶಯವನ್ನು ನಿರ್ಮಾಣ ಮಾಡಬಾರದು ನಿರ್ಮಾಣ ಮಾಡಿದರೆ ೧೧೧೯೩ ಎಕರೆ ಭೂಮಿಯ ಜಾಗ ಅದರಲ್ಲೂ ಕೃಷಿಯ ಭೂಮಿಯ ಜಾಗ ಮುಳುಗಡೆಯಾಗುತ್ತದೆ, ಹಾಗೆ ಐದು ಸಾವಿರ ಎಕರೆ ಅರಣ್ಯ ಭೂಮಿ ಕೂಡ ನಶಿಸಿ ಹೋಗುವಂತಹ ಸಾಧ್ಯತೆ ತುಂಬಾ ಹೆಚ್ಚು. ಯೋಜನೆಯನ್ನು ಕೈಬಿಟ್ಟು ಶಿಕಾರಿಪುರ ತಾಲೂಕಿನಲ್ಲಿ ಇರುವಂತಹ ದೊಡ್ಡಕೆರೆ ಹಾಗೂ ಮಲ್ಲಾಪುರದ ಕೆರೆಯನ್ನು ಅಭಿವೃದ್ಧಿಪಡಿಸಿದರೆ ಅದೇ ನೀರು ಸಾಕು ಅವರಿಗೆ ಕೃಷಿಯನ್ನು ಮಾಡಲು ಅನ್ನುವಂತಹ ಒಂದು ಮನವಿಯನ್ನು ಶಾಸಕರಿಗೆ ಕೊಟ್ಟಿದ್ದಾರೆ. 

ಜನರ ವಿರೋಧಕ್ಕೆ ಒಂದು ಬಲವಾದ ಕಾರಣವಿದೆ ಅದು ಏನಪ್ಪಾ ಅಂದರೆ ಈಗಾಗಲೇ ಸಾಗರ ತಾಲೂಕಿನಲ್ಲಿ ಹಲವಾರು ವಿದ್ಯುತ್ ಯೋಜನೆಗಳಿಂದಾಗಿ ಮುಳುಗಡೆಯ ಸಮಸ್ಯೆ ಉಂಟಾಗಿದೆ, ಅದಲ್ಲದೇ ಶರಾವತಿ ಯೋಜನೆಯಿಂದ ಹಲವಾರು ಜನರು ವಲಸೆ ಹೋಗಿದ್ದರು ಅವರು ಇಂದಿಗೂ ಕೂಡ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ, ಶರಾವತಿ ಹಿನ್ನೀರು ದಕ್ಷಿಣ ಭಾಗದಲ್ಲಿ ಸೇತುವೆ ನಿರ್ಮಾಣ ಆಗಬೇಕು ಎನ್ನುವಂತಹ ಜನರು ಕನಸು ಕಾಣುತ್ತಿದ್ದಾರೆ ಇದರಿಂದಾಗಿ ಅಲ್ಲಿ ವಾಸವಾಗಿರುವ ಅಂತಹ ಅನೇಕ ಜನರು ಮತ್ತೆ ಮುಳುಗಡೆಯಾಗುವ ಅಂತಹ ಸಂದರ್ಭಕ್ಕೆ ಬರಲಿದ್ದಾರೆ. ಎಲ್ಲಾ ಕಾರಣಗಳಿಂದಾಗಿ ಮತ್ತೆ ಸಾಗರ ತಾಲೂಕಿನಲ್ಲಿ ಜನರಿಗೆ ಸಂಕಷ್ಟ ಎದುರಾಗಬಹುದು ಎನ್ನುವಂತಹ ಪ್ರಶ್ನೆಯಿಂದ ಯೋಜನೆಯನ್ನು ಕೈಬಿಡಬೇಕು ಎನ್ನುವಂತಹ ಮಾತು ಜನರ ಒಂದು ವಿಚಾರವಾಗಿದೆ. ಈ ಜಲಾಶಯದ ಏನಾದರೂ ಸೃಷ್ಟಿಯಾದರೆ ಪ್ರದೇಶದಲ್ಲಿ ಇರುವಂತಹ ಎಲ್ಲ ಹಳ್ಳಿಗಳು ಮುಳುಗಡೆಯಾಗುತ್ತವೆ 2000 ಎಕರೆ ಕೃಷಿ ಜಾಗ ಮುಳುಗಡೆಯಾಗುತ್ತದೆ.

ಈ ಲೇಖನದ ರೆಫರೆನ್ಸ್ ಅನ್ನು ತೆಗೆದುಕೊಂಡಿತ್ತು ವಿಜಯ ಕರ್ನಾಟಕದಿಂದ, ಈ ಲೇಖನ ಬೇಕಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹೆಚ್ಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ಮಾಡುವುದಾಗಲಿ ಮರೆಯಬೇಡಿ. ಇದು ಜನರ ಕಷ್ಟಕ್ಕೆ ಸಂಬಂಧಪಟ್ಟಂತಹ ಲೇಖನ ವಾಗಿರುವುದರಿಂದ ಪ್ರತಿಯೊಬ್ಬರಿಗೂ ಮುಟ್ಟುವ ಹಾಗೆಯೇ ಇದನ್ನು ಶೇರ್ ಮಾಡಿ ಪ್ರತಿಯೊಬ್ಬ ಸಾಗರದ ಜನತೆಗೆ ಇದರ ಬಗ್ಗೆ ಅರಿವು ಹೊಂದಿರಬೇಕು. ಯಾವುದೇ ಕಾರಣಕ್ಕೂ ಈ ಜಲಾಶಯವನ್ನು ಮಾಡಿದರೆ ಸಾಗರಕ್ಕೆ ಹಾಗೂ ಸಾಗರ ಜನತೆಗೆ ದೊಡ್ಡ ಪಟ್ಟು ಆದಂತೆ ಆಗುತ್ತದೆ. 

Leave a Reply