Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಸೀಳು ಕೂದಲಿನ ಸಮಸ್ಸೆ ಕಾಡುತ್ತ ಇದೆಯೇ ಹಾಗಾದರೆ ಹಾಗಾದರೆ ಈ ಮನೆ ಔಷದಿ ಬಳಕೆ ಮಾಡಿ ನೋಡಿ ..!

ಹಾಯ್ ಫ್ರೆಂಡ್ಸ್ ಇಂದಿನ ಮಾಹಿತಿಯಲ್ಲಿ ಮಹಿಳೆಯರಿಗಾಗಿ. ಮಹಿಳೆಯರಿಗೆ ಕೂದಲು ಬೆಳೆಸುವುದಕ್ಕೆ ತುಂಬಾ ಇಷ್ಟಾ ಇರುತ್ತದೆ. ಇನ್ನು ಕೆಲವರಿಗಂತೂ ಉದ್ದನೆಯ ಕೂದಲು ಅಂದರೆ ತುಂಬ ಇಷ್ಟಪಡುತ್ತಾರೆ, ಅಂತಹ ಹೆಣ್ಣು ಮಕ್ಕಳು ಈ ಮಾಹಿತಿಯನ್ನು ತಪ್ಪದೆ ತಿಳಿಯಿರಿ. ಕೂದಲು ಸ್ಪ್ಲಿಟ್ ಆಗುವುದು ಅಂದರೆ ಕೂದಲು ಸೀಲು ಹೊಡೆಯುವುದರ ಅಂತಾ ಹೇಳ್ತಾರೆ, ಅಂದರೆ ಒಂದು ಕೂದಲಿನ ತುದಿಯಲ್ಲಿ ಎರಡು ಭಾಗ ಆಗಿರುತ್ತದೆ.

ಈ ರೀತಿಯ ಕೂದಲಿನ ಸಮಸ್ಯೆ ಕೂದಲು ಉದ್ದ ಬೆಳೆಯುವುದಕ್ಕೆ ಬಿಡುವುದಿಲ್ಲ. ಆದಕಾರಣ ಈ ಸ್ಪ್ಲಿಟ್ ಹೇರನ್ನು ಪರಿಹಾರ ಮಾಡಿಕೊಳ್ಳುವುದು ಹೇಗೆ? ಕೆಲವರು ಪಾರ್ಲರ್ ಗೆ ಹೋಗಿ ಎಷ್ಟೋ ಹಣವನ್ನು ಕೊಟ್ಟು ಈ ಕವಲು ಹೊಡೆದಿರುವ ಕೂದಲನ್ನು ಕತ್ತರಿಸಿಕೊಂಡು ಬರುತ್ತಾರೆ. ಆದರೆ ನಾವು ಮನೆಯಲ್ಲಿಯೇ ಸುಲಭವಾಗಿ ಕೂದಲಿಗೆ ಪೋಷಣೆ ಮಾಡುವುದರ ಜೊತೆಗೆ ಈ ಕವಲೊಡೆದಿರುವ ಕೂದಲನ್ನು ಸರಿಪಡಿಸಿಕೊಳ್ಳಬಹುದು.

ತುಂಬ ಸುಲಭ ಮತ್ತು ಸರಳ ಈ ಪರಿಹಾರ ವಾರಕ್ಕೆ ಒಮ್ಮೆ ಮಾತ್ರ ಮಾಡಬೇಕಾಗಿರುತ್ತದೆ ಈ ಮನೆಮದ್ದನ್ನು. ಈ ಮನೆ ಮದ್ದನ್ನು ತಿಳಿಸಿಕೊಡುತ್ತೇವೆ ಸಂಪೂರ್ಣವಾಗಿ ಈ ಈ ಮಾಹಿತಿಯನ್ನು ತಿಳಿಯಿರಿ ನಂತರ ಪ್ರತಿಯೊಬ್ಬರಿಗೂ ಶೇರ್ ಮಾಡಿ ಯಾಕೆಂದರೆ ಇಂದಿನ ದೂಳು ಪ್ರದೂಷಣೆ ವಾತಾವರಣದಲ್ಲಿ ಕೂದಲು ಕವಲೊಡೆಯುವ ಸಮಸ್ಯೆ ಸಾಕಷ್ಟು ಜನರಿಗೆ ಕಾಡುತ್ತಾ ಇರುತ್ತದೆ.

ನಾವು ಸರಿಯಾಗಿ ಕೂದಲಿಗೆ ಎಣ್ಣೆ ಹಾಕದೆ ಇದ್ದರೂ ಕೂಡ ಕೂದಲು ಕವಲೊಡೆಯುತ್ತದೆ ಆದಕಾರಣ ನೀವು ಮೊದಲು ವಾರಕ್ಕೆ 3ಬಾರಿಯಾದರೂ ಕೂದಲಿಗೆ ಎಣ್ಣೆ ಹಾಕುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ನಂತರ ನೀವು ವಾರಕ್ಕೆ ಒಮ್ಮೆ ಈ ಪ್ಯಾಕ್ ಹಾಕಿ, ಈ ಪ್ಯಾಕ್ ಮಾಡುವುದಕ್ಕೆ ಬೇಕಾಗಿರುವುದು ಬಾಳೆಹಣ್ಣು ಮೊಸರು ತೆಂಗಿನ ಎಣ್ಣೆ ಮತ್ತು ಮೊಟ್ಟೆಯ ಬಿಳಿ ಭಾಗ.

ಮೊದಲಿಗೆ ಪಚ್ಚ ಬಾಳೆ ಹಣ್ಣನ್ನು ತೆಗೆದುಕೊಳ್ಳಿ ಅದರಲ್ಲಿ ಅರ್ಧ ಬಾಳೆಹಣ್ಣನ್ನು ತೆಗೆದುಕೊಂಡು ಇದಕ್ಕೆ ಅರ್ಧ ಕಪ್ ಮೊಸರು ಮತ್ತು 2ಚಮಚ ತೆಂಗಿನಕಾಯಿ ಎಣ್ಣೆ ಹಾಗೆ ಮೊಟ್ಟೆಯ ಬಿಳಿ ಭಾಗವನ್ನು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು ಅಂದರೆ ಪೇಸ್ಟ್ ಮಾಡಿಕೊಳ್ಳಿ ನಿಮ್ಮ ಕೂದಲಿನ ಅಳತೆಗೆ ಎಷ್ಟು ಪ್ರಮಾಣದಲ್ಲಿ ಬೇಕು ಅಷ್ಟು ಪೇಸ್ಟನ್ನು ಮಾಡಿಕೊಂಡರೆ ಒಳ್ಳೆಯದು. ಈ ಪೇಸ್ಟನ್ನು ಕೂದಲಿನ ಬುಡದಿಂದ ಕೂದಲಿನ ತುದಿಯ ವರೆಗೂ ಲೇಪನ ಮಾಡಿಕೊಳ್ಳಬೇಕು. ಹಾಗೆ ನೀವು ಇಲ್ಲಿ ಬಳಸಿರುವ ಮೊಸರು ಕೂದಲಿಗೆ ಪೋಷಣೆಯನ್ನು ನೀಡುತ್ತದೆ ಮತ್ತು ಬಾಳೆಹಣ್ಣು ಕೂದಲಿಗೆ ಪೋಷಣೆ ನೀಡುವುದರ ಜೊತೆಗೆ ಮೃದುಗೊಳಿಸುತ್ತದೆ. ಇನ್ನೂ ತೆಂಗಿನ ಎಣ್ಣೆ ಕೂಡ ಕೂದಲಿಗೆ ಒಳ್ಳೆಯ ಪೋಷಣೆ ನೀಡಿ ಈ ಮೊಟ್ಟೆಯ ಬಿಳಿಭಾಗ ಸ್ಪ್ಲಿಟ್ ಕೂದಲನ್ನು ದೂರ ಮಾಡುತ್ತದೆ.

ಇದನ್ನು ನೀವು ವಾರಕ್ಕೆ ಒಮ್ಮೆ ಮಾಡುತ್ತಾ ಬನ್ನಿ ಇದರಿಂದ ದೊರೆಯುವ ಫಲಿತಾಂಶ ತುಂಬಾ ಪ್ರಯೋಜನಕಾರಿ ಪರಿಣಾಮಕಾರಿ ಆಗಿ ಇರುತ್ತದೆ. ಆದರೆ ಇವತ್ತಿನ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ತಪ್ಪದೆ ಮಾಹಿತಿಗೆ ಒಂದು ಲೈಕ್ ಮಾಡಿ ಕಾಮೆಂಟ್ ಮಣಿ ಹಾಗೂ ಶೇರ್ ಮಾಡಿ ಇನ್ನು ಉಪಯುಕ್ತ ಮಾಹಿತಿಗಳಿಗಾಗಿ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಪಡೆದುಕೊಳ್ಳುವುದಕ್ಕಾಗಿ ಸೌಂದರ್ಯಕ್ಕೆ ಸಂಬಂಧಿಸಿದ ಟಿಪ್ ಗಳನ್ನು ಪಡೆದುಕೊಳ್ಳುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಶುಭ ದಿನ ಧನ್ಯವಾದ.