Categories
ಅರೋಗ್ಯ ಆರೋಗ್ಯ ಮನೆಔಷಧಿ ಮಾಹಿತಿ ಸಂಗ್ರಹ

ಸುವರ್ಣ ಗಡ್ಡೆಯಿಂದ ಇಷ್ಟೊಂದು ಲಾಭ ಇದೆ ಅಂತ ನಿಮಗೆ ಗೊತ್ತಾದ್ರೆ … ಬೆಚ್ಚಿಬೀಳ್ತೀರಾ …

ಸುವರ್ಣ ಗೆಡ್ಡೆ ಒಂದು ತರಕಾರಿಯ ಬಗ್ಗೆ ನೀವೇನಾದರೂ ಕೇಳಿದ್ದೀರಾ ಅಥವಾ ಈ ತರಕಾರಿಯನ್ನು ತಿನ್ನುವುದರಿಂದ ಎಷ್ಟೆಲ್ಲ ಲಾಭಗಳು ಇವೆ ಅನ್ನೋದನ್ನು ನೀವೇನಾದರೂ ಕೇಳಿದ್ದೀರಾ ಹೌದು ಸ್ನೇಹಿತರೆ .

ಸುವರ್ಣ ಗೆಡ್ಡೆ ಅಂದರೆ ನಮಗೆ ಕಣ್ಣ ಮುಂದೆ ಬರುವುದು ದಪ್ಪನೆಯ ಮಣ್ಣಿನ ಉಂಡೆ ರೀತಿಯ ಆಕಾರ ಹಾಗೂ ಸ್ನೇಹಿತರು ನೋಡಲು ಚೆನ್ನಾಗಿ ಕಾಣದೇ ಇರುವ ಅಂತಹ ತರಕಾರಿಗಳಲ್ಲಿ ಈ ಒಂದು ಸುವರ್ಣ ಗೆಡ್ಡೆಯು ಕೂಡ ಒಂದು ಆದರೆ ಇದರ ಆಕಾರ ಚೆನ್ನಾಗಿ ಇರದೇ ಇದ್ದರೆ ರುವುದರ ಆರೋಗ್ಯ ಪ್ರಯೋಜನಗಳು ತುಂಬಾ ಚೆನ್ನಾಗಿ ಇರುತ್ತದೆ.

ಆರೋಗ್ಯಕರ ಜೀವನ ನಮ್ಮದಾಗಿಸಿಕೊಳ್ಳಬೇಕು ಅನ್ನೋದಾದರೆ ನಾವು ಸಾಕಷ್ಟು ತರಕಾರಿಗಳನ್ನು ಪ್ರತಿದಿನ ಸೇವಿಸುತ್ತಾ ಇರಬೇಕು ಆಹಾರ ಪದ್ಧತಿಯಲ್ಲಿ ನಾವು ತರಕಾರಿಯನ್ನು ಸೊಪ್ಪುಗಳನ್ನು ಸೇರಿಸಿ ತಿನ್ನುವುದರಿಂದ ಆರೋಗ್ಯ ವೃದ್ಧಿಸುವುದರ ಜೊತೆಗೆ ನಾವು ದೀರ್ಘ ಕಾಲ ಆರಾಮವಾಗಿ ಆರೋಗ್ಯದಿಂದ ಬದುಕಿರಬಹುದು .

ಸುವರ್ಣ ಗೆಡ್ಡೆಯನ್ನು ತಿಂದಾಗ ನಾಲಿಗೆಗೆ ಕಿರಿಕಿರಿ ಉಂಟು ಮಾಡುವ ಕಾರಣದಿಂದಾಗಿ ಇದನ್ನು ನೀರಿನಲ್ಲಿ ಬೇಯಿಸಿ ಆ ನಂತರ ಇದರ ಪಲ್ಯವನ್ನು ಅಥವಾ ಇತರೆ ಆಹಾರದಲ್ಲಿ ಬಳಸಿ ಸೇವಿಸುವುದರಿಂದ ಸಾಕಷ್ಟು ಪ್ರಯೋಜನಗಳಿವೆ ಅದರಲ್ಲಿ ಮೊದಲನೆಯದ್ದು ಮಲಬದ್ಧತೆ ಸಮಸ್ಯೆ .

ತುಂಬಾ ವರ್ಷಗಳಿಂದ ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದರೆ  ಅಂತಹವರು ಈ ರೀತಿ ಸುವರ್ಣಗೆಡ್ಡೆಯನ್ನು ಸೇವಿಸಿದರೆ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ . ಸ್ಥೂಲ ಕಾಯಿಲೆಯಿಂದ ಬಳಲುತ್ತಿರುವವರು ಸುವರ್ಣ ಗೆಡ್ಡೆಯನ್ನು ತಮ್ಮ ಆಹಾರ ಪದ್ಧತಿಯಲ್ಲಿ ಬಳಸುವುದರಿಂದ ಒಳ್ಳೆಯ ರೀತಿಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ .

ಇಂದಿನ ದಿನಗಳಲ್ಲಿ ಜನರು ಹೆಚ್ಚಿನ ಜಂಕ್ ಫುಡ್ ಅನ್ನು ಸೇವಿಸುವುದರಿಂದ ಅನಗತ್ಯ ಕೊಬ್ಬಿನ ಶೇಖರಣೆ ಹೆಚ್ಚಾಗಿ ಬೊಜ್ಜಿನ ಸಮಸ್ಯೆ ಬರುತ್ತದೆ ಈ ರೀತಿ ಬೊಜ್ಜನ್ನು ನಗಿಸುವುದಕ್ಕಾಗಿ ಜನರು ಎಕ್ಸಸೈಸ್ ಗಳನ್ನು ಮಾಡುತ್ತಾರೆ ಆದರೆ ತಮ್ಮ ದಿನನಿತ್ಯ ಆಹಾರ ಪದ್ಧತಿಯನ್ನು ಬದಲಾಯಿಸಿಕೊಂಡರೆ ಸಾಕು ಬೊಜ್ಜನ್ನು ಆರಾಮವಾಗಿ ಕರಗಿಸಬಹುದು ಇದರ ಜೊತೆಗೆ ತರಕಾರಿಗಳನ್ನು ತಿನ್ನುವುದರಿಂದ ಸಾಕಷ್ಟು ಲಾಭಗಳಿವೆ ಅಂತಹ ತರಕಾರಿಗಳಲ್ಲಿ ಒಂದು ಸುವರ್ಣ ಗೆಡ್ಡೆ ಹೌದು ಸುವರ್ಣಗೆಡ್ಡೆಯನ್ನು ಪ್ರತಿದಿನ ಸೇವಿಸುವುದರಿಂದ ಅನಗತ್ಯ ಕೊಬ್ಬು ಕರಗುತ್ತದೆ .

ಎಲಿಫ್ಯಾಂಟಿಯಾಸಿಸ್ ಅಂದರೆ ಆನೆ ಕಾಲು ರೋಗದಿಂದ ಬಳಲುತ್ತಿರುವ ವ್ಯಕ್ತಿಗಳು ಸುವರ್ಣ ಗೆಡ್ಡೆಯನ್ನು ಬೇಯಿಸಿ ಅದಕ್ಕೆ ತುಪ್ಪವನ್ನು ಬೆರೆಸಿ ಆನೆ ಕಾಲು ಜಾಗಕ್ಕೆ ಲೇಪಿಸುವುದರಿಂದ ಈ ಸಮಸ್ಯೆಯಿಂದ ಬೇಗ ಉಪಶಮನವನ್ನು ಪಡೆದುಕೊಳ್ಳಬಹುದು .ವಿಷಕಾರಿ ಯಾದಂತಹ ಚೇಳು ಏನಾದರೂ ವ್ಯಕ್ತಿಗೆ ಕಚ್ಚಿದಾಗ ಆ ಜಾಗಕ್ಕೆ ಸುವರ್ಣ ಗೆಳೆಯನ್ನು ಬೇಯಿಸಿ ಅದನ್ನು ಆ ಜಾಗಕ್ಕೆ ಲೇಪಿಸಿದರೆ ವಿಷವು ದೇಹದಲ್ಲಿ ಹರಡುವುದಿಲ್ಲ ಇದರ ಜೊತೆಗೆ ವಿಷವು ಬೇಗನೆ ಆಚೆ ಬರುತ್ತದೆ .

ದೇಹದಲ್ಲಿ ಅನಗತ್ಯ ಕೊಬ್ಬು ಶೇಖರಣೆಯಾಗಿ ತ್ವಚೆಯಲ್ಲಿ ಗಂಟುಗಳು ಆಗಿರುತ್ತದೆ ಈ ರೀತಿ ಗಂಟುಗಳಿಗೆ ಸುವರ್ಣಗೆಡ್ಡೆಯನ್ನು ಲೇಪಿಸುವುದರಿಂದ ಗಂಟು ಬೇಗನೆ ಕರಗುತ್ತದೆ . ಈ ರೀತಿ ಸುವರ್ಣ ಗೆಡ್ಡೆ ನೋಡಲು ಸುಂದರವಾಗಿ ಕಾಣದಿದ್ದರೂ ಕೂಡ ಆರೋಗ್ಯದ ದೃಷ್ಟಿಯಲ್ಲಿ ಬಹಳಷ್ಟು ಪ್ರಯೋಜನಗಳನ್ನೂ ಪಡೆದುಕೊಳ್ಳಬಹುದು .

ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಿ ಕೊಂಡಿರುವುದರಿಂದ ಸಾಕಷ್ಟು ಆರೋಗ್ಯಕರ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ ಆದ್ದರಿಂದ ಈಗಲೇ ಆಹಾರ ಪದ್ಧತಿಯನ್ನು ಬದಲಾಯಿಸಿ ಕೊಳ್ಳುವುದರ ಜತೆಗೆ ತಮ್ಮ ಆಹಾರ ಪದ್ಧತಿಯಲ್ಲಿ ಹೆಚ್ಚು ಹೆಚ್ಚು ತರಕಾರಿ ಸೊಪ್ಪುಗಳನ್ನು ಬಳಸೋದು ಉತ್ತಮ ಮತ್ತು ನಾನು ಈ ಮೇಲೆ ತಿಳಿಸಿದಂತಹ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇನೆ ಶುಭ ದಿನ ಧನ್ಯವಾದಗಳು .