Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಸೇಬು ಹಣ್ಣನ್ನ ಸಿಪ್ಪೇಸಮೇತ ತಿನ್ನುವುದರಿಂದ ಯಾವ ಯಾವ ಆರೋಗ್ಯದ ಲಾಭಗಳನ್ನ ಹೊಂದಬಹುದು ಗೊತ್ತ ..!

ಆಂಗ್ಲ ಭಾಷೆಯಲ್ಲಿ ಒಂದು ಗಾದೆ ಮಾತಿದೆ ಅದೇನೆಂದರೆ ಆ್ಯನ್ ಆ್ಯಪಲ್ ಎ ಡೇ ಕೇಪ್ಸ್ ದಿ ಡಾಕ್ಟರ್ ಅವೆ ಅಂತ. ಇವೊಂದು ಮಾತಿನ ಅರ್ಥ ಏನು ಅಂದರೆ ನಾವು ಪ್ರತಿದಿನ 1ಸೇಬು ಹಣ್ಣು ತಿನ್ನುತ್ತಾ ಬಂದರೆ ನಮ್ಮ ದೇಹಕ್ಕೆ ಪ್ರತಿ ಪೋಷಕಾಂಶಗಳು ದೊರೆತು ನಾವು ಆರೋಗ್ಯದಿಂದ ಇರುತ್ತೇವೆ ಅಂತ ಅರ್ಥ ಆಗಿರುತ್ತದೆ. ಈ ಮಾತಿನಿಂದಲೇ ನಾವು ತಿಳಿದುಕೊಳ್ಳಬಹುದು ಈ ಸೇಬು ಹಣ್ಣಿನ ಮಹತ್ವವನ್ನು ಸೇಬು ಹಣ್ಣಿನ ಮೇಲೆ ಈ ರೀತಿಯ ಒಂದು ಗಾದೆಯನ್ನು ಮಾಡಿದ್ದಾರೆ ಅಂದರೆ ಈ ಗಾದೆ ಮಾತು ಇಷ್ಟೊಂದು ಪ್ರಸಿದ್ಧಗೊಂಡಿದೆ ಅಂದರೆ ಸೇಬು ಹಣ್ಣಿನ ಮಹತ್ವ ಸೇಬುಹಣ್ಣಿನಲ್ಲಿ ಅಡಗಿರುವ ಆರೋಗ್ಯಕರ ಲಾಭಗಳು ಎಲ್ಲವೂ ಕೂಡ ಅಪಾರವಾಗಿರುತ್ತದೆ .

ಅಂತ ನಾವು ತಿಳಿಯಬೇಕಾಗುತ್ತದೆ. ಇನ್ನೂ ಸೇಬುಹಣ್ಣನ್ನು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು ತುಂಬಾನೆ. ಆದರೆ ಇತ್ತೀಚಿನ ದಿನಗಳಲ್ಲಿ ಮಂದಿಗೆ ಒಂದು ಸಂಶಯ ಮೂಡಿದೆ ಆ ಸಂಶಯವೇನು ಅಂದರೆ, ಸೇಬು ಹಣ್ಣನ್ನು ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಆದರೆ ಇನ್ನೂ ಕೆಲವರು ಹೇಳುತ್ತಾರೆ ಸೇಬುಹಣ್ಣನ್ನು ಸಿಪ್ಪೆಯ ಸಮೇತ ತಿನ್ನಬೇಕು ಎಂದು ಮತ್ತೆ ಇನ್ನೂ ಕೆಲವರು ಹೇಳುತ್ತಾರೆ ಸೇಬುಹಣ್ಣನ್ನು ತಿನ್ನುವಾಗ ಅದರ ಸಿಪ್ಪೆಯನ್ನು ತಿನ್ನದೆ ಒಳಗಿರುವ ಹಣ್ಣನ್ನು ಮಾತ್ರ ತಿಂದರೆ ಸಾಕು ಅಂತ.

ಆದರೆ ನಾವು ಎಷ್ಟೋ ವಿಚಾರಗಳಲ್ಲಿ ತಿಳಿದಿದ್ದೇವೆ ಹಣ್ಣಿಗಿಂತ ಸಿಪ್ಪೆಯಲ್ಲಿಯೆ ಹೆಚ್ಚಿನ ಪೋಷಕಾಂಶ ಇದೆ ಎಂದು ಆದರೆ ಈ ಒಂದು ಸಂಶಯದ ಬಗ್ಗೆ ಹೇಳುವುದಾದರೆ ಇತ್ತೀಚಿನ ದಿನಗಳಲ್ಲಿ ಸೇಬು ಹಣ್ಣನ್ನು ಮಾರಾಟ ಮಾಡುವುದಕ್ಕಾಗಿ ಗ್ರಾಹಕರುಗಳು ಬೇಗ ಅಟ್ರ್ಯಾಕ್ಟ್ ಆಗಬೇಕೆಂದು ಸೇಬು ಹಣ್ಣಿನ ಮೇಲೆ ವ್ಯಾಕ್ಸ್ ಹಾಕಿರುತ್ತಾರೆ ಮತ್ತು ಈ ಬಾಕ್ಸ್ ಅಂಶ ನಮ್ಮ ಆರೋಗ್ಯಕ್ಕೆ ತುಂಬ ಅಪಾಯಕಾರಿ ಆಗಿರುತ್ತದೆ ಆದಕಾರಣ ನಾವು ಸೇಬುಹಣ್ಣಿನ ಮೇಲಿರುವ ಸಿಪ್ಪೆಯನ್ನು ತಿನ್ನಬಾರದು ಅಂತ ಕೆಲವರು ಹೇಳ್ತಾರೆ.

ಆದರೆ ಸೇಬು ಹಣ್ಣನ್ನು ನಾವು ಮಾರುಕಟ್ಟೆಯಿಂದ ತಂದಾಗ ಅದರ ಸಿಪ್ಪೆಯನ್ನು ಚೆನ್ನಾಗಿ ಸ್ವಚ್ಛ ಮಾಡಬೇಕು ಅಂದರೆ ಸೇಬು ಹಣ್ಣಿನ ಮೇಲ್ಭಾಗವನ್ನು ಚೆನ್ನಾಗಿ ಸ್ವಚ್ಛಗೊಳಿಸಿ ನಂತರ ಸೇಬು ಹಣ್ಣನ್ನು ತಿನ್ನುವುದು ಒಳ್ಳೆಯದು ಆದರೆ ಯಾವಾಗ ನಾವು ಸೇಬುಹಣ್ಣಿನ ಮೇಲ್ಭಾಗವನ್ನು ಸರಿಯಾಗಿ ಸ್ವಚ್ಛಗೊಳಿಸದೆ ಸಿಪ್ಪೆ ಸಮೇತ ತಿಂತೇವಾ ಅದು ನಮ್ಮ ಆರೋಗ್ಯಕ್ಕೆ ಅಪಾಯಕಾರಿಯಾಗಿರುತ್ತದೆ ಕೆಮಿಕಲ್ಯುಕ್ತವಾಗಿದ್ದು ಆರೋಗ್ಯವನ್ನು ಕೆಡಿಸುತ್ತದೆ.

ಹಾಗಾದರೆ ನಿಮಗೆ ನಿಮ್ಮ ಸಂಶಯದ ಬಗ್ಗೆ ಕುರಿತು ಈ ಎಲ್ಲಾ ವಿಚಾರಗಳು ಪರಿಹರ ಆಗಿದೆ ಎಂದು ನಾನು ಭಾವಿಸುತ್ತೇನೆ ನಿಮಗೂ ಕೂಡ ಮಾಹಿತಿ ಇಷ್ಟ ಆಯಿತು ಅಂದಲ್ಲಿ ತಪ್ಪದೆ ಪ್ರತಿಯೊಬ್ಬರಿಗೂ ಉಪಯುಕ್ತ ಮಾಹಿತಿಯನ್ನು ಶೇರ್ ಮಾಡಿ. ಯಾವುದೇ ಹಣ್ಣುಗಳು ಆಗಲಿ ಅದನ್ನು ಮೊದಲು ಸ್ವಚ್ಛ ಪಡಿಸಿ ನಂತರ ಸೇವಿಸುವುದು ಒಳ್ಳೆಯದಾಗಿ ಇರುತ್ತದೆ. ಇನ್ನೂ ಇಂತಹ ಅನೇಕ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ನಿಮ್ಮ ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡಿ ಫಾಲೋ ಮಾಡಿ ಎಲ್ಲರಿಗೂ ಶುಭವಾಗಲಿ ಆರೋಗ್ಯದಿಂದಿರಿ ಧನ್ಯವಾದ.