Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಸೊಳ್ಳೆಗಳು ಯಾವ ರೀತಿಯಲ್ಲಿ ರಣತಂತ್ರವನ್ನ ಹೂಡುತ್ತವೆ ಗೊತ್ತ … ಅವುಗಳ ರಣತಂತ್ರ ಗೊತ್ತಾಗಬೇಕಾ …!

ಸೊಳ್ಳೆಗಳ ಬಗ್ಗೆ ನಿಮಗೆ ತಿಳಿಯದೆ ಇರುವಂತಹ ಸಾಕಷ್ಟು ವಿಚಾರಗಳಿವೆ ಹೌದು ಇವತ್ತಿನ ಈ ಲೇಖನದಲ್ಲಿ ತಿಳಿಯೋಣ ಬನ್ನಿ ಈ ಸೊಳ್ಳೆಗಳು ಯಾಕೆ ಕಚ್ಚುತ್ತವೆ ಹಾಗೂ ಸೊಳ್ಳೆಗಳು ಯಾರಿಗೆ ಹೆಚ್ಚಾಗಿ ಕಚ್ಚುತ್ತವೆ ಅನ್ನುವುದನ್ನ ಈ ಮಾಹಿತಿಯಲ್ಲಿ ತಿಳಿಯಿರಿ ಮತ್ತು ನಿಮ್ಮ ಗೆಳೆಯರೊಂದಿಗೆ ಈ ಮಾಹಿತಿಯನ್ನು ಷೇರ್ ಮಾಡಿ.

ಹೌದು ಸೊಳ್ಳೆಗಳ ಬಗ್ಗೆ ಮಾತನಾಡುವುದಕ್ಕಿಂತ ಮೊದಲು ಈ ಸೊಳ್ಳೆಗಳು ಮೊದಲು ಕಾಣಿಸಿಕೊಂಡಿದ್ದು ಎಲ್ಲಿ ಹಾಗೂ ಇದರ ಉತ್ಪತ್ತಿ ಹೇಗೆ ಅನ್ನೋದನ್ನು ತಿಳಿಯೋಣ ಮತ್ತು ಸೊಳ್ಳೆಗಳ ಬಗ್ಗೆ ನಂಬಲಾರದ ಒಂದು ಸತ್ಯವೇನು ಅಂದರೆ ಈ ಸೊಳ್ಳೆಗಳು ಮನುಷ್ಯರು ಭೂಮಿ ಮೇಲೆ ಬರುವುದಕ್ಕಿಂತ ಮೊದಲೇ ಇದ್ದವು ಅನ್ನೋದಕ್ಕೆ ಪ್ರೂಫ್ ಕೂಡ ಇದೇ.

ಮೊದಲು ಸೊಳ್ಳೆ ಕಾಣಿಸಿಕೊಂಡಿದ್ದು ಆಫ್ರಿಕಾದಲ್ಲಿ ಹೌದು ಈ ಸೊಳ್ಳೆಗಳು ಮನುಷ್ಯ ಭೂಮಿ ಮೇಲೆ ಹುಟ್ಟುವುದಕ್ಕಿಂತ ಮೊದಲೇ ಇದ್ದವು ಅನ್ನೋದಕ್ಕೆ ಪುರಾವೆ ಏನು ಅಂದರೆ ಗುಜರಾತ್ ನ ಸೂರತ್ ಕಾಳಿನಲ್ಲಿ ಇರುವಂತಹ ಒಂದು ಗಣಿಗಾರಿಕೆಯಲ್ಲಿ ಒಂದು ಮೇಣ ದೊರೆತಿತ್ತು ಆ ಮೇಣವನ್ನು ಕರಗಿಸಿ ನೋಡಿದಾಗ ಅಲ್ಲಿ ಒಂದು ಸೊಳ್ಳೆ ಸಿಕ್ಕ ಕಾರಣದಿಂದಾಗಿ ಅದನ್ನು ಸಂಶೋಧಿಸಿದಾಗ ಇದು ಸುಮಾರು ಐದೂವರೆ ಕೋಟಿ ಹಳೆಯ ಸೊಳ್ಳೆ ಎಂದು ಸಂಶೋಧನಾಕಾರರು ತಿಳಿಸಿಕೊಟ್ಟಿದ್ದಾರೆ.

ಇನ್ನು ಸೊಳ್ಳೆಗಳು ಭಯೋತ್ಪಾದಕರಿಗಿಂತ ಹೆಚ್ಚು ಪ್ರಾಣವನ್ನು ತೆಗೆಯುತ್ತವೆ ಹಾಗೂ ಈಗ ಇರುವಂತಹ ಸೊಳ್ಳೆಗಳು ಶುರುವಿನಲ್ಲಿ ಅಂದರೆ ಈ ಸೊಳ್ಳೆಗಳ ಉಗಮವಾದಾಗ ಹಿಂದಿಗಿಂತ ಮೂರು ಪಟ್ಟು ದೊಡ್ಡದಿದ್ದ ವಂತೆ ಹಾಗೂ ಈ ಸೊಳ್ಳೆಯ ಹೆಸರಿನಲ್ಲಿ ಸುಮಾರು ಇಪ್ಪತ್ತೈದು ಸಾವಿರ ಕೋಟಿ ವ್ಯವಹಾರವೂ ಕೂಡ ನಡೆಯುತ್ತದೆ ಅಂದರೆ ನಿಮಗೆ ಅಚ್ಚರಿಯಾಗುತ್ತದೆ ಅಲ್ವಾ.

ಅದು ಹೇಗೆ ಅಂತ ಹೇಳ್ತೀವಿ ಕೇಳಿ ಹೌದು ಈ ಸೊಳ್ಳೆಗಳು ಕಚ್ಚಿದರೆ ಟೈಫೈಡ್ ಕಾಲರ್ ಅಂತಹ ಕಾಯಿಲೆಗಳು ಬರುತ್ತವೆ ಆಗ ಅದಕ್ಕೆ ತೆಗೆದುಕೊಳ್ಳುವಂತಹ ಮೆಡಿಸಿನ್ ಗಳು ಹಾಗೂ ಈ ಸೊಳ್ಳೆಗಳನ್ನು ಓಡಿಸುವುದಕ್ಕಾಗಿ ಸೊಳ್ಳೆಬತ್ತಿಗಳು ಸೊಳ್ಳೆ ಕಾಯಿಲ್ಗಳು ಇಂತಹ ಉತ್ಪನ್ನಗಳ ಕಂಪನಿಗಳು ಸುಮಾರು ಇಪ್ಪತ್ತೈದು ಸಾವಿರ ಕೋಟಿಯವರೆಗೂ ವ್ಯವಹಾರವನ್ನು ನಡೆಯುತ್ತದೆಯಂತೆ.

ಸೊಳ್ಳೆಗಳು ಯಾಕೆ ಕಚ್ಚುತ್ತವೆ ಹಾಗೂ ಸೊಳ್ಳೆಗಳು ನಮ್ಮ ರಕ್ತವನ್ನು ಕುಡಿದು ಜೀವಿಸುತ್ತವೆ ಎಂಬ ಸಂಶಯಕ್ಕೆ ಉತ್ತರವೇನು ಅಂದರೆ ಈ ಸೊಳ್ಳೆಗಳು ರಕ್ತವನ್ನು ಕುಡಿದು ಜೀವಿಸುವುದಿಲ್ಲ ಇವು ಹಸಿರು ಎಲೆಗಳ ರಸವನ್ನು ಕುಡಿದು ಜೀವಿಸುತ್ತವೆ ಆದರೆ ಈ ಸೊಳ್ಳೆಗಳಲ್ಲಿ ಗಂಡು ಸೊಳ್ಳೆ ಸುಮಾರು ಬಾರಿ ಸೆಕ್ಸ್ ಮಾಡಿಕೊಂಡು ಆರಾಮಾಗಿ ತಿರುಗಾಡುತ್ತಾ ಇರುತ್ತವೆ.

ಆದರೆ ಈ ಹೆಣ್ಣು ಸೊಳ್ಳೆಗಳು ಸೆಕ್ಸ್ ಬಳಿಕ ಗರ್ಭ ಧರಿಸುತ್ತದೆ ಆಗ ಸೊಳ್ಳೆಗಳ ಹೊಟ್ಟೆಯಲ್ಲಿ ಮೊಟ್ಟೆ ಉತ್ಪತ್ತಿಯಾಗುತ್ತದೆ ನಂತರ ಹೆಣ್ಣು ಸೊಳ್ಳೆಗಳು ಸುಲಭ ಡೆಲಿವರಿಗಾಗಿ ಹೆಚ್ಚು ಪ್ರೋಟಿನ್ ಅವಶ್ಯಕತೆ ಇರುತ್ತದೆ ಆಗ ಇವುಗಳು ಪ್ರೊಟೀನ್ ಗಾಗಿ ಮನುಷ್ಯರನ್ನು ಕಚ್ಚಿ ರಕ್ತವನ್ನು ಹೀರಿಕೊಳ್ಳುತ್ತವೆ ಅಷ್ಟೇ.

ಇನ್ನು ಈ ಸೊಳ್ಳೆ ಯಾರನ್ನು ಹೆಚ್ಚು ಕಚ್ಚುತ್ತದೆ ಅಂದರೆ ಯಾರು ವಾಸನೆ ಹೆಚ್ಚಾಗಿ ಬರುತ್ತಿರುತ್ತಾರೆ ಅಂತಹವರನ್ನು ಸೊಳ್ಳೆ ಹುಡುಕಿ ಕಚ್ಚುತ್ತದೆ ಹಾಗೂ ಈ ಸೊಳ್ಳೆಗಳು ವಯಸ್ಸಾದವರಿಗೆ ಹೆಚ್ಚು ಕಚ್ಚುತ್ತದೆ ಯಾಕೆ ಅಂದರೆ ಅವರು ತಮ್ಮ ಉಸಿರಿನಲ್ಲಿ ಹೆಚ್ಚು ಕಾರ್ಬನ್ ಡಯಾಕ್ಸೈಡ್ ಆಚೆ ಹಾಕುವ ಕಾರಣದಿಂದಾಗಿ ಅವರನ್ನು ಸೊಳ್ಳೆಗಳು ಕಚ್ಚುತ್ತವೆ.

ಇನ್ನು ಸೊಳ್ಳೆಗಳು ಶಿಫ್ಟ್ ಲೆಕ್ಕದಲ್ಲಿ ಕೆಲಸ ಮಾಡುತ್ತವೆ ಅಂತೆ ಹೌದು ಮಲೇರಿಯಾ ಹರಡುವಂತಹ ಹೆಣ್ಣು ಸೊಳ್ಳೆ ಬೆಳಗಿನ ಹೊತ್ತು ಕಚ್ಚಿದರೆ ಡೆಂಗ್ಯೂ ಅಂತಹ ಸೊಳ್ಳೆಗಳು ರಾತ್ರಿ ವೇಳೆ ಕಚ್ಚುತ್ತವೆ ಯಂತೆ, ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರವೇನು ಅಂದರೆ ಈ ಸೊಳ್ಳೆಗಳಲ್ಲಿ ಮನುಷ್ಯರನ್ನು ಕಡೆಯುವಂತಹ ಸೊಳ್ಳೆಗಳು ಕೇವಲ ಹೆಣ್ಣು ಸೊಳ್ಳೆ ಗಂಡು ಸೊಳ್ಳೆ ನಿಮ್ಮ ರಕ್ತ ಹೀರುವುದಿಲ್ಲ.