Categories
ಅರೋಗ್ಯ ಆರೋಗ್ಯ ಮನೆಔಷಧಿ ಮಾಹಿತಿ ಸಂಗ್ರಹ

ಸೋರೆಕಾಯಿ ಬಗ್ಗೆ ನಿಮಗೆ ತಿಳಿಯದ ಅದ್ಭುತ ಆರೋಗ್ಯಕರ ಅಂಶಗಳು….

ಸೋರೆಕಾಯಿ ಎಲ್ಲರೂ ಕೇಳಿರುತ್ತೀರಾ ಈ ಒಂದು ತರಕಾರಿಯ ಉಪಯೋಗಗಳು ಆರೋಗ್ಯಕರ ಅಂಶಗಳು ಜನರಿಗೆ ಅಷ್ಟಾಗಿ ತಿಳಿದಿಲ್ಲ ನೀವೇನಾದರೂ ಸೋರೆಕಾಯಿ ಜ್ಯೂಸ್ ಅನ್ನು ಕುಡಿಯುವುದರಿಂದ ಎಷ್ಟೆಲ್ಲ ಲಾಭವನ್ನು ನಮ್ಮ ದೇಹ ಪಡೆದುಕೊಳ್ಳಬಹುದು ಅನ್ನೋದನ್ನು ನೀವು ಯಾವತ್ತಾದರೂ ಊಹೆ ಮಾಡಿಕೊಂಡಿದ್ದೀರಾ.

ಹೌದು ಸ್ನೇಹಿತರೆ ನಮ್ಮ ದೇಹಕ್ಕೆ ಹಲವಾರು ಆರೋಗ್ಯಕರ ಅಂಶಗಳನ್ನು ನೀಡುತ್ತದೆ ನಾವು ಸೋರೆಕಾಯಿ ಜ್ಯೂಸ್ ಅನ್ನು ಕುಡಿಯುವುದರಿಂದ ಹಾಗಾದರೆ ಬನ್ನಿ ಇನ್ನು ಈ ಸೋರೆಕಾಯಿಯ ಹಲವಾರು ಉಪಯೋಗಗಳನ್ನು ತಿಳಿದುಕೊಳ್ಳೋಣ .

ವೈದ್ಯರಿಂದ ಹಿಡಿದು ಮನೆಯಲ್ಲಿ ಇರುವಂತಹ ಹಿರಿಯರು ಕೂಡ ಹೇಳುತ್ತಾರೆ ತರಕಾರಿಗಳನ್ನು ತಿನ್ನಬೇಕು ಈ ರೀತಿ ತರಕಾರಿಗಳನ್ನು ತಿನ್ನುವುದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ ಆರೋಗ್ಯಕರ ಜೀವನವನ್ನು ನಾವು ನಡೆಸಬಹುದು ಅಂತ ಆದರೆ ಜನರು ಊಟ ಮಾಡುವಾಗ ಕೂಡ ಒಂದು ಸಣ್ಣ ಈರುಳ್ಳಿಯನ್ನು ಕೂಡ ತಿನ್ನಲು ಮುಖ ಸಣ್ಣಗೆ ಮಾಡಿಕೊಳ್ಳುತ್ತಾರೆ.

ಆದರೆ ತರಕಾರಿಯನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಹೆಚ್ಚು ಪ್ರಯೋಜನಕಾರಿ ಆಗಿದೆ ಆದ್ದರಿಂದ ತರಕಾರಿಗಳನ್ನು ತಿನ್ನಬೇಕು ಇಲ್ಲವಾದರೆ ಕೆಲವೊಂದು ತರಕಾರಿಯ ಜ್ಯೂಸ್ ಅನ್ನು ಕುಡಿಯುವುದರಿಂದ ಕೂಡ ನಾವು ಆರೋಗ್ಯಕರ ಅಂಶವನ್ನು ಪಡೆದುಕೊಳ್ಳಬಹುದು .

ಸೋರೆಕಾಯಿ ಈ ತರಕಾರಿಯ ಹೆಸರನ್ನು ಕೇಳಿದ ಕೂಡಲೆ ನಮಗೆ ನೆನಪಿಗೆ ಬರುವುದು ಉದ್ದವಾಗಿರುವ ಹಸುರಾಗಿ ಇರುವಂತಹ ತರಕಾರಿ ಈ ಒಂದು ತರಕಾರಿಯಿಂದ ಸಾಂಬಾರ್ ಮಾಡುತ್ತಾರೆ ಪಲ್ಯವನ್ನು ಮಾಡುತ್ತಾರೆ.

ಇನ್ನು ಹಲವಾರು ಖಾದ್ಯಗಳನ್ನು ತಯಾರಿಸುತ್ತಾರೆ . ಸೋರೆಕಾಯಿಯನ್ನು ಜ್ಯೂಸ್ ಕೂಡ ಮಾಡುತ್ತಾರೆ ಈ ರೀತಿ ಸೋರೆಕಾಯಿ ಜ್ಯೂಸ್ ಮತ್ತು ಇದರಿಂದ ಮಾಡುವ ಹಲವಾರು ಖಾದ್ಯಗಳನ್ನು ಪ್ರತಿದಿನ ಆಹಾರದ ಜೊತೆ ಸೇವಿಸುವುದರಿಂದ ಸಾಕಷ್ಟು ಲಾಭಗಳಿವೆ ಅದೇನು ಅನ್ನುವುದನ್ನು ತಿಳಿಯೋಣ ..

* ಬೇಸಿಗೆ ಕಾಲದಲ್ಲಿ ಸೋರೆಕಾಯಿ ಜ್ಯೂಸ್ ಅನ್ನು ಕುಡಿಯುವುದರಿಂದ ದೇಹದ ಉಷ್ಣಾಂಶ ಸಮತೋಲನದಲ್ಲಿ ಇರುವ ಹಾಗೆ ಇದು ನೋಡಿಕೊಳ್ಳುತ್ತದೆ .
* ಕೊಲೆಸ್ಟ್ರಾಲ್ ಹೆಚ್ಚಾಗಿರುವ ಸಮಸ್ಯೆಯಿಂದ ಯಾರಾದರೂ ಬಳಲುತ್ತಾ ಇದ್ದರೆ ಅಂತಹವರು ಸೋರೆಕಾಯಿಯ ಜ್ಯೂಸನ್ನು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಬೊಜ್ಜು ಬೇಗನೆ ಕರಗುತ್ತದೆ ಸುಂದರವಾದ ದೇಹ ನಿಮ್ಮದಾಗುತ್ತದೆ .
* ಸೋರೆಕಾಯಿ ಯಲ್ಲಿ ಫೈಬರ್ ಅಂಶವು ಹೆಚ್ಚಾಗಿರುವುದರಿಂದ ಜೀರ್ಣ ಕ್ರಿಯೆ ಸಮಸ್ಯೆ ಇದ್ದರೆ ನಿವಾರಣೆಯಾಗುತ್ತದೆ ಇದರ ಜೊತೆಗೆ ಖಾಲಿ ಹೊಟ್ಟೆಯಲ್ಲಿ ಇದನ್ನ ಸೇವನೆ ಮಾಡುವುದರಿಂದ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ .
* ಸೋರೆಕಾಯಿ ಜ್ಯೂಸ್ಗೆ ಸ್ವಲ್ಪ ನಿಂಬೆ ಹಣ್ಣಿನ ರಸವನ್ನು ಸೇರಿಸಿ ಕುಡಿಯುವುದರಿಂದ ಮೂತ್ರ ಉರಿ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಬಹುದು .

* ಮಧುಮೇಹದಂತಹ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ಸೋರೆಕಾಯಿ ಜ್ಯೂಸ್ ಅನ್ನು ಕುಡಿಯುವುದರಿಂದ ಮಧುಮೇಹ ಸಮಸ್ಯೆಯಿಂದ ಪರಿಹಾರವನ್ನು ಕಂಡುಕೊಳ್ಳಬಹುದು .
*ವಾಂತಿ ಮತ್ತು ಭೇದಿ ಆಗುತ್ತಿದ್ದರೆ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತ ಹೋಗುತ್ತದೆ ಅಂತಹ ಅವರು ಸೋರೆಕಾಯಿ ಜ್ಯೂಸನ್ನು ಕುಡಿಯುವುದರಿಂದ ಸುಸ್ತು ಬೇಗನೆ ಕಡಿಮೆಯಾಗುತ್ತದೆ .

* ಸೋರೆಕಾಯಿ ಜ್ಯೂಸ್ ಅನ್ನು ಕುಡಿಯುವುದರಿಂದ ಇದರಲ್ಲಿ ಹೆಚ್ಚಿನ ಫೈಬರ್ ಅಂಶ ಮತ್ತು ಪ್ರೋಟಿನ್ ಅಂಶ ಇರುವುದರಿಂದ ನಮ್ಮ ದೇಹಕ್ಕೆ ಹೆಚ್ಚುವರಿ ಶಕ್ತಿ ದೊರೆಯುತ್ತದೆ .
* ಸೋರೆಕಾಯಿ ಯಲ್ಲಿ ಫೈಬರ್ ಅಂಶವು ಹೇರಳವಾಗಿ ಸಿಗುವ ಕಾರಣದಿಂದಾಗಿ ಇದನ್ನು ಸೇವಿಸುವುದರಿಂದ ಕೊಬ್ಬು ಕರಗುತ್ತದೆ ಮತ್ತು ದೇಹಕ್ಕೆ ಹೆಚ್ಚಿನ ಫೈಬರ್ ಅಂಶ ದೊರೆಯುತ್ತದೆ .

ಈ ರೀತಿಯಾಗಿ ಸೋರೆಕಾಯಿ ಜ್ಯೂಸ್ ಅನ್ನು ಕುಡಿಯುವುದರಿಂದ ಸಾಕಷ್ಟು ಲಾಭಗಳಿವೆ ಪ್ರತಿದಿನ ಜ್ಯೂಸ್ ಕುಡಿದು ಬೇಸರವಾಗುತ್ತಿದೆ ಅನ್ನೋದಾದರೆ ಇದರಿಂದ ಬೇರೆ ತರಹದ ಪದಾರ್ಥಗಳನ್ನು ಕೂಡ ಮಾಡಿಕೊಂಡು ತಿನ್ನಬಹುದು ಇದರಿಂದ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಗಳು ಸಿಗಲಿವೆ .