Categories
ಭಕ್ತಿ ಮಾಹಿತಿ ಸಂಗ್ರಹ

ಹನುಮಂತನ ಜನನದ ಬಗ್ಗೆ ಈ ಬೆಟ್ಟದಲ್ಲಿ ರಹಸ್ಯ ಅಡಗಿದೆ ? ಈ ಹನುಮಂತನ ಹಾಗೂ ಇಲ್ಲಿನ ಪರ್ವತದ ಬಗ್ಗೆ ಬೆಚ್ಚಿಬೀಳಿಸುವ ಸುದ್ಧಿ ನಿಮಗೋಸ್ಕರ !!!!

ಆಂಜನೇಯ ಎಲ್ಲಿದ್ದಾನೆ ಗೊತ್ತಾ, ಇದೇ ಪರ್ವತದಲ್ಲಿ ಈ ಪರ್ವತದ ಬಗ್ಗೆ ಇವತ್ತು ನಾವು ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ಕೊಡಲಿದ್ದೇವೆ.  ಆಂಜನೇಯನ್ನು ಜನಿಸಿದಂತಹ ಪರ್ವತದ ಹೆಸರಾದರೂ ಏನು ಎನ್ನುವ ಪ್ರಶ್ನೆಗೆ ಉತ್ತರ ಅದು ಅಂಜನಾದ್ರಿ ಪರ್ವತ. ಅಂಜನಾದ್ರಿ ಪರ್ವತ ಒಂದು ಸುಂದರವಾದ ಪರ್ವತ ವಾಗಿದೆ.

ಇದು ಬರೀ ಊರು ಎಂದು ನಾವು ಹೇಳುವುದಕ್ಕೆ ಆಗುವುದಿಲ್ಲ ಇಲ್ಲಿಗೆ ಪ್ರವಾಸಿಗರು ಸಾಕಷ್ಟು ಜನ ಬಂದು ಹೋಗುತ್ತಾರೆ ಪ್ರವಾಸಿಗರಿಗೆ ಈ ಪ್ರದೇಶವನ್ನು ಎಷ್ಟು ಸಲ ನೋಡಿದರೂ ಕೂಡ ಇಲ್ಲಿನ ವಿಸ್ಮಯಗಳನ್ನು ಅರಗಿಸಿಕೊಳ್ಳಲು ಆಗುವುದಿಲ್ಲ.

ಗತಕಾಲದ ವೈಭವವನ್ನು ತನ್ನಲ್ಲಿ ಅಡಗಿಸಿಕೊಂಡಿರುವ ಹಾಗೂ ಹಲವಾರು ಪೌರಾಣಿಕ ನಂಬಿಕೆಗಳನ್ನು ಹಾಗೂ ಪೌರಾಣಿಕ ಘಟನೆಗಳನ್ನು ಕೆಲವು ಋಷಿಮುನಿಗಳಿಗೆ ಆಧ್ಯಾತ್ಮಿಕವಾಗಿ  ಉನ್ನತಿಯನ್ನು ಪಡೆಯಲು ಉತ್ತಮ ಜಾಗ ವಾಗಿರುವ ಈ ಅಂಜನಾದ್ರಿ ಪರ್ವತ ಶಾಂತಿಗೆ ಒಳ್ಳೆಯ ಪ್ರದೇಶವಾಗಿದೆ.

ಈ ಅಂಜನಾದ್ರಿ ಪರ್ವತ ಎಷ್ಟು ಪ್ರಕೃತಿ ಇಂದ ಕಂಗೊಳಿಸುತ್ತದೆ ಎಂದರೆ  ನೀವು ಇಲ್ಲಿ ಹೋದಾಗ ನಿಮ್ಮ ಕಣ್ಣುಗಳು ತುಂಬಿ ಬರುತ್ತವೆ, ಏಕೆಂದರೆ ಅಷ್ಟೊಂದು ಪ್ರಕೃತಿಯ ಸಿರಿವಂತಿಕೆ ಇಲ್ಲಿ ತುಂಬಿ ತುಳುಕುತ್ತಾ ಇದೆ.

ಎಲ್ಲಿ ನೋಡಿದರೂ ಹಚ್ಚ ಹಸಿರಿನಿಂದ ಕೂಡಿದ ಅಂತಹ ಗಿಡಗಳು ಹಾಗೂ ಮರಗಳು ಇವೆ. ಅಲ್ಲದೆ ಪಕ್ಕಕ್ಕೆ ಹರಿಯುತ್ತಿರುವ ಅಂತಹ ತುಂಗಭದ್ರ ನದಿ  ಜುಳು ಜುಳು ಎನ್ನುವ ಶಬ್ದ ನಿಮಗೆ ಮನಸ್ಸಿಗೆ ತುಂಬಾ ಉಲ್ಲಾಸವನ್ನು ನೀಡುತ್ತದೆ.

ಈ ತರದ ಪ್ರದೇಶದಲ್ಲಿ ಎದ್ದು ನಿಂತಂತಹ ಪರ್ವತಗಳು ನಿಜವಾಗಲೂ ನಮ್ಮ ಕಣ್ಣನ್ನು ನೋಡುವುದೇ ಒಂದು ಸ್ವರ್ಗವನ್ನು ಮುಟ್ಟಿದ ಹಾಗೆ ಅನಿಸುತ್ತದೆ. ಈ ತರದ ಪರ್ವತಗಳನ್ನು ನಾವು ಅಂಜನಾದ್ರಿ ಪರ್ವತಗಳು ಎಂದು ಕರೆಯುತ್ತೇವೆ.

ಇಲ್ಲಿ ಹಲವಾರು ತರನಾದ ಪರ್ವತಗಳು ಇವೆ ಈ ಪರ್ವತಗಳಿಗೆ ಕೆಲವೊಂದು ಹೆಸರುಗಳನ್ನು ಇಡಲಾಗಿದೆ ಹೆಸರುಗಳು ಏನಪ್ಪಾ ಅಂದರೆ, ಹೇಮಕೂಟ ಪರ್ವತ ಮಾತಂಗ ಪರ್ವತ ಹಾಗೂ ಯಶ ಮುಖ ಪರ್ವತ ಕೊನೆಯದಾಗಿ ಅಂಜನಾದ್ರಿ ಪರ್ವತ ಎಂದು.

ಈ ಮೂರರಲ್ಲಿ ಅಂಜನಾದ್ರಿ ಅನ್ನುವುದು ನಮ್ಮ ಕರ್ನಾಟಕದಲ್ಲಿ ಇದೆಯೆಂದು ಹೇಳುವುದಕ್ಕೆ ನಾವು ನಿಜವಾಗಲೂ ಹೆಮ್ಮೆಯನ್ನು ಪಡಬೇಕು. ಏಕೆಂದರೆ ಈ ಅಂಜನಾದ್ರಿ ಪರ್ವತದ ಮೇಲೆ ಮೊದಲ ಸಾರಿ ಹನುಮಂತನ  ದೇವರು ಕಾಲಿಟ್ಟಿದ್ದರು ಎಂದು ಪ್ರತೀತಿ ಇದೆ. ಒಂದು ಪವಿತ್ರ ತಾಣವಾಗಿ ಮಾರ್ಪಾಡಾಗಿದೆ.

ಇಲ್ಲಿರುವ ಹನುಮಂತನ ದೇವರು ಈ ಬೆಟ್ಟದ ಮೇಲೆ ಕೂತಿರುತ್ತಾನೆ ಆ ಬೆಟ್ಟದ ಮೇಲೆ ಇರುವಂತ ಹನುಮಂತನ ದೇವರನ್ನು ನೀವು ನೋಡಲು ಬೆಟ್ಟವನ್ನು ಹತ್ತಿ ಹೋಗಬೇಕಾಗುತ್ತದೆ, ಬೆಟ್ಟವನ್ನು ಹತ್ತಲು ಅಂತ ಸುಲಭದ ಮಾತೇನಲ್ಲ . ಕಷ್ಟಪಟ್ಟು ಈ ಬೆಟ್ಟವನ್ನು ಹತ್ತಿ ದರೆ ನಿಮಗೆ ಸುಂದರವಾದ ಹನುಮಂತನ ಮೂರ್ತಿ ಕಾಣಬಹುದಾಗಿದೆ. ಹಾಗೆಯೇ ಈ ಶಕ್ತಿಯುತ ಹನುಮನ ಮೂರ್ತಿಯನ್ನು ನೀವೇನಾದರೂ ದರ್ಶನ ಮಾಡಿದರೆ ನಿಮಗೆ ಇರುವಂತಹ ಕಷ್ಟಗಳು ನಿವಾರಣೆಯಾಗುತ್ತದೆ.

ಕರ್ನಾಟಕ ರಾಜ್ಯದ ಕೊಪ್ಪಳ ಜಿಲ್ಲೆಯಲ್ಲಿ ಇರುವಂತಹ ಅಂಜನಾದ್ರಿ ಬೆಟ್ಟ ಒಂದು ಇವಾಗ ಪುಣ್ಯಕ್ಷೇತ್ರವಾಗಿ ಬದಲಾವಣೆಯಾಗಿದೆ. ಹಿಂದೆ ಹನುಮಂತನ ಜನನ ಇಲ್ಲೇ ಆಗಿದೆ ಎಂದು ಕೂಡ ಹಲವಾರು ಪುರಾಣ ಕಥೆಗಳಲ್ಲಿ ಹೇಳುತ್ತಾರೆ. ಹೀಗೆ ಜನುಮ ನ್ನು ಪಡೆದಂತಹ ಹನುಮ ಹಲವಾರು ಶಕ್ತಿಯುತ ಪವಾಡಗಳನ್ನು ಈ ಬೆಟ್ಟದ ಮೇಲೆ ಮಾಡಿದ್ದಾರೆ ಎನ್ನುವ  ಪುರಾವೆಗಳು ಪುರಾಣದಲ್ಲಿ ಉಲ್ಲೇಖವಿದೆ. ಇದಕ್ಕೆ ಪುಷ್ಠಿ ನೀಡುವಂತಹ ಒಂದು ಚಿಕ್ಕ ಕಥೆ ಇಲ್ಲಿದೆ ಹೇಳ್ತಿವಿ ನೋಡಿ.

ಹೀಗೆ ಅತಿ ಹೆಚ್ಚು ಶಕ್ತಿಯನ್ನು ಹೊಂದಿರುವಂತಹ ಹನುಮಂತ ಸ್ವಾಮಿಯನ್ನು ಜನ್ಮ ನೀಡಿದಳು ಅಂಜನಾದೇವಿ ಎನ್ನುವ ಮಾತೆ, ಅಂಜನ ದೇವಿ ಮೂಲತಹ ಅಪ್ಸರೆ, ಆದರೆ ಒಂದು ಋಷಿ ಮುನಿ ಯ ಶಾಪದಿಂದಾಗಿ ವಾನರ ಜನ್ಮವನ್ನು  ಭೂಮಿಯಲ್ಲಿ ತಾಳ ಬೇಕಾಗುತ್ತದೆ ಹಾಗೆ, ಹೀಗೆ ಜನ್ಮವನು ಪಡೆದಂತಹ ಅಂಜನಾದೇವಿಯು ಕೇಸರಿಯನ್ನು ಮದುವೆಯಾಗಿ ಒಂದು ಗಂಡು ಮಗುವನ್ನು ಹೆತ್ತರೆ ಅವರಿಗೆ ಶಾಪ ವಿಮೋಚನೆಯಾಗುತ್ತದೆ ಎಂದು ಋಷಿ ಮುನಿ ಇವರಿಗೆ ಕೊಟ್ಟಿರುತ್ತಾರೆ.

ಇದರಿಂದಾಗಿ ಅಪ್ಸರೆ ಅಂಜನಾದೇವಿ ಭೂಮಿಯಲ್ಲಿ ಜನನವಾಗಿ ಒಂದು ಗಂಡು ಮಗುವಿಗೆ ಜನುಮ ನೀಡುತ್ತಾಳೆ ಆ ಗಂಡು ಮಗುವೇ ಅಂಜನಾದ್ರಿ ಪುತ್ರ ಶ್ರೀ ಆಂಜನೇಯ. ಹೀಗೆ ಜನಿಸಿದಂತಹ ತನ್ನ ಮಗುವು ಶಕ್ತಿಶಾಲಿಯಾಗಬೇಕು ಎಂದು ಶಿವನಲ್ಲಿ ಪ್ರಾರ್ಥನೆ ಮಾಡುತ್ತಾರೆ ಹಾಗೂ ತಪಸ್ಸು ಮಾಡಿ ವರವನ್ನು ಪಡೆದುಕೊಂಡು ತನ್ನ ಮಗುವಿಗೆ ಅಪಾರವಾದ ಶಕ್ತಿಯನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾಳೆ.

ಇವೆಲ್ಲ ಘಟನೆಗಳು ಈ ಬೆಟ್ಟದಲ್ಲಿ ನಡೆದಿವೆ ಎಂದು ಪುರಾಣಗಳು ಹೇಳುತ್ತವೆ, ಇದರ ಬಗ್ಗೆ  ಹೆಚ್ಚಾಗಿ ವಿವರ ಬೇಕಾಗಿದೆ ಅಂಜನಾದ್ರಿ ಬೆಟ್ಟ ಎಂದು ನೀವು ಗೂಗಲ್ನಲ್ಲಿ ಟೈಪ್ ಮಾಡಿದರೆ ನಿಮಗೆ ಹಲವಾರು ವಿಷಯಗಳು ಇರುತ್ತವೆ. ಈ ವಿಷಯ ನಿಮಗೆ ಏನಾದರೂ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ತೆರಿಗೆ ಶೇರ್ ಮಾಡಿ ಹಾಗೆ ಕಮೆಂಟ್ ಮಾಡುವುದಲ್ಲ ನಿಮ್ಮ ಅಭಿಪ್ರಾಯ  ತಿಳಿಸಿ.