Categories
ಭಕ್ತಿ ಮಾಹಿತಿ ಸಂಗ್ರಹ

ಹಲ್ಲಿ ನಿಮ್ಮ ಮೇಲೆ ಬಿದ್ದರೆ ಇಷ್ಟೊಂದಲ್ಲ ಪರಿಣಾಮ ಆಗುತ್ತಾ ಯಪ್ಪಾ … ಇಲ್ಲಿದೆ ಹಲ್ಲಿ ವರದಿ ..

ನಮ್ಮ ಭಾರತ ದೇಶವು ಸಂಪ್ರದಾಯಕ್ಕೆ ಹೆಸರುವಾಸಿಯಾಗಿದೆ ಮತ್ತು ಶಾಸ್ತ್ರಗಳಿಗೂ ಕೂಡ ಅಷ್ಟೇ ಹೆಸರುವಾಸಿಯಾಗಿರುವುದನ್ನು ಗಮನಿಸಬಹುದು.ಶಾಸ್ತ್ರ ಸಂಪ್ರದಾಯಗಳಿಗೆ ನಮ್ಮ ಭಾರತ ದೇಶದಲ್ಲಿ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಲಾಗುತ್ತದೆ .

ಪ್ರತಿಯೊಂದು ವಿಷಯವೂ ಕೂಡ ಒಂದೊಂದು ಶಾಸ್ತ್ರೀಯವಾದ ಅಂಶಗಳಿರುತ್ತವೆ ಮತ್ತು ವೈಜ್ಞಾನಿಕವಾದ ಅಂಶಗಳಿರುತ್ತವೆ ಅಂಥದ್ದೇ ಒಂದು ಪ್ರಮುಖವಾದ ವಿಷಯದ ಬಗ್ಗೆ ನಾನು ಈ ದಿನ ನಿಮ್ಮೊಂದಿಗೆ ಚರ್ಚಿಸುತ್ತೇನೆ.

ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲೂ ಹಲ್ಲಿ ಇರುತ್ತದೆ ಈ ಹಲ್ಲಿಯ ಬಗ್ಗೆ ಎಲ್ಲರಿಗೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಜಿಗುಪ್ಸೆ ಹಲ್ಲಿ ಶಬ್ದ ಮಾಡಿದರೆ ಒಂದು ರೀತಿಯ ಅರ್ಥ ಹಲ್ಲಿ ಮೈಮೇಲೆ ಬಿದ್ದರೆ ಒಂದು ರೀತಿಯ ಅರ್ಥ ಹಲ್ಲಿ ಕೈಮೇಲೆ ಬಿದ್ದರೆ ಒಂದು ರೀತಿಯ ಅರ್ಥ ಹೀಗೆ ಹಲ್ಲಿಯಲ್ಲಿಯೇ ನಾನಾ ರೀತಿಯಾದಂತಹ ಸಮಸ್ಯೆ ಮತ್ತು ಉಪಯೋಗದಲ್ಲಿರುವುದನ್ನು ನಾವು ಗಮನಿಸಬಹುದು.

ಈ ಹಲ್ಲಿ ಮನೆಯಿಂದ ಎಷ್ಟು ಹೊರಗೆ ಕಳಿಸಿದರೂ ಒಂದಲ್ಲ ಒಂದು ರೀತಿಯಲ್ಲಿ ಮತ್ತೆ ಬಂದು ಮನೆಗೆ ಸೇರಿರುತ್ತದೆ ನಾನು ಈ ದಿನ ನಿಮಗೆ ಹೇಳಹೊರಟಿರುವ ವಿಷಯವೇನೆಂದರೆ ಈ ಹಲ್ಲಿ ಮನುಷ್ಯನ ಯಾವ ಭಾಗಕ್ಕೆ ಬಿದ್ದರೆ ಯಾವ ದೋಷ ಬರುತ್ತದೆ ಮತ್ತು ಯಾವ ಭಾಗಕ್ಕೆ ಬಿದ್ದರೆ ಒಳ್ಳೆಯದಾಗುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ಇದೇ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ ಸಾಧ್ಯವಾದಷ್ಟು ಎಲ್ಲರೂ ಕೂಡ ಈ ಮಾಹಿತಿಯಿಂದ ಉಪಯೋಗವನ್ನು ಪಡೆದುಕೊಳ್ಳಿ ಮತ್ತು ಬೇರೆಯವರಿಗೂ ಕೂಡ ತಿಳಿಸಿ.

ಸಾಮಾನ್ಯವಾಗಿ ಮನೆಯ ಗೋಡೆಗಳ ಮೇಲೆ ಹಲ್ಲಿಯನ್ನು ಕಾಣುತ್ತೇವೆ ಅಥವಾ ಕಿಟಕಿಗಳ ಮೇಲೆ ಫೋಟೋಗಳ ಮೇಲೆ ಪ್ರತಿಯೊಂದು ಜಾಗದಲ್ಲೂ ಕೂಡ ಹಳ್ಳಿಗಳಿರುವ ದನ್ನು ಗಮನಿಸಬಹುದು.

ಈ ಹಲ್ಲಿಯೂ ಮನುಷ್ಯ ಓಡಾಡುವಾಗ ಆಯತಪ್ಪಿ ಅಥವಾ ಯಾವುದಾದರೂ ಕಾರಣಕ್ಕೆ ಮೈಮೇಲೆ ಬೀಳುತ್ತದೆ ಈ ಎಲ್ಲ ಎಡಗೈ ಮೇಲೆ ಬಿದ್ದರೆ ಏನು ದೋಷ ಬಲಗೈ ಮೇಲೆ ಬಿದ್ದರೆ ಏನಾಗುತ್ತದೆ ಕೆನ್ನೆಯ ಮೇಲೆ ಬಿದ್ದರೆ ಏನಾಗುತ್ತದೆ ತಲೆಯ ಮೇಲೆ ಬಿದ್ದರೆ ಏನಾಗುತ್ತದೆ ಎಂಬ ಪ್ರತಿಯೊಂದು ಮಾಹಿತಿಯನ್ನು ಈ ದಿನ ನಿಮ್ಮೊಂದಿಗೆ ಚರ್ಚಿಸುತ್ತೇನೆ .ಸಾಮಾನ್ಯವಾಗಿ ಹಲ್ಲಿ ಬೀಳುವುದು ಕೆಟ್ಟದ್ದು ಎಂದು ಊಹಿಸುತ್ತಾರೆ .

ಆದರೆ ಮನುಷ್ಯನ ಒಂದು ತುಟಿಯ ಮೇಲೆ ಹಲ್ಲಿ ಬೀಳುವುದರಿಂದ ಆರ್ಥಿಕ ಲಾಭ ಮನುಷ್ಯನಿಗೆ ಹೆಚ್ಚಾಗಿರುತ್ತದೆ ಅದೇ ರೀತಿ ಮನುಷ್ಯನ ತಲೆಯ ಮೇಲೆ ಹಲ್ಲಿ ಬೀಳಬಾರದು ತಲೆ ಮೇಲೆ ಹಲ್ಲಿ ಬಿದ್ದರೆ ಯಾವುದಾದರೂ ವಿವಾದಕ್ಕೆ ನಾವು ಗುರಿಯಾಗುತ್ತೇವೆ ಎಂಬರ್ಥ ಜೊತೆಗೆ ಎಡಗೈ ಮೇಲೆ ಮತ್ತೆ ಬಲಗೈ ಮೇಲೇನಾದರೂ ಹಲ್ಲಿ ಬಿದ್ದರೆ ಆರ್ಥಿಕವಾಗಿ ನಮಗೇ ನಷ್ಟವಾಗುತ್ತದೆ ಮತ್ತು ತೊಡೆಯ ಮೇಲೆ ಹಲ್ಲಿ ಬಿದ್ದರೆ ನಮ್ಮ ಮನೆಯಲ್ಲಿ ಯಾವುದಾದರೂ ಸಾವಾಗುತ್ತದೆ .

ನಮ್ಮ ಕೆನ್ನೆಯ ಮೇಲೆ ಹಲ್ಲಿ ಬಿದ್ದರೆ ನಾವು ಯಾವುದಾದರೂ ಸಂಕಷ್ಟಕ್ಕೆ ಗುರಿಯಾಗುತ್ತೇವೆ ಎಂದು ಅದೇ ರೀತಿಯಲ್ಲಿ ಮಹಿಳೆಯರ ಎಡಗೈ ಮೇಲೆ ಹಲ್ಲಿ ಬಿದ್ದರೆ ಏನಾಗುತ್ತದೆ ಬಲಗೈ ಮೇಲೆ ಹಲ್ಲಿ ಬಿದ್ದರೆ ಏನಾಗುತ್ತದೆ ಅದೇ ರೀತಿ ಪುರುಷರ ಎಡಗೈ ಮೇಲೆ ಹಲ್ಲಿ ಬಿದ್ದರೆ ಏನಾಗುತ್ತದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ವಿಡಿಯೋದಲ್ಲಿ ತಿಳಿಸಲಾಗಿದೆ ಸಾಧ್ಯವಾದಷ್ಟು ಎಲ್ಲರೂ ಕೂಡ ಈ ಮಾಹಿತಿಯಿಂದ ಉಪಯೋಗಗಳನ್ನು ಪಡೆದುಕೊಳ್ಳಿ.

ಅದು ಅಚಾನಕ್ಕಾಗಿ ಬಿದ್ದಾಗ ಏನಾಗುತ್ತದೆ ಎಂಬುದನ್ನು ನಂಬುವುದಕ್ಕಿಂತ ಸಾಧ್ಯವಾದಷ್ಟು ಹಲ್ಲಿ ಬಿದ್ದಾಗ ಒಮ್ಮೆ ಸ್ನಾನ ಮಾಡಿಕೊಂಡು ದೇವರಿಗೆ ಭಕ್ತಿಯಿಂದ ನಮಿಸಿ ಯಾವ ಅಪಾಯವೂ ಆಗದ ರೀತಿಯಲ್ಲಿ ಕಾಪಾಡು ಎಂದು ನಿರಾಳವಾಗುವುದು ಉತ್ತಮ ಎಲ್ಲವೂ ಕೂಡ ನಾವು ನಂಬಿದರೆ ಒಳ್ಳೆಯದು ನಂಬದೇ ಇದ್ದರೆ ಕೆಡುಕು .
ಧನ್ಯವಾದಗಳು .