Categories
ಅರೋಗ್ಯ ಆರೋಗ್ಯ ಭಕ್ತಿ ಮಾಹಿತಿ ಸಂಗ್ರಹ

ಹಸಿದು ಬರೋ ಅಂತಹ ಭಕ್ತರಿಗೆ ಅದ್ಭುತವಾದ ಊಟವನ್ನು ಕೊಡುವಂತಹ 9 ದೇವಸ್ಥಾನಗಳು !! ಪ್ರತಿಯೊಬ್ಬ ಕನ್ನಡಿಗ ಓದಲೇಬೇಕಾದಂತಹ ವಿಚಾರ !

ನಮ್ಮ ಭಾರತ ದೇಶದಲ್ಲಿ ಹಲವಾರು ತರನಾದ ದೇವಸ್ಥಾನಗಳು ಇವೆ, ಆದರೆ ಕೆಲವೇ ದೇವಸ್ಥಾನಗಳು ಅತಿ ಹೆಚ್ಚು ಪ್ರಸಿದ್ಧಿ ಹೊಂದಿದ್ದು ಇಲ್ಲಿ ದಿನಕ್ಕೆ ಸಾವಿರಾರು ಜನರು ಬಂದು ಹೋಗುತ್ತಾರೆ,

ಹೀಗೆ ಬಂದು ಹೋದಂತಹ ಜನರಿಗೆ ಊರಿನ ದೇವಸ್ಥಾನದಲ್ಲಿ ಊಟವನ್ನು ಹಾಕದೆ ಕಳಿಸುವುದಿಲ್ಲ, ಹಾಗಾದರೆ ನಮ್ಮ ದೇಶದಲ್ಲಿ ಪ್ರಸಿದ್ಧ ವಾದಂತಹ ದೇವಸ್ಥಾನಗಳಲ್ಲಿ ಊಟ ಹಾಕುವಂತಹ ಸ್ಥಳವಾದರೂ ಯಾವುದು ಎನ್ನುವ ಪ್ರಶ್ನೆಗೆ ಉತ್ತರ, ಕೆಳಗೆ ಸಂಪೂರ್ಣವಾದ ಮಾಹಿತಿಯನ್ನು ಕೊಟ್ಟಿದ್ದೇನೆ ಓದಿ. ಇದಾದ ವಿಚಾರ ಪ್ರತಿಯೊಬ್ಬ ಭಕ್ತರಿಗೂ ಗೊತ್ತಿರಲೇಬೇಕು.

ಮೊದಲನೆಯದಾಗಿ ಸಿರಡಿ ಸಾಯಿಬಾಬಾ

ನೀವು ಗಮನಿಸಬಹುದು ಎಲ್ಲ ದೇವಸ್ಥಾನಗಳಲ್ಲಿ ಅಡುಗೆ ಒಲೆಯನ್ನು ಬಳಸುತ್ತಿದ್ದರೆ ಹಾಗೂ ಸಿಲಿಂಡರ್ ಅನ್ನು ಬಳಸುತ್ತಿದ್ದಾರೆ ,ಮಹಾರಾಷ್ಟ್ರ ದಲ್ಲಿ ಇರುವಂತಹ ಸಿ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಜನರಿಗೆ ಊಟವನ್ನು ಹಾಕಲು ಅವರು ಸಂಪೂರ್ಣವಾಗಿ ಸೌರ ವಿದ್ಯುತ್ ಅನ್ನು ಬಳಸುತ್ತಿದ್ದಾರೆ,

ಇದರಿಂದ ಯಾವುದೇ ಮಾಲಿನ್ಯವು ಆಗದೇ ಹಾಗೂ ಎಲ್ಲ ಜನರ ಹಸಿವು ಹಸಿವಿನ ಹಂಗನ್ನು ನಿವಾರಿಸುತ್ತಾರೆ ಇದ್ದಾರೆ, ಈ ದೇವಸ್ಥಾನದಲ್ಲಿ ದಿನಕ್ಕೆ ನಲವತ್ತರಿಂದ ಐವತ್ತು ಸಾವಿರ ಜನರಿಗೆ ಆಗುವಂತಹ ಊಟವನ್ನು ತಯಾರು ಮಾಡುತ್ತಾರೆ. ಹಾಗೂ ಬೆಳಗಿನ ಜಾವದಲ್ಲಿ ಊಟ ಮಾಡುವುದಕ್ಕೆ ಪಾಕೆಟ್ ಕೊಡ ಕೊಡುತ್ತಾರೆ.

ಅಮೃತಸರದಲ್ಲಿ ಇರುವಂತಹ ಗೋಲ್ಡನ್ ಟೆಂಪಲ್

ಅಮೃತಸರದಲ್ಲಿ ಇರುವಂತಹ ಗೋಲ್ಡನ್ ಟೆಂಪಲ್ ನಲ್ಲಿಯೂ ಕೂಡ ದಿನಕ್ಕೆ 2 ರಿಂದ 3 ಲಕ್ಷ ಜನಕ್ಕೆ ಆಗುವಂತಹ ಚಪಾತಿ ಹಾಗೂ ರೊಟ್ಟಿಯನ್ನು ಇಲ್ಲಿ ಮಾಡಲಾಗುತ್ತದೆ, ಅದಲ್ಲದೆ 2 ಟನ್ ಬೆಳೆ ಸಾಂಬಾರ್ ಅನ್ನು ದಿನನಿತ್ಯ ಇಲ್ಲಿ ಮಾಡಲಾಗುತ್ತದೆ, ಹಾಗೂ ದಿನನಿತ್ಯ 500 ಸಿಲೆಂಡರ್ ಹಾಗೂ ಐದು ಸಾವಿರದಿಂದ ಐದು ಸಾವಿರ ಕೆ ಜಿ ಯ ವರೆಗೆ ಸೌದೆಯನ್ನು ಎಲ್ಲಿ ಬಳಸಲಾಗುತ್ತದೆ.

ಇಸ್ಕಾನ್ ಫೌಂಡೇಶನ್

ಈ ಫೌಂಡೇಶನ್ ಅಲ್ಲಿ , ಅಲ್ಲಿಗೆ ಬರುವ ಜನರಿಗೆ ಊಟ ಹಾಕದೆ ಇರೋದಾದರೂ ಇವರು ಒಂದು ಫೌಂಡೇಶನ್ ಮುಖಾಂತರ ಮಕ್ಕಳಿಗೆ ಊಟವನ್ನು ಕೊಡುತ್ತಾರೆ, ಈ ಫೌಂಡೇಶನ್ ಮುಖಾಂತರ ಹಲವಾರು ಶಾಲೆಗಳಿಗೆ ಊಟವು ಸರಬರಾಜು ಆಗುತ್ತದೆ. ಪ್ರತಿನಿತ್ಯ ಹುಬ್ಬಳ್ಳಿಯಲ್ಲಿ ಇರುವಂತಹ ಇಸ್ಕಾನ್ ಟೆಂಪಲ್ ಒಂದು ಲಕ್ಷದ 50 ಸಾವಿರ ಜನರಿಗೆ ಆಗುವಂತಹ ಅಡುಗೆಯನ್ನು ಮಾಡಿ ಶಾಲೆಗಳಿಗೆ ಪೂರೈಸುತ್ತಾರೆ.

ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ

ನಮಗೆಲ್ಲರಿಗೂ ಗೊತ್ತಿರುವ ಹಾಗೆ ನಮ್ಮ ಕರ್ನಾಟಕದ ಹೆಮ್ಮೆ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಧರ್ಮಸ್ಥಳ, ಇಲ್ಲಿ ದಿನಕ್ಕೆ 70 ಕ್ವಿಂಟಾಲ್ ಅಕ್ಕಿ ಹಾಗೂ 15ರಿಂದ 16 ಕ್ವಿಂಟಲ್ ತರಕಾರಿಗಳನ್ನು ಬಳಕೆ ಮಾಡಲಾಗುತ್ತದೆ, ದಿನನಿತ್ಯ ಇಲ್ಲಿ 2000 3000 ತೆಂಗಿನಕಾಯಿಗಳನ್ನು ಕೂಡ ಬಳಸಲಾಗುತ್ತದೆ. ಇಲ್ಲಿ ದಿನಕ್ಕೆ ಎರಡುವರೆ ಸಾವಿರ ದಿಂದ 3000 ಜನರಿಗೆ ಆಗುವಂತಹ  ಅಡುಗೆ ಮಾಡಲಾಗುತ್ತದೆ .

ಪುರಿ ಜಗನ್ನಾಥ್ ದೇವಸ್ಥಾನ

ನಮ್ಮ ದೇಶದಲ್ಲಿ ಪ್ರಸಿದ್ಧಿಯನ್ನು ಹೊಂದಿರುವಂತಹ ದೇವಸ್ಥಾನಗಳಲ್ಲಿ ಪೂರಿ ಜಗನ್ನಾಥ ದೇವಸ್ಥಾನ ಕೂಡ ಒಂದು, ಈ ದೇವಸ್ಥಾನದಲ್ಲಿ ದಿನ ನಿತ್ಯವು ಸಾವಿರಾರು ಜನರು ಬಂದು ಹೋಗುತ್ತಾರೆ, ಹೀಗೆ ಬಂದು ಹೋಗುವಂತಹ ಸಾವಿರಾರು ಜನರಿಗೆ ಈ ದೇವಸ್ಥಾನದಲ್ಲಿ ದಿನನಿತ್ಯವೂ ಹತ್ತರಿಂದ ಹದಿನೈದು ಸಾವಿರ ಜನರಿಗೆ ಆಗುವ ಅಷ್ಟು ಊಟವನ್ನು ಬಡಿಸಲಾಗುತ್ತದೆ.

ತಿರುಪತಿ ದೇವಸ್ಥಾನ

ಪ್ರಪಂಚದಲ್ಲಿ ಅತಿ ಹೆಚ್ಚು ಭಕ್ತರನ್ನು ಹೊಂದಿರುವಂತಹ ಇ ತಿರುಪತಿ ದೇವಸ್ಥಾನ ದಿನಕ್ಕೆ ಲಕ್ಷಾಂತರ ಜನರು ಇಲ್ಲಿ ಬಂದು ಹೋಗುತ್ತದೆ ಅನ್ನುವುದು ನಿಮಗೆ ಗೊತ್ತೇ ಇರುವಂತಹ ವಿಚಾರ, ಈ ದೇವಸ್ಥಾನದಲ್ಲಿ ಬರುವಂತಹ ಈ ರೀತಿಯ ಭಕ್ತರಿಗೆ ದಿನಕ್ಕೆ ಲಕ್ಷಾಂತರ ಜನರಿಗೆ ಆಗುವಂತಹ ಅಡುಗೆಯನ್ನು ಇಲ್ಲಿ ಮಾಡಿ ಬಡಿಸಲಾಗುತ್ತದೆ.

ಕುಕ್ಕೆ ಸುಬ್ರಮಣ್ಯ ದೇವಸ್ಥಾನ

ನೀವೇನಾದರೂ ಧರ್ಮಸ್ಥಳ ದೇವಸ್ಥಾನಕ್ಕೆ ಭೇಟಿ ಆದರೆ ನೀವು ಕುಕ್ಕೆ ಸುಬ್ರಮಣ್ಯ ದೇವಸ್ಥಾನ ಭೇಟಿಯಾಗದೆ ಬರಲಾರರು, ಇಲ್ಲಿಯೂ ಕೂಡ ಹಲವಾರು ನಂಬಿಕೆಯನ್ನು ಹೊಂದಿರುವಂತಹ ಅದರಲ್ಲೂ ಸರ್ಪ ದೋಷ ವನ್ನು ನಿವಾರಣೆ ಮಾಡಿಕೊಳ್ಳುವುದಕ್ಕಾಗಿ ಹಲವಾರು ಜನರು ಹಲವಾರು ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ, ಹೀಗೆ ಬಂದಂತಹ ಭಕ್ತಾದಿಗಳಿಗೆ ದಿನಕ್ಕೆ ಆರರಿಂದ ಏಳು ಸಾವಿರ ಜನರಿಗೆ ಆಗುವಂತಹ ಅಡುಗೆಯನ್ನು ಇಲ್ಲಿ ಮಾಡಿ ಬಳಸಲಾಗುತ್ತದೆ.

ವೈಷ್ಣವಿ ದೇವಸ್ಥಾನ ಜಮ್ಮು ಮತ್ತು ಕಾಶ್ಮೀರ

ಜಮ್ಮು ನಲ್ಲಿ ಇರುವಂತಹ ವೈಷ್ಣವಿ ದೇವಸ್ಥಾನದಲ್ಲಿ ಹಲವಾರು ಭಕ್ತರು ಅಮ್ಮ ಭಗವಾನ್ ,ಪ್ರಚಲಿತವಾಗಿರುವ ಅಂತಹ ಈ ದೇವಿಯನ್ನು ನೋಡಲು ಹಲವಾರು ಜನರು ಸಾವಿರಾರು ಜನರ ತಂಡೋಪತಂಡವಾಗಿ ಇಲ್ಲಿಗೆ ಬರುತ್ತಾರೆ, ಹೀಗೆ ಎಲ್ಲಿಗೆ ಬಂದಂತಹ ಜನರಿಗೆ ಈ ದೇವಸ್ಥಾನದಲ್ಲಿ ದಿನನಿತ್ಯವೂ ಅಡುಗೆ ಮಾಡಲಾಗುತ್ತದೆ. ಹೀಗೆ ಮಾಡಿದಂತಹ ಅಡುಗೆಯನ್ನು ಜನರಿಗೆ ದಿನನಿತ್ಯವೂ ಬಡಿಸಲಾಗುತ್ತದೆ .

ಗೊತ್ತಾಯಿತಲ್ಲ ಸ್ನೇಹಿತರೆ ಮೇಲೆ ಕೊಟ್ಟಿರುವಂತಹ ಎಲ್ಲ ದೇವಸ್ಥಾನಗಳಲ್ಲಿ ಹಸಿದು ಬಂದಂತಹ ಭಕ್ತಾದಿಗಳಿಗೆ ಊಟವನ್ನು ಇಲ್ಲಿ ಬಡಿಸಲಾಗುತ್ತದೆ, ಈ ಮಾಹಿತಿ ನಿಮಗೆ ಏನಾದರೂ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರಿಗೆ ಹಂಚಿ ಕೊಳ್ಳಿ ಹಾಗೂ ನಮ್ಮ ಪೇಜ್ ಅನ್ನು ಲೈಕ್ ಮಾಡುವುದನ್ನು ಮರೆಯಬೇಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ರಶ್ಮಿ.