Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಹಾಲು ಮತ್ತು ಹರಿಶಿಣ ಪುಡಿ ಬೆರೆಸಿಕೊಂಡು ಕುಡಿಯುವುದರಿಂದ ನಮ್ಮ ದೇಹದಲ್ಲಿ ಏನಾಗುತ್ತೆ ಗೊತ್ತಾ

ನಮಸ್ಕಾರ ಪ್ರಿಯ ವೀಕ್ಷಕರೇ ಇಂದಿನ ಮಾಹಿತಿಯಲ್ಲಿ ನಾವು ತಿಳಿಯೋಣ ಗೋಲ್ಡನ್ ಮಿಲ್ಕ್ ಅಂತ ಏನು ಆಯುರ್ವೇದದಲ್ಲಿ ಕರೆಯಲ್ಪಡುತ್ತಿದೆಯೋ ಅಂತಹ ಹರಿಶಿಣದ ಹಾಲಿನ ಬಗ್ಗೆ ಇಂದಿನ ಈ ಲೇಖನದಲ್ಲಿ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ, ಹಾಗಾದರೆ ಬನ್ನಿ ಯಾರೆಲ್ಲಾ ಈ ಅರಿಶಿಣದ ಹಾಲನ್ನು ಸೇವಿಸಬಹುದು.

ಇದರಿಂದ ಯಾವೆಲ್ಲಾ ಪ್ರಯೋಜನವನ್ನು ನಾವು ಪಡೆದುಕೊಳ್ಳಬಹುದಾಗಿದೆ .ಎಂಬುದನ್ನು ತಿಳಿಯೋಣ, ಈ ಮಾಹಿತಿಯನ್ನು ತಿಳಿದ ನಂತರ ಇದೊಂದು ಆರೋಗ್ಯ ಮಾಹಿತಿಯಾದ ಕಾರಣ ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ ಕೊನೆಯಲ್ಲಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮುಖಾಂತರ ಹಂಚಿಕೊಳ್ಳಿ.

ಆಧುನಿಕ ಯುಗದಲ್ಲಿ ಅನೇಕ ತಂತ್ರಜ್ಞಾನಗಳು ಜಾರಿಗೆ ಬಂದಿವೆ ಎನ್ನುವ ಆರೋಗ್ಯವನ್ನು ವೃದ್ಧಿಸುತ್ತದೆ ಎಂದು ಅನೇಕ ಪರಿಹಾರಗಳು ಬಂದಿರಬಹುದು ಆದರೆ ನಮ್ಮ ಈ ಭೂಲೋಕದ ಅಮೃತಾ ಅಂತ ಏನೂ ಕರೆಸಿಕೊಳ್ಳುತ್ತದೆಯೋ ಹಾಲಿನೊಂದಿಗೆ ಚಿಟಕಿ ಅರಿಶಿಣವನ್ನು ಬೆರೆಸಿ ಕುಡಿಯುತ್ತಾ ಬರುವುದರಿಂದ ನಿಮ್ಮ ದೇಹದಲ್ಲಿ ಹಲವಾರು ಬದಲಾವಣೆಗಳು ಆಗುತ್ತದೆ, ಉರಿಯೂತ ನಿವಾರಣೆ ಮಾಡುವ ಈ ಅರಿಶಿಣದ ಹಾಲು ಕ್ಯಾನ್ಸರ್ನಂತಹ ಮಹಾಮಾರಿ ಕಾಯಿಲೆಗಳನ್ನು ಹೊಡೆದುರುಳಿಸುವ ಶಕ್ತಿ ಅನ್ನು ಹೊಂದಿದೆ.

ಅರಿಶಿಣದ ಹಾಲು ಇದು ಪರಿಸರದಲ್ಲಿರುವ ಅತ್ಯಂತ ಕೆಟ್ಟ ವೈರಾಣುಗಳನ್ನು ನಾಶ ಮಾಡುವ ಶಕ್ತಿಯನ್ನು ಇದು ಹೊಂದಿದ್ದು ಎಂತಹ ಮಹಾಮಾರಿ ವೈರಾಣುವಿನ ವಿರುದ್ಧವೂ ಹೋರಾಡುವ ಶಕ್ತಿ ಇದರಲ್ಲಿದೆ ಹಾಗೆ ನಮ್ಮ ದೇಹದಲ್ಲಿ ಅಮೈನೊ ಆಮ್ಲ ಟ್ರಿಪ್ಲೊ ಆಮ್ಲವನ್ನು ಉತ್ಪತ್ತಿ ಮಾಡಿ ನಿದ್ರಾಹೀನತೆ ಸಮಸ್ಯೆಯನ್ನು ನಿವಾರಿಸುವುದರಲ್ಲಿ ಸಹಾಯಕಾರಿಯಾಗಿದೆ.

ಮೂಳೆಗೆ ಸಂಬಂಧಪಟ್ಟ ಅನೇಕ ಸಮಸ್ಯೆಗಳನ್ನು ನಿವಾರಿಸುವುದರಲ್ಲಿ ಈ ಅರಿಶಿಣದ ಹಾಲು ಅತ್ಯಂತ ಉಪಯುಕ್ತಕಾರಿಯಾಗಿದ್ದು ವಯಸ್ಸಾದ ನಂತರ ಎದುರಾಗುವ ಸೊಂಟ ಬೆನ್ನು ಮೂಳೆ ಸಮಸ್ಯೆಗಳನ್ನು ನಿವಾರಿಸುತ್ತದೆ ಆಸ್ಟಿಯೋಪೋರೊಸಿಸ್ ಅಂತ ಸಮಸ್ಯೆಗಳು ಬಾರದೆ ಇರುವ ಹಾಗೆ ದೇಹವನ್ನು ತಯಾರಿ ಮಾಡುತ್ತದೆ.

ಈಜಿಪ್ಟ್ನ ರಾಣಿಯಾದ ಕ್ಲಿಯೋಪಾತ್ರ ಅವರು ಪ್ರತಿದಿನ ಹರಿಶಿಣದ ಹಾಲಿನಿಂದಲೇ ಸ್ನಾನವನ್ನು ಮಾಡಿಕೊಳ್ಳುತ್ತಿದ್ದರಂತೆ ಮತ್ತು ಪ್ರತಿದಿನ ಅರಿಶಿಣದ ಹಾಲನ್ನು ಸೇವಿಸುತ್ತಿದ್ದರಂತೆ ಇದರ ಅರ್ಥವೇನು ಅಂದರೆ ಇವರ ಸೌಂದರ್ಯದ ಗುಟ್ಟು ಅರಿಷಿಣದ ಹಾಲು ಆಗಿದೆ ಎಂದು ಹೇಳಲಾಗಿದೆ.

ಅರಿಷಿಣದ ಹಾಲು ದೇಹದ ಮೇಲೆ ಆಗಿರುವ ಕೆಂಪು ಗುಳ್ಳೆಗಳ ನಾ ನಿವಾರಿಸುತ್ತದೆ ಹಾಗೆ ಹರಿಶಿನದ ಹಾಲಿನೊಂದಿಗೆ ಹತ್ತಿಯನ್ನು ಅದ್ದಿ ಮೊಡವೆ ಆಗಿರುವಂತಹ ಜಾಗದಲ್ಲಿ ಅಥವಾ ಕೆಂಪು ಗುಳ್ಳೆಗಳು ಆಗಿರುವಂತಹ ಜಾಗದಲ್ಲಿ ಹಚ್ಚುತ್ತಾ ಬರುವುದರಿಂದ ಈ ಮೊಡವೆ ಗುಳ್ಳೆಗಳು ನಿವಾರಣೆಯಾಗುತ್ತದೆ.

ಅರಿಶಿನದ ಹಾಲನ್ನು ಮುಖಕ್ಕೆ ವಾರಕ್ಕೆ ಒಂದು ಅಥವಾ ಎರಡು ಬಾರಿ ಲೇಪಿಸಿಕೊಂಡು ಬರುವುದರಿಂದ ಇದು ಮುಖದ ಕಾಂತಿಯನ್ನು ಹೆಚ್ಚಿಸುವುದರಲ್ಲಿ ಸಹಕಾರಿಯಾಗುವುದರ ಜೊತೆಗೆ ಮುಖದ ಮೇಲಿರುವ ಕೆಂಪು ಕಲೆಗಳನ್ನು ಹೋಗಲಾಡಿಸುತ್ತದೆ.

ಇನ್ನು ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲಿಗೆ ಚಿಟಿಕಿ ಅರಿಶಿಣವನ್ನು ಬೆರೆಸಿ ಕುಡಿಯುತ್ತಾ ಬರುವುದರಿಂದ ಇದು ಮೂಳೆಗಳನ್ನು ಬಲಪಡಿಸುವುದಲ್ಲದೇ ಮೆದುಳಿನ ಆರೋಗ್ಯವನ್ನು ಕೂಡ ವೃದ್ಧಿಸುತ್ತದೆ ಚುರುಕು ಮಾಡುತ್ತದೆ. ಒಟ್ಟಾರೆಯಾಗಿ ಭೂಲೋಕದ ಅವೃತವಾಗಿರುವ ಹಾಲನ್ನು ಹಾಗೇ ಸೇವಿಸುವುದಕ್ಕಿಂತ ಇದರೊಂದಿಗೆ ಚಿಟಕಿ ಅರಿಶಿಣವನ್ನು ಬೆರಸಿ ಕುಡಿಯುತ್ತಾ ಬರುವುದರಿಂದ ಪ್ರತಿರೋಧಕ ಶಕ್ತಿಗಳು ಹೆಚ್ಚಿಸುವುದಲ್ಲದೆ ಆರೋಗ್ಯವನ್ನು ಉತ್ತಮವಾಗಿಡಿಸಲು ಇದು ಸಹಾಯಕಾರಿಯಾಗಿರುತ್ತದೆ.

ಈ ದಿನದ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಅಂದಲ್ಲಿ ತಪ್ಪದೇ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಇನ್ನೂ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಶುಭವಾಗಲಿ ಧನ್ಯವಾದ ಶುಭ ದಿನ.