Categories
ಅರೋಗ್ಯ ಆರೋಗ್ಯ ಮಾಹಿತಿ

ಹೀಗೆ ಮಾಡಿಬಿಟ್ರಿ ಅಂದುಕೊಳ್ಳಿ ನಿಮ್ಮ ತಲೆಯಲ್ಲಿ ಹೇನುಗಳೇ ಇರುವುದಿಲ್ಲ .. ಒಂದು ಉಪಯುಕ್ತ ಮಾಹಿತಿ ..

ಕಾಲದಿಂದಲೂ ಹೆಣ್ಣು ಮಕ್ಕಳಿಗೆ ಒಂದೇ ಒಂದು ಬೇಜಾರು ಅದೇ ಹೇನು ಅಂದರೆ ತಲೆಗೆ ಈ ಒಂದು ಹೇನು ಹತ್ತಿದರೆ ಅದನ್ನು ತಲೆಯಿಂದ ಹೇಗೆ ದೂರ ಮಾಡುವುದು ಅನ್ನೋದೇ ಒಂದು ದೊಡ್ಡ ಯೋಚನೆ ಆಗುತ್ತಿತ್ತು . ಹೌದು ಸ್ನೇಹಿತರೇ ಈ ಒಂದು ಹೇನಿನ ಕಾಟದಿಂದಾಗಿ ತಲೆಯ ಕೂದಲು ಕೂಡ ಉದುರಿತ್ತು ಅಷ್ಟು ತೊಂದರೆ ಕೊಡುತ್ತದೆ ಸಮಸ್ಯೆ ಮಾಡುತ್ತದೆ ಈ ಒಂದು ಹೇನಿನ ಸಂತತಿ .

ಈ ಒಂದು ಸಮಸ್ಯೆಯನ್ನು ಸುಲಭವಾಗಿ ಪರಿಹಾರ ಮಾಡಿಕೊಳ್ಳಬಹುದು ಅದು ಹೇಗೆ ಅಂತೀರಾ ಸ್ನೇಹಿತರ ಕೇವಲ ಮನೆಯಲ್ಲಿ ಸಿಗುವಂತಹ ಈ ಕೆಲವೊಂದು ಪದಾರ್ಥಗಳನ್ನು ನಿಮ್ಮ ಕೂದಲಿಗೆ ಬಳಸಿ ಆಗ ಈ ಹೇನಿನ ಸಮಸ್ಯ ದೂರವಾಗುತ್ತದೆ ಅದು ಏನು ಅಂತೀರಾ ಈ ಕೆಳಗಿನ ಮಾಹಿತಿಯಲ್ಲಿ ನೀಡಿದ್ದೇವೆ ಪೂರ್ತಿಯಾಗಿ ಓದಿ ತಿಳಿದುಕೊಳ್ಳಿ .

ಸ್ನೇಹಿತರೇ ಮೊದಲನೇ ಔಷಧಿ ಏನು ಅಂದರೆ ಈ ಒಂದು ಪಾರಿಜಾತದ ಬೀಜಗಳನ್ನು ನೀರಿನಲ್ಲಿ ನೆನೆಸಿ ಅದನ್ನು ಅರೆದು ತಲೆಗೆ ಹಚ್ಚುವುದರಿಂದ ಈ ಒಂದು ಸಮಸ್ಯೆ ದೂರವಾಗುತ್ತದೆ ಮತ್ತು ಕೊಬ್ಬರಿ ಎಣ್ಣೆಯಲ್ಲಿ ಬಜೆ ಪುಡಿಯನ್ನು ಬೆರೆಸಿ ತಲೆಗೆ ಹಚ್ಚುವುದರಿಂದ ಕೂಡಾ ಈ ಸಮಸ್ಯೆ ದೂರವಾಗುತ್ತದೆ .

ತುಳಸಿ ಎಲೆಗಳನ್ನು ಬೇವಿನ ಎಲೆಗಳೊಂದಿಗೆ ಬೆರೆಸಿ ಪೇಸ್ಟ್ ಮಾಡಿ ತಲೆ ಕೂದಲಿಗೆ ಹಚ್ಚುವುದರಿಂದ ಕೂಡ ಈ ಸಮಸ್ಯೆ ದೂರ ಮಾಡಿಕೊಳ್ಳಬಹುದು ಮತ್ತು ತುಳಸಿಯ ಬೀಜಗಳನ್ನು ಮತ್ತು ತುಳಸಿ ಎಲೆಗಳನ್ನು ಒಂದು ಬಟ್ಟೆಯಲ್ಲಿ ಕಟ್ಟಿ ಅದನ್ನು ಮಲಗುವಾಗ ದಿಂಬಿನ ಕೆಳಗೆ ಇರಿಸಿ ಮಲಗಿಕೊಂಡರೆ ಹೇನುಗಳು ದೂರವಾಗುತ್ತದೆ ಮತ್ತು ಮಜ್ಜಿಗೆಯನ್ನು ದಪ್ಪವಾಗಿ ತಲೆಗೆ ಹಚ್ಚಿಕೊಳ್ಳಬೇಕು ಆ ನಂತರ ತಣ್ಣೀರಲ್ಲಿ ಸ್ನಾನ ಮಾಡಬೇಕು ಇದನ್ನು ಹದಿನೈದು ದಿನಗಳಿಗೊಮ್ಮೆ ಮೂರ್ನಾಲ್ಕು ಸರಿ ಮಾಡುವುದರಿಂದ ಈ ಒಂದು ಸಮಸ್ಯೆ ದೂರವಾಗುತ್ತದೆ .

ಮೆಂತೆಕಾಳುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಮಾರನೇ ದಿವಸ ಅದನ್ನು ಪೇಸ್ಟ್ ಮಾಡಿ ನಿಂಬೆ ರಸದೊಂದಿಗೆ ತಲೆಗೆ ಲೇಪಿಸಿಕೊಂಡರೆ ಈ ಸಮಸ್ಯೆ ದೂರವಾಗುತ್ತದೆ ಮತ್ತು ಸ್ನೇಹಿತರೇ ಈರುಳ್ಳಿಯನ್ನು ಪೇಸ್ಟ್ ಮಾಡಿ ಕೂದಲಿಗೆ ಹಚ್ಚುವುದರಿಂದ ಕೂಡ ಈ ಸಮಸ್ಯೆಯಿಂದ ದೂರ ಉಳಿಯಬಹುದು ಮತ್ತು ಈರುಳ್ಳಿಯನ್ನು ಲಿಂಬೆ ರಸದೊಂದಿಗೆ ಪೇಸ್ಟ್ ಮಾಡಿ ಕೂದಲಿಗೆ ಹಚ್ಚುವುದರಿಂದ ಹೇನಿನ ಸಮಸ್ಯೆ ದೂರವಾಗುತ್ತದೆ . ಸೀತಾಫಲ ಹಣ್ಣಿನ ಬೀಜಗಳನ್ನು ಪುಡಿ ಮಾಡಿ ಅದಕ್ಕೆ ಲಿಂಬೆ ರಸವನ್ನು ಬೆರೆಸಿ ತಲೆಗೆ ಹಚ್ಚುವುದರಿಂದ ಈ ಒಂದು ಸಮಸ್ಯೆ ದೂರವಾಗುತ್ತದೆ ಮತ್ತು ಬಾದಾಮಿ ಬೀಜಗಳನ್ನು ನೆನೆಸಿಟ್ಟು ಅದನ್ನು ಪೇಸ್ಟ್ ಮಾಡಿ ಅದಕ್ಕೆ ಲಿಂಬೆ ರಸವನ್ನು ಬೆರೆಸಿ ಹಚ್ಚುವುದರಿಂದ ಕೂಡಾ ಈ ಒಂದು ಸಮಸ್ಯೆ ದೂರವಾಗುತ್ತದೆ.

ಮತ್ತು ಬೇವಿನ ಸೊಪ್ಪಿನ ಪೇಸ್ಟ್ ಅನ್ನು ಹಚ್ಚಿಕೊಂಡು ಸ್ವಲ್ಪ ಸಮಯದವರೆಗೂ ಬಿಟ್ಟು ಆ ನಂತರ ಸ್ನಾನ ಮಾಡುವುದರಿಂದ ಕೂಡ ಈ ಸಮಸ್ಯೆ ದೂರವಾಗುತ್ತದೆ ಮತ್ತು ಸ್ನೇಹಿತರೇ ಜೀರಿಗೆಯನ್ನು ಪುಡಿ ಮಾಡಿ ಹೇನುಗಳು ಇರುವ ಜಾಗದಲ್ಲಿ ಹಚ್ಚೋದರಿಂದ ಈ ಸಮಸ್ಯೆ ಪರಿಹಾರವಾಗುತ್ತದೆ ಮತ್ತು ಆಲಿವ್ ಎಣ್ಣೆಯನ್ನು ರಾತ್ರಿ ತಲೆಗೆ ಹಚ್ಚಿಕೊಂಡು ಬೆಳಿಗ್ಗೆ ಸ್ನಾನ ಮಾಡುವುದರಿಂದ ಕೂಡ ಹೇನಿನ ಸಮಸ್ಯೆ ದೂರವಾಗುತ್ತದೆ . ಈ ಒಂದು ಹೇನುಗಳು ಒಂದು ಸಲಕ್ಕೆ ಸುಮಾರು ಮುನ್ನೂರು ಮೊಟ್ಟೆಗಳನ್ನು ಇಡುತ್ತದೆ ಯಂತೆ ಮತ್ತು ತಿಂಗಳಿಗೆ ಸುಮಾರು ಹನ್ನೆರಡು ಸಂತತಿಯನ್ನು ಬೆಳೆಸುತ್ತದೆ ಈ ಒಂದು ಹೇನುಗಳು ಆದ್ದರಿಂದ ಸ್ನೇಹಿತರೇ ಹೇನುಗಳು ಆದಲ್ಲಿ ಆದಷ್ಟು ಬೇಗ ಈ ಒಂದು ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಿ ಇಲ್ಲವಾದರೆ ಇದು ಬೇರೆ ಒಂದು ಸಮಸ್ಯೆಗೆ ದಾರಿ ಮಾಡಿಕೊಡುತ್ತದೆ .

Leave a Reply