Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಹೀಗೆ ಶುಂಠಿ ಕಷಾಯ ಹಸಿ ಶುಂಠಿ ಕಷಾಯ ಮಾಡಿ ಅದು ನೆಗಡಿ ಕೆಮ್ಮು,ಶೀತಕ್ಕೆ ಮನೆ ಮದ್ದು ಆಗುತ್ತದೆ ..!

ಶುಂಠಿ ಕಷಾಯ ಎಷ್ಟೋ ಮಂದಿ ಶುಂಠಿ ಕಷಾಯ ಕುಡಿಯುವುದಕ್ಕೆ ಅಂತಲ್ಲ ಯಾವುದೇ ಕಷಾಯವನ್ನು ಕುಡಿಯಲು ಇಷ್ಟ ಪಡುವುದಿಲ್ಲಾ. ಆದರೆ ಇಂದಿನ ಮಾಹಿತಿಯಲ್ಲಿ ಈ ಪರಿಹಾರದಲ್ಲಿ ತಿಳಿಸುವ ಈ ಒಂದು ಕಷಾಯವನ್ನು ಮಾಡಿ ನೀಡಿದರೆ ಯಾರೂ ಬೇಕಾದರೂ ಕುಡಿಯುತ್ತಾರೆ ಮತ್ತು ಮನಸ್ಸಿಗೆ ಒಳ್ಳೆಯ ವಿಶ್ರಾಂತಿಯನ್ನು ನೀಡುವ ಈ ಶುಂಠಿ ಕಷಾಯ ಎಷ್ಟೊಂದು ಲಾಭವನ್ನು ನೀಡುತ್ತದೆ.

ಆರೋಗ್ಯಕರ ಲಾಭದ ಜೊತೆಗೆ ಮಾನಸಿಕ ಒತ್ತಡತೆ ಅನ್ನು ಕೂಡ ದೂರ ಮಾಡುವ ಈ ಶುಂಠಿ ಕಷಾಯವನ್ನು ಮಾಡುವ ವಿಧಾನವನ್ನು ನಿಮಗೆ ತಿಳಿಸಿಕೊಡುತ್ತೇವೆ. ಈ ರೀತಿಯಲ್ಲಿ ನೀವು ಶುಂಠಿ ಕಷಾಯವನ್ನು ಮಾಡಿ ಕುಡಿದಿದ್ದೆ ಆದಲ್ಲಿ ಪ್ರತಿ ದಿನ ಈ ಕಷಾಯವನ್ನು ಕುಡಿಯಲು ಇಷ್ಟಪಡ್ತೀರಾ, ಅಷ್ಟು ರುಚಿಯಾಗಿರುತ್ತದೆ ಈ ಶುಂಠಿ ಕಷಾಯ.

ಹಾಗಾದರೆ ಇದನ್ನು ಮಾಡುವ ವಿಧಾನವನ್ನು ತಿಳಿಯೋಣ ಇದರ ಜೊತೆಗೆ ಶುಂಠಿ ಕಷಾಯವನ್ನು ಕುಡಿಯುವುದರಿಂದ ನಮಗೆ ಆಗುವ ಲಾಭಗಳನ್ನು ಕುರಿತು ಕೂಡ ಹೆಚ್ಚಿನ ವಿವರಗಳನ್ನು ತಿಳಿಯೋಣ. ಈ ಉಪಯುಕ್ತ ಮಾಹಿತಿ ಅನ್ನು ನೀವು ಕೂಡ ತಿಳಿದು ಪ್ರತಿಯೊಬ್ಬರಿಗೂ ಶೇರ್ ಮಾಡಿ. ಯಾಕೆ ಅಂದರೆ ಇತ್ತೀಚಿನ ವಾತಾವರಣ ನಾವು ಗಮನಿಸುತ್ತಲೆ ಇದ್ದೇವೆ ಈ ಸಂದರ್ಭದಲ್ಲಿ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿಕೊಳ್ಳುವುದಕ್ಕೆ ನಾವು ಹೆಚ್ಚು ಪ್ರಾಧಾನ್ಯತೆಯನ್ನು ನೀಡಬೇಕು. ಹಾಗಂತ ಈ ಕಷಾಯವನ್ನು ಪ್ರತಿ ದಿನ ಕುಡಿಯ ಬೇಕು ಅಂತ ಅಲ್ಲಾ. ಯಾಕೆಂದರೆ ನಾವು ಯಾವ ಕಷಯವನ್ನೇ ಆಗಲಿ ಪ್ರತಿದಿನ ಸೇವಿಸುವುದರಿಂದ ಅದು ಆರೋಗ್ಯಕ್ಕೆ ಉತ್ತಮವಾಗಿರುವುದಿಲ್ಲಾ.

ಆದ ಕಾರಣ ನಾವು ಈ ರೀತಿಯ ಕಷಾಯವನ್ನು ವಾರಕ್ಕೆ ಒಮ್ಮೆ ಮಾಡಿಕೊಂಡು ಕುಡಿಯುತ್ತಾ ಬಂದರೆ ಸಾಕು ನಾವು ಆರೋಗ್ಯದಿಂದ ಇರಬಹುದು. ಈ ಶುಂಠಿ ಕಷಾಯಕ್ಕೆ ನಮಗೆ ಬೇಕಾಗಿರುವುದು ಒಂದು ಕಪ್ ಹಾಲು ಎರಡು ಕಪ್ ನೀರು ಮತ್ತು ಎರಡು ಇಂಚು ಶುಂಠಿ ಮತ್ತು ಬೆಲ್ಲ. ಮೊದಲಿಗೆ ಶುಂಠಿಯನ್ನು ನಾವು ಜಜ್ಜಿಕೊಳ್ಳಬೇಕು ಇದೀಗ ನೀರನ್ನು ಕುದಿಯಲು ಇಟ್ಟು ಈ ನೀರು ಕುದಿಯುವಾಗ ಇದಕ್ಕೆ ಶುಂಠಿಯನ್ನು ಹಾಕಬೇಕು ನಂತರ ಪುಡಿ ಮಾಡಿದ ಬೆಲ್ಲವನ್ನೂ ನೀರಿಗೆ ಹಾಕಿ ನೀರನ್ನು ಕುದಿಸಬೇಕು ನೀರು ಕುದಿಯುವಾಗ, ಇದಕ್ಕೆ ಹಾಲನ್ನು ಹಾಕಿ ಮತ್ತೊಮ್ಮೆ ಈ ಎಲ್ಲ ಮಿಶ್ರಣವನ್ನು ಚೆನ್ನಾಗಿ ಕುದಿಸಬೇಕು.

ಇದೀಗ ಕಷಾಯ ತಯಾರಾಗಿದೆ ಇದನ್ನು ಶೋಧಿಸಿ ಕುಡಿಯಿರಿ ನೀವು ಟಿ ಲೋಟದಷ್ಟು ಮಾತ್ರ ಈ ಕಷಾಯವನ್ನು ಸೇವಿಸಿ ಗಂಟಲಿಗೂ ಹಿತ ಮತ್ತು ತಲೆನೋವಿನ ಸಮಸ್ಯೆ ಕಡಿಮೆಯಾಗುತ್ತದೆ ಸುಸ್ತು ನಿಶಕ್ತಿ ಆಗಿದ್ದರೆ ಅದು ಕೂಡ ಪರಿಹಾರ ಆಗುತ್ತದೆ. ಈ ಕಷಾಯದಿಂದ ಇನ್ನೂ ನೀವೇನಾದರೂ ಅಜೀರ್ಣತೆಯಿಂದ ಬಳಲುತ್ತಾ ಇದು ಹೊಟ್ಟೆ ಉಬ್ಬರವಾಗಿ ಇದ್ದರೆ ಅದನ್ನು ಪರಿಹರಿಸುವ ಸಾಮರ್ಥ್ಯ ಈ ಶುಂಠಿ ಕಷಾಯಕ್ಕೆ ಇದೆ. ಈ ರೀತಿಯ ಕಷಾಯವನ್ನು ಯಾರು ಬೇಕಾದರೂ ಕುಡಿಯಲು ಇಷ್ಟಪಡುತ್ತಾರೆ ಯಾಕೆಂದರೆ ಗಂಟಲಿಗೆ ಹಿತವನು ನೀಡುವ ಸಿಹಿ ರುಚಿಯಾಗಿರುವ ಈ ಕಷಾಯವನ್ನು ಕುಡಿಯುವುದಕ್ಕೆ ತುಂಬ ರುಚಿಯಾಗಿರುತ್ತದೆ.

ಆದಕಾರಣ ಈ ರೀತಿಯ ಕಷಾಯವನ್ನು ನೀವು ವಾರಕ್ಕೆ ಒಮ್ಮೆ ಮಾಡಿ ಕುಡಿಯಿರಿ ರೋಗ ನಿರೋಧಕ ಶಕ್ತಿಯೊಂದಿಗೆ ಇನ್ನೂ ಅನೇಕ ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳಬಹುದು ಇದರ ಜೊತೆಗೆ ಕ್ಯಾನ್ಸರ್ ನಂತಹ ಮಹಾಮಾರಿ ಕಾಯಿಲೆ ಕೂಡ ನಮ್ಮ ಬಳಿ ಸುಳಿಯುವುದಿಲ್ಲ.