ಹುಡುಗನಿಗೆ ಅಕಸ್ಮಾತಾಗಿ ಐದು ಲಕ್ಷದ ಚೆಕ್ಕು ಸಿಕ್ಕಾಗ ಏನು ಮಾಡಿದ ಗೊತ್ತಾ… ಇದು ಒಂದು ಸತ್ಯ ಘಟನೆ ಪ್ರತಿಯೊಬ್ಬರೂ ಓದಲೇಬೇಕಾದ…

64

ಸ್ನೇಹಿತರೆ ನಾವು ಇವತ್ತು ನಿಮಗೆ ಹೇಳಲು ಕೊಟ್ಟಿರುವಂತಹ ಒಂದು ಕಥೆ ಇದು ಕಟ್ಟು ಕಥೆಯಲ್ಲ ಒಂದು ನಿಜವಾದ ಘಟನೆ. ದುಡ್ಡು ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ ಯಾರಾದರೂ ದುಡ್ಡು ಕೊಡ್ತಾರೆ ಎಂದರೆ ಅದರ ಹಿಂದೆ ಹೋಗುವಂತಹ ಜನರು ಜಾಸ್ತಿ..ಇವತ್ತು ಯಾವ ವ್ಯಕ್ತಿ ಎಷ್ಟು ಕೆಟ್ಟಕೆಲಸ ಮಾಡಿದರೂ ಕೂಡ ಅವನ ಹತ್ತಿರ ಹಣ ಇದ್ದರೆ ಅವನಿಗೆ ಗೌರವನ್ನು ಕೊಡುವಂತಹ ಸಮಾಜ ನಮ್ಮದು.. ಆದರೆ ಆದರೆ ನಮ್ಮ ಸಮಾಜದಲ್ಲಿ ನಿಯತ್ತಾಗಿ ಯಾರ ಹಂಗಲ್ಲ ಬದುಕದೆ ಹಾಗೂ ಯಾರ ಜೇಬಿಗೂ ಕೈ ಹಾಕದೆ ತನ್ನ ಕಷ್ಟದಿಂದ ಬದುಕುವಂತಹ ಜನರಿಗೆ ಅಷ್ಟೊಂದು ಗೌರವ ಸಿಗುವುದಿಲ್ಲ..

ಇವತ್ತು ನಾವು ಹೇಳುವಂತಹ ಒಂದು ವಿಚಾರ ಏನಪ್ಪಾ ಅಂದರೆ ಇಲ್ಲಿ ಹುಡುಗ ತನ್ನಲ್ಲಿ ಇರುವಂತಹ ಒಂದು ನ್ಯಾಯದ ಮನಸ್ಸಿನಿಂದ ಬೇರೆಯವರಿಗೆ ಹೆಲ್ಪ ಮಾಡಿದಂತಹ ಒಂದು ಸತ್ಯ ಘಟನೆ ಮಂಡ್ಯ ಜಿಲ್ಲೆಯ ಕೆರೆಗೋಡು ಎನ್ನುವಂತಹ ಒಂದು ಹಳ್ಳಿಯಲ್ಲಿ ವಾಸ ಮಾಡುತ್ತಿರುವಂತಹ ಈ ಹುಡುಗ ಮಧ್ಯಾಹ್ನ ಊಟ ಮಾಡಿ ರೋಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದ,

ಹೀಗೆ ರೋಡಿನಲ್ಲಿ ಹೋಗುತ್ತಿರುವ ಅಂತಹ ಸಂದರ್ಭದಲ್ಲಿ ಅವನಿಗೆ ಐದು ಲಕ್ಷ ರೂಪಾಯಿ ಮೌಲ್ಯದ ಒಂದು ಚೆಕ್ಕು ಅವನಿಗೆ ದೊರಕುತ್ತದೆ.ಸರ್ವೇಸಾಮಾನ್ಯವಾಗಿ ಕಾಲಿ ಚೆಕ್ಕು ಯಾರು ಬೇಕಾದರೂ ಬ್ಯಾಂಕ್ನಿಂದ ಹಣವನ್ನು ಡ್ರಾ ಮಾಡಿಕೊಳ್ಳಬಹುದು ಆದರೆ ಈ ಹುಡುಗ, ಹೇಗಾದರೂ ಮಾಡಿ ಐದು ಲಕ್ಷ ಮೌಲ್ಯ ಹೊಂದಿರುವಂತಹ ಚೆಕ್ ಅನ್ನು ಅದರ ಮಾಲೀಕರಿಗೆ ಹಿಂದಿರುಗಿಸಬೇಕು ಎನ್ನುವಂತಹ ಒಂದು ವಿಚಾರವನ್ನ ಮಾಡುತ್ತಾನೆ..

ಹೀಗೆ ಯಾರದ್ದು ಎನ್ನುವಂತಹ ವಿಚಾರ ಅವನಿಗೆ ಕಂಡುಬರುವುದಿಲ್ಲ ಅದಕ್ಕಾಗಿ ಅವನು ಸಾಮಾಜಿಕ ತಾಣದಲ್ಲಿ ಒಂದು ವಿಡಿಯೋವನ್ನು ಮಾಡುತ್ತಾನೆ ಹೀಗೆ ವಿಡಿಯೋ ಮಾಡುವಂತಹ ಸಂದರ್ಭದಲ್ಲಿ ನನಗೆ ಒಂದು ರೋಡಿನಲ್ಲಿ ಚೆಕ್ಕು ಸಿಕ್ಕಿದೆ,ಇದನ್ನ ಪ್ರತಿಯೊಬ್ಬರಿಗೂ ಶೇರ್ ಮಾಡಿ ಯಾರಾದರೂ ಸಿಕ್ಕರೆ ಅವರನ್ನ ದಯವಿಟ್ಟು ನನ್ನನ್ನು ಕಾಂಟಾಕ್ಟ್ ಮಾಡುವುದಕ್ಕೆ ಹೇಳಿ ನಾನು ಅದನ್ನು ವರ್ಗಾಯಿಸುತ್ತೇವೆ ಎನ್ನುವಂತಹ ಮಾತನ್ನು ತನ್ನ ವಿಡಿಯೋ ಮುಖಾಂತರ ಹೇಳುತ್ತಾನೆ…

ಈ ವಿಡಿಯೋ ಸಾಮಾಜಿಕ ತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತದೆ ಈ ವಿಡಿಯೋವನ್ನು ನೋಡಿದಂತಹ ಜನರು ಸುಳ್ಳು ಹೇಳುತ್ತಾ ನನ್ನ ಚೆಕ್ಕು ಎನ್ನುವಂತಹ ವಿಚಾರವನ್ನು ಹೇಳುತ್ತಾ ಅವನಿಗೆ ದಿನನಿತ್ಯ ಸಾಕಷ್ಟು ಕರೆಗಳು ಬರುವುದಕ್ಕೆ ಶುರುವಾಗುತ್ತವೆ.. ಇದರಿಂದ ರೋಸಿಹೋದ ಅಂತಹ ಹುಡುಗ ಏನು ಮಾಡಬೇಕು ಎನ್ನುವಂತಹ ಒಂದು ಸಂಕಷ್ಟದ ಸ್ಥಿತಿಯಲ್ಲಿ ಇರುತ್ತಾನೆ ಕೆಲವೊಬ್ಬರು ಕುಡಿದ ಅಮಲಿನಲ್ಲಿ ಇದು ನನಗೆ ಬೇಕು ಎನ್ನುವಂತಹ ಕರೆಯನ್ನು ಕೂಡ ಮಾಡಿದ್ದರಂತೆ…

ಒಂದು ದಿನ ನಿಜವಾದ ಓನರ್ ಇಂದ ಇವನಿಗೆ ಕಾಲ ಬರುತ್ತದೆ ಆದರೆ ಇವನಿಗೆ ಪ್ರತಿದಿನ ಕಾಟ ಕೊಡುತ್ತಿರುವ ಅಂತಹ ಜನರಿಂದಾಗಿ ಯಾರು ನಿಜವಾದ ಓನರ್ ಅನ್ನುವಂತಹ ವಿಚಾರವೂ ಕೂಡ ಗೊತ್ತಾಗುವುದಿಲ್ಲ, ಒಂದು ದಿನ ಅಲ್ಲಿನ ಸ್ಥಳೀಯ ಪೊಲೀಸರ ಆದಂತಹ ಟಿಎಸಿ ಅವರು ಇವರಿಗೆ ಕಾಲ್ ಮಾಡುತ್ತಾರೆ ಹೀಗೆ ಮಾಡುತ್ತಿರುವ ಸಂದರ್ಭದಲ್ಲಿ ಪೊಲೀಸರು ಕೂಡ ನಂಬುವುದಿಲ್ಲ ನೀವೇನಾದರೂ ಈ ಹಣವನ್ನು ತೆಗೆದುಕೊಳ್ಳಬೇಕು ಎಂದರೆ ನೀವು ಆಧಾರ್ ಕಾರ್ಡ್ ಹಾಗೂ ಸಂಪೂರ್ಣವಾದ ವಿಳಾಸದೊಂದಿಗೆ ಪೋಲೀಸ್ ಸ್ಟೇಷನ್ನಿಗೆ ಬನ್ನಿ ಅಲ್ಲಿ ನಾನು ಚೆಕ್ಕನ್ನು ನಿಮ್ಮ ಕೈಗೆ ಕೊಡುತ್ತೇನೆ ಎನ್ನುವಂತಹ ಮಾತನ್ನು ಹೇಳುತ್ತಾನೆ…

ಇದರಿಂದ ತುಂಬಾ ಖುಷಿಯಾದ ಅಂತಹ ಪೊಲೀಸರು ನಾಳೆ ಇದರ ಜನರು ಬರುತ್ತಾರೆ ಸಂಪೂರ್ಣವಾಗಿ ವಿವರಗಳನ್ನು ಪರಿಶೀಲಿಸಿಕೊಂಡು ಅವರಿಗೆ ಕೊಡ ಬಹುದು ಎನ್ನುವಂತಹ ಮಾತನ್ನು ಹೇಳುತ್ತಾರೆ. ಹೀಗೆ ಚೆಕ್ಕನ್ನು ವರ್ಗಾಯಿಸುತ್ತಾ ನಿಜವಾದ ಹೋದರು ಅವರ ಮನೆಗೆ ಕರೆದುಕೊಂಡು ಹೋಗಿ ಊಟವನ್ನ ಹಾಕಿಸಿ ಒಂದು ಜೊತೆ ಬಟ್ಟೆ ಯನ್ನು ಕೂಡ ಕೊಡುತ್ತಾರೆ.

ಯುವಕರ ಹೆಸರು ಶಿವು ಮಂಡ್ಯದ ಸುತ್ತಮುತ್ತ ಫೋಟೋಗ್ರಾಫರ್ ಆಗಿದ್ದು ಮದುವೆಯ ಸಂದರ್ಭದಲ್ಲಿ ವೆಡ್ಡಿಂಗ್ ವಿಡಿಯೋವನ್ನು ಮಾಡುತ್ತಾ ತನ್ನ ಜೀವನವನ್ನು ನಡೆಸು ತ್ತಿರುವ ಅಂತಹ ಒಬ್ಬ ಪ್ರಾಮಾಣಿಕ ವ್ಯಕ್ತಿ. ನಿಜವಾಗಲೂ ಈ ರೀತಿಯಾದಂತಹ ವ್ಯಕ್ತಿಗಳಿಂದಲೇ ಅಲ್ಪಸ್ವಲ್ಪ ಮಳೆಗಾಲ ಹಾಗೂ ಬೆಳೆಗಳು ಹುಟ್ಟುತ್ತಿರುವುದು.. ಯಜಮಾನರಿಗೆ ಒಂದು ಸಲಾಂ ಹೇಳಲೇಬೇಕು ಇವರು ಮಾಡುತ್ತಿರುವಂತಹ ಈ ಕೆಲಸ ನಿಜವಾಗಲೂ ಒಂದಲ್ಲ ಒಂದು ದಿನ ಆ ಹುಡುಗನನ್ನ ಒಂದು ದೊಡ್ಡ ಮಟ್ಟಕ್ಕೆ ಕರೆದುಕೊಂಡು ಹೋಗಲು ಸಹಾಯವಾಗುತ್ತದೆ..