Categories
ಭಕ್ತಿ ಮಾಹಿತಿ ಸಂಗ್ರಹ

ಹುಲಿಯ ಉಗುರನ್ನು ಯಾಕೆ ಧರಿಸುತ್ತಾರೆ ಗೊತ್ತಾ… ! ಧರಿಸಿದರೆ ಆಗುವ ಲಾಭಗಳು ಏನು ..! ಯಾರು ಯಾರು ಇದನ್ನು ಧರಿಸಬೇಕು..!!

ನಮಸ್ಕಾರ ಪ್ರಿಯ ವೀಕ್ಷಕರೆ ಇವತ್ತಿನ ಮಾಹಿತಿಯಲ್ಲಿ ನಾನು ನಿಮಗೆ ಹೇಳುತ್ತಿರುವಂತಹ ಒಂದು ವಿಚಾರ ಏನು ಅಂದರೆ, ಹುಲಿಯ ಉಗುರು ಇದನ್ನು ನೀವು ಕೇಳಿರುತ್ತೀರ ಅಲ್ವಾ ಹಾಗೆ ಈ ಹುಲಿಯ ಉಗುರನ್ನು ನೀವು ನೋಡಿರುತ್ತೀರಾ. ಈ ಹುಲಿ ಅಂದ ಕೂಡಲೆ ನಮಗೆ ಒಂದು ಗಂಭೀರವಾದ ಒಂದು ನಡುಗೆ ಗಂಭೀರ ಮೈಕಟ್ಟು ಉಳ್ಳ ಒಂದು ಪ್ರಾಣಿ ನಮಗೆ ಆಲೋಚನೆಗೆ ಬರುತ್ತದೆ. ಹೌದು ಹುಲಿಯ ಉಗುರು ಅಂದರೆ ಅದೊಂದು ಶಕ್ತಿಯ ಸಂಕೇತವಾಗಿರುತ್ತದೆ. ಈ ಹುಲಿಯ ಉಗುರನ್ನು ಹಿಂದಿನ ದಿನಗಳಲ್ಲಿ ಯಾರೂ ಹಾಕಿಕೊಳ್ಳುತ್ತಿದ್ದರು ಅಂದರೆ, ಶಕ್ತಿಶಾಲಿ ಮಂದಿ ಶಕ್ತಿಶಾಲಿ ವ್ಯಕ್ತಿ ಮತ್ತು ಬಲಾಢ್ಯವಾದ ವ್ಯಕ್ತಿ ಹಾಕಿಕೊಳ್ಳುತ್ತಾ ಇದ್ದರೂ.

ಹುಲಿ ಅಂದರೆ ಆ ಒಂದು ಪ್ರಾಣಿ ಶಕ್ತಿಗೆ ಸಂಕೇತವಾಗಿರುತ್ತದೆ. ಈ ಹುಲಿಯ ಉಗುರನ್ನು ಧರಿಸುವಂಥ ವ್ಯಕ್ತಿಗಳು ಕೂಡ ಅಷ್ಟೇ ಶಕ್ತಿಶಾಲಿಯಾಗಿ ಇರುತ್ತಿದ್ದರು ಅಂತಹ ಸಂಕೇತವನ್ನು ನೀಡುತ್ತದೆ ಈ ಹುಲಿಯ ಉಗುರು. ಆದರೆ ಇತ್ತೀಚಿನ ದಿನಗಳಲ್ಲಿ ಈ ಹುಲಿಯ ಉಗುರನ್ನು ಯಾರೆಂದರೆ ಅವರು ಧರಿಸುತ್ತಾರೆ ಆದರೆ ಹೆಚ್ಚಿನ ಮಂದಿ ಫ್ಯಾಷನ್ ಗಾಗಿ ಟ್ರೆಂಡ್ ಗಾಗಿ ತೋರಿಕೆಗಾಗಿ ಈ ಹುಲಿಯ ಉಗುರನ್ನು ಧರಿಸಿ ಕೇಳ್ತಾರೆ. ಆದರೆ ಇದರಿಂದ ಯಾವುದೆ ತರಹದ ಪ್ರಯೋಜನಗಳು ಇರುವುದಿಲ್ಲ. ಕೇವಲ ತೋರಿಕೆಗಾಗಿ ಮಾತ್ರ ಈ ಹುಲಿಯ ಉಗುರನ್ನು ಹಾಕಿಕೊಳ್ಳಬೇಕು ಅಷ್ಟೆ.

ಆದರೆ ಇಂದಿನ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತೇನೆ ಹುಲಿಯ ಉಗುರನ್ನು ಹಾಕಿಕೊಳ್ಳುವುದರಿಂದ ಆಗುವಂತಹ ಒಂದು ಲಾಭವನ್ನು ಕುರಿತು. ಈ ಹುಲಿಯ ಉಗುರನ್ನು ಯಾವುದೊ ನಕಲಿ ಉಗುರನ್ನು ಧರಿಸಿಕೊಳ್ಳುವುದು ಅಲ್ಲ. ಈ ಹುಲಿಯ ಉಗುರು ಸಾಮಾನ್ಯವಾಗಿ ಕಾಡು ಮಂದಿಯಲ್ಲಿ ಕಾಡುಗಳಲ್ಲಿ ದೇವಸ್ಥಾನವಿದ್ದರೆ ಆ ದೇವಸ್ಥಾನದ ಪುರೋಹಿತರ ಬಳಿ ದೊರೆಯುತ್ತಿತ್ತು. ಅದು ನಿಜವಾದ ಹುಲಿಯ ಉಗುರು ಆಗಿರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ಹುಲಿಯ ಉಗುರು ನಿಜವಾದದ್ದು ಸಿಗೋದು ಬಹಳ ಕಷ್ಟ ಸಾಧ್ಯ.

ನಿಮಗೆ ಒಂದು ಸತ್ಯವನ್ನು ಹೇಳಲೆಬೇಕು ಹಿಂದಿನ ಕಾಲದಲ್ಲಿ ರಾಜ ಮನೆತನದ ಒಡೆಯರು ರಾಜರು ಈ ಹುಲಿಯ ಉಗುರನ್ನು ಧರಿಸಿಕೊಳ್ಳುತ್ತಿದ್ದರು. ಯಾಕೆ ಅಂದರೆ ಅವರು ಹುಲಿ ಅನ್ನು ಬೇಟೆ ಆಡಿ ಆ ಹುಲಿಯನ್ನು ಸೋಲಿಸಿ ಅಥವ ಹುಲಿಯೊಂದಿಗೆ ಕಾಳಗ ಮಾಡಿ ಅವರ ಪೌರುಷವನ್ನು ಈ ರೀತಿ ವ್ಯಕ್ತಪಡಿಸುತ್ತಿದ್ದರು. ಆ ಹುಲಿಯನ್ನು ಸಾಯಿಸಿ ಅದರ ಒಂದು ಉಗುರನ್ನು ತಮ್ಮ ಕೊರಳಿಗೆ ಹಾಕಿಕೊಳ್ಳುತ್ತಿದ್ದರು, ಅಂತಹ ಒಂದು ಪೌರುಷವನ್ನು ತೋರುವ ಸಂಕೇತವಾಗಿ ಇರುತ್ತಿತ್ತು ಈ ಹುಲಿಯ ಉಗುರು.

ಇನ್ನು ಕೆಲವರು ಹೇಳ್ತಾರೆ ಈ ಹುಲಿ ಉಗುರನ್ನು ಸಿಂಹ ರಾಶಿಯಲ್ಲಿ ಜನಿಸಿದವರು ಅಥವಾ ಸಿಂಹ ನಕ್ಷತ್ರದಲ್ಲಿ ಜನಿಸಿದವರು ಮಾತ್ರ ಧರಿಸಬೇಕು ಅಂತ. ಆದರೆ ಈ ತಾಳೆಗರಿ ಶಾಸ್ತ್ರವು ತಿಳಿಸುತ್ತದೆ, ಈ ಹುಲಿಯ ಉಗುರನ್ನು ಯಾರು ಬೇಕಾದರೂ ಧರಿಸಬಹುದು ಆದರೆ ನಿಜವಾದ ಹುಲಿಯ ಉಗುರನ್ನು ಧರಿಸುವುದರಿಂದ ಅದರಿಂದ ಆಗುವ ಲಾಭಗಳು ಅಂದರೆ, ನಮ್ಮಲ್ಲಿ ಒಂದು ಸಕಾರಾತ್ಮಕತೆ ಹೆಚ್ಚುತ್ತದೆ ಮತ್ತು ನಮ್ಮಲ್ಲಿ ಒಂದು ಬಲವಾದ ಶಕ್ತಿ ಹೆಚ್ಚುತ್ತದೆ.. ನಮ್ಮಲ್ಲಿ ಧೈರ್ಯ ಹೆಚ್ಚುತ್ತದೆ ಅಷ್ಟೇ ಅಲ್ಲದೆ ಯಾವುದೇ ನಕಾರಾತ್ಮಕ ಶಕ್ತಿಯು ನಮ್ಮನ್ನು ಸೋಕುವುದಿಲ್ಲ.

ಈ ರೀತಿಯಾಗಿ ಹುಲಿಯ ಉಗುರನ್ನು ಹಾಕಿಕೊಳ್ಳುವುದರಿಂದ ನಮಗೆ ಅನೇಕ ಈ ರೀತಿಯ ಲಾಭಗಳು ದೊರೆಯುತ್ತದೆ. ಈ ಹುಲಿಯ ಉಗುರಿನ ಮಾಹಿತಿ ನಿಮಗೆ ಇಂಟ್ರೆಸ್ಟಿಂಗ್ ಅನ್ನಿಸಿದಲ್ಲಿ ತಪ್ಪದೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದ.