Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಹೆಣ್ಣುಮಕ್ಕಳೇ ನಿಮ್ಮ ತುಟ್ಟಿಗಳು ತೊಂಡೆಹಣ್ಣಿನ ಹಾಗೆ ಕೆಂಪಗೆ ಆಗಬೇಕಾ ..! ಹಾಗಾದರೆ ಹೀಗೆ ಮಾಡಿ ..!

ನಮ್ಮ ಹೆಣ್ಣುಮಕ್ಕಳಿಗೆ ಯಾರಿಗೆ ತಾನೆ ಇಷ್ಟ ಇರುವುದಿಲ್ಲ ಹೇಳಿ ಪಿಂಕ್ ಲಿಪ್ಸ್. ಈ ಪಿಂಕ್ ಲಿಪ್ಸ್ ಗೋಸ್ಕರವೇ ದುಬಾರಿ ಬೆಲೆಯ ಲಿಪ್ ಸ್ಟಿಕ್ ಗಳನ್ನು ಕೂಡ ಬಳಸುತ್ತಾರೆ. ಹಾಗಾದರೆ ನಾವು ಇಂದಿನ ಮಾಹಿತಿಯಲ್ಲಿ ನೈಸರ್ಗಿಕವಾದ ಲಿಪ್ ಕಲರ್ ಅನ್ನು ಹೊಂದುವುದು ಹೇಗೆ ಅಂತ ತಿಳಿಸುತ್ತೇವೆ. ನೀವು ಈ ವಿಧಾನವನ್ನು ಬಳಸುತ್ತಾ ಬಂದರೆ ನಿಮಗೆ ಕೇವಲ ಹದಿನೈದು ದಿನಗಳಲ್ಲಿಯೆ ಸುಂದರವಾದ ಪಿಂಕ್ ಲಿಪ್ಸ್ ನಿಮ್ಮದಾಗುತ್ತದೆ. ಇದನ್ನು ಪಡೆದುಕೊಳ್ಳುವುದಕ್ಕೆ ನಾವು ಏನು ಮಾಡಬೇಕು ಅಂತ ಹೇಳ್ತೇವೆ ಕೇಳಿ ಇಂದಿನ ಮಾಹಿತಿಯಲ್ಲಿ. ಸಂಪೂರ್ಣವಾಗಿ ಲೇಖನವನ್ನು ತಿಳಿಯಿರಿ ನೀವು ಕೂಡ ತಿಳಿದು ಬೇರೆಯವರಿಗು ಕೂಡ ಈ ಮಾಹಿತಿಯನ್ನು ಶೇರ್ ಮಾಡಿ.

ಹೌದು ಮೊದಲನೆಯದಾಗಿ ನಮ್ಮ ತುಟಿಗಳು ಕಪ್ಪಾಗುವ ಇದಕ್ಕೆ ಕಾರಣವನ್ನು ತಿಳಿಯೋಣ ಎಷ್ಟೋ ಮಂದಿ ಈ ಸಿಗರೇಟ್ ಸವಾಸ ಮಾಡಿರುತ್ತಾರೆ ಇನ್ನೂ ಕೆಲವರಿಗೆ ಟೀ ಕಾಫಿ ಕುಡಿದರೂ ಆಗುವುದಿಲ್ಲ ಮತ್ತು ಬಿಸಿಲಿಗೆ ಹೆಚ್ಚು ಸಮಯ ಹೋಗುವುದರಿಂದ ಬಿಸಿಲಿನಲ್ಲಿ ಹೆಚ್ಚು ಸಮಯ ಇರುವುದರಿಂದ ಕೂಡ ತುಟಿಗಳು ಕಪ್ಪಾಗುತ್ತದೆ ತುಟಿಗಳು ಕೂಡ ನಮ್ಮ ತ್ವಚೆಯ ಚರ್ಮದಂತೆ ತುಂಬಾ ಸೂಕ್ಷ್ಮವಾಗಿರುತ್ತದೆ. ಆದಕಾರಣ ನಾವು ನಮ್ಮ ಚರ್ಮಕ್ಕೆ ಎಷ್ಟು ಪೋಷಣೆಯನ್ನು ಮಾಡ್ತೇವೆ ಎಷ್ಟು ಹಾರೈಕೆ ಅನ್ನೋ ಮಾಡ್ತೇವೆ ಅದೇ ರೀತಿಯಲ್ಲಿ ನಮ್ಮ ತುಟಿಗಳಿಗೂ ಕೂಡ ಮಾಡಬೇಕು ತುಟಿಗಳ ಚರ್ಮ ಕೂಡ ತುಂಬಾ ಸೂಕ್ಷ್ಮವಾಗಿರುತ್ತದೆ.

ತುಟಿಗಳು ಕೆಂಪಗೆ ಆಗುವುದಕ್ಕೆ ಈ 1ವಿಧಾನವನ್ನು ಪಾಲಿಸಿ ಇದಕ್ಕಾಗಿ ನೀವು 1ಸೀರಮ್ ಮಾಡಬೇಕೋ ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಹೇಗಿರುತ್ತದೆ ಸಕ್ಕರೆ ಗುಲಾಬಿ ಹೂವಿನ ದಳಗಳು ಮತ್ತು ನಿಂಬೆಹಣ್ಣಿನ ರಸ. ನಿಮಗೆ ನಿಂಬೆಹಣ್ಣಿನ ರಸ ಆಗುವುದಿಲ್ಲ ಅನ್ನೋರು ರೋಸ್ ವಾಟರ್ ಅನ್ನು ಕೂಡ ಬಳಸಬಹುದು. ಇದೀಗ ಗುಲಾಬಿ ದಳಗಳನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಬೇಕು. ಇದು ಚೆನ್ನಾಗಿ ಪೇಸ್ಟ್ ಆದ ಬಳಿಕ ಇದಕ್ಕೆ ನಿಂಬೆ ಹಣ್ಣಿನ ರಸ ಮತ್ತು ಸಕ್ಕರೆಯನ್ನು ಪುಡಿ ಮಾಡಿ ಈ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ ಇದೀಗ ಸೀರಮ್ ತಯಾರಾಗಿದೆ ನೀವು ಇದನ್ನು ಹದಿನೈದು ದಿನಗಳ ಕಾಲ ಶೇಖರಣೆ ಮಾಡಿ ಇಡಬಹುದು.

ಪ್ರತಿದಿನ 2ಬಾರಿ ನಿಮ್ಮ ತುಟಿಗೆ ಲೇಪನ ಮಾಡಿ ಬೆಳಿಗ್ಗೆ 1ಬಾರಿ ಮತ್ತು ರಾತ್ರಿ ಮಲಗುವ ಮುನ್ನ 1ಬಾರಿ ಲೇಪನ ಮಾಡಿ ಮಲಗುವುದರಿಂದ ನಿಮಗೆ ಮೃದುವಾದ ಕೆಂಪು ತುಟಿಗಳು ನಿಮ್ಮದಾಗುತ್ತದೆ. ಇದರ ಜೊತೆಗೆ ನೀವು ವಾರಕ್ಕೆ ಒಮ್ಮೆ ತುಟಿಗಳಿಗೆ ಸ್ಕ್ರಬ್ ಮಾಡಿ ಕೊಬ್ಬರಿ ಎಣ್ಣೆ ಅಥವಾ ವಿಟಮಿನ್ ಇ ಕ್ಯಾಪ್ಸೂಲ್ ಅನ್ನು ತೆಗೆದುಕೊಂಡು ಅದನ್ನು ನೀವು ತುಟಿಗಳಿಗೆ ಲೇಪನ ಮಾಡಿ ಸ್ವಲ್ಪ ಸಮಯ ಸ್ಕ್ರಬ್ ಮಾಡುವುದರಿಂದ, ತುಟಿಗಳು ಮೃದುವಾಗಿ ಇರುತ್ತದೆ ಮತ್ತು ತುಟಿಯ ಮೇಲೆ ಇರುವ ಕಪ್ಪು ಕಲೆ ಕೂಡ ನಿವಾರಣೆಯಾಗುತ್ತದೆ.

ತುಟಿಗಳು ಕೆಂಪಗೆ ಆಯಿತು ಅಂತ ಅರ್ಧಕ್ಕೆ ಬಿಡಬೇಡಿ ಇದನ್ನು ನೀವು ಪ್ರತಿದಿನ ಪಾಲಿಸಬಹುದು ಮೃದುವಾದ ಕೆಂಪು ತುಟಿಗಳು ನಿಮ್ಮದಾಗುತ್ತವೆ ಇವತ್ತಿನ ಮಾಹಿತಿ ನಿಮಗೆ ಉಪಯುಕ್ತವಾಯಿತು ಅಂದಲ್ಲಿ ಮಾಹಿತಿಗೊಂದು ಲೈಕ್ ಮಾಡಿ ಶೇರ್ ಮಾಡಿ. ಉತ್ತಮ ಆರೋಗ್ಯಕ್ಕಾಗಿ ಆರೋಗ್ಯಕರ ತ್ವಚೆಗಾಗಿ ತಪ್ಪದೆ ಪ್ರತಿದಿನ ಹೆಚ್ಚು ನೀರನ್ನು ಸೇರಿಸಿ ಎಲ್ಲರಿಗೂ ಶುಭವಾಗಲಿ ಧನ್ಯವಾದ.