Ad
Home ಎಲ್ಲ ನ್ಯೂಸ್ ಅಪ್ಪು ಅವರ ಅನ್ನಧಾನ ಕಾರ್ಯಕ್ಕೆ ಖರ್ಚಾಗಿದ್ದು ಎಷ್ಟು ಕೋಟಿ ಕೋಟಿ ಗೊತ್ತ ...

ಅಪ್ಪು ಅವರ ಅನ್ನಧಾನ ಕಾರ್ಯಕ್ಕೆ ಖರ್ಚಾಗಿದ್ದು ಎಷ್ಟು ಕೋಟಿ ಕೋಟಿ ಗೊತ್ತ …! ಇದು ಕಣ್ರೀ ಅಭಿಮಾನಿಗಳ ಮೇಲೆ ಇರೋ ಪ್ರೀತಿ ಅಂದ್ರೆ

ಹೌದು ಯಾವತ್ತಿದ್ದರೂ ದೊಡ್ಮನೆ ಅವರು ದೊಡ್ಮನೆ ಅವರೇ ಅಂತ ಸಾಕಷ್ಟು ವಿಚಾರಗಳಲ್ಲಿ ಈಗಾಗಲೇ ನಮಗೆ ತಿಳಿದುಬಂದಿದೆ ಅದರಂತೆ ಇದೀಗ ದೊಡ್ಮನೆ ಅವರು ಮಾಡಿರುವ ಕೆಲಸ ನೋಡಿ ನಿಮಗೂ ಕೂಡ ಶಾಕ್ ಆಗಬಹುದು. ಹೌದು ಪುನೀತ್ ಅವರ ಅಗಲಿಕೆಯಿಂದ ದೊಡ್ಮನೆ ಅವರು ಸೋತು ಹೋಗಿದ್ದಾರೆ ಹೌದು ನುಂಗಲಾರದ ನೋವು ಯಾವ ಅಣ್ಣನಿಗೂ ಇಂತಹ ಸ್ಥಿತಿ ಬರಬಾರದು ಅನಿಸುತ್ತದೆ. ಇನ್ನು ಆ ಪುಟ್ಟ ಕಂದಮ್ಮಗಳ ಮುಖ ನೋಡಿದರೆ ಅಪ್ಪನನ್ನು ಕಳೆದುಕೊಂಡಿರುವ ನೋವು ಅವರಲ್ಲಿ ಎತ್ತಿ ಕಾಣುತ್ತದೆ ಇನ್ನು ಮೊದಲೇ ದೊಡ್ಮನೆಯವರು ಇವರು ಅಭಿಮಾನಿಗಳ ಮುಂದೆ ಕಣ್ಣೀರು ಇಟ್ಟರೆ ಅಭಿಮಾನಿಗಳ ಮನಸ್ಸಿಗೆ ಇನ್ನಷ್ಟು ನೋವಾಗುತ್ತದೆ ಎಂದು ತಮ್ಮ ನೋವನ್ನು ನುಂಗಿ ಅಭಿಮಾನಿಗಳಿಗೆ ನೋವಾಗಬಾರದೆಂದು ಅಭಿಮಾನಿಗಳಿಗೆ ಸಾಂತ್ವನ ಹೇಳಿರುವವರು.

ಇನ್ನು ದೊಡ್ಮನೆ ಅವರಿಗೆ ಅವರ ದೊಡ್ಡ ಬಲವನ್ನೇ ಕಳೆದುಕೊಂಡಂತೆ ಆಗಿದೆ. ಹೌದು ದೊಡ್ಮನೆ ಅಂದರೆ ದೊಡ್ಮನೆ ಅವರ ಅಪ್ಪು ಅವರನ್ನ ಕಾಣಲಿಕ್ಕೆ ಸುಮಾರು ಇಪ್ಪತ್ತೈದು ಲಕ್ಷ ಮಂದಿ ಕಂಠೀರವ ಸ್ಟುಡಿಯೋಗೆ ಬಂದಿದ್ದರು ಹಾಗೂ ಇವರನ್ನೆಲ್ಲ ಸಂಭಾಳಿಸಿದ ಪೊಲೀಸರಿಗೆ ಹಾಗೂ ಸರಕಾರಕ್ಕೆ ಇಂತಹ ನೋವಿನಲ್ಲಿಯೂ ದೊಡ್ಮನೆ ಸೊಸೆಯಾಗಿರುವ ಅಶ್ವಿನಿ ಅವರು ಪತ್ರ ಬರೆದು ಧನ್ಯವಾದಗಳನ್ನು ಸಹ ತಿಳಿಸಿದ್ದರು. ಅಪ್ಪು ಅವರಿಗೆ ಇಷ್ಟ ಎಂದು ಅವರ ಹನ್ನೊಂದನೇ ದಿನದ ಪುಣ್ಯತಿಥಿಯಂದು ವಿಷ್ಣು ಅಭಿಮಾನಿಗಳು ಅಪ್ಪು ಅವರಿಗೆ ಇಷ್ಟವಾದ ತಿಂಡಿಗಳನ್ನು ತಂದು ಅವರ ಸಮಾಧಿಯ ಬಳಿ ಇಟ್ಟು ಪೂಜಿಸಿ ಕೊಂಡು ಹೋಗಿದ್ದಾರೆ ಇನ್ನೂ ಎಷ್ಟೋ ಮಂದಿ ಪುನೀತ್ ಅವರ ಸಮಾಧಿಯ ಮುಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಅವರ ಆಶೀರ್ವಾದ ಪಡೆದು ಹೋಗಿದ್ದಾರೆ.

ದೊಡ್ಮನೆ ಕಾರ್ಯದಲ್ಲಿ ಹನ್ನೊಂದನೇ ದಿನದ ಪುಣ್ಯತಿಥಿ ಅಂದು ಆಪ್ತರಿಗೆ ಹಾಗೂ ಕುಟುಂಬದವರಿಗೆ ಅಪ್ಪು ಅವರ ನಿವಾಸದ ಬಳಿ ಊಟದ ವ್ಯವಸ್ಥೆಯನ್ನು ಮಾಡಿಸಲಾಗಿತ್ತು ಹಾಗೆ ಈ 11ನೇ ದಿನದಂದು ಸುಮಾರು 3000ಜನರಿಗೆ ಊಟದ ವ್ಯವಸ್ಥೆ ಅನ್ನೋ ಸಹ ಮಾಡಿಸಲಾಗಿತ್ತು. ಆ ನಂತರ ಅರಮನೆ ಮೈದಾನದಲ್ಲಿ ಯೂ ಸಹ ಹನ್ನೆರಡನೇ ದಿವಸದಂದು ಸುಮಾರು 30000ಜನರಿಗೆ ವೆಜ್ ಹಾಗೂ ನಾನ್ ವೆಜ್ ಊಟದ ವ್ಯವಸ್ಥೆ ಅನ್ನೋ ಮಾಡಿಸಲಾಗಿತ್ತು ಹೌದು ಬರುವ ಅಭಿಮಾನಿಗಳು ಸಸ್ಯಾಹಾರಿಗಳು ಹಾಗೂ ಮಾಂಸಾಹಾರಿಗಳು ಆಗಿದ್ದರೆ ಅವರಿಬ್ಬರಿಗೂ ಊಟದ ವ್ಯವಸ್ಥೆ ಅನುವು ಮಾಡಿಕೊಟ್ಟಿರುವ ದೊಡ್ಮನೆಯವರು ಈ 12ನೇ ದಿನದ ಅನ್ನ ಸಂತರ್ಪಣೆ ಅಲ್ಲಿ ಸುಮಾರು ಮೂವತ್ತು ಸಾವಿರಕ್ಕೂ ಅಧಿಕ ಮಂದಿ ಊಟ ಮಾಡಿ ಹೋಗಿದ್ದಾರೆ ಇದೆ ಅಲ್ವಾ ದೊಡ್ಮನೆ ಅವರ ದೊಡ್ಡ ಗುಣ ಅಂದರೆ ಹೌದು ಯಾರು ಕೂಡ ಇಲ್ಲಿಯವರೆಗೂ ಇಷ್ಟು ಜನ ಅಭಿಮಾನಿಗಳಿಗೆ ಊಟ ಕೊಟ್ಟಿರುವವರೆಲ್ಲ ಇದು ದೊಡ್ಮನೆಯವರು ದೊಡ್ಡ ಗುಣ ಅಂತಾನೇ ಹೇಳಬಹುದು.

ಮಾಂಸಾಹಾರಿಗಳಿಗೆ ನಾನ್ ವೆಜ್ ಊಟ ದಲ್ಲಿ ಸುಮಾರು 6ವಿಧದ ಖಾದ್ಯಗಳು ಇದ್ದವು ಹಾಗೂ ಸಸ್ಯಾಹಾರಿಗಳಿಗೆ ಸುಮಾರು ಮೂರ್ನಾಲ್ಕು ರೀತಿಯ ಪಲ್ಯಗಳು ಅನ್ನಸಾರು ಇನ್ನೂ ವಿಧ ವಿಧವಾದ ಖಾದ್ಯಗಳನ್ನು ಮಾಡಿಸಲಾಗಿತ್ತು ಸ್ವತಃ ಶಿವಣ್ಣ ಹಾಗೂ ಅಪ್ಪು ಅವರ ಪತ್ನಿ ಅಶ್ವಿನಿ ಅವರು ಸಹ ಕೆಲ ಅಭಿಮಾನಿಗಳಿಗೆ ಊಟವನ್ನು ಬಡಿಸಿದರು. ಇನ್ನೂ ಹಲವರಿಗೆ ಕುತೂಹಲ ಇರುವ ವಿಚಾರ ಏನು ಅಂದ್ರೆ ದೊಡ್ಮನೆ ಅವರು ಊಟಕ್ಕಾಗಿ ಅಂದರೆ 11ನೇ ದಿವಸ ಹಾಗೂ 12ನೇ ದಿವಸದಂದು ಅಭಿಮಾನಿಗಳಿಗೆ ಊಟವನ್ನು ಬಡಿಸಿರುವುದರ ಖರ್ಚು ಎಷ್ಟಾಗಿರಬಹುದು ಎಂದು ಹೌದು ಸುಮಾರು 3ಕೋಟಿ ರೂಪಾಯಿಗಳು ಖರ್ಚು ಆಗಿದೆ ಎಂಬ ವಿಚಾರ ಇದೀಗ ತಿಳಿದು ಬಂದಿದೆ.

ಹೌದು ಹಾಲ್ ಬಾಡಿಗೆ ಹಾಗೂ ಕ್ಯಾಂಟರ್ ಗಳ ಬಾಡಿಗೆ ಮತ್ತು ಊಟದ ಖರ್ಚು ಎಲ್ಲವೂ ಸೇರಿ ಸುಮಾರು 3ಕೋಟಿ₹ಖರ್ಚು ಆಗಿದೆ ಎಂಬ ವಿಚಾರ ಇದೀಗ ತಿಳಿದುಬಂದಿದ್ದು ದೊಡ್ಮನೆ ಅವರಿಗೆ ಈ ನೋವು ಸಹಿಸಿಕೊಳ್ಳುವ ಶಕ್ತಿ ದೇವರು ಆದಷ್ಟು ಬೇಗ ನೀಡಲಿ ಎಂದು ಆಶಿಸೋಣ ಹಾಗೂ ಅಪ್ಪು ಅವರ ಅಭಿಮಾನಿಗಳು ಸದಾ ದೊಡ್ಮನೆಯವರ ಅಭಿಮಾನಿಗಳ ಆಗಿರುತ್ತಾರೆ.

Exit mobile version