ಅಮೃತಬಳ್ಳಿ ‘ಅಮರತ್ವದ ಮೂಲ’ ಎಂದು ಕರೆಸಿಕೊಂಡಿದೆ, ನಿಮಗೆ ಬರುವ ಬಹುಪಾಲು ಅನಾರೋಗ್ಯ ಸಮಸ್ಯೆಗೆ ಇದು ಪ್ರಭಾವಶಾಲಿ ಮದ್ದಿನಂತೆ ಪರಿಣಾಮ ತೋರಿ ಶಮನ ಕೊಡುತ್ತೆ…ನಮಸ್ಕಾರಗಳು, ಇತ್ತೀಚೆಗೆ ಅಮೃತಬಳ್ಳಿ ಜ್ಯೂಸ್ ಬಗ್ಗೆ ಸಾಕಷ್ಟು ಜಾಹೀರಾತಿನಲ್ಲಿ ನೋಡ್ತಾ ಇರ್ತೀರಾ ಕೇಳುತ್ತಾ ಇರ್ತೀರಾ. ಹೌದು ಈ ಅಮೃತಬಳ್ಳಿ ಜ್ಯೂಸ್ ಬಹಳಷ್ಟು ರೋಗ ಸಮಸ್ಯೆಗಳಿಗೆ ಅತ್ಯುತ್ತಮ ಗಿಡಮೂಲಿಕೆ ಆಗಿದ್ದು, ಇದರ ಬಳಕೆ ಮಾಡುವುದು ಹೇಗೆ ಮತ್ತು ಇದರ ಬಳಕೆಯಿಂದ ಏನೆಲ್ಲಾ ಉಪಯೋಗಗಳು ಉಂಟಾಗಬಹುದು ಎಂಬುದನ್ನು ನಾವು ಈ ಮಾಹಿತಿ ಮೂಲಕ ತಿಳಿಸಿಕೊಡಲಿದ್ದೇವೆ, ನಿಮಗೂ ಕೂಡ ಈ ಅದ್ಭುತ ಗಿಡಮೂಲಿಕೆಯ ಕುರಿತು ಹೆಚ್ಚಿನ ಮಾಹಿತಿ ತಿಳಿಯ ಬೇಕಾದಲ್ಲಿ ಈ ಪುಟವನ್ನು ಸಂಪೂರ್ಣವಾಗಿ ಓದಿ ತಿಳಿಯಿರಿ.
ಅಮೃತ ಬಳ್ಳಿಯನ್ನು ಏನೆಂದು ಗುರುತಿಸಲಾಗಿದೆ ಎಂದರೆ ಅಮರತ್ವದ ಮೂಲ ಅಂತ ಕರೆಯಲಾಗಿದೆ ಹಾಗಾಗಿ ಅಮೃತಬಳ್ಳಿಯನ್ನು ಹೇಗೆಲ್ಲ ಉಪಯೋಗಿಸಬಹುದು ಗೊತ್ತಾ? ಹೆಸರೇ ತಿಳಿಸುವಂತೆ ಅಮೃತಾ ಇದು ಬಹಳಷ್ಟು ಅನಾರೋಗ್ಯ ಸಮಸ್ಯೆಗಳಿಗೆ ಅಮೃತದಂತೆ ಕೆಲಸ ಮಾಡಿ, ನಿಮ್ಮ ಆರೋಗ್ಯ ವೃದ್ಧಿ ಮಾಡುತ್ತೆ.
ಈಗ ಅಮೃತಬಳ್ಳಿಯ ಪ್ರಯೋಜನಗಳ ಕುರಿತು ತಿಳಿದುಕೊಳ್ಳೋಣ ಬನ್ನಿ ಸ್ನೇಹಿತರೆ,ಹೌದು ಹೆಸರೇ ಹೇಳುವಂತೆ ಅಮೃತಬಳ್ಳಿ, ದೊಡ್ಡ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ ರೋಗನಿರೋಧಕ ಶಕ್ತಿಯನ್ನು ಹೊಂದಿದೆ ಇದು ಉತ್ಕರ್ಷಣ ನಿರೋಧಕ ಶಕ್ತಿಯ ಕೇಂದ್ರವಾಗಿದ್ದು, ಫ್ರೀ ರಾಡಿಕಲ್ಸ್ ಅನ್ನು ನಶಿಸಿ ನಿಮ್ಮ ಆರೋಗ್ಯವನ್ನು ವೈರಸ್ ಬ್ಯಾಕ್ಟೀರಿಯಾ ವಿರುದ್ಧ ಕಾಪಾಡುತ್ತದೆ.
ಅಷ್ಟೇ ಅಲ್ಲ ಈ ಅಮೃತ ಬಳ್ಳಿ ಮಧುಮೇಹದ ವಿರುದ್ಧ ಹೋರಾಡುತ್ತದೆ, ಈ ಅಮೃತ ಬಳ್ಳಿಯನ್ನು ಮಧುಮೇಹಿಗಳು ಹೇಗೆ ಸೇವಿಸಬೇಕು ಅಂದರೆ ಇದರ ಪ್ರಯೋಜನ ಪಡೆದು ಕೊಳ್ಳುವಾಗ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ ಆದರೆ ಈ ಮನೆಮದ್ದನ್ನು ಪಾಲಿಸುವಾಗ ಆಹಾರದಲ್ಲಿ ಸ್ವಲ್ಪ ಬದಲಾವಣೆಯನ್ನು ಮಾಡಿಕೊಳ್ಳಬೇಕಿರುತ್ತದೆ.
ಹೌದು ಸಕ್ಕರೆ ಕಾಯಿಲೆ ಏರಿದೆ ಅಂದರೆ ಅದನ್ನು ಹೇಗೆ ಕಡಿಮೆ ಮಾಡಿಕೊಳ್ಳಬೇಕು ಅಂದರೆ ಆಹಾರದಲ್ಲಿಯೂ ಕೂಡ ಕಂಟ್ರೋಲ್ ಇರಬೇಕು ಅದರ ಜೊತೆಗೆ ಈ ಮನೆಮದ್ದನ್ನು ಅಂದರೆ ಅಮೃತಬಳ್ಳಿಯ ಪ್ರಯೋಜನವನ್ನು ಕಟ್ಟುನಿಟ್ಟಾಗಿ ಇದರ ಔಷಧೀಯ ನ ಸೇರಿಸುತ್ತಾ ಬರಬೇಕು ಇದರಿಂದ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತೆ.
‘ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಅಮೃತಬಳ್ಳಿ’ ಹೌದು ಮಲೇರಿಯಾ ಡೆಂಗ್ಯೂ ಹಂದಿಜ್ವರ ಇಂತಹ ಅನಾರೋಗ್ಯ ಸಮಸ್ಯೆಗಳಿಂದ ಉಂಟಾದ ಜ್ವರದ ಬಾಧೆ ನಿವಾರಿಸಿ ಆರೋಗ್ಯವನ್ನು ಸುಧಾರಿಸಲು ಸಹಕಾರಿಯಾಗಿರುತ್ತೆ ಅಮೃತಬಳ್ಳಿ.ಈ ಅಮೃತ ಬಳ್ಳಿಯ ಪ್ರಯೋಜನವನ್ನ ಪಡೆದುಕೊಳ್ಳುವುದಾದರೆ ಇದರ ಕಷಾಯ ಸೇವಿಸಬಹುದು ಅಥವಾ ಈ ಅಮೃತಬಳ್ಳಿಯ ಎಲೆಯ ಜೊತೆ ಬೆಲ್ಲವನ್ನು ಸೇರಿಸಿ ತಿನ್ನುತ್ತಾ ಬಂದರೂ ಕೂಡ ಇದರ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.
ಹೌದು ನಿಮಗೇನಾದರೂ ಮಂಡಿನೋವು ಕೀಲುನೋವು ಸಮಸ್ಯೆ ಇದ್ದರೆ ಅಂಥವರು ಅಮೃತಬಳ್ಳಿಯ ಎಲೆಯ ಜೊತೆ ಸ್ವಲ್ಪ ಆರ್ಗ್ಯಾನಿಕ್ ಬೆಲ್ಲ ಸೇರಿಸಿ ತಿನ್ನುತ್ತಾ ಬಂದರೆ ಮಂಡಿ ನೋವಿಗೆ ಶಮನ ದೊರೆಯುತ್ತೆ.ಮಲಬದ್ಧತೆ ಸಮಸ್ಯೆಗುಯ ಕೂಡ ನಿವಾರಣೆ ನೀಡುತ್ತೆ ಈ ಅಮೃತಬಳ್ಳಿ ರಾತ್ರಿ ಊಟದ ಬಳಿಕ ಅಮೃತಬಳ್ಳಿಯ ರಸ ಸೇವಿಸಿ, ಮಲಗುವುದರಿಂದ ಜೀರ್ಣಕ್ರಿಯೆ ಉತ್ತಮವಾಗಿ ನಡೆದು ಬೆಳಿಗ್ಗೆ ಮಲ ವಿಸರ್ಜನೆ ಮಾಡುವುದಕ್ಕೆ ಸರಿಹೋಗುತ್ತದೆ.
ಶೀತ ಕೆಮ್ಮು ಕಫ ಗಂಟಲು ನೋವು ಇಂತಹ ಸಮಸ್ಯೆಗೆ ಅಮೃತಬಳ್ಳಿಯ ಪ್ರಯೋಜನವನ್ನು ಹೇಗೆ ಪಡೆದುಕೊಳ್ಳಬೇಕು ಅಂದರೆ, ಈ ಅಮೃತ ಬಳ್ಳಿಯ ಎಲೆಯ ಜೊತೆ ಮೆಣಸನ್ನು ಸೇರಿಸಿ ಅದರಿಂದ ರಸ ಬೇರ್ಪಡಿಸಿ ಕುಡಿಯುವುದರಿಂದ ಕಸದ ಬಾಧೆ ಅಥವ ಕೆಮ್ಮಿನ ಸಮಸ್ಯೆ ಶೀತದಂತಹ ಸಮಸ್ಯೆಯಿಂದ ಪರಿಹಾರ ಸಿಗುತ್ತೆ.*ಈ ಅಮೃತ ಬಳ್ಳಿ ಶ್ವಾಸಕೋಶದ ಆರೋಗ್ಯ ವೃದ್ಧಿಗೂ ಸಹಕಾರಿ ಆಗಿದೆ.*ಕೊಲೆಸ್ಟ್ರಾಲ್ ತಗ್ಗಿಸಲು ಸಹಕಾರಿಯಾಗಿದೆ ಅಮೃತಬಳ್ಳಿ.
*ಜ್ವರ ಶೀತ ಕೆಮ್ಮು ಅಂತಹ ಸಣ್ಣಪುಟ್ಟ ಸಮಸ್ಯೆಗಳು ನಿವಾರಣೆಯಾಗುತ್ತೆ ಇದರ ಉಪಯೋಗದಿಂದ.*ಮೆಗ್ನಿಷಿಯಂ ರಂಜಕ ತಾಮ್ರ ಐರನ್ ಕ್ಯಾಲ್ಶಿಯಂ ಖನಿಜಾಂಶಗಳನ್ನು ಹೊಂದಿದೆ ಜತೆಗೆ ಆ್ಯಂಟಿ ಆಕ್ಸಿಡೆಂಟ್ ಆ್ಯಂಟಿಬ್ಯಾಕ್ಟೀರಿಯಲ್ ಅಂಶವನ್ನು ಹೊಂದಿದೆ ಅಮೃತಬಳ್ಳಿ.*ಇದರ ಬೇರು ಕಾಂಡ ಎಲೆ ಬೇರು ಎಲ್ಲವೂ ಔಷಧೀಯ ಗುಣವನ್ನು ಹೊಂದಿದೆ.