ಹತ್ತೇ ನಿಮಿಷದಲ್ಲಿ ಮನೆಯಲ್ಲಿರುವ ಜಿರಳೆಗಳು ಮಾಯವಾಗಬೇಕೆ? ಮನೆಯಲ್ಲಿರುವ ಜಿರಲೆಗಳು ಸಂಪೂರ್ಣವಾಗಿ ಪರಿಹಾರವಾಗಬೇಕಾ ಹಾಗಾದ್ರೆ ಚಿಟಿಕೆ ಹೊಡೆಯುವಷ್ಟರಲ್ಲಿ ಜಿರಲೆ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಬಹುದು ಬನ್ನಿ ಮಾಹಿತಿ ಕುರಿತು ತಿಳಿದುಕೊಳ್ಳೋಣ ಈ ಮನೆಮದ್ದನ್ನು ಮಾಡಿ ಈ ಕೀಟಗಳ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಿ.ಹೌದು ಕೆಲವರ ಮನೆಯಲ್ಲಿ ಜಿರಲೆ ಸಮಸ್ಯೆ ಅತಿ ಹೆಚ್ಚಾಗಿರುತ್ತದೆ ಹಾಗಾಗಿ ಜಿರಳೆ ಇದ್ದಲ್ಲಿ ಬಹಳಷ್ಟು ಪರಿಹಾರಗಳನ್ನು ಮಾಡಿರುತ್ತಾರೆ ಸ್ಪ್ರೇಗಳನ್ನು ತಂದು ಅದನ್ನ ಬಳಸಿ ಜಿರಲೆಗಳ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಲು ಪ್ರಯತ್ನ ಮಾಡಿರುತ್ತಾರೆ.
ಆದರೆ ನೀವು ಇಂತಹ ಯಾವುದೇ ಪರಿಹಾರಗಳನ್ನು ಮಾಡಿದರೂ ಬೇಗನೆ ಪರಿಹಾರಗಳು ಸಿಗುತ್ತಿಲ್ಲವಾದರೆ, ಈಗಾಗಲೇ ಸಾಕಷ್ಟು ಪರಿಹಾರಗಳನ್ನು ಪಾಲಿಸಿ ನಿಮಗೆ ಫಲಿತಾಂಶ ದೊರೆತಿಲ್ಲ ವಾದರೆ ನಾವು ತಿಳಿಸುವಂತಹ ಸರಳ ಪರಿಹಾರವನ್ನು ಮಾಡಿ ಈ ಪರಿಹಾರವನ್ನು ಮಾಡುವುದರಿಂದ, ಅಂಗಡಿಗಳಿಂದ ತಂದು ಮಾಡುವಂತಹ ಪ್ರಥಮವಾಗಿ ನೀವು ಫಲಿತಾಂಶವನ್ನು ಪಡೆದುಕೊಳ್ಳುತ್ತೀರಾ ಜಿರಳೆಯಂತಹ ಸಮಸ್ಯೆಯಿಂದ ಬೇಗನೆ ಪರಿಹಾರವನ್ನು ಸಹ ಕಂಡುಕೊಳ್ಳುತ್ತೀರ.
ಹೌದು ನಿಮಗಿದು ಗೊತ್ತಾ ಮನೆಯಲ್ಲಿ ಜಿರಲೆ ಇದ್ದರೆ ಅದನ್ನ ನಿರ್ಲಕ್ಷ್ಯ ಮಾಡಬಾರದು ಯಾಕೆಂದರೆ ಆತ ಕೀಟಗಳಿಂದ ಸಹ ಕೆಲವೊಂದು ಆರೋಗ್ಯ ಸಮಸ್ಯೆಗಳು ಬರುವ ಸಾಧ್ಯತೆ ಇರುತ್ತದೆ ಅದು ಅಡುಗೆ ಮನೆಯಲ್ಲಿ ಅಥವಾ ಬಾತ್ ರೂಂನಲ್ಲಿ ಇದ್ದರೆ ಅದರಿಂದ ಉಂಟಾಗುವ ತೊಂದರೆಗಳು ಸಾಕಷ್ಟು.ಹಾಗಾಗಿ ಇಂದಿನ ಲೇಖನದಲ್ಲಿ ನಾವು ತಿಳಿಸಿಕೊಡುವಂತಹ ಮನೆಮದ್ದನ್ನು ನೀವು ಕೂಡ ಪಾಲಿಸುವುದರಿಂದ ಮನೆಯಲ್ಲಿ ಜಿರಳೆ ಕಾಟ ಇದ್ದರೆ ಅದು ನಿವಾರಣೆಯಾಗುತ್ತದೆ ಅಥವಾ ಜಿರಳೆ ಕಾಟ ಉಂಟಾಗಬಾರದು ಅಂದರೂ ಸಹ ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ
ಹೌದು ಮನೆಯಲ್ಲಿ ಸ್ವಚ್ಚತೆ ಇರದೆ ಹೋದಾಗ ಈ ರೀತಿ ಕೀಟಾಣುಗಳ ತೊಂದರೆ ಉಂಟಾಗುತ್ತದೆ ಹಾಗಾಗಿ ಪ್ರತಿ ದಿನ ಮನೆಯನ್ನು ಸ್ವಚ್ಛ ಮಾಡಬೇಕು, ವಾರಕ್ಕೊಮ್ಮೆ ಮನೆ ಅನ್ನೂ ಡೀಪ್ ಕ್ಲೀನ್ ಮಾಡಿ ಅಂದರೆ ಕರ್ಟೆನ್ ಗಳನ್ನು ಕ್ಲೀನ್ ಮಾಡುವುದು ಬಾತ್ ರೂಮ್ ಮತ್ತು ಅಡುಗೆ ಮನೆಯಲ್ಲಿ ಪಾತ್ರೆಗಳನ್ನೂ ಸ್ವಚ್ಛ ಮಾಡುವುದು ಮೂಲೆಮೂಲೆಗಳಲ್ಲಿ ಕ್ಲೀನ್ ಮಾಡೋದು
ಈ ರೀತಿಯ ಪರಿಹಾರಗಳನ್ನು ಮಾಡುತ್ತಲೇ ಇರಬೇಕು ಆಗ ಈ ರೀತಿ ಕೆಲವೊಂದು ಕೀಟಾಣುಗಳ ಸಮಸ್ಯೆ ಮನೆಯಲ್ಲಿ ಉಂಟಾಗುವುದಿಲ್ಲ ಮತ್ತು ಈಗಾಗಲೇ ಜಿರಳೆ ಕಾಟ ಇದೆ ಅಥವಾ ನೊಣದ ಕಾಟ ಬಹಳಷ್ಟು ಇದೆ ಅನ್ನೋರು, ವಿನೇಗರ್ ಅನ್ನು ನೀರಿಗೆ ಮಿಶ್ರಣ ಮಾಡಿ ಈ ರೀತಿ ಮೂಲೆಗಳಿಗೆ ಅಥವಾ ಕೀಟಾಣುಗಳು ಹೆಚ್ಚು ಎಲ್ಲಿ ಕಂಡುಬರುತ್ತದೆ
ಅಲ್ಲಿಗೆ ಸ್ಪ್ರೇ ಮಾಡಬೇಕು ಈ ರೀತಿ ಮಾಡುವುದರಿಂದ ಅದೆಷ್ಟು ಜಿರಲೆಗಳ ಕಾಟ ನೊಣಗಳ ಕಾಟ ಕಡಿಮೆಯಾಗುತ್ತಾ ಬರುತ್ತದೆ, ನೀವು ಸಹ ಒಮ್ಮೆ ಈ ಪರಿಹಾರವನ್ನೂ ಪಾಲಿಸಿ ನೋಡಿ ಮಾರ್ಕೆಟ್ನಲ್ಲಿ ವಿನೇಗರ್ ಅತಿ ಕಡಿಮೆ ಬೆಲೆಯಲ್ಲಿ ನಿಮಗೆ ದೊರೆಯುತ್ತದೆ.ಹಾಗಾಗಿ ನೀವು ಕೂಡ ಇಂತಹ ಪರಿಹಾರಗಳನ್ನ ಪಾಲಿಸಿ ಜೊತೆಗೆ ಜಿರಳೆ ಸಮಸ್ಯೆಯಿದೆ ಅನ್ನೋರು ಈ ಪರಿಹಾರವನ್ನು ಮಾಡಲು ಸಾಧ್ಯವಾಗದೆ ಹೋದರೆ ಮತ್ತೊಂದು ಪರಿಹಾರವಿದೆ
ಅದೇನೆಂದರೆ ಕರ್ಪೂರದ ಪುಡಿ ಇದರ ಜೊತೆಗೆ ಗಂಧದಕಡ್ಡಿಯನ್ನು ಮುರಿದು ಅದರಿಂದ ಪೌಡರ್ ತೆಗೆದುಕೊಂಡು ಕರ್ಪೂರದ ಪುಡಿ ಮತ್ತು ಗಂಧದ ಕಡ್ಡಿಯ ಪುಡಿ ಮಿಶ್ರ ಮಾಡಿ ಅಂದರೆ ಕುಟ್ಟಿ ಪುಡಿಮಾಡಿ ನೀರಿನೊಂದಿಗೆ ಮಿಶ್ರಮಾಡಿ ನೀರಿಗೆ ಮಿಕ್ಸ್ ಮಾಡಿಕೊಂಡು ಸ್ಪ್ರೇ ಬಾಟಲ್ ಸಹಾಯದಿಂದ ಕೀಟಾಣುಗಳು ಓಡಾಡುವ ಜಾಗಕ್ಕೆ ಸ್ಪ್ರೇ ಮಾಡಬೇಕು, ಈ ರೀತಿ ಮಾಡುವುದರಿಂದ ಜಿರಳೆ ಕಾಟ ಬಹಳ ಬೇಗ ಕಡಿಮೆಯಾಗುತ್ತದೆ.