ಮಧುಮೇಹಿಗಳು ಈ ಪರಿಹಾರವನ್ನು ಮಾಡಿಕೊಂಡರೆ ನಿಮ್ಮ ಸಕ್ಕರೆ ಕಾಯಿಲೆ ನಿಯಂತ್ರಣ ದಲ್ಲಿ ಇರುತ್ತದೆ ಹಾಗೆ ನಿಮ್ಮ ಆರೋಗ್ಯ ಉತ್ತಮವಾಗಿದೆ ಮುಂದಿನ ದಿನಗಳಲ್ಲಿ ಸಕ್ಕರೆ ಕಾಯಿಲೆ ಬರಬಾರದು ಅನ್ನೋದಾದರೆ ಅಂಥವರು ಕೂಡ ಈ ಪರಿಹಾರವನ್ನು ಪಡೆಯಬಹುದು.
ಇದರಿಂದ ಜನ್ಮದಲ್ಲಿ ಸಕ್ಕರೆ ಕಾಯಿಲೆ ಬಾರದಿರುವ ಹಾಗೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಹಾಗಾದರೆ ಬನ್ನಿ ತಿಳಿಯೋಣ ಈ ಮಧುಮೇಹಿಗಳು ಮಾಡಿಕೊಳ್ಳಬೇಕಾದ ಉತ್ತಮ ಮನೆಮದ್ದು ಯಾವುದು ಅಂತ ಇದರಿಂದ ಸಕ್ಕರೆ ಕಾಯಿಲೆ ಎಂಬುದು ಹೆಚ್ಚಾಗದೆ ನಿಯಂತ್ರಣದಲ್ಲಿ ಇರುತ್ತದೆ ಮತ್ತು ಸಕ್ಕರೆ ಕಾಯಿಲೆ ಬಂದಿರುವವರಿಗೆ ಆರೋಗ್ಯವೂ ಉತ್ತಮವಾಗಿರುತ್ತದೆ.
ಹೌದು ಇವತ್ತಿನ ಆಹಾರ ಪದ್ಧತಿ ಹೇಗಿದೆ ಅಂತ ಒಮ್ಮೆ ಗಮನಿಸಿ ಇವತ್ತು ಎಲ್ಲರೂ ಕೂಡ ನಾಲಿಗೆಗೆ ರುಚಿ ನೀಡುವ ಆಹಾರಗಳನ್ನೇ ತಿನ್ನಲು ಬಯಸುವುದು ಅದನ್ನು ಹೊರತುಪಡಿಸಿ ಇದು ಆರೋಗ್ಯಕ್ಕೆ ಒಳ್ಳೆಯದು ತಿನ್ನಿ ಅಂದರೆ ಯಾರು ಕೂಡ ತಿನ್ನುವುದಿಲ್ಲ ಆದರೆ ನಾಲಿಗೆಗೆ ರುಚಿ ಇದ್ದರೆ ಮಾತ್ರ ಅಂತಹ ಆಹಾರ ಪದಾರ್ಥಗಳನ್ನು ಎಷ್ಟೇ ಹಣ ಖರ್ಚಾಗಲಿ ಅದನ್ನು ಕೊಂಡುಕೊಂಡು ತಿಂತಾರೆ.
ಇಂದಿನ ಲೇಖನದಲ್ಲಿ ನಾವು ಸಕ್ಕರೆ ಕಾಯಿಲೆಯಿಂದ ಬಳಲುವವರಿಗೆ ಒಂದೊಳ್ಳೆ ಮನೆ ಮತ್ತು ಇದನ್ನ ಮಾಡೋದು ತುಂಬ ಸುಲಭ ಜೊತೆಗೆ ಆರೋಗ್ಯವು ಕೂಡ ಬಹಳ ಉತ್ತಮವಾಗಿರುತ್ತೆ ಅಷ್ಟೇ ಅಲ್ಲ ಈ ಪರಿಹಾರವನ್ನು ಎಲ್ಲರೂ ಕೂಡ ಪಾಲಿಸುವುದರಿಂದ ರಕ್ತ ಕೆಡದೆ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.
ಈ ಪರಿಹಾರವನ್ನು ಪಾವತಿಸುವುದರಿಂದ ಕೇವಲ ಸಕ್ಕರೆ ಕಾಯಿಲೆ ಮಾತ್ರವಲ್ಲ ಈ ಅಜೀರ್ಣತೆ ಕರುಳಿನ ಸಂಬಂಧಿ ಸಮಸ್ಯೆಗಳು ಕಿಡ್ನಿ ಸಂಬಂಧಿ ಸಮಸ್ಯೆಗಳು ಲಿವರ್ ಸಂಬಂಧಿ ಸಮಸ್ಯೆಗಳು ಅಧಿಕವಾದ ಕೊಲೆಸ್ಟ್ರಾಲ್ ಇಂತಹ ಎಲ್ಲ ತೊಂದರೆಗಳಿಗೂ ಕೂಡ ಇದು ಉತ್ತಮವಾಗಿ ಕೆಲಸ ಮಾಡಿ ನಿಮಗೆ ಆರೋಗ್ಯ ವೃದ್ಧಿಸಲು ಪ್ರಯೋಜನಕಾರಿಯಾಗಿರುತ್ತೆ.
ಹಾಗಾದ್ರೆ ಸಕ್ಕರೆ ಕಾಯಿಲೆಗೆ ಮಾಡಬಹುದಾದ ಮನೆಮದ್ದಿಗೆ ಬೇಕಾಗಿರುವ ಪದಾರ್ಥಗಳು ಯಾವುದು ಅಂದರೆ ಮೆಂತ್ಯೆ ಕಾಳುಗಳು ಸುಂಡೇಕಾಯಿ ಕಲೊಂಜಿ.
ಈಗ ಮಾಡಬೇಕಿರುವುದೇನು ಅಂದರೆ ಈ ಮೆಂತೆಕಾಳುಗಳನ್ನು ಚೆನ್ನಾಗಿ ಒಮ್ಮೆ ಸ್ವಚ್ಛ ಮಾಡಿ ಬಿಳಿ ಬಟ್ಟೆಯಲ್ಲಿ ಕಟ್ಟಿ ಇಡಬೇಕು ಈ ಮೆಂತ್ಯೆ ಕಾಳುಗಳು ಮೊಳಕೆ ಬರುತ್ತದೆ ಹೌದು ಈ ಪರಿಹಾರ ಮಾಡಲು ನಮಗೆ ಕೇವಲ ಮೆಂತೆ ಕಾಳು ಅಲ್ಲ ಮೊಳಕೆ ತರಿಸಿದ ತಹ ಮೆಂತೆಕಾಳು ಅವಶ್ಯಕವಾಗಿರುತ್ತದೆ ಮೊಳಕೆ ಬಂದ ಮೇಲೆ ಈ ಮೊಳಕೆ ಬಂದ ಮೆಂತ್ಯೆ ಕಾಳುಗಳನ್ನು ಒಣಗಿಸಿ ಇಟ್ಟುಕೊಳ್ಳಿ.
ಈಗ ಈ ಒಣಗಿದ ಮೊಳಕೆ ಕಟ್ಟಿದ ಮೆಂತ್ಯೆ ಕಾಳುಗಳನ್ನು ತೆಗೆದುಕೊಂಡು ಇದೇ ಪ್ರಮಾಣದ ಕಲೋಂಜಿ ಮತ್ತು ಸುಂಡೆಕಾಯಿ ಅನ್ನ ತೆಗೆದುಕೊಂಡು ಇದೆಲ್ಲದನ್ನು ಪುಡಿಮಾಡಿಕೊಳ್ಳಬೇಕು ಪುಡಿ ಮಾಡಿ ಕೊಳ್ಳುವ ಮುನ್ನ ಈ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ ಇಟ್ಟುಕೊಳ್ಳಬೇಕು .
ಇದಿಷ್ಟು ಆದ ಮೇಲೆ ಈ ಪದಾರ್ಥಗಳನ್ನು ಪುಡಿ ಮಾಡಿಸಿ ಎತ್ತಿಟ್ಟುಕೊಳ್ಳಿ. ಈಗ ಈ ತಯಾರಿ ಮಾಡಿಕೊಂಡಂತಹ ಪುಡಿಯನ್ನು ಪ್ರತಿದಿನ ಮಧು ಮೇಹಿಗಳೂ ಸೇವಿಸ ಬೇಕು ಹೇಗೆ ಅಂದರೆ ಬಿಸಿ ನೀರಿಗೆ ಮಿಶ್ರಣ ಮಾಡಿ ಕುಡಿಯಬಹುದು ಹೌದು ಈ ಮೆಂತೆಕಾಳಿನ ಪುಡಿಯನ್ನ ಹಾಗೇ ಸೇವಿಸಲು ತುಂಬ ಕಷ್ಟ ಆಗುತ್ತದೆ ಕಹಿ ಇರುತ್ತದೆ.ಹಾಗಾಗಿ ಬಿಸಿನೀರಿಗೆ ಈ ಪುಡಿಯನ್ನು ಮಿಶ್ರಮಾಡಿ ಕುಡಿಯುತ್ತ ಬಂದರೆ ರಕ್ತಶುದ್ಧಿಯಾಗುತ್ತದೆ ಸಕ್ಕರೆ ಕಾಯಿಲೆ ನಿಯಂತ್ರಣ ದಲ್ಲಿ ಇರುತ್ತದೆ. ಹಾಗಾದರೆ ನೀವು ಕೂಡ ಈ ಪರಿಹಾರ ಪಾಲಿಸಿ ಜನ್ಮದಲ್ಲಿಯೇ ಸಕ್ಕರೆ ಕಾಯಿಲೆ ಬಾರದಿರುವ ಹಾಗೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.