Ad
Home ಎಲ್ಲ ನ್ಯೂಸ್ ಈ ಗ್ರಾಮದ ಮಹಿಳೆಯರು ಸಂತೋಷ ಆದ್ರೂ ಅಳುತ್ತಾರೆ ದುಃಖ ಆದ್ರೂ ಅಳುತ್ತಾರೆ … ಈ...

ಈ ಗ್ರಾಮದ ಮಹಿಳೆಯರು ಸಂತೋಷ ಆದ್ರೂ ಅಳುತ್ತಾರೆ ದುಃಖ ಆದ್ರೂ ಅಳುತ್ತಾರೆ … ಈ ರೀತಿ ಜೀವನ ಪರ್ಯಂತ ಅಳಲು ಕಾರಣವೇನು ಗೊತ್ತಾ …

ಒಂದೇ ನಾಣ್ಯದ ಎರಡು ಮುಖಗಳು ಅಂದರೆ ಅದು ನಗು ಅಳು ಅಲ್ವಾ ಸ್ನೇಹಿತೇ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಈ ಎರಡು ಮುಖದ ಒಂದು ನಾಣ್ಯ ಇದ್ದೇ ಇರುತ್ತದೆ , ಮನುಷ್ಯ ಕಷ್ಟ ಬಂದಾಗ ಅಳದೆ , ಸುಖ ಬಂದಾಗ ಅರಳದೆ ಎಲ್ಲ ಸಮಯದಲ್ಲಿಯೂ ಸ್ಥಿರವಾಗಿ ಇರಬೇಕು ಆಗ ಅವನ ಜೀವನ ಒಂದು ಹಂತಕ್ಕೆ ತಲುಪುತ್ತದೆ .ನೀವೆಲ್ಲರೂ ನೋಡಿರುತ್ತೀರಾ ನಮ್ಮ ಭಾರತ ದೇಶವನ್ನು ಸಾಕಷ್ಟು ರಾಜ ಮನೆತನಗಳು ಮತ್ತು ವಂಶಗಳಿ ಆಳು ಹೋಗಿವೆ ಆದರೆ ಇಂದಿಗೂ ಕೂಡ ನಮ್ಮ ಭಾರತ ದೇಶದಲ್ಲಿ ಕೆಲವೊಂದು ಪ್ರದೇಶಗಳಲ್ಲಿ ಈ ರೀತಿಯ ವಂಶಸ್ಥರು ಆಳ್ವಿಕೆ ಮಾಡುತ್ತಿದ್ದಾರೆ ನಾವು ಶ್ರೇಷ್ಠರು ಬೇರೆ ಜನಾಂಗದವರು ಕೀಳು ಮಟ್ಟದವರು ಅನ್ನೋ ಭಾವನೆಯಲ್ಲಿಯೇ ಈಗಲೂ ಕೂಡ ಜನರು ಇದ್ದಾರೆ .

ಅದೇ ಸ್ನೇಹಿತರೆ ರಾಜಸ್ಥಾನದಲ್ಲಿ ಒಂದು ಗ್ರಾಮವಿದೆ ಇಲ್ಲಿ ಈಗಲೂ ಕೂಡ ಠಾಕೂರ್ ವಂಶಸ್ಥರು ಗ್ರಾಮವನ್ನು ಆಳ್ವಿಕೆ ಮಾಡುತ್ತಿದ್ದಾರೆ ಮತ್ತು ಇಲ್ಲಿ ಒಂದು ಜನಾಂಗದ ಹೆಂಗಸರದ್ದೇ ಅವರಿಗೆ ರೋಡಲಿಸ್ ಮಹಿಳೆಯರು ಅಂತ ಕರೆಯುತ್ತಾರೆ ಇವರು ವೃತ್ತಿಪರ ಅಶೋಕ ಚಾರಿಗಳು ಇವರು ಗ್ರಾಮದಲ್ಲಿ ಯಾವುದೇ ರೀತಿಯ ಕಹಿ ಘಟನೆ ನಡೆದರೂ ಅವರು ಅಲ್ಲಿಗೆ ಹೋಗಿ ಅಳಬೇಕು ಇದೆ ಇವರ ವೃತ್ತಿ , ಇವರ ವೃತ್ತಿಯನ್ನು ಶೋಕಚಾರ ವೃತ್ತಿ ಅಂತಾನೇ ಕರೆಯುತ್ತಾರೆ ,ಗ್ರಾಮದಲ್ಲಿ ಎಲ್ಲಿಯೇ ಸಾವಾದರೂ ಅಥವಾ ಅಹಿತಕರ ಘಟನೆಗಳು ನಡೆದರೆ ರೋಡಾಲಿಸ್ ಮಹಿಳೆಯರು ಅಲ್ಲಿಗೆ ಬಂದು ತಮ್ಮ ಹಳೆಯ ನೋವುಗಳನ್ನು ನೆನೆಪಿಸಿಕೊಂಡು ಅಥವಾ ಕಣ್ಣುಗಳಿಗೆ ಸಸ್ಯದ ರಸವನ್ನು ಬಿಟ್ಟುಕೊಂಡು ಭೂಮಿಯನ್ನು ಬಡಿಯುತ್ತಾ ಜೋರಾಗಿ ಅಳಬೇಕಂತೆ ಇವರು ತಮ್ಮ ಜೀವನವೆಲ್ಲಾ ಅಳುವುದೇ ಇವರ ವೃತ್ತಿಯಂತೆ .

ಈಗಲೂ ಕೂಡ ರಾಜಸ್ಥಾನದ ಈ ಒಂದು ಗ್ರಾಮದಲ್ಲಿ ಠಾಕೂರ್ ವಂಶಸ್ಥರೇ ಶ್ರೇಷ್ಠ ಜಾತಿ ಮತ್ತು ಉಳಿದ ಜನಾಂಗವು ಕೆಳಮಟ್ಟದಲ್ಲಿ ಇರುವ ಜನರು ಅನ್ನೋ ಒಂದು ಭಾವನೆಯಲ್ಲಿಯೇ ಇಲ್ಲಿಯ ಜನರು ಇರುತ್ತಾರೆ .ಸ್ನೇಹಿತರ ಇಂದಿನ ದಿನಗಳಲ್ಲಿ ಟೆಕ್ನಾಲಜಿ ಎಷ್ಟೆಲ್ಲ ಮುಂದುವರೆಯುತ್ತಾ ಇದೆ ಮತ್ತು ಜನರು ಕೂಡ ಎಷ್ಟು ಮುಂದುವರಿದಿದ್ದಾರೆ ಆದರೆ ಈಗಲೂ ಕೂಡ ರಾಜಸ್ಥಾನದಲ್ಲಿ ಈ ಒಂದು ಪದ್ಧತಿಯನ್ನು ಪಾಲಿಸುತ್ತಾರೆ .ಈ ವಂಶಸ್ಥರು ಗ್ರಾಮವನ್ನು ಆಳುತ್ತಾರೆ ಅಂದರೆ ನಿಜಕ್ಕೂ ಎಲ್ಲರಿಗೂ ಆಶ್ಚರ್ಯ ಅನಿಸುತ್ತದೆ ಅಲ್ವಾ ಈಗಿನ ದಿನಗಳಲ್ಲಿ ಅಪ್ಪ ಅಮ್ಮನ ಮಾತುಗಳನ್ನೆ ಮಕ್ಕಳು ಕೇಳೋದಿಲ್ಲ ಆದರೆ ಆ ಗ್ರಾಮದಲ್ಲಿ ಜನರು ಹೇಗೆ ಆ ವಂಶಸ್ಥರ ಮಾತನ್ನು ಕೇಳಿಕೊಂಡು ಇದ್ದಾರೆ ಕೇಳಿದರೆ ನಿಜಕ್ಕೂ ಮನಕಲುಕುತ್ತದೆ .

ಭಾರತ ದೇಶದಲ್ಲಿ ಸಂವಿಧಾನ ಹೇಳುವ ಹಾಗೆ ಎಲ್ಲರಿಗೂ ಕೂಡ ಈ ನೆಲದಲ್ಲಿ ಒಂದು ಹಕ್ಕುಗಳಿವೆ ಅವರವರ ಹಕ್ಕುಗಳನ್ನು ಚಲಾಯಿಸುವ ಹಕ್ಕುಗಳು ಕೂಡ ಪ್ರತಿಯೊಬ್ಬ ಮನುಷ್ಯನಿಗೂ ಇದ್ದೇ ಇರುತ್ತದೆ ಅಂತಹ ಸಂವಿಧಾನ ದೇಶದಲ್ಲಿ ಇದ್ದು ಕೂಡ ಜನರು ಹೀಗೆ ಒಬ್ಬರಿಗೆ ಹೆದರಿಕೊಂಡು ಜೀವನ ನಡೆಸಬೇಕು ಅಂದರೆ ನಿಜಕ್ಕೂ ಅದು ಕಷ್ಟಕರ . ಆದಷ್ಟು ಬೇಗ ಆ ಜನರು ಇಂತಹ ಒಂದು ದಬ್ಬಾಳಿಕೆಯಿಂದ ದೂರವಾಗಲಿ ಎಂದು ಕೇಳಿಕೊಳ್ಳೋಣ ಆ ಜನರು ಆದಷ್ಟು ಬೇಗ ಬೆಳಕಿಗೆ ಬಂದು ಅವರಿಗೂ ಕಂಡು ಹೊಡೆಯದ ಹಾಗೆ ಆಗಲಿ , ಆ ಮನುಷ್ಯರಿಗೂ ಆಸೆಗಳಿರುತ್ತವೆ ಭಾವನೆಗಳಿರುತ್ತವೆ ಅವುಗಳನ್ನು ಯಾರು ಯಾವತ್ತಿಗೂ ಕಿತ್ತುಕೊಳ್ಳಲು ಹೋಗಬಾರದು ಅಲ್ವಾ .ಅದೇನೇ ಆಗಲಿ ಈ ಒಂದು ವಿಷಯ ಇಲ್ಲಿಯವರೆಗೂ ನಮಗೆ ತಿಳಿದಿರಲಿಲ್ಲ ಅಲ್ವಾ ಸ್ನೇಹಿತರೇ ಈ ಮಾಹಿತಿ ನಿಮಗೆಲ್ಲರಿಗೂ ಇಷ್ಟವಾಗಿದೆ ಎಂದು ಭಾವಿಸುತ್ತೇನೆ ಧನ್ಯವಾದಗಳು

Exit mobile version