Ad
Home ಅರೋಗ್ಯ ಈ ತರದ ಮನೆಮದ್ದನ್ನ ಮನೆಯಲ್ಲೇ ತಯಾರಿಸಿ ಸೇವಿಸುವುದರಿಂದ ಶೀತ , ನೆಗಡಿ ಹಾಗು ಕಫ ಕೂಡ...

ಈ ತರದ ಮನೆಮದ್ದನ್ನ ಮನೆಯಲ್ಲೇ ತಯಾರಿಸಿ ಸೇವಿಸುವುದರಿಂದ ಶೀತ , ನೆಗಡಿ ಹಾಗು ಕಫ ಕೂಡ ನಿವಾರಣೆ ಆಗುತ್ತೆ..

ಕೆಮ್ಮು ಶೀತ ಕಫ ನೆಗಡಿ ಇವೆಲ್ಲವೂ ಮನುಷ್ಯನಿಗೆ ಸಮಸ್ಯೆಯೇ ಅಲ್ಲ, ಆದರೆ ಕೆಲವರಲ್ಲಿ ಈ ಚಿಕ್ಕಪುಟ್ಟ ಸಮಸ್ಯೆಗಳು ಬಂದರೆ ಸಾಕು, ತುಂಬಾನೇ ಕಷ್ಟವನ್ನು ಅನುಭವಿಸಿ ಬಿಡುತ್ತಾರೆ. ಇನ್ನು ಮಕ್ಕಳಿಗೂ ಕೂಡ ಈ ಶೀತ ಕೆಮ್ಮು ಸಮಸ್ಯೆ ಆಗಾಗ ಕಾಡುತ್ತಲೇ ಇರುತ್ತದೆ, ಮಕ್ಕಳಲ್ಲಿ ಆದರೆ ಈ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ .ಅವರಲ್ಲಿ ಈ ಚಿಕ್ಕಪುಟ್ಟ ಸಮಸ್ಯೆಗಳು ಕಾಡುವುದರಲ್ಲಿ ಯಾವುದೇ ವಿಚಾರ ಇಲ್ಲ ಬಿಡಿ. ಆದರೆ ದೊಡ್ಡವರಿಗೂ ಕೂಡ ಈ ಒಂದು ಶೀತ ಕೆಮ್ಮಿನ ಸಮಸ್ಯೆ ದೊಡ್ಡ ಸಮಸ್ಯೆ ಆಗಿ ಪರಿಣಮಿಸುತ್ತದೆ ಅಂದರೆ, ಅವರಲ್ಲಿ ರೋಗನಿರೋಧಕ ಶಕ್ತಿಯ ಕೊರತೆ ಇದೆ ಎಂದು ನಾವು ಅರ್ಥ ಮಾಡಿಕೊಳ್ಳಬೇಕು.

ಹಾಗಾದರೆ ದೊಡ್ಡವರಿಂದ ಹಿಡಿದು ಚಿಕ್ಕ ಮಕ್ಕಳಿಗೆ ನೀಡಬಹುದಾದ ಪರಿಹಾರವನ್ನು ನಾವು ಮನೆಯಲ್ಲಿಯೇ ಮಾಡಿಕೊಳ್ಳಬಹುದು ಅಂದರೆ ಇದೊಂದು ಉಪಯುಕ್ತ ಮಾಹಿತಿಯ ಅಲ್ವಾ ಆದ ಕಾರಣ ನೀವು ಕೂಡ ಈ ಉಪಯುಕ್ತ ಮಾಹಿತಿಯನ್ನು ತಿಳಿದು, ಕೂಡಲೇ ಈ ಚಿಕ್ಕಪುಟ್ಟ ಸಮಸ್ಯೆಗಳಿಗೆ ಈ ಪರಿಹಾರವನ್ನು ಮಾಡಿಕೊಂಡು ಇದರಿಂದ ಆದಷ್ಟು ಬೇಗ ಹೊರಬನ್ನಿ ಆರೋಗ್ಯದಿಂದಿರಿ.ಇಲ್ಲಿ ನಾನು ಈ ದಿನದ ಮಾಹಿತಿಯಲ್ಲಿ ನಿಮಗೆ ಈ ಶೀತಾ ಕೆಮ್ಮಿನ ಸಮಸ್ಯೆಗೆ ನೆಗಡಿ ಕಫ ದಂತಹ ಸಮಸ್ಯೆಗೆ ಹೇಗೆ ಸುಲಭವಾಗಿ ಪರಿಹಾರವನ್ನು ಪಡೆದುಕೊಳ್ಳಬಹುದು ಎಂಬುದನ್ನು ತಿಳಿಸುತ್ತೇನೆ ಇದಕ್ಕಾಗಿ ಬೇಕಾಗಿರುವುದು ಕೇವಲ ಮೂರೇ ಪದಾರ್ಥ ಲವಂಗ ಮೆಣಸು ಮತ್ತು ಜೇನುತುಪ್ಪ.

ಮೊದಲಿಗೆ ಏಳರಿಂದ ಎಂಟು ಲವಂಗವನ್ನು ತೆಗೆದುಕೊಳ್ಳಬೇಕೋ ಹಾಗೆ ಎಂಟು ಮೆಣಸಿನ ಕಾಳುಗಳನ್ನು ತೆಗೆದುಕೊಂಡು ಒಂದು ಕುಟ್ಟಾಣಿ ಸಹಾಯದಿಂದ ದನ ಪುಡಿ ಮಾಡಿಕೊಳ್ಳಿ. ಪ್ರತಿಯೊಬ್ಬರ ಮನೆಯಲ್ಲಿಯೂ ಈ ಕುಟ್ಟ ಹಣೆಯ ನಾಲ್ಕು ಕೊಳ್ಳುವುದು ಒಳ್ಳೆಯದು ಯಾಕೆ ಅಂದರೆ ನಾವು ಚಿಕ್ಕಪುಟ್ಟ ಔಷಧಿಗಳನ್ನು ಮಾಡಿಕೊಳ್ಳುವುದಕ್ಕಾಗಿ ಮಿಕ್ಸಿ ಅನ್ನ ಬಳಸುವುದು ಎಷ್ಟೊಂದು ಉತ್ತಮ ಆಗಿರುವುದಿಲ್ಲ ಈ ಪುಟಾಣಿಗೆ ಸರಿ.

ಪುಡಿ ಮಾಡಿಕೊಂಡ ನಂತರ ಇದಕ್ಕೆ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ, ಇದೀಗ ಮನೆಮದ್ದು ತಯಾರಾಗಿದೆ ಇದನ್ನು ದೊಡ್ಡವರಾದರೆ ಎಷ್ಟು ಸೇವಿಸಬೇಕು, ಚಿಕ್ಕವರಾದರೆ ಎಷ್ಟು ಸೇವಿಸಬೇಕು ಅಂತ ತಿಳಿಯೋಣ, ದೊಡ್ಡವರಾದರೆ ಈ ಒಂದು ಮನೆ ಮದ್ದನ್ನು ಅರ್ಧ ಚಮಚ ತೆಗೆದುಕೊಳ್ಳಬೇಕು ದಿನಕ್ಕೆ ಮೂರು ಬಾರಿ ತೆಗೆದುಕೊಳ್ಳಿ ಉತ್ತಮವಾದ ಫಲಿತಾಂಶಕ್ಕಾಗಿ ಚಿಕ್ಕ ಮಕ್ಕಳಿಗಾದರೆ ತಾಯಿ ತಮ್ಮ ಬೆರಳಿನಲ್ಲಿ ಸ್ವಲ್ಪ ಈ ರಸವನ್ನು ತೆಗೆದುಕೊಂಡು ಬಾಯಿಗೆ ಜಪಿಸಿದರೆ ಸಾಕು.

ಸ್ವಲ್ಪ ದೊಡ್ಡ ಮಕ್ಕಳಾದರೆ ಕಾಲು ಚಮಚ ಈ ರಸವನ್ನು ತಿನ್ನಿಸಿ ಸಾಕು ಸ್ವಲ್ಪ ದೊಡ್ಡ ಮಕ್ಕಳಿಗೆ ಇದನ್ನು ದಿನಕ್ಕೆ ಒಂದು ಬಾರಿ ತಿನಿಸಿದರೆ ಸಾಕು. ಈ ರೀತಿಯಾಗಿ ಮೆಣಸಿನಲ್ಲಿ ಮತ್ತು ಲಂಗದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವಂತಹ ಅಂಶವೂ ಕೂಡ ಇದು ನಿಮ್ಮ ಅನಾರೋಗ್ಯ ಸಮಸ್ಯೆಗೆ ಪರಿಹಾರವನ್ನು ನೀಡುತ್ತದೆ ಜೊತೆಗೆ ನಿಮ್ಮ ಇಮ್ಯೂನಿಟಿ ಪವರ್ ಅನ್ನು ಹೆಚ್ಚು ಹೆಚ್ಚು ಮಾಡುತ್ತದೆ.

ಈ ಒಂದು ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದಲ್ಲಿ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಹಾಗೂ ಬೇರೆಯವರಿಗೂ ಕೂಡ ಈ ಒಂದು ಉಪಯುಕ್ತ ಆರೋಗ್ಯಕರ ಮಾಹಿತಿಯನ್ನು ಶೇರ್ ಮಾಡಿ. ಪ್ರತಿ ಸಲ ಶೀತ ಕೆಮ್ಮು ಕಫ ಆದಾಗ, ಈ ಮನೆ ಮದ್ದನ್ನು ಪಾಲಿಸಿ ಸಾಕು ಮಾತ್ರೆಗಳ ಅವಶ್ಯಕತೆಯೆ ನಿಮ್ಮ ಜೀವನದಲ್ಲಿ ಬರುವುದಿಲ್ಲ.

Exit mobile version