ನಮಸ್ಕಾರಗಳು ಪ್ರಿಯ ಓದುಗರೆ ಶೀತ ಕೆಮ್ಮಿನಂತಹ ಸಮಸ್ಯೆಗೆ ಆಸ್ಪತ್ರೆ ಕಡೆ ಹೋಗುವ ಅಭ್ಯಾಸ ನಿಮಗಿದ್ದರೆ ಅದನ್ನು ಇಂದೆ ಮರೆತು ಬಿಡಿ ಹೌದು ಈ ದಿನದ ಲೇಖನದಲ್ಲಿ ನಾವು ತಿಳಿಸುವಂತಹ ಈ ಮನೆಮದ್ದನ್ನು ಮಾಡುವುದರಿಂದ ಖಂಡಿತ ಇಂತಹ ಚಿಕ್ಕಪುಟ್ಟ ಸಮಸ್ಯೆಗಳಿಗೆ ಆಸ್ಪತ್ರೆಗೆ ಹೋಗುವ ಅವಶ್ಯಕತೆಯೇ ಬರುವುದಿಲ್ಲ ಅದರಲ್ಲಿಯೂ ಕೊ…ರೋನಾ ಬಂದಾಗಿನಿಂದ ಆಸ್ಪತ್ರೆಗೆ ಹೋಗಲು ಮಂದಿ ಹೆದರುತ್ತಾರೆ ಹಾಗೂ ಮನೆಯಲ್ಲಿಯೇ ಬಂದಿರುವ ಚಿಕ್ಕ ಪುಟ್ಟ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಲು ಇಚ್ಛಿಸುತ್ತಾರೆ.
ಹಾಗಾಗಿ ಇವತ್ತಿನ ಲೇಖನಿಯಲ್ಲಿ ಶೀತ ಕೆಮ್ಮಿನಂತಹ ಚಿಕ್ಕ ಪುಟ್ಟ ತೊಂದರೆಗಳಿಗೆ ಮನೆಯಲ್ಲಿಯೇ ಲೇಹ್ಯ ಒಂದನ್ನ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡಲಿದ್ದೇವೆ ಇದನ್ನು ನೀವೂ ಕೂಡ ತಿಳಿದು ಮನೆಯಲ್ಲಿ ಮಾಡಿಟ್ಟುಕೊಂಡು ಇದರ ಪ್ರಯೋಜನವನ್ನು ಪಡೆದುಕೊಂಡು ಬಂದರೆ ಶೀತ ಕೆಮ್ಮು ಜತೆಗೇ ಕೆಮ್ಮು ಬಂದಾಗ ಉಂಟಾಗುವ ಗಂಟಲು ನೋವು ಕಫ ಕರಗಲು ಸಹಕಾರಿಯಾಗಿರುತ್ತದೆ ಈ ಮನೆಮದ್ದು.
ಹೌದು ಈ ಮನೆಮದ್ದು ಪಾಲಿಸುವ ವಿಧಾನ ಹೇಗೆ ಎಂಬುದನ್ನು ತಿಳಿದುಕೊಂಡ ಮೇಲೆ ನಿಮಗೆ ಈ ಚಿಕ್ಕಪುಟ್ಟ ಸಮಸ್ಯೆಗಳಿಗೆ ಮಾತ್ರ ತೆಗೆದುಕೊಳ್ಳುವ ಅವಶ್ಯಕತೆಯೇ ಬರುವುದಿಲ್ಲ, ಅಷ್ಟು ಸುಲಭವಾಗಿ ಈ ಸಮಸ್ಯೆಗೆ ಪರಿಹಾರ ಮಾಡಿಕೊಳ್ಳಬಹುದು.
ಹೌದು ಸಾಮಾನ್ಯವಾಗಿ ಎಲ್ಲರೂ ಕೂಡ ಮಾಡೋದೆ ಅದು ಶೀತ ಕೆಮ್ಮು ಬಂದರೆ ಮಾತ್ರೆ ತೆಗೆದುಕೊಳ್ಳುತ್ತಾರೆ ಅದರಲ್ಲಿಯೂ ಶೀತಕ್ಕೆ ಮಾತ್ರ ತೆಗೆದುಕೊಂಡರೆ ವಿಪರೀತ ನಿದ್ರೆ ಬರುತ್ತದೆ ಆದರೆ ಮಾತ್ರೆ ತೆಗೆದುಕೊಳ್ಳದೆ ಶೀತಕ್ಕೆ ಈ ಲೇಹ್ಯವನ್ನೂ ಸೇವಿಸುತ್ತಾ ಬಂದರೆ ಅಡ್ಡ ಪರಿಣಾಮವಿಲ್ಲದೆ ಶೀತ ನಿವಾರಣೆಯಾಗುತ್ತದೆ ಜೊತೆಗೆ ಮಾತ್ರೆ ಅವಶ್ಯಕತೆ ಕೂಡ ಬರುವುದಿಲ್ಲ.ಈ ಲೇಖನವನ್ನು ಓದಿದ ಮೇಲೆ ಮನೆಯಲ್ಲಿ ನೀವು ಕೂಡ ಈ ಲೇಹವನ್ನು ಮಾಡಿಟ್ಟುಕೊಳ್ಳಿ ಇದಕ್ಕೆ ಬೇಕಾಗುವ ಪದಾರ್ಥಗಳು ಮೆಣಸು ಮತ್ತು ಅಜ್ವಾನ ಬೆಲ್ಲ ಶುಂಠಿ.
2 ಇಂಚಿನಷ್ಟು ಶುಂಠಿಯನ್ನು ತೆಗೆದುಕೊಂಡು ಅದನ್ನು ಸ್ವಲ್ಪ ಸುಟ್ಟು ಬಳಿಕ ಕುಟ್ಟಿ ಪೇಸ್ಟ್ ಮಾಡಿಕೊಳ್ಳಬೇಕು.ಈಗ ಕಾಳುಮೆಣಸು ಮತ್ತು ಅಜ್ವಾನವನ್ನು ಸ್ವಲ್ಪ ಹುರಿದು ಅದನ್ನು ಪುಡಿ ಮಾಡಿ ಇಟ್ಟುಕೊಂಡು, ಈ ಪುಡಿ ಮಾಡಿಕೊಂಡ ಮಿಶ್ರಣವನ್ನು ಸ್ವಲ್ಪ ನೀರನ್ನು ಕುದಿಯಲು ಇಟ್ಟು ಆ ನೀರಿಗೆ ಹಾಕಿ ಜೊತೆಗೆ ಇದಕ್ಕೆ ಹೆಚ್ಚಿನ ಬೆಲ್ಲವನ್ನು ಹಾಕಿ ಬೆಲ್ಲವನ್ನು ಕರಗಿಸಿ ಕೊಳ್ಳಬೇಕು ಇದಕ್ಕೆ ಪೇಸ್ಟ್ ಮಾಡಿಕೊಂಡು ಶುಂಠಿಯನ್ನು ಹಾಕಿ ಈ ಮಿಶ್ರಣ ಗಟ್ಟಿಯಾಗುವವರೆಗೆ ನೀರನ್ನು ಕುದಿಸಿ ಕೊಳ್ಳಬೇಕು.
ಈಗ ಈ ಮಿಶ್ರಣ ಖುದ್ದು ಗಟ್ಟಿಯಾಗಿ ಲೇಹ್ಯ ಆಗಿರುತ್ತದೆ ಇದನ್ನು ಉಂಡೆ ಮಾಡಿಕೊಂಡು ಟ್ಯಾಬ್ಲೆಟ್ ರೀತಿಯಲ್ಲಿಯೂ ಕೂಡ ಸೇವಿಸಬಹುದು ಅಥವಾ ಲೇಹ್ಯವನ್ನು ತಿನ್ನಬಹುದು ಇದರಿಂದ ಶೀತ ಎಂಬ ಸಮಸ್ಯೆ ಬಹಳ ಬೇಗ ಪರಿಹಾರ ಆಗುವುದರ ಜೊತೆಗೆ ಗಂಟಲು ನೋವು ಜೊತೆಗೆ ಕೆಮ್ಮಿನ ಬಾಧೆಗೆ ಕೂಡ ನಿವಾರಣೆ ಆಗುತ್ತೆ.
ಸಾಮಾನ್ಯವಾಗಿ ಕೆಮ್ಮು ಬಂದರೆ ಅದು ಬೇಗನೆ ಪರಿಹಾರ ಆಗುವುದಿಲ್ಲ. ಹಾಗಾಗಿ ಈ ಕೆಮ್ಮಿನ ಸಮಸ್ಯೆಗೆ ಈ ಲೇಹ್ಯ ಬಹಳ ಬೇಗ ಪರಿಹಾರವನ್ನು ಕೊಡುತ್ತೆ ಜೊತೆಗೆ ಈ ಮನೆಮದ್ದನ್ನು ಪಾಲಿಸುವುದರಿಂದ ಯಾವುದೇ ತರದ ಅಡ್ಡ ಪರಿಣಾಮಗಳು ಆಗುವುದಿಲ್ಲಾ, ಆದರೆ ಶೀತ ಕೆಮ್ಮಿಗೆ ಮಾತ್ರೆ ಸಿರಪ್ ಇಂತಹ ಪರಿಹಾರಗಳನ್ನ ಮಾಡುವುದರಿಂದ ಆರೋಗ್ಯವೂ ವೃದ್ಧಿ ಆಗುತ್ತೆ ಜೊತೆಗೆ ಕೆಮ್ಮು ಶೀತದಂತಹ ಸಮಸ್ಯೆ ಕೂಡ ಬಹಳ ಬೇಗ ನಿವಾರಣೆ ಆಗುತ್ತದೆ ಈ ಸರಳ ಪರಿಹಾರ ಪಾಲಿಸಿ ಕೆಮ್ಮು ಶೀತ ನೆಗಡಿ ಇಂತಹ ತೊಂದರೆಗಳಿಂದ ಶಮನ ಪಡೆದುಕೊಳ್ಳಿ ಧನ್ಯವಾದ.