ನಮಸ್ಕಾರಗಳು ಪ್ರಿಯ ಓದುಗರೆ ನಮ್ಮ ಕರ್ನಾಟಕದಲ್ಲಿಯೇ ಇರುವಂತಹ ಈ ವಿಶೇಷ ದೇವಾಲಯ ನರಸಿಂಹ ದೇವನು ಈ ದೇವಾಲಯ ವಿಷ್ಣುವಿನ ಅವತಾರವಾಗಿದೆ. ಈ ದೇವಾಲಯವು ಬೀದರ್ ನಲ್ಲಿ ಎದ್ದು ಈ ದೇವಾಲಯಕ್ಕೆ ಹೋಗಲು ನೀರಿನ ಒಳಗೆ ಇಳಿಯಬೇಕಾಗುತ್ತದೆ. ಇಲ್ಲಿ ವಿಷ್ಣು ಸ್ವಾಮಿಯು ನರಸಿಂಹನ ಅವತಾರದಲ್ಲಿ ನೆಲೆಸಿದ್ದಾರೆ. ನರಸಿಂಹ ದೇವರು ಸಿಂಹ ತಲೆ ಮತ್ತು ಮಾನವನ ದೇಹದ ರೂಪದಲ್ಲಿ ನೆಲೆಸಿದ್ದು, ಭಾರತೀಯ ಹಿಂದೂ ಪುರಾಣದಲ್ಲಿ ಭಗವಾನ್ ನರಸಿಂಹ ಕಂಬದಿಂದ ಹೊರ ಬರುತ್ತಾರೆ ಎಂದು ಹೇಳಲಾಗಿದೆ ಹಾಗೆ ಹಿರಣ್ಯ ಕಶ್ಯಪುವಿನಿಂದ ಪ್ರಹ್ಲಾದನನ್ನು ರಕ್ಷಿಸುತ್ತಾರೆ ನರಸಿಂಹ ದೇವಾಲಯ ತುಂಬಾ ಕಡೆ ಇದೆ. ಅದರಲ್ಲಿ ಬೀದರ್ ನಲ್ಲಿ ಇರುವ ನರಸಿಂಹನ ಜರಾಣಿ ಗುಹೆ ಕೂಡ ಒಂದು. ಆದರೆ ಈ ದೇವಾಲಯವು ತುಂಬಾ ವಿಶೇಷ, ಜೀವನದಲ್ಲಿ ಒಮ್ಮೆ ಆದರೂ ಈ ದೇವಾಲಯಕ್ಕೆ ಭೇಟಿ ಕೊಡಿ ಹೆಸರುವಾಸಿ ಐತಿಹಾಸಿಕ ಸ್ಥಳದಲ್ಲಿ ಬೀದರ್ ಕೂಡ ಒಂದು ಇದನ್ನು ಉತ್ತರ ಕರ್ನಾಟಕ ಸ್ಮಾರಕ ನಗರ ಎಂದು ಕರೆಯುತ್ತಾರೆ.
ಬೀದರ್ ನ ಹೆಸರುವಾಸಿ ಸ್ಥಳಗಳಲ್ಲಿ ಒಂದಾಗಿರುವ ಈ ದೇವಾಲಯವು, ಇಲ್ಲಿ ನರಸಿಂಹ ಜರಾಣಿ ಗುಹೆ ದೇವಾಲಯ ಸಹ ಇದೆ. ಇದರ ವಿಶೇಷತೆ ಏನು ಅಂತಾ ಹೇಳುವುದಾದರೆ ನರಸಿಂಹ ದೇವರ ಪ್ರತಿಮೆ ಒಂದು ಸುರಂಗ ಗುಹೆ ಒಳಗೆ ಇದ್ದು, ಈ ಗುಹೆ ಒಳಗೆ ವರ್ಷದ 365 ದಿನ ನೀರಿನಿಂದ ತುಂಬಿರುತ್ತದೆ ನರಸಿಂಹ ದೇವರ ಪ್ರತಿಮೆ ಗುಹೆಯ ಅಂತ್ಯದಲ್ಲಿದೆ ಮತ್ತು ಪ್ರತಿಮೆಯನ್ನು ತಲುಪಲು ಭಕ್ತರು 5 ರಿಂದ 6 ಅಡಿ ನೀರು ತುಂಬಿದ ಗುಹೆ ಒಳಗೆ ಒಂದು ಕಿ.ಮಿ ಕಾಲುದಾರಿಯಲ್ಲಿ ನಡೆದು ಹೋಗಬೇಕು.
ಪುರಾಣ ಕಥೆ ಹೇಳುತ್ತದೆ ಹಿರಣ್ಯ ಕಶಿಪುವನ್ನು ಕೊಂದ, ನರಸಿಂಹ ದೇವರು ಈ ಗುಹೆಯಲ್ಲಿ ಜರಾಸಿಂಹ ನನ್ನು ಕೊಳ್ಳುತ್ತಾನೆ. ಜರಾಸುರ ಈ ಗುಹೆ ಒಳಗೆ ಅವಿತು ಕುಳಿತಿರುತ್ತಾನೆ, ಇವನು ಮಹಾ ಶಿವ ಭಕ್ತ ಆಗಿರುತ್ತಾನೆ. ಈ ಗುಹೆಯಲ್ಲಿ ಶಿವ ಲಿಂಗವನ್ನು ಇಟ್ಟು ಶಿವನನ್ನು ಧ್ಯಾನ ಮಾಡುತ್ತಿರುತ್ತಾನೆ. ಇಲ್ಲಿ ನರಸಿಂಹ ಸ್ವಾಮಿಯು ಜರಾಸೂರ ನ ಶಿವ ಭಕ್ತಿ ನೋಡಿ ನಿನ್ನ ಕೊನೆ ಆಸೆ ಏನು ಹೇಳೆಂದು ಕೇಳುತ್ತಾರೆ. ಅದಕ್ಕೆ ಆ ಸ್ಥಳಕ್ಕೆ ಜರಣಿ ನರಸಿಂಹ ಎಂದು ಕರೆಯುತ್ತಾರೆ. ಜರಣಿ ಅಥವಾ ಜರ ಎಂದರೆ ಜಲ ಅಂದರೆ ಇಲ್ಲಿ ನೀರು ಯಾವಾಗಲೂ ಹರಿಯುತ್ತಿರುತ್ತದೆ. ಇಲ್ಲಿ ಅಚ್ಚರಿ ಏನು ಅಂದರೆ ನೀರು ಏಲಿಂದ ಹರಿದು ಬರುತ್ತದೆ ಎಲ್ಲಿಗೆ ಹೋಗುತ್ತದೆ ಎಂಬುದು ಗೊತ್ತಿಲ್ಲ ಎನ್ನುತ್ತಾರೆ. ಅಲ್ಲಿಯ ಜನರು ಮುಖ್ಯ ದ್ವಾರದ ಬಳಿ ಲಕ್ಷ್ಮಿ ನರಸಿಂಹ ರೂಪದಲ್ಲಿ ಇರುವ ದೇವರು ಇದೆ. ನೀರಿನ ಒಳಗೆ ಇಳಿದು ಗುಹೆ ಒಳಗೆ ನಡೆದುಕೊಂಡು ಹೋದರೆ ಉಗ್ರ ನರಸಿಂಹ ದೇವರ ಮೂರ್ತಿ ಇದೆ. ಈ ಮೂರ್ತಿ ಜೊತೆಗೆ ಅಲ್ಲಿಯೇ ಜರಾಸುರನನ್ನು ಪೂಜಿಸಿದ ಶಿವ ಲಿಂಗ ಕೂಡ ಇದೆ ಹಾಗೂ ಎರಡಕ್ಕೂ ಪೂಜಿಸಲಾಗುತ್ತದೆ.
ಒಂದೇ ಕಡೆ ನರಸಿಂಹ ಮತ್ತು ಶಿವನ ಮೂರ್ತಿ ಇರುವುದು ಮತ್ತು ಪೂಜಿಸುವುದು ವಿರಳ ಈ ನರಸಿಂಹ ದೇವರಿಗೆ ದರ್ಶನ ಮಾಡಿದರೆ ನಮ್ಮ ಆಸೆ ಕನಸು ಈಡೇರುತ್ತದೆ ಮತ್ತು ಮಕ್ಕಳಿಗೆ ಕೇಶ ಮುಂಡನ ಮಾಡಿಸಿದರೆ, ಮಕ್ಕಳ ಆಯಸ್ಸು ಹೆಚ್ಚುವುದು ನರಸಿಂಹ ಜರ ದೇವಸ್ಥಾನಕ್ಕೆ ಹಲವಾರು ಹೆಸರು ಇದೆ. ಜರಣಿ ನರಸಿಂಹ ಸ್ವಾಮಿ, ನರಸಿಂಹ ಜರಣಿ ಗುಹೆ ದೇವಾಲಯ ಹಾಗೂ ನರಸಿಂಹ ದೇವಾಲಯ ಇತ್ಯಾದಿ. ನರಸಿಂಹ ಜರಣಿ ಗುಹೆ ದೇವಾಲಯ ಖಂಡಿತವಾಗಿ ಭಾರತದ ಅನನ್ಯ ದೇವಾಲಯಗಳಲ್ಲಿ ಒಂದಾಗಿದೆ. ಈ ಗುಹೆಯು ಸುರಂಗದಲ್ಲಿ ಇದೆ ಆಳವಾದ ನೀರಿನ ಮೂಲಕ ನಡೆದುಕೊಂಡು ಹೋಗುವುದು ರೋಮಾಂಚಕ ವಿಚಾರವಾಗಿದೆ. ನೀವು ಏಂದಾದರು ಬೀದರ್ ಗೆ ಭೇಟಿ ನೀಡಿದಾಗ ನರಸಿಂಹ ದೇವಾಲಯಕ್ಕೆ ಹೋಗಿ ಬನ್ನಿ…