ಎಳ್ಳನ್ನು ಹಾಗೆ ಸೇವಿಸುವುದರ ಬದಲು ಇದೊಂದು ಪದಾರ್ಥದೊಂದಿಗೆ ಮಿಶ್ರ ಮಾಡಿ ತಿನ್ನುತ್ತಾ ಬಂದರೆ ಕ್ಯಾಲ್ಷಿಯಂ ಕೊರತೆ ಜೀವನದಲ್ಲಿ ಉಂಟಾಗುವುದಿಲ್ಲಾ….ನಮಸ್ಕಾರಗಳು ಓದುಗರೇ ನಮ್ಮ ದೇಹಕ್ಕೆ ಕ್ಯಾಲ್ಸಿಯಂನ ಅತ್ಯಗತ್ಯವಾಗಿ ಬೇಕಿರುವ ಯಾಕೆ ಗೊತ್ತಾ? ನಮ್ಮ ದೇಹದ ಅರ್ಧ ಭಾಗದಷ್ಟು ತೂಕದ ಮೂಳೆಗಳ ತೂಕವೇ ಆಗಿರುತ್ತದೆ ಹಾಗಾಗಿ ಮೂಳೆಗಳ ತೂಕ ಕಾಪಾಡಿಕೊಳ್ಳುವುದು ಅತ್ಯವಶ್ಯಕ. ನಮ್ಮ ದೇಹಕ್ಕೆ ಮೂಳೆಗಳು ಎಷ್ಟು ಅತ್ಯಗತ್ಯ ಹಾಗೆ ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯಗತ್ಯ ಎಂಬುದು ನಿಮಗೆ ಗೊತ್ತೆ?
ಯಾವಾಗ ನಮ್ಮ ದೇಹದ ಮೂಳೆಗಳು ದುರ್ಬಲಗೊಳ್ಳುತ್ತದೆ ಹಾಗೂ ಕ್ಯಾಲ್ಶಿಯಂ ಕೊರತೆಯಿಂದ ಮೂಳೆಗಳ ಆರೋಗ್ಯ ಹದಗೆಡುತ್ತದೆ ಆಗ ನಮ್ಮ ಮಂಡಿ ಅಥವಾ ಕೀಲುಗಳು ಕೈಕಾಲುಗಳು ಇವುಗಳು ಇದರಿಂದ ಪ್ರಭಾವಿತಗೊಳ್ಳುವುದಿಲ್ಲ ನಮ್ಮ ಮೂಳೆಗಳ ಆರೋಗ್ಯ ಸರಿಯಾಗಿಲ್ಲವಾದರೆ ನಮ್ಮ ಶರೀರವು ಕೂಡ ಸ್ಥಿರವಾಗಿರಲು ಸಾಧ್ಯವಾಗುವುದಿಲ್ಲ.ಆದ್ದರಿಂದ ಕ್ಯಾಲ್ಸಿಯಂ ಕೊರತೆ ಉಂಟಾದಾಗ ಏನೇನೋ ಸಮಸ್ಯೆಗಳು ಬರುತ್ತೆ ಅದು ಮಂಡಿ ನೋವು ಕೀಲು ನೋವಿಗೆ ಸಂಬಂಧಿಸಿದ ಸಮಸ್ಯೆಗಳು ಮಾತ್ರ ಆಗಿರುವುದಿಲ್ಲ ಇನ್ನೂ ಬೇರೆ ರೀತಿಯ ಅನಾರೋಗ್ಯ ಸಮಸ್ಯೆಗಳು ಕೂಡ ಕಾಡುತ್ತದೆ.
ನಿಮಗಿದು ಗೊತ್ತೆ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾಗುವುದು, ಯಾಕೆ ಅಂತ ನಮ್ಮ ದೇಹದಲ್ಲಿ ಯಾವಾಗ ಆಮ್ಲದ ಪ್ರಮಾಣವು ಹೆಚ್ಚುತ್ತದೆ ಆಗ ದೇಹದಲ್ಲಿ ಕ್ಯಾಲ್ಸಿಯಂ ಅಂಶ ಕುಂಠಿತವಾಗಿ ಕ್ಯಾಲ್ಷಿಯಂ ಕೊರತೆಯಿಂದ ಮೂಳೆಗಳು ದುರ್ಬಲಗೊಳ್ಳುತ್ತದೆ.ಹಾಗಾಗಿ ಕ್ಯಾಲ್ಷಿಯಂ ಕೊರತೆ ಉಂಟಾಗಬಾರದು ಅಂದರೆ ಆಹಾರ ಪದ್ಧತಿಯೂ ಕೂಡ ಉತ್ತಮವಾಗಿರಬೇಕು ಜೊತೆಗೆ ಆಹಾರದಲ್ಲಿ ಆಮ್ಲೀಯತೆ ಹೆಚ್ಚುವಂತಹ ಪದಾರ್ಥಗಳನ್ನು ಕಡಿಮೆ ಮಾಡಿ ದೇಹಕ್ಕೆ ಬೇಕಾದ ಖನಿಜಾಂಶಗಳು ಇರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವನೆ ಮಾಡುತ್ತಾ ಬನ್ನಿ.
ಈಗ ಕ್ಯಾಲ್ಷಿಯಂ ಕೊರತೆ ದೂರವಾಗುವುದಕ್ಕೆ ಮಾಡಬಹುದಾದ ಸರಳ ಪರಿಹಾರದ ಬಗ್ಗೆ ಮಾಹಿತಿ ತಿಳಿಯೋಣ, ಎಗ್ ವೈಟ್ ತಿನ್ನಬಹುದು ಮತ್ತು ಹಾಲನ್ನು ಹೆಚ್ಚಾಗಿ ಸೇವಿಸಬೇಕು ಜೊತೆಗೆ ಎಳ್ಳನ್ನು ತಿನ್ನಬಹುದು ಹೌದು ಎಳ್ಳನ್ನು ಪುಡಿಮಾಡಿ ಹಾಲಿನೊಂದಿಗೆ ಮಿಶ್ರಮಾಡಿ ಬೆಳಿಗ್ಗೆ ಸಮಯದಲ್ಲಿ ಕುಡಿಯುತ್ತಾ ಬಂದರೆ ಬಹಳ ಒಳ್ಳೆಯದು, ಆದರೆ ಈ ಎಳ್ಳನ್ನು ಮತ್ತೊಂದು ವಿಧಾನದಲ್ಲಿಯೂ ಕೂಡ ನೀವೇನದರೂ ತಿನ್ನುತ್ತಾ ಬಂದರೆ ಅತ್ಯಂತ ವೇಗವಾಗಿ ಕ್ಯಾಲ್ಷಿಯಂ ಕೊರತೆ ಅತಿ ಬೇಗ ನಿವಾರಣೆ ಆಗುತ್ತೆ.
ಹೇಗೆಂದರೆ ಕ್ಯಾಲ್ಷಿಯಂ ಹೆಚ್ಚಾಗಬೇಕೆಂದರೆ ಇದಕ್ಕೆ ಬಿಳಿಎಳ್ಳು ಸಹಕಾರಿ ಇದನ್ನು ಜೇನುತುಪ್ಪದೊಂದಿಗೆ ಮಿಶ್ರ ಮಾಡಿ ಪ್ರತಿದಿನ ಬೆಳಿಗ್ಗೆ ಮಧ್ಯಾಹ್ನ ಊಟದ ನಂತರ ತಿನ್ನುತ್ತಾ ಬಂದರೆ ಆರೋಗ್ಯವೂ ವೃದ್ಧಿಸುತ್ತದೆ ಮತ್ತು ಮೂಳೆಗಳ ಆರೋಗ್ಯವೂ ಹೆಚ್ಚುತ್ತೆ.ಇದನ್ನು ಮಾಡಿಕೊಳ್ಳುವುದು ಹೇಗೆ ಅಂದರೆ ತುಂಬಾ ಸುಲಭ ಸಮಪ್ರಮಾಣದ ಅಂದರೆ 4 ಚಮಚ ಬಿಳಿ ಎಳ್ಳು ಒಂದು ಗಾಜಿನ ಬಟ್ಟಲಿಗೆ ಹಾಕಿಕೊಂಡು ಅದಕ್ಕೆ 4 ಚಮಚ ಜೇನು ತುಪ್ಪವನ್ನು ಮಿಶ್ರಮಾಡಿ, 3 ದಿನಗಳ ಕಾಲ ಅದನ್ನು ನೆನೆಯಲು ಬಿಡಬೇಕು. ತದನಂತರ ಅದನ್ನು ನೀವು ಬೆಳಿಗ್ಗೆ ಮತ್ತು ಮಧ್ಯಾಹ್ನ ಊಟದ ನಂತರ ಒಂದೊಂದು ಚಮಚ ಮಕ್ಕಳಿಗಾದರೆ ಅರ್ಧ ಚಮಚ ತಿನ್ನಲು ನೀಡಬೇಕು.
ಯಾರೆಲ್ಲಾ ಈ ಪದ್ಧತಿ ಪಾಲಿಸುವುದು ಒಳ್ಳೆಯದಲ್ಲ ;ಹೌದು ಗರ್ಭಿಣಿ ಸ್ತ್ರೀಯರು ಮತ್ತು ಮಗು ಪಡೆಯಬೇಕು ಅಂತ ಬಯಸುತ್ತಾ ಇರುವವರು ಈ ಮನೆಮದ್ದನ್ನು ಪಾಲಿಸಬೇಡಿ. ಹೌದು ಈ ಹೆಣ್ಣುಮಕ್ಕಳಲ್ಲಿ ಹೆಚ್ಚಾಗಿ ಕ್ಯಾಲ್ಷಿಯಂ ಕೊರತೆ ಉಂಟಾಗುವ ಕಾರಣ ಈ ಪರಿಹಾರ ವನ್ನೂ ಇಂಥವರು ಪಾಲಿಸದೇ ಇರುವುದು ಒಳ್ಳೆಯದು.
ಕ್ಯಾಲ್ಸಿಯಂ ಕೊರತೆಯಿಂದಾಗಿ ಮಾತ್ರೆ ತೆಗೆದುಕೊಳ್ಳುವವರಲ್ಲಿ ಸಾಮಾನ್ಯವಾಗಿ ಬೇರೆ ತರಹದ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುತ್ತದೆ, ಮತ್ತೊಂದು ವಿಚಾರ ಏನು ಅಂದರೆ ದೇಹದಲ್ಲಿ ಅಧಿಕವಾಗಿ ಕ್ಯಾಲ್ಶಿಯಂ ಅಂಶ ಹೆಚ್ಚಾಗಬಾರದು ಕೂಡ, ಆದ್ದರಿಂದ ಸರಿಯಾದ ಪ್ರಮಾಣದಲ್ಲಿ ಕ್ಯಾಲ್ಷಿಯಂ ಅಂಶವು ನಮ್ಮ ದೇಹದಲ್ಲಿ ಇರುವ ಹಾಗೆ ನೋಡಿಕೊಳ್ಳಬೇಕಿರುತ್ತೆ.