Ad
Home ಅರೋಗ್ಯ ಊಟ ಮಾಡಿದಮೇಲೆ ಈ 6 ಕೆಲಸಗಳು ಮಾಡಲೇಬಾರದು … ಹಾಗೆ ಮಾಡಿದ್ರೆ ನಿಮ್ಮ ಜೀವನಕ್ಕೆ ನೀವೇ...

ಊಟ ಮಾಡಿದಮೇಲೆ ಈ 6 ಕೆಲಸಗಳು ಮಾಡಲೇಬಾರದು … ಹಾಗೆ ಮಾಡಿದ್ರೆ ನಿಮ್ಮ ಜೀವನಕ್ಕೆ ನೀವೇ ಗುಂಡಿ ತೋಡಿಕೊಂಡಂತೆ ಆಗುತ್ತೆ…

ಊಟ ಮಾಡಿದ ನಂತರ ನಿಮ್ಮ ದಿನಚರಿಯಲ್ಲಿ ನೀವೇನಾದರೂ ಇಂಥ ರೂಢಿಗಳನ್ನು ರೂಢಿಸಿಕೊಂಡಿದ್ದಲ್ಲಿ, ನಿಮಗೆ ಮುಂದೆ ಅಪಾಯ ಉಂಟಾಗಬಹುದು ಹಾಗೂ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಹಾಗಾದರೆ ಬನ್ನಿ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವಂತಹ ಆ ಕೆಟ್ಟ ಹವ್ಯಾಸಗಳ ಬಗ್ಗೆ ತಿಳಿದುಕೊಳ್ಳೋಣ ಇಂದಿನ ಲೇಖನದಲ್ಲಿ. ಹೌದು ಎಷ್ಟೋ ಜನರಿಗೆ ಈ ಮಾಹಿತಿ ತಿಳಿಯದೆ ಅವರು ಇಂತಹ ಕೆಲವೊಂದು ಹವ್ಯಾಸಗಳು ರೂಢಿಸಿಕೊಂಡಿರುತ್ತಾರೆ. ಆದರೆ ನೀವು ತಿಳಿಯಲೇಬೇಕಾದ ಅಂತಃ ಮುಖ್ಯ ಮಾಹಿತಿ ಇದಾಗಿದ್ದು ಆರೋಗ್ಯ ಕಾಪಾಡಿಕೊಳ್ಳಲು ಈ ಮಾಹಿತಿಯನ್ನು ತಪ್ಪದೇ ಪುರುಷರು ಮತ್ತು ಮಹಿಳೆಯರು ಈ ಮಾಹಿತಿ ತಿಳಿದುಕೊಳ್ಳಿ ಹಾಗೂ ಬೇರೆಯವರಿಗೂ ಕೂಡ ಈ ಮಾಹಿತಿ ತಿಳಿಸಿರಿ.

ಹೌದು ಊಟದ ಬಳಿಕ ಈ ಕೆಲವೊಂದು ಕೆಲಸಗಳನ್ನು ಮಾಡುವುದರಿಂದ ಇದು ನೇರವಾಗಿ ಜೀರ್ಣಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ ಹೇಗೆ ಅಂದರೆ ನೀವೇನಾದರೂ ಊಟದ ಬಳಿಕ ಸಿಗರೇಟ್ ಸೇವನೆ ಮಾಡುವ ಹವ್ಯಾಸವನ್ನು ರೂಢಿಸಿಕೊಂಡಿದ್ದ ಇಲ್ಲಿ ತಿಳಿಯಿರಿ ನಿಮ್ಮ ಆರೋಗ್ಯದ ಮೇಲೆ ಎಷ್ಟು ಕೆಟ್ಟ ಮತ್ತು ಗಂಭೀರ ಪರಿಣಾಮ ಬೀರುತ್ತದೆ ಎಂದು ಹೌದು ನೀವು ನೀವು ಸಿಗರೇಟ್ ಸೇವನೆಯ ನಂತರ ಇಂತಹ ಒಂದು ತಪ್ಪು ಕೆಲಸವನ್ನು ಮಾಡುತ್ತಾ ಇದ್ದೀರಾ ಎಂದು ಯಾಕೆ ಅಂದರೆ ಸಿಗರೇಟ್ ಸೇವನೆ ಆರೋಗ್ಯಕ್ಕೆ ಮೊದಲೇ ಅಪಾಯಕಾರಿ ಇನ್ನು ಊಟದ ಬಳಿಕ ನೀವು ಸಿಗರೇಟ್ ಸೇವನೆ ಮಾಡಿದಲ್ಲಿ ಅದು ಹತ್ತು ಸಿಗರೇಟ್ ಸೇವನೆ ಮಾಡುವುದರ ಸಮವಾಗಿರುತ್ತದೆ ಇದರಿಂದ ನಿಮ್ಮ ಆರೋಗ್ಯ ಹದಗೆಡಬಹುದು ನೀವೇ ಒಮ್ಮೆ ಯೋಚಿಸಿ ಆದ್ದರಿಂದ ಊಟದ ಬಳಿಕ ಯಾವುದೇ ಕಾರಣಕ್ಕೂ ಸಿಗರೇಟ್ ಸೇವನೆ ಮಾಡಬೇಡಿ ಇದರಿಂದ ಜೀರ್ಣ ಕ್ರಿಯೆ ಸಂಪೂರ್ಣವಾಗಿ ಬದಲಾಗಿ ನಿಮ್ಮ ಆರೋಗ್ಯ ಏರುಪೇರಾಗುತ್ತದೆ.

ಎರಡನೆಯ ಹವ್ಯಾಸ ಊಟದ ಬಳಿಕ ಸ್ನಾನ ಮಾಡುವುದು ಹೌದು ನಾವು ಊಟ ಮಾಡಿದ ಬಳಿಕ ನಮ್ಮ ಹೊಟ್ಟೆಯಲ್ಲಿ ಜೀರ್ಣಕ್ರಿಯೆ ಉಂಟಾಗುತ್ತದೆ ಯಾವಾಗ ನಾವು ಸ್ನಾನ ಮಾಡುತ್ತೇವೆ ನಮ್ಮ ದೇಹದಲ್ಲಿ ಜೀರ್ಣಕ್ರಿಯೆಗೆ ಉತ್ಪಾದನೆಯಾಗುವಂತಹ ಜೀರ್ಣರಸಗಳು ಉತ್ಪತ್ತಿ ಆಗದೆ ಊಟ ಅಪೂರ್ಣವಾಗಿ ಜೀರ್ಣಗೊಳ್ಳುತ್ತದೆ ಇದರಿಂದ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ ಹಾಗೂ ರಕ್ತ ಕೆಡುವ ಸಾಧ್ಯತೆ ಇರುತ್ತದೆ ಆದಕಾರಣ ಊಟದ ಬಳಿಕ ತಕ್ಷಣವೇ ಸ್ನಾನ ಮಾಡಬೇಡಿ. ಇನ್ನೂ ಸ್ನಾನ ಮಾಡುವ ಅವಕಾಶ ಬಂದರೆ ನೀವು ಊಟದ ಬಳಿಕ ಅರ್ಧ ಗಂಟೆ ನಂತರ ಸ್ನಾನ ಮಾಡಿಕೊಳ್ಳಿ ಇದರಿಂದ ಯಾವ ಸಮಸ್ಯೆ ಉಂಟಾಗುವುದಿಲ್ಲ.

ಹೆಚ್ಚಿನ ಜನರಿಗೆ ಊಟದ ಬಳಿಕ ಹಣ್ಣು ಸೇವನೆ ಮಾಡುವ ರೂಢಿಯಿರುತ್ತದೆ ಆದರೆ ಊಟದ ಬಳಿಕ ತಕ್ಷಣವೇ ಹಣ್ಣು ಸೇವನೆ ಮಾಡುವುದರಿಂದ ಇಂತಹ ಕೆಟ್ಟ ಪರಿಣಾಮ ದೇಹದ ಮೇಲೆ ಉಂಟಾಗುತ್ತದೆ ಗೊತ್ತಾ? ಹೌದು ಸ್ನೇಹಿತರೆ ಊಟದ ಬಳಿಕ ಹಣ್ಣು ಸೇವನೆ ಮಾಡಿದರೆ ಈ ಹಣ್ಣು ದೇಹದಲ್ಲಿ ಬೇಗ ಜೀರ್ಣಗೊಳ್ಳುತ್ತದೆ ಆದರೆ ನೀವು ಸೇವನೆ ಮಾಡಿದ ಆಹಾರ ಬೇಗ ಜೀರ್ಣವಾಗುವುದಿಲ್ಲ ಈ ಸಂಧರ್ಬದಲ್ಲಿ ಹಣ್ಣು ಜೀರ್ಣಗೊಂಡ ನಂತರ ಇದು ಹೊರಗೆ ಹೋಗಲು ಜಾಗವಿಲ್ಲದೆ ಹೊಟ್ಟೆಯಲ್ಲಿ ಇರುವಂತಹ ಆಹಾರ ಪದಾರ್ಥವನ್ನು ಸಹ ಹಾಳು ಮಾಡಿ ಇದರಿಂದ ಸಹ ಮಲಬದ್ಧತೆ ಉಂಟಾಗುವ ಸಾಧ್ಯತೆ ಇರುತ್ತದೆ.

ಮತ್ತೊಂದು ವಿಚಾರ ತಿಳಿಯಿರಿ ಊಟದ ಬಳಿಕ ತಣ್ಣೀರು ಸೇವನೆ ಕೂಡ ಮಾಡಬಾರದು ಯಾಕೆ ಅಂದರೆ ಊಟದ ನಂತರ ನಮ್ಮ ದೇಹದಲ್ಲಿ ಜೀರ್ಣಾಂಗ ರಸ ಉತ್ಪತ್ತಿ ಆಗುವ ಕಾರಣ ಯಾವಾಗ ನಾವು ಹೆಚ್ಚು ತಣ್ಣೀರು ಸೇವನೆ ಮಾಡ್ತೇವೆ ಜೀರ್ಣಾಂಗ ರಸ ಉತ್ಪಾದನೆಯಾಗಲು ಇದು ಬಿಡುವುದಿಲ್ಲ ಅಥವಾ ಜೀರ್ಣಾಂಗ ರಸ ಕಡಿಮೆ ಸಮಯದಲ್ಲೇ ಉತ್ಪತ್ತಿಯಾಗುತ್ತದೆ. ಈ ಕಾರಣದಿಂದಾಗಿ ಊಟದ ಬಳಿಕ ಇಂತಹ ಕೆಲವೊಂದು ಹವ್ಯಾಸಗಳು ನಿಮಗೆ ಇದ್ದಲ್ಲಿ ತಪ್ಪದೆ ಅದನ್ನು ಇಂದಿನಿಂದಲೇ ಸರಿಪಡಿಸಿಕೊಳ್ಳಿ ಮುಂದಿನ ದಿವಸಗಳಲ್ಲಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಒಮ್ಮೆ ನಿಮ್ಮ ಜೀರ್ಣಕ್ರಿಯೆ ಏರುಪೇರಾಯಿತು ಅಂದರೆ ಇದರಿಂದ ನೀವು ಹಲವು ಅನಾರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಮಾಹಿತಿ ತಿಳಿಯಿರಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಧನ್ಯವಾದ.

Exit mobile version