ಈ ಸೈನಸ್ ಸಮಸ್ಯೆಗೆ ಕೆಲವೊಂದು ಬಾರಿ ಕೆಲವರಿಗೆ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ಬಂದರೂ ಅದು ಪರಿಹಾರ ಆಗುತ್ತಿರುವುದಿಲ್ಲ. ಆದರೆ ಮನೆಯಲ್ಲಿಯೇ ಈ ಮನೆ ಮದ್ದು ಮಾಡಿ ಪರಿಣಾಮಕಾರಿಯಾಗಿ ನಿಮ್ಮ ಈ ಸೈನಸ್ ಸಮಸ್ಯೆಗೆ ಫಲಿತಾಂಶ ಸಿಗುತ್ತದೆ ಆದರೆ ಯಾವುದೇ ಅಡ್ಡಪರಿಣಾಮಗಳು ಇರುವುದಿಲ್ಲಾ.
ನಮಸ್ಕಾರಗಳು ಈ ಸೈನಸ್ ಸಮಸ್ಯೆ ಎಂಬುದು ಶ್ವಾಸಕೋಶಕ್ಕೆ ಸಂಬಂಧಿಸಿದ ತೊಂದರೆಯಾಗಿದೆ ಯಾವಾಗ ನಮ್ಮ ಶರೀರದಲ್ಲಿ ಕಫ ಅವು ಕರಗದೆ ಗಟ್ಟಿಯಾಗುತ್ತೆ ಮತ್ತು ಗೊಣ್ಣೆಯು ಸಹ ಕರಗದೆ, ಅದು ಗಟ್ಟಿಯಾಗಿ ಉಳಿಯುತ್ತದೆ ಆಗ ಉಸಿರಾಡುವುದಕ್ಕೆ ತೊಂದರೆ ಉಂಟಾಗುತ್ತದೆ, ಅಂತಹ ಸ್ಥಿತಿಯನ್ನು ಈ ಸೈನಸ್ ಅಂತ ಹೇಳ್ತಾರೆ. ನಮ್ಮ ಮೂಗಿನ ಭಾಗದಲ್ಲಿ ಸೈನಸ್ ಎಂಬ ಭಾಗವಿರುತ್ತದೆ ಅದು ಬಹಳ ಸೆನ್ಸಿಟಿವ್ ಆದಾಗಲೂ ಸಹ ಇಂಥದ್ದೊಂದು ಸಮಸ್ಯೆ ಉಂಟಾಗುತ್ತದೆ.
ಇವರಿಗೆ ಆಗಾಗ ಶೀತ ಮತ್ತು ಉಸಿರಾಟದ ತೊಂದರೆ ಹಾಕುವುದು ಹಾಗೂ ಮೂಗಿನ ಭಾಗದಲ್ಲಿರುವ ಆ ಸೈನಸ್ ಭಾಗ ಬಹಳ ಸೆನ್ಸಿಟಿವ್ ಇರುವುದರಿಂದ ಮೂಗು ಕಡಿಯುವುದು ಕಿರಿಕಿರಿ ಉಂಟಾಗುವುದು ಹೀಗೆ ಆಗುತ್ತಲೆ ಇರುತ್ತದೆ ಅಂಥವರು ಮಾಡಬೇಕಾದ ಪರಿಹಾರಗಳು ಕೇವಲ ಚಿಕಿತ್ಸೆ ಮಾತ್ರವಲ್ಲ ಮನೆಯಲ್ಲಿಯೇ ಕೆಲವೊಂದು ಮನೆಮದ್ದುಗಳನ್ನು ಮಾಡಬಹುದು ಜೊತೆಗೆ ಪ್ರಾಣಾಯಾಮದಂತಹ ಆಸನಗಳನ್ನು ಮಾಡುವುದರಿಂದ, ನಿಮ್ಮ ಈ ಸೈನಸ್ ತೊಂದರೆಗಳನ್ನೂ ಪರಿಣಾಮಕಾರಿಯಾಗಿ ಮನೆಯಲ್ಲಿಯೇ ಶಮನ ಪಡೆಯಬಹುದು. ಹಾಗಾದರೆ ಮನೆಯಲ್ಲಿ ಮಾಡಬಹುದಾದ ಕೆಲವೊಂದು ಮನೆಮದ್ದುಗಳು ಏನು ಇಲ್ಲಿದೆ ನೋಡಿ ಈ ಕುರಿತ ಹೆಚ್ಚಿನ ಮಾಹಿತಿ ಪುಟವನ್ನ ಸಂಪೂರ್ಣವಾಗಿ ತಿಳಿದು ಸೈನಸ್ ಸಮಸ್ಯೆಯಿಂದ ಯಾರು ಬಳಲುತ್ತಿರುತ್ತಾರೆ ಅಂಥವರಿಗೂ ಕೂಡ ಈ ಕೆಲವೊಂದು ಟಿಪ್ ತಿಳಿಸಿಕೊಡಿ.
ಮೊದಲಿಗೆ ಈ ಪರಿಹಾರ ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಮೆಣಸಿನ ಕಾಳು ಅರಿಶಿಣ ಶುಂಠಿ ಮತ್ತು ಜೇನುತುಪ್ಪ.ಈ ಮೆಣಸಿನ ಕಾಳುಗಳನ್ನು ಕುಟ್ಟಿ ಪುಡಿಮಾಡಿ ಇದರೊಟ್ಟಿಗೆ ಅರಿಶಿಣವನ್ನು ಮಿಶ್ರಣ ಮಾಡಿ ಅರ್ಧ ತುಂಡು ಶುಂಠಿಯನ್ನು ಬೆರೆಸಿ ಕುಟ್ಟಿ ಪುಡಿ ಮಾಡಿಕೊಳ್ಳಬೇಕು ಬಳಿಕ ಈ ಪುಡಿ ಮಾಡಿಕೊಂಡ ಮಿಶ್ರಣ ವನ್ನು ಸೋರುವ ನೀರಿಗೆ ಮಿಶ್ರಣ ಮಾಡಿ ನೀರು ತಣ್ಣಗೇ ಆದಮೇಲೆ ಇದಕ್ಕೆ ಜೇನುತುಪ್ಪ ಮಿಶ್ರ ಮಾಡಿ ಕೊಳ್ಳಬಹುದು ಆದರೆ ತುಂಬ ಸುಡುವ ನೀರಿಗೆ ಜೇನುತುಪ್ಪ ಹಾಕಿಕೊಳ್ಳಬೇಡಿ.
ಈ ನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಗೆ ಅದರ ಬೆಡಗಿನ ಉಷಪಾನದ ಬಳಿಕ ಈ ಡ್ರಿಂಕ್ ಕುಡಿಯುತ್ತಾ ಬನ್ನಿ, ಇದರಿಂದ ಗಟ್ಟಿಯಾಗಿರುವ ಕಫ ಕರಗಲು ಸಹಕಾರಿಯಾಗಿರುತ್ತದೆ ಜೊತೆಗೆ ಉಸಿರಾಟಕ್ಕೆ ತೊಂದರೆ ಯಾಗುತ್ತಿರುವ ಸಮಸ್ಯೆಯೂ ಕೂಡ ಪರಿಹಾರವಾಗುತ್ತೆ ಇದನ್ನು ದಿನ ಬಿಟ್ಟು ದಿನ ಮಾಡುತ್ತಾ ಬನ್ನಿ ಪರಿಣಾಮಕಾರಿಯಾಗಿ ನಿಮ್ಮ ಈ ಸಮಸ್ಯೆಗೆ ಫಲಿತಾಂಶ ದೊರೆಯುತ್ತೆ.
ಕೇವಲ ಈ ಪರಿಹಾರವನ್ನು ಮಾಡಿಬಿಟ್ಟರೆ ಸೈನಸ್ ನಿಂದ ಶಮನ ಸಿಗುತ್ತೆ ಅಂತ ಅಲ್ಲ ಇದರ ಜೊತೆಗೆ ಈ ಮೊದಲೇ ಹೇಳಿದ ಹಾಗೆ ಪ್ರಾಣಾಯಾಮವನ್ನು ರೂಢಿಸಿಕೊಳ್ಳಬೇಕು ಹಾಗೂ ವಾರಕ್ಕೆ 2 ಬಾರಿಯಾದರೂ, ಹಬೆ ತೆಗೆದುಕೊಳ್ಳಬೇಕು ಹೌದು ನೀರಿಗೆ ಬಜೆ ಮತ್ತು ಶುಂಠಿಯನ್ನು ಹಾಕಿ ಅದರಿಂದ ಬರುವ ಹಬೆಯನ್ನು ತೆಗೆದುಕೊಳ್ಳುತ್ತಾ ಬಂದರೆ ಉಸಿರಾಟದ ತೊಂದರೆ ನಿವಾರಣೆಯಾಗುತ್ತದೆ ಹಾಗೂ ಈ ರೆಸ್ಪಿರೇಟರಿ ಟ್ರ್ಯಾಕ್ ನಲ್ಲಿರುವ ಕಫ ಕರಗಿ ನಿಮಗೆ ಉಸಿರಾಡಲು ಸಹಕರಿಸುತ್ತದೆ ಈ ಸರಳ ಪರಿಹಾರವನ್ನು ಮಾಡುವುದರಿಂದ ಮತ್ತು ಇದರ ಜೊತೆಗೆ ಪ್ರಾಣಾಯಮ ಮಾಡುವುದರಿಂದ ಬಹಳ ಬೇಗ ಸೈನಸ್ ನಿಂದ ಮುಕ್ತಿ ಪಡೆಯಬಹುದು.
ಸೈನಸ್ ನಿಂದ ಬಳಲುತ್ತಿರುವವರು ಎಲ್ಲಾ ಕಾಲದಲ್ಲಿಯೂ ಎಲ್ಲಾ ವಾಗಲು ಬಿಸಿ ನೀರನ್ನು ಕುಡಿಯುವ ರೂಢಿ ಮಾಡಿಕೊಳ್ಳಿ, ಹೆಚ್ಚೆಚ್ಚು ನೀರು ಕುಡಿಯುವುದರಿಂದ ಕಫ ಆದಷ್ಟು ಬೇಗ ಕರಗಿ ಉಸಿರಾಡುವುದಕ್ಕೂ ಕೂಡ ಸುಲಭ ಎನ್ನಿಸುತ್ತೆ.