ಇದನ್ನ ಕಪ್ಪು ಬಂಗಾರ ಅಂತಾರೆ ಇದನ್ನ ದಿನನಿತ್ಯ ಜೀವನದಲ್ಲಿ ಬಳಸಿದ್ದೇ ಆದಲ್ಲಿ ಅದೆಷ್ಟೋ ವ್ಯಾಧಿಗಳನ್ನ ತಡೆಗಟ್ಟುತ್ತದೆ..

143

ಈ ಕರಿ ಬಂಗಾರದ ಬಗ್ಗೆ ನೀವು ತಿಳಿದರೆ ನೀವು ಕೂಡ ಅಚ್ಚರಿ ಆಗ್ತೀರಾ. ಹೌದು ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ಬಳಕೆ ಮಾಡ್ತೀರಾ ಈ ಕರಿ ಬಂಗಾರವನ್ನು ಏನು ಅಂತ ಯೋಚನೆ ಮಾಡ್ತಾ ಇದ್ದೀರಾ. ಹೌದು ಅದೇ ಕರಿಮೆಣಸು ಸಾಮಾನ್ಯವಾಗಿ ಅಡುಗೆಯಲ್ಲಿ ಬಳಕೆ ಮಾಡುವ ಈ ಕರಿಮೆಣಸು ಬಹಳ ಆರೋಗ್ಯಕರವಾದ ಪ್ರಯೋಜನಗಳನ್ನು ಹೊಂದಿರುತ್ತದೆ.ಆದರೆ ನಾವು ಈ ಕರಿಮೆಣಸಿನ ಬಗೆಗಿನ ಬಗ್ಗೆ ತಿಳಿಯದೇ ಇರುವ ಕೆಲವೊಂದು ವಿಚಾರಗಳು ಕೂಡ ಇವೆ ಅದನ್ನು ತಿಳಿಸಿಕೊಡುವುದರ ಜೊತೆಗೆ, ಈ ಕರಿ ಬಂಗಾರದ ಇನ್ನಷ್ಟು ವಿಶೇಷಕರವಾದ ಆ ಔಷಧಿಯ ಗುಣವನ್ನು ಕೂಡ ತಿಳಿದುಕೊಳ್ಳೋಣ. ಸಂಪೂರ್ಣವಾಗಿ ಮಾಹಿತಿಯನ್ನ ತಿಳಿರಿ ಹಾಗೆ ಬೇರೆಯವರು ಕೂಡ ಈ ಮಾಹಿತಿ ಅನ್ನು ಶೇರ್ ಮಾಡುವುದನ್ನು ಮರೆಯದಿರಿ.

ನಿಮಗಿದು ಗೊತ್ತಾ ಇಸ್ಲಾಮರು ನಮ್ಮ ಭಾರತ ದೇಶಕ್ಕೆ ಬರುವುದಕ್ಕು ಕೂಡ ಮೂಲ ಕಾರಣ ಈ ಕರಿಮೆಣಸು ಆಗಿರುತ್ತದೆ ಅಷ್ಟೇ ಅಲ್ಲ ಪುರಾತನ ರೋಮ್ ನಲ್ಲಿ ಈ ಕರಿಮೆಣಸನ್ನು ಹಣದ ರೂಪದಲ್ಲಿ ಬಳಕೆ ಮಾಡ್ತಾ ಇದ್ರಂತೆ ಇನ್ನೂ ಪೋರ್ಚುಗೀಸರು ಡಚ್ಚರು ಮುಂತಾದವರು ಭಾರತ ದೇಶಕ್ಕೆ ಬರುವುದಕ್ಕೆ ಈ ಕರಿಮೆಣಸು ಕಾರಣ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹಿಂದೆಲ್ಲ ನಮ್ಮ ಭಾರತ ದೇಶದಲ್ಲಿ ಈ ಕರಿಮೆಣಸು ಮುಖ್ಯ ಬೆಳೆ ಆಗಿರುತ್ತಿತ್ತು.

ಸುಮಾರು ಒಂದನೆ ಶತಮಾನದಿಂದಲೆ ದಕ್ಷಿಣ ಭಾರತದ ರಾಜರು ಅನೇಕ ದೇಶಗಳೊಂದಿಗೆ ಅಂದರೆ ಡಚ್ಚರು ಗ್ರೀಕರು ಪೋರ್ಚುಗೀಸರೊಡನೆ ಕರಿಮೆಣಸು ಸೇನಾ ವ್ಯವಹಾರವನ್ನೂ ಮಾಡುತ್ತಿದ್ದರು ಇದರಿಂದಲೇ ನಮ್ಮ ಭಾರತ ದೇಶ ಶ್ರೀಮಂತ ರಾಷ್ಟ್ರ ಅಂತ ಕರೆಸಿ ಕೊಂಡಿತ್ತು. ಈ ಕರಿ ಮೆಣಸು ಯಾಕೆ ಇಷ್ಟೊಂದು ಔಷಧೀಯ ಗುಣವನ್ನು ಹೊಂದಿದೆ ಅಂದರೆ ಈ ಕರಿಮೆಣಸಿನಲ್ಲಿ ಪೆಪರಿನ್ ಅನ್ನೊ ಒಂದು ಅಂಶ ಇದೆ. ಇದರಲ್ಲಿ ವಿಟಮಿನ್ ಸಿ ವಿಟಮಿನ್ ಎ ಫ್ಲೆವನಾಯ್ಡ್ಸ್ ಅಂಶ ಇದ್ದು ಇವೆಲ್ಲವೂ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ.

ಕರಿಮೆಣಸಿನ ಅರಿಶಿಣದೊಂದಿಗೆ ಬೆರೆಸಿದರೆ ಇದರ ಒಂದು ಔಷಧೀಯ ಗುಣ ಇನ್ನೂ ದುಪ್ಪಟ್ಟಾಗುತ್ತದೆ. ಅಷ್ಟೇ ಅಲ್ಲ ಈ ಕರಿ ಮೆಣಸು ಅಜೀರ್ಣತೆಯಿಂದ ಹಿಡಿದು ಚರ್ಮಕ್ಕೆ ಸಂಬಂಧಪಟ್ಟ ಸಮಸ್ಯೆಗಳ ನಿವಾರಣೆ ಮಾಡುವುದರಲ್ಲಿ ಹೆಚ್ಚು ಪ್ರಯೋಜನಕಾರಿ ಆದ ಲಾಭವನ್ನು ಹೊಂದಿದೆ ಇನ್ನು ತೂಕವನ್ನು ಇಳಿಸಿ ಕೊಳ್ಳುವವರು ತಮ್ಮ ಆಹಾರದಲ್ಲಿ ಮಿತಿಯಾಗಿ ಈ ಕರಿಮೆಣಸನ್ನು ಬಳಸುತ್ತಾ ಬಂದರೆ ಉತ್ತಮ ಆರೋಗ್ಯದೊಂದಿಗೆ ತೂಕವನ್ನು ಇಳಿಸಿಕೊಳ್ಳಬಹುದು.

ನೀವೇನಾದರೂ ಈ ಕರಿಮೆಣಸನ್ನು ಮೊಸರು ಮತ್ತು ಜೇನುತುಪ್ಪ ದೊಂದಿಗೆ ಮಿತಿಯಾಗಿ ಮಿಶ್ರ ಮಾಡಿ ಮುಖಕ್ಕೆ ಲೇಪನ ಮಾಡಿಕೊಂಡು ಬಂದರೆ ಚರ್ಮ ಕಾಂತಿ ಗೊಳ್ಳುತ್ತದೆ ಮೊಡವೆ ಸಮಸ್ಯೆ ದೂರವಾಗುತ್ತದೆ ಅಷ್ಟೇ ಅಲ್ಲ ಚರ್ಮಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ದೂರ ಮಾಡುತ್ತದೆ ಈ ಕರಿ ಮೆಣಸಿನಕಾಳು ಆದಕಾರಣ ನೀವು ನಿಮ್ಮ ಅಡುಗೆಯಲ್ಲಿ ಮಿತಿಯಾಗಿ ಈ ಕರಿ ಮೆಣಸಿನ ಕಾಳನ್ನು ಬಳಕೆ ಮಾಡುತ್ತಾ ಬನ್ನಿ, ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಿ. ಇದರ ಜೊತೆಗೆ ಈ ಕರಿ ಮೆಣಸಿನ ಕಾಳಿನ ಈ ಬಗೆಗಿನ ವಿಶೇಷ ಮಾಹಿತಿಯನ್ನ ಬೇರೆಯವರು ಕೂಡ ಶೇರ್ ಮಾಡಿ ಇಂದಿನ ಲೇಖನವನ್ನು ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡುವುದನ್ನು ಮರೆಯದಿರಿ ಶುಭ ದಿನ ಧನ್ಯವಾದ.