ಈ ಒಂದು ಎಲೆ ಹಿಮ್ಮಡಿಯ ನೋವಿಗೆ ರಾಮಬಾಣ , ಈ ಎಲೆಯ ಶಾಖವನ್ನ ಹಿಮ್ಮಡಿಗೆ ಹಿಡಿದರೆ ಸಾಕು ಕೆಲವೇ ನಿಮಿಷದಲ್ಲಿ ನೋವು ನಿವಾರಣೆ ಆಗುತ್ತೆ…

206

ಕೆಲವು ಕಾರಣಗಳಿಂದ ಹಿಮ್ಮಡಿ ನೋವು ಉಂಟಾಗಿದ್ದರೆ ಈ ನೋವು ನಿವಾರಣೆಗೆ ಈ ನೋವಿನ ಶಮನಕ್ಕೆ ಮಾಡಿ ಈ ಸರಳ ಉಪಾಯ ಈ ಮನೆಮದ್ದಿನಿಂದ ಹಿಮ್ಮಡಿ ನೋವಿಗೆ ತಕ್ಷಣಕ್ಕೆ ಪರಿಹಾರ ಕಂಡುಕೊಳ್ಳಬಹುದು!ಹಾಗಾದರೆ ಬನ್ನಿ ಇವತ್ತಿನ ಲೇಖನಿಯಲ್ಲಿ ತಿಳಿಸಿಕೊಡುತ್ತೇವೆ ಹಿಮ್ಮಡಿ ನೋವು ಅಥವಾ ಕೆಲವರಿಗೆ ಹಿಮ್ಮಡಿ ಒಡೆದು ಆ ಇಮ್ಮಡಿ ಭಾಗದಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ ಆ ನೋವನ್ನು ಹೇಗೆ ನಿವಾರಣೆ ಮಾಡಿಕೊಳ್ಳಬೇಕು ಮತ್ತು ಆ ಒಡೆದ ಹಿಮ್ಮಡಿ ಅನ್ನು ಹೇಗೆ ಪರಿಹಾರ ಮಾಡಿಕೊಳ್ಳಬೇಕು, ಆ ಭಾಗದಲ್ಲಿ ಚರ್ಮವನ್ನ ಹೇಗೆ ಮೃದುವಾದ ಎಲ್ಲವನ್ನ ತಿಳಿಯೋಣ ಇಂದಿನ ಲೇಖನದಲ್ಲಿ.

ಈ ಇಮ್ಮಡಿ ಭಾಗದಲ್ಲಿ ಒಡೆಯುವುದಕ್ಕೆ ಕಾರಣ ಹೆಚ್ಚು ತೇವ ಇರುವ ಪ್ರದೇಶಗಳಲ್ಲಿ ಓಡಾಡುವುದರಿಂದ ಹಾಗೂ ಈ ಚಳಿಗಾಲದಲ್ಲಿ ಮತ್ತು ಮಳೆಗಾಲದಲ್ಲಿ ಹೆಚ್ಚು ಹಿಮ್ಮಡಿ ಒಡೆಯುತ್ತಿದೆ ಹಾಗಾಗಿ ಅದೆಷ್ಟು ನೀರಿಗೆ ಹೋಗಿ ಬಂದ ಕೂಡಲೆ ಹಿಮ್ಮಡಿಗಳನ್ನು ಪಾದಗಳನ್ನು ಕಾಟನ್ ಟವಲ್ನಲ್ಲಿ ಒರೆಸುವ ರೂಡಿ ಮಾಡಿಕೊಳ್ಳಿ.

ಕೆಲವರಿಗೆ ದೇಹದಲ್ಲಿ ಉಷ್ಣಾಂಶ ಹೆಚ್ಚಾದಾಗ ಅಥವಾ ನೀರಿನ ಅಂಶ ಕಡಿಮೆ ಆದಾಗ ಕೂಡ ಈ ಹಿಮ್ಮಡಿ ಭಾಗದಲ್ಲಿ ಚರ್ಮ ಒಡೆದಂತೆ ಆಗುವುದು ಕಾಣಸಿಗುತ್ತದೆ ಹಾಗಾಗಿ ಈ ತೊಂದರೆ ಇರುವವರು ಮಾಡಬಹುದಾದ ಸರಳ ಪರಿಹಾರ ಅಂದರೆ ಮೊದಲಿಗೆ ನಮ್ಮ ಆಹಾರ ಪದ್ಧತಿಯನ್ನು ಉತ್ತಮವಾಗಿಸಿಕೊಳ್ಳಬೇಕು ಹೌದು ಘನ ಆಹಾರ ಪದಾರ್ಥಗಳನ್ನು ಸೇವಿಸುವುದರ ಜೊತೆಗೆ ಎಳನೀರು ಸೇವಿಸುವುದು ಅಥವಾ ಹೆಚ್ಚು ನೀರಿನಂಶ ಇರುವ ಹಣ್ಣುಗಳನ್ನು ಸೇವಿಸುವುದು

ಈ ರೀತಿಯ ಪರಿಹಾರಗಳನ್ನು ಮಾಡಿಕೊಳ್ಳಬೇಕು ಆಗ ಈ ರೀತಿ ಒಡೆದ ಹಿಮ್ಮಡಿ ಸಮಸ್ಯೆ ಅಥವಾ ಕೈಗಳಲ್ಲಿ ಬಿರುಕುಂಟಾಗುವುದು ಚರ್ಮ ಒಡೆದಂತಾಗುವುದು, ಚರ್ಮ ಡ್ರೈ ಈ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತದೆ.ಒಡೆದ ಹಿಮ್ಮಡಿಗೆ ಮನೆಮದ್ದು :ಹಿಮ್ಮಡಿ ಹೊಡೆದಿದ್ದರೆ ಇದಕ್ಕೆ ಮಾಡಬಹುದಾದ ಪರಿಹಾರ ಅಂದರೆ ಅರಿಶಿನ ಮತ್ತು ಕ್ಯಾಂಡಲ್ ಹೌದು ಮೇಣ ಈ ಮನೆಮದ್ದಿಗೆ ಬೇಕಾಗಿರುತ್ತದೆ.

ಮೇಣವನ್ನು ಕರಗಿಸಿ ಕೊಳ್ಳಬೇಕು ಅಥವ ಮೇಣ ಇಲ್ಲ ಅಂದರೆ ವ್ಯಾಸೆಲಿನ್ ಕೂಡ ನೀವು ತೆಗೆದುಕೊಳ್ಳಬಹುದು ಈ ವ್ಯಾಸಲೀನ್ ಕರಗಿಸಿಕೊಂಡು ಇದಕ್ಕೆ ಶುದ್ಧ ಅರಿಶಿಣವನ್ನು ಮಿಶ್ರಣ ಮಾಡಿ ಇದನ್ನು ಹಿಮ್ಮಡಿ ಒಡೆದ ಭಾಗಕ್ಕೆ ಹಚ್ಚಬೇಕು, ಈ ರೀತಿ ಮಾಡುವುದರಿಂದ ತುಂಬಾ ಬೇಗ ಒಡೆದ ಹಿಮ್ಮಡಿ ಸಮಸ್ಯೆ ಪರಿಹಾರವಾಗುತ್ತದೆ ಆ ಭಾಗದಲ್ಲಿ ಬಿರುಕುಂಟಾಗುವುದಿಲ್ಲ ಸ್ಕಿನ್ ಡ್ರೈ ಆಗುವುದಿಲ್ಲ ಹಾಗೂ ತಪ್ಪದೆ ರಾತ್ರಿ ಮಲಗುವ ಮುನ್ನ ಕೈಗಳನ್ನು ಹೇಗೆ ಮಾಯಿಶ್ಚರೈಸ್ ಮಾಡ್ತೀರಾ ಹಾಗೆ ಪಾದಗಳನ್ನು ಸಹ ಮಾಯಿಶ್ಚರೈಸ್ ಮಾಡಿ.

ಈಗ ಈ ಹಿಮ್ಮಡಿ ಭಾಗದಲ್ಲಿ ನೋವು ಉಂಟಾಗುತ್ತಿದ್ದರೆ ಅದನ್ನು ಪರಿಹಾರ ಮಾಡೋದಕ್ಕೆ ಎಕ್ಕದ ಎಲೆಗಳಿಂದ ಮಾಡಿದ ಈ ಸರಳ ಉಪಾಯ ಇಟ್ಟಿಗೆ ಯೊಂದನ್ನು ತೆಗೆದುಕೊಂಡು ಈ ಇಟ್ಟಿಗೆಯನ್ನು ಮೊದಲು ಬಿಸಿ ಮಾಡಿಕೊಳ್ಳಬೇಕು.

ಹೌದು ಒಲೆ ಉರಿಯಲು ಹೀಗೆ ಹಾಕುತ್ತೇವೆ ಆ ರೀತಿ ಸೌದೆಗಳನ್ನು ಇಟ್ಟು ಬೆಂಕಿ ಹಚ್ಚಿದ ಮೇಲೆ ಅದರ ಬಳಿಯೇ ಇಟ್ಟಿಗೆಯನ್ನು ಇರಿಸಿ ಆ ಇಟ್ಟಿಗೆ ಬಿಸಿ ಆದ ಮೇಲೆ, ಆ ಇಟ್ಟಿಗೆಯನ್ನ ಹುಷಾರಾಗಿ ತೆಗೆದುಕೊಂಡು ಅದರ ಮೇಲೆ ಎಕ್ಕದ ಎಲೆಯನ್ನು ಇಟ್ಟು ಆ ಎಕ್ಕದಎಲೆ ಬಿಸಿಯಾದ ಮೇಲೆ ಹಿಮ್ಮಡಿ ಮೇಲೆ ಹಾಕಬಹುದು ಅಥವಾ ಆ ಇಟ್ಟಿಗೆಯ ಮೇಲೆ ಎಕ್ಕದ ಎಲೆಯನ್ನ ಹಾಕಿದಾಗಆ ಎಕ್ಕದ ಎಲೆಯ ಮೇಲೆ ಪಾದಗಳನ್ನು ಇರಿಸಿ ಶಾಖ ತೆಗೆದುಕೊಳ್ಳುವುದರಿಂದ ಆ ಭಾಗದಲ್ಲಿ ನೋವು ನಿವಾರಣೆ ಆಗುತ್ತಾ ಬರುತ್ತದೆ ನೀವು ಕೂಡ ಒಮ್ಮೆ ಟ್ರೈ ಮಾಡಿ ನೋಡಿ ಸರಳ ಮನೆಮದ್ದನ್ನು.