ಈ ಒಂದು ಕಾಳನ್ನ ಪುಡಿ ಪುಡಿ ಮಾಡಿ ನೀರಿನಲ್ಲಿ ಬೆರಸಿ ಮುಖಕ್ಕೆ ಹಚ್ಚಿಕೊಳ್ಳಿ ಸಾಕು ನಿಮ್ಮ ಮುಖ ಪಳ ಪಳ ಅಂತ ಹೊಳಿಯುತ್ತೆ .. ರೋಡಲ್ಲಿ ಹೋಗೋರು ಬರೋರು ನಿಮ್ಮನ್ನೇ ನೋಡಲು ಶುರು ಮಾಡುತ್ತಾರೆ…

148

ನೀವು ಈ ಸಾಬೂದಾನದ ಫೇಸ್ ಪ್ಯಾಕ್ ಹಾಕಿಕೊಳ್ಳಿ ಇದರಿಂದ ದೊರೆಯುವ ಪ್ರಯೋಜನ ಅಪಾರವಾದದ್ದು. ಹೌದು ಸಾಬುದಾನ ಪ್ರತಿಯೊಂದು ಅಂಗಡಿಗಳಲ್ಲಿ ದೊರೆಯುವ ಈ ಸಾಬುದಾನ ಕೈಗೆಟುಕುವ ಬೆಲೆಯಲ್ಲಿ ದೊರೆಯುತ್ತದೆ. ಹಾಗೆ ನೀವು ನಿಮ್ಮ ಮುಖದ ಅಂದವನ್ನು ಮುಖದ ಕಾಂತಿಯನ್ನು ಹೆಚ್ಚು ಮಾಡಿಕೊಳ್ಳುವುದಕ್ಕಾಗಿ ಈ ಸಾಬುದಾನವನ್ನು ಈ ರೀತಿ ಬಳಸಿ.

ಇಂದಿನ ಮಾಹಿತಿಯಲ್ಲಿ ಈ ಸಾಬುದಾನವನ್ನು ಹೇಗೆಲ್ಲ ಬಳಸಿದರೆ ಮುಖದ ಕಾಂತಿ ಅನ್ನು ಹೆಚ್ಚು ಮಾಡಿಕೊಳ್ಳ ಬಹುದು.ಮತ್ತು ಹೇಗೆ ಮೊಡವೆ ಕಲೆಗಳನ್ನು ನಿವಾರಣೆ ಮಾಡಿಕೊಳ್ಳಬಹುದು ಅನ್ನೋದನ್ನ ತಿಳಿಯೋಣ. ಒಂದೊಳ್ಳೆ ಪರಿಣಾಮಕಾರಿಯಾದ ಫಲಿತಾಂಶವನ್ನು ನೀಡುವ ಈ ಸಾಬುದಾನವನ್ನು ಹೇಗೆ ಬಳಸಬೇಕು ಮತ್ತು ಯಾರು ಬಳಸಿದರೆ ಹೇಗೆ ಈ ಸಾಬೂದಾನದ ಫೇಸ್ ಪ್ಯಾಕ್ ಫಲಿತಾಂಶವನ್ನು ನೀಡುತ್ತದೆ ಎಂಬುದನ್ನು ತಿಳಿಯೋಣ ಸಂಪೂರ್ಣವಾಗಿ ಮಾಹಿತಿ ಅನ್ನು ತಿಳಿಯಿರಿ.

ಕೆಲವರಿಗೆ ಕಡಲೆಹಿಟ್ಟು ಆಗೋದಿಲ್ಲ ಇನ್ನ ಕೆಲವರಿಗೆ ಅಕ್ಕಿಹಿಟ್ಟು ಅವರ ತ್ವಚೆಗೆ ಆಗಿ ಬರುವುದಿಲ್ಲ. ಇಂಥವರು ಸಾಬುದಾನವನ್ನು ಒಮ್ಮೆ ಟ್ರೈ ಮಾಡಿ ಈ ಸಾಬುದಾನವನ್ನು ತಂದು ಪುಡಿ ಮಾಡಿ ಶೇಖರಣೆ ಮಾಡಿ ಇಟ್ಟುಕೊಳ್ಳಿ. ವಾರಕ್ಕೆ ಎರಡು ಅಥವಾ ಮೂರು ಬಾರಿ ಈ ಸಾಬೂದಾನವನ್ನು ಬಳಸಿ ನಿಮ್ಮ ಮುಖಕ್ಕೆ ಫೇಸ್ ಪ್ಯಾಕ್ ಹಾಕಿಕೊಳ್ಳಿ ಸಾಬುದಾನಕ್ಕೆ ಹಸಿ ಹಾಲನ್ನು ಮಿಶ್ರಮಾಡಿ ಪೇಸ್ಟ್ ಮಾಡಿಕೊಂಡು ಇದನ್ನು ಮುಖಕ್ಕೆ ಲೇಪನ ಮಾಡಿ ಕೊಳ್ಳಿ. ಒಂದನ್ನು ನೆನಪಿನಲ್ಲಿಡಿ ಈ ಪ್ಯಾಕನ್ನು ಹಾಕಿಕೊಳ್ಳುವುದಕ್ಕೂ ಮೊದಲು ಮುಖವನ್ನು ಸ್ವಲ್ಪ ಬೆಚ್ಚಗಿನ ನೀರಿನಿಂದ ತೊಳೆದುಕೊಂಡು ಹಸಿ ಹಾಲನ್ನು ಬಳಸಿ ನಿಮ್ಮ ತ್ವಚೆಯನ್ನು ಕ್ಲೆನ್ಸ್ ಮಾಡಿ. ನಂತರ ಅದರ ಮೇಲೆ ಈ ಪ್ಯಾಕ್ ಹಾಕಿಕೊಳ್ಳಿ ಈ ರೀತಿ ಮಾಡುವುದರಿಂದ ನಿಮಗೆ ಬಹಳ ಬೇಗ ಪರಿಣಾಮಕಾರಿಯಾದ ಫಲಿತಾಂಶ ದೊರೆಯುತ್ತದೆ.

ಸಾಬೂದಾನದ ಪುಡಿಗೆ ಮೊಸರನ್ನು ಮಿಶ್ರ ಮಾಡಿ ನಂತರ ಮುಖಕ್ಕೆ ಲೇಪನ ಮಾಡಿಕೊಳ್ಳಿ, ಈ ರೀತಿ ನೀವು ಮಾಡುವುದರಿಂದ ಮುಖ ಹೊಳಪಾಗುತ್ತದೆ ಇದರ ಜೊತೆಗೆ ತ್ವಚೆ ಮೃದು ಆಗುತ್ತದೆ. ನಿಮ್ಮ ಮುಖ ತಕ್ಷಣವೇ ಕಾಂತಿಯುತವಾಗಿರಬೇಕು ಅಂದರೆ ಈ ಸಾಬೂದಾನದ ಪುಡಿ ಒಂದು ಚಮಚ ತೆಗೆದು ಕೊಂಡು ಅದಕ್ಕೆ ಒಂದು ಚಮಚ ಕಡಲೆ ಹಿಟ್ಟನ್ನು ಮಿಶ್ರಣ ಮಾಡಿ. ನಂತರ ಇದಕ್ಕೆ ನೀವು ಅರಿಶಿಣವನ್ನು ಬೇಕಾದರೂ ಬೆರೆಸಿಕೊಳ್ಳಬಹುದು ಇದಕ್ಕೆ ನೀರು ಅಥವಾ ರೋಸ್ ವಾಟರ್ ಬೆರೆಸಿ ಪೇಸ್ಟ್ ಮಾಡಿಕೊಳ್ಳಬೇಕು.

ಇದೀಗ ನೀವು ಈ ತಯಾರಾದ ಪೇಸ್ಟನ್ನು ಮುಖಕ್ಕೆ ಲೇಪನ ಮಾಡಿಕೊಂಡು ಒಣಗಲು ಬಿಡಿ. ನಂತರ ತಣ್ಣೀರಿ ನಿಂದ ಮುಖವನ್ನು ಸ್ವಚ್ಛಗೊಳಿಸಿಕೊಳ್ಳಿ ಇದೇ ರೀತಿ ನೀವು ವಾರಕ್ಕೆ ಎರಡು ಬಾರಿ ಮಾಡಿಕೊಳ್ಳುತ್ತ ಬರುವುದರಿಂದ, ತ್ವಚೆಯ ಮೇಲೆ ಆಗಿರುವ ಕಪ್ಪು ಕಲೆಗಳು ಮೊಡವೆ ಸಮಸ್ಯೆ ಎಲ್ಲವೂ ಕೂಡ ಪರಿಹಾರ ಆಗುತ್ತದೆ. ಈ ಪರಿಹಾರ ವನ್ನು ನೀವು ತಪ್ಪದೆ ಪಾಲಿಸಿ ಇದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಿ.

ಇವತ್ತಿನ ಮಾಹಿತಿ ನಿಮಗೆ ಉಪಯುಕ್ತವಾಗಿ ಇದ್ದಲ್ಲಿ ತಪ್ಪದೆ ಮಾಹಿತಿಗೆ ಒಂದು ಲೈಕ್ ಮಾಡಿ ಹಾಗೂ ಶೇರ್ ಮಾಡಿ. ಇನ್ನೂ ಇಂತಹ ಅನೇಕ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡುವುದನ್ನು ಮರೆಯದಿರಿ ಶುಭ ದಿನ ಧನ್ಯವಾದಗಳು.