ಈ ಒಂದು ಗಿಡವನ್ನ ನಿಮ್ಮ ಮನೆಯಲ್ಲಿ ಬೆಳಸಿದರೆ ಎಲ್ಲ ಸಮಸ್ಸೆಗಳಿಗೂ ಮದ್ದಾಗುತ್ತದೆ ಅಷ್ಟೊಂದು ಅದ್ಭುತವಾದ ಶಕ್ತಿ ಇದರಲ್ಲಿ ಇದೆ..

154

ಹಿತ್ತಲ ಗಿಡ ಮದ್ದಲ್ಲ ಅಂತ ಮಾತು ಇದೆ ಅಲ್ವಾ ಫ್ರೆಂಡ್ಸ್. ಆದರೆ ಕಳೆಯಂತೆ ಕಿತ್ತು ಬಿಸಾಡುವ ಈ ಉತ್ತರಾಣಿ ಗಿಡದ ಬಗ್ಗೆ ನೀವು ಹೆಚ್ಚಿನ ಮಾಹಿತಿ ತಿಳಿದರೆ ಇದರ ಪ್ರಯೋಜನವನ್ನು ನೀವು ಕೂಡ ಪಡೆದುಕೊಳ್ಳಲು ಮುಂದಾಗ್ತೀರಾ. ನಮ್ಮ ಆಯುರ್ವೇದವೇ ಹಾಗೆ ನಮ್ಮ ಸುತ್ತಮುತ್ತಲು ಬೇಡದೇ ಇರುವ ಗಿಡ ಎಂದು ನಾವು ತಿಳಿದಿರುವ ಅನೇಕ ಗಿಡಮರಗಳನ್ನೆ ಬಳಸಿ ಉಪಯುಕ್ತ ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳಬಹುದು .ಆದರೆ ಇಂತಹ ಕೆಲವೊಂದು ಗಿಡಮರಗಳ ಬಳ್ಳಿಗಳ ಪ್ರಯೋಜನವನ್ನು ಪಡೆದುಕೊಳ್ಳುವುದಕ್ಕಿಂತ ಮೊದಲು ಆಯುರ್ವೇದ ಪಂಡಿತರ ಸಲಹೆ ಪಡೆದು ನಂತರ ಬಳಸುವುದು ಉತ್ತಮ ಆಗಿರುತ್ತದೆ. ಯಾಕೆಂದರೆ ಪ್ರತಿಯೊಬ್ಬರ ದೇಹ ಪ್ರಕೃತಿ ಒಂದೇ ರೀತಿ ಇರುವುದಿಲ್ಲ, ವಾತ ಪಿತ್ತ ಕಫದ ಆಧಾರದ ಮೇಲೆ ಆಯುರ್ವೇದದ ಬಳಕೆ ಮಾಡಲಾಗುತ್ತದೆ.

ಇನ್ನು ಈ ಉತ್ತರಾಣಿ ಅನ್ನು ಹಳ್ಳಿಗಳಲ್ಲಿ ಅನೇಕ ಮಂದಿ ಕಳೆಯಂತೆ ಬಿಸಾಡುವ ಈ ಉತ್ತರಾಣಿ ಗಿಡಕ್ಕೆ ಸಂಸ್ಕೃತದಲ್ಲಿ ಅಪಮಾರ್ಗ ಅಂತ ಕರೆದರೆ ಶಾಸ್ತ್ರೀಯವಾಗಿ ಅಕಿರಾಂತಿಸ್ ಅಲ್ಪೈರ್ ಅಂತ ಕರೀತಾರೆ. ಈ ಉತ್ತರಾಣಿ ಗಿಡದ ಬಗ್ಗೆ ಹೇಳಬೇಕೆಂದರೆ ನೀವು ಕೆಲವೊಂದು ಬಾರಿ ಬೆಟ್ಟ ಗುಡ್ಡ ಅಥವಾ ನಿರ್ಜನ ಪ್ರದೇಶಗಳಿಗೆ ಹೋದಾಗ ನೀವು ಅಲ್ಲಿ ಎಲ್ಲಾದರೂ ಕುಳಿತಾಗ ನಿಮ್ಮ ಬಟ್ಟೆಗೆ ಮುಳ್ಳಿನಂತೆ ಅಕ್ಕಿಗಳು ಅಂಟಿಕೊಂಡಿರುತ್ತದೆ ಅದನ್ನು ನಾವು ಯಾವುದೋ ಮುಳ್ಳಿನ ಗಿಡದ ಬೀಜಗಳು ಅಂತ ಅಂದುಕೊಳ್ಳುತ್ತೇವೆ.

ಆದರೆ ಇದು ಉತ್ತರಾಣಿ ಗಿಡದ ಅಕ್ಕಿಗಳು ಆಗಿರುತ್ತದೆ, ಇದನ್ನು ಉತ್ತರಾಣಿ ಅಕ್ಕಿ ಅಂತ ಕರೀತಾರೆ. ಒಂದರಿಂದ ಮೂರು ಅಡಿ ಉದ್ದ ಬೆಳೆಯುವ ಈ ಉತ್ತರಾಣಿ ಗಿಡ ಬೇರಿನಿಂದ ಹಿಡಿದು ಕಾಂಡದವರೆಗೂ ಔಷಧೀಯ ಗುಣವನ್ನು ಹೊಂದಿರುತ್ತದೆ. ಇದನ್ನು ಗರ್ಭಿಣಿ ಸ್ತ್ರೀಯರು ಸೇವಿಸಬಾರದು ಅಕಸ್ಮಾತ್ ಇದನ್ನು ಸೇವಿಸಿದರೆ ಅದರಲ್ಲಿಯೂ ಹೆಚ್ಚಾಗಿ ಸೇವನೆ ಮಾಡಿದರೆ ಗರ್ಭಪಾತ ಆಗುವ ಸಾಧ್ಯತೆಗಳು ಇರುತ್ತದೆ. ಆದಕಾರಣವೇ ಗರ್ಭಿಣಿ ಸ್ತ್ರೀಯರಿಗೆ ಹಿರಿಯರು ಈ ಉತ್ತರಾಣಿ ಗಿಡದ ಮಾಡಿದ ಔಷಧಿಯನ್ನ ನೀಡುತ್ತಾ ಇರಲಿಲ್ಲ.

ನಿಮಗೆ ನಿದ್ರಾಹೀನತೆ ಸಮಸ್ಯೆ ಕಾಡುತ್ತಾ ಇದ್ದಲ್ಲಿ ಈ ಗಿಡದ ಬೇರನ್ನು ತೆಗೆದುಕೊಂಡು ನೀರಿನಲ್ಲಿ ನೆನೆಸಿ ಕುದಿಸಿ ಕುಡಿಯಬೇಕು ಇದರಿಂದ ನಿದ್ರಾಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲ ಮೂತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ ಈ ಉತ್ತರಾಣಿ ಗಿಡದ ಬೇರಿನಿಂದ. ಗಾಯ ಆದಾಗ ಆ ಗಾಯದ ಮೇಲೆ ಈ ಉತ್ತರಾಣಿ ಕಾಂಡದ ಬೇರಿನ ರಸವನ್ನು ಲೇಪನ ಮಾಡಿಕೊಳ್ಳಬೇಕು ಆಗ ಗಾಯ ಬೇಗನೆ ನಿವಾರಣೆಯಾಗುತ್ತದೆ.ಭೇದಿ ಸಮಸ್ಯೆ ಕಾಡುತ್ತಾ ಇರುವವರು ಈ ಉತ್ತರಾಣಿ ಗಿಡದ ಕಾಂಡದ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಮೊಸರಿನೊಂದಿಗೆ ಈ ಕಾಂಡದ ರಸವನ್ನು ಬೆರೆಸಿ ಮಿತಿಯಾಗಿ ಸೇವಿಸುತ್ತಾ ಬರಬೇಕು ಈ ರೀತಿ ಮಾಡುವುದರಿಂದ ಬೇದಿಯಂತಹ ಸಮಸ್ಯೆ ನಿವಾರಣೆಯಾಗುತ್ತದೆ. ರಕ್ತಹೀನತೆ ಸಮಸ್ಯೆ ಕೂಡ ಪರಿಹಾರ ಆಗುತ್ತದೆ ಈ ಉತ್ತರಾಣಿ ಗಿಡದಿಂದ, ಈ ಗಿಡದ ಕಾಂಡದ ರಸಕ್ಕೆ ಬೆಲ್ಲವನ್ನು ಮಿಶ್ರಣ ಮಾಡಿ ಸೇವಿಸುವುದರಿಂದ ರಕ್ತಹೀನತೆ ಪರಿಹಾರ ಆಗುತ್ತದೆ. ಉತ್ತರಾಣಿ ಗಿಡದ ಬೇರಿನ ಕಷಾಯವನ್ನು ಸೇವಿಸುತ್ತ ಬರುವುದರಿಂದ ಬಹಳ ಆರೋಗ್ಯಕರ ಲಾಭಗಳಿವೆ. ಆದರೆ ನೀವು ಈ ಉತ್ತರಾಣಿ ಗಿಡದ ಪ್ರಯೋಜನವನ್ನು ಪಡೆದುಕೊಳ್ಳುವುದಕ್ಕಿಂತ ಮೊದಲು ಆಯುರ್ವೇದ ಪಂಡಿತರ ಸಲಹೆ ಪಡೆಯುವುದು ಉತ್ತಮ ಮತ್ತು ಒಳ್ಳೆಯದು.