ಈ ಒಂದು ಮನೆಮದ್ದು ಮಾಡಿ ಸಾಕು ಯಾವುದೇ ಬೆನ್ನು ನೋವು , ಕೀಲು ,ಕೈ ಮಣಿಕಟ್ಟು ನೋವುಗಳಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ…

249

ಮಂಡಿ ನೋವು ನಿಮ್ಮನ್ನು ಕಾಡುತ್ತಿದ್ದಲ್ಲಿ ಅದಕ್ಕೆ ಈ ದಿನದ ಲೇಖನಿಯಲ್ಲಿ ನಾವು ಪರಿಹಾರವನ್ನು ತಿಳಿಸಲಿದ್ದೇವೆ. ಇದನ್ನೂ ನೀವು ಆಚೆಯಿಂದ ಮಾಡುವ ಪರಿಹಾರವಲ್ಲ ನಿಮ್ಮ ಮೂಳೆಗಳಿಗೆ ಒಳಗಿನಿಂದ ಪುಷ್ಟಿ ನೀಡಿ ಮಂಡಿ ನೋವಿಗೆ ಪರಿಹಾರ ಕಂಡುಕೊಳ್ಳುವುದು.ಹಾಗಾದರೆ ಬನ್ನಿ ಮನೆಯಲ್ಲಿ ಮಂಡಿ ನೋವಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವುದು ಹೇಗೆ ಎಂಬುದನ್ನು ತಿಳಿಯೋಣ ಜೊತೆಗೆ ನಿಮ್ಮ ಆರೋಗ್ಯ ಕೂಡ ವೃದ್ಧಿಯಾಗುತ್ತದೆ ಈ ಪರಿಹಾರ ಮಾಡುವುದರಿಂದ.

ಮಂಡಿ ನೋವು ಬಂದರೆ ಅದರ ನೋವು ಹೇಗಿರುತ್ತದೆ ಅಂತ ನಿಜಕ್ಕೂ ಮಂಡಿ ನೋವಿನಿಂದ ಬಳಲುತ್ತಾ ಇರುವವರಿಗೆ ಗೊತ್ತಿರುತ್ತದೆ ಹಾಗಾಗಿ ಮಂಡಿನೋವಿನಿಂದ ಶಾಶ್ವತವಾಗಿ ಪರಿಹಾರ ಪಡೆದುಕೊಳ್ಳುವುದಕ್ಕೆ ನಾವು ಉತ್ತಮ ಮನೆ ಮದ್ದು ನೀವು ಡಾಕ್ಟರ್ ಬಳಿ ಹೋಗಿ ನಿಮ್ಮ ಮಂಡಿ ನೋವಿಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಸಮಯ ತೆಗೆದುಕೊಂಡಿದ್ದರೆ ಅಥವಾ ಆಸ್ಪತ್ರೆಗೆ ಓಡಾಡಿ ಓಡಾಡಿ ಇನ್ನಷ್ಟು ಕಾಲು ನೋವು ಮಂಡಿನೋವು ಹೆಚ್ಚಾಗಿದ್ದರೆ, ಅದನ್ನು ಪರಿಹಾರ ಮಾಡಿಕೊಳ್ಳೋದಕ್ಕೆ ನಾವು ಸರಳ ಮನೆಮದ್ದು ತಿಳಿಸಲಿದ್ದೇವೆ ಇದಕ್ಕಾಗಿ ನೀವು ಮಾಡಬೇಕಿರುವುದು ಸ್ವಲ್ಪ ಸಮಯದ ಕೆಲಸ ಅಷ್ಟೆ ಇದನ್ನ ನೀವು ಪ್ರತಿದಿನ ಮಾಡಿ ಮಂಡಿ ನೋವಿನಿಂದ ಶಮನ ಪಡೆದುಕೊಳ್ಳಿ.

ಹೌದು ಮಂಡಿನೋವಿಗೆ ಶಾಶ್ವತ ಪರಿಹಾರ ಅಂತೂ ದೊರೆಯುವುದಿಲ್ಲ ಅದರಲ್ಲಿಯೂ ಇಂಗ್ಲಿಷ್ ಮೆಡಿಸನ್ ತೆಗೆದುಕೊಂಡು ನಾವು ಈ ಮಂಡಿ ನೋವಿಗೆ ಪರಿಹಾರ ಕಂಡುಕೊಳ್ಳುತ್ತೇವೆ ಅನ್ನೋದು ಸುಳ್ಳಿನ ಮಾತು ಯಾಕೆಂದರೆ ಪೇನ್ ಕಿಲ್ಲರ್ ಮಾತ್ರೆ ತೆಗೆದುಕೊಂಡರೆ ಕ್ಷಣಮಾತ್ರಕ್ಕೆ ನೋವು ಕಡಿಮೆಯಾಗಿ ನಮಗೆ ಹಾಯ್ ಅನುಭವ ಆಗುತ್ತದೆ ಆದರೆ ಬಳಿಕ ಮತ್ತೆ ಮಂಡಿನೋವು ಖಂಡಿತ ಬಂದೇ ಬರುತ್ತೆ.

ಅದರೆ ಮನೆಮದ್ದು ಮಾಡಿ ನಿಮ್ಮ ಮಂಡಿ ನೋವಿಗೆ ಪರಿಹಾರ ಕಂಡುಕೊಳ್ಳಬಹುದು ಹೇಗೆಂದರೆ ಇದು ನೇರವಾಗಿ ನಿಮ್ಮ ಮೂಳೆಗಳನ್ನು ಬಲಪಡಿಸುತ್ತದೆ ಇದರಿಂದ ಮೂಳೆಗಳು ಪುಷ್ಟಿಗೊಂಡು ಮೂಳೆಗಳಿಗೆ ಕ್ಯಾಲ್ಶಿಯಂ ಅಂಶ ದೊರೆತು ನೈಸರ್ಗಿಕ ವಾಗಿ ಮಂಡಿನೋವು ಪರಿಹಾರ ಮಾಡುತ್ತದೆ ಈ ಮನೆಮದ್ದು.

ಈ ಮನೆಮದ್ದು ಮಾಡುವುದಕ್ಕೆ ಬೇಕಾಗಿರುವುದು ಮೊದಲಿಗೆ ಗೋಧಿ ಹೌದು ಈ ಗೋಧಿಯನ್ನು ರಾತ್ರಿ ಇಡೀ ನೀರಿನಲ್ಲಿ ನೆನೆಸಿಡಬೇಕು ನೀರಿನಲ್ಲಿ ನೆನೆಸಿ ಡುವ ಮುನ್ನ ಗೋಧಿಯಲ್ಲಿರುವ ಧೂಳನ್ನು ತೆಗೆದು ಒಮ್ಮೆ ನೀರಿನಲ್ಲಿ ಚೆನ್ನಾಗಿ ಸ್ವಚ್ಛ ಮಾಡಿ ಬಳಿಕ ನೀರಿನಲ್ಲಿ ನೆನೆಸಿಡಬೇಕು.ಈಗ ಈ ನೆನೆಸಿದ ಗೋಧಿಯನ್ನು ಏನು ಮಾಡಬೇಕೆಂದರೆ ಲೋಟದಷ್ಟು ಹಾಲನ್ನು ಬಿಸಿ ಮಾಡಬೇಕು, ಬಳಿಕ ಈ ಬಿಸಿಯಾದ ಹಾಲಿಗೆ ನೆನೆಸಿಟ್ಟ ಗೋಧಿ ಅನ್ನು ಹಾಕಿ ಜೊತೆಗೆ ಇದರ ನೆನೆಸಿಟ್ಟ ನೀರನ್ನು ಕೂಡ ಹಾಕಿ ಮತ್ತೊಮ್ಮೆ ನೀರನ್ನು ಕುದಿಸಬೇಕು.

ಈ ನೆನೆಸಿದ ಗೋಧಿಯನ್ನು ಹಾಲಿನಲ್ಲಿ ಬೇಯಿಸಿ ಕೊಂಡ ಮೇಲೆ ಆ ಹಾಲು ಗಟ್ಟಿಯಾಗುತ್ತದೆ ಬಳಿಕ ಇದನ್ನು ಸ್ಮ್ಯಾಶ್ ಮಾಡಿ ಕೊಂಡು ಸೇವಿಸಬೇಕು ಈ ರೀತಿ ನೀವು ಈ ಪರಿಹಾರವನ್ನು ಪಾಲಿಸುತ್ತ ಬಂದರೆ ಮೂಳೆಗಳಿಗೆ ಬಲ ದೊರೆತು ಮೂಳೆ ನೋವು ಮಂಡಿನೋವು ಶಾಶ್ವತವಾಗಿ ಪರಿಹಾರ ಆಗುತ್ತದೆ. ಈ ಬಿಸಿ ಮಾಡಿಕೊಂಡಂತಹ ಹಾಲಿಗೆ ರುಚಿಗೆ ತಕ್ಕಷ್ಟು ಆರ್ಗ್ಯಾನಿಕ್ ಬೆಲ್ಲವನ್ನು ಮಿಶ್ರ ಮಾಡಿ ಬಳಿಕ ಸೇವಿಸಿ.

ಮಾಡಬಹುದಾದ ಎರಡನೆಯ ಪರಿಹಾರ ಮೆಣಸಿನಕಾಳು ಮತ್ತು ಲವಂಗವನ್ನು ಸಮ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಅಂದರೆ ಕಡಿಮೆ ಕಡಿಮೆ ಪ್ರಮಾಣದಲ್ಲಿಯೇ ಈ ಪದಾರ್ಥಗಳನ್ನು ತೆಗೆದುಕೊಂಡು ಕುಟ್ಟಿ ಪುಡಿ ಮಾಡಿಕೊಂಡು ನೀರಿಗೆ ಮಿಶ್ರಮಾಡಿ ನೀರನ್ನು ಕುದಿಸಿ ಇದನ್ನು ಕುಡಿಯಬೇಕು ಇದರಿಂದ ನಿಮಗೆ ದೇಹದಲ್ಲಿ ವಾಯುವಿನ ಸಮಸ್ಯೆಯಿದ್ದರೆ ಅದರಿಂ ದ ಮಂಡಿ ನೋವು ಕಾಣಿಸಿಕೊಂಡಿದ್ದರೆ ಈ ಪರಿಹಾರದಿಂದ ಮಂಡಿ ನೋವು ಬಹಳ ಬೇಗ ಶಮನಗೊಳ್ಳುತ್ತದೆ.ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದಲ್ಲಿ ಅಂತಹವರು ಮಂಡಿ ನೋವಿನಿಂದ ಬಳಲುತ್ತಿದ್ದರೆ ಈ ಪರಿಹಾರ ಪಾಲಿಸಿ ಬಹಳ ಬೇಗ ಫಲಿತಾಂಶ ದೊರೆಯುತ್ತದೆ.