ಈ ಸೊಪ್ಪು ಎಲ್ಲಾದ್ರೂ ಕಂಡ್ರೆ ಬಿಡಕೆ ಹೋಗಬೇಡಿ ಚೇಳು, ಸೊಂಟ ಬಾರಾ , ಚರ್ಮದ ಸಮಸ್ಸೆ ಇನ್ನು ಹಲವಾರು ಸಮಸ್ಸೆಗಳಿಗೆ ರಾಮಬಾಣ..

347

ಈ ಗಿಡ ಏನಾದರೂ ನಿಮ್ಮ ಮನೆಯಲ್ಲಿ ಇದ್ದರೆ ನಿಮ್ಮ ಮನೆಯಲ್ಲಿ ಯಾವತ್ತಿಗೂ ಧನ ಧಾನ್ಯಗಳ ಕೊರತೆ ಉಂಟಾಗುವುದಿಲ್ಲ ಮತ್ತು ಹಣದ ಹರಿವು ಹೆಚ್ಚುತ್ತದೆ.ಈ ಗಿಡವನ್ನು ನೀವು ಮನೆಯಲ್ಲಿಟ್ಟುಕೊಂಡರೆ, ಹೌದು ಉತ್ತರ ಕರ್ನಾಟಕ ಭಾಗದಲ್ಲಿ ಈ ಗಿಡವನ್ನು ದೇವರ ಕೋಣೆಯಲ್ಲಿ ಇಟ್ಟು ಪೂಜಿಸುತ್ತಾ ಬರ್ತಾರೆ ಹಾಗಾದರೆ ಈ ಗಿಡದ ಕುರಿತು ಹೆಚ್ಚಿನ ಮಾಹಿತಿ ತಿಳಿಯೋಣ ಹಾಗೂ ಜೊತೆಗೆ ಇದರ ಆರೋಗ್ಯಕರ ಪ್ರಯೋಜನಗಳನ್ನು ಕೂಡ ತಿಳಿದುಕೊಳ್ಳೋಣ ಇವತ್ತಿನ ಈ ಲೇಖನದಲ್ಲಿ.

ನಮಗೆಲ್ಲಾ ಆರೋಗ್ಯ ಬೇಕು ಅಲ್ವಾ, ಹೌದು ಯಾರಿಗೆ ಆರೋಗ್ಯ ಬೇಡ ಆರೋಗ್ಯವೇ ಭಾಗ್ಯ. ಹೀಗಿರುವಾಗ ಇಂದು ಕೈನಲ್ಲಿ ಹಣ ಇರಬಹುದು ಆದರೆ ಆರೋಗ್ಯವೇ ಇಲ್ಲದೇ ಹೋದಾಗ, ಅದರ ಕತೆಯೇನು ಊಹೆ ಮಾಡಿಕೊಳ್ಳಲು ಸಾಧ್ಯವಿಲ್ಲ ನಮ್ಮ ಬಳಿ ಹಣ ಇದ್ದರೆ ಆರೋಗ್ಯವನ್ನ ಕೊಂಡುಕೊಳ್ಳಲು ಸಾಧ್ಯವಿಲ್ಲ ಆದರೆ ಆರೋಗ್ಯ ಜೊತೆಗೆ ಹಣ ಎರಡೂ ನಿಮ್ಮ ಬಳಿ ಇದ್ದರೆ ನಮ್ಮಷ್ಟು ಭಾಗ್ಯಶಾಲಿಗಳು ಮತ್ಯಾರು ಇಲ್ಲ ಅನ್ನುವ ಅನುಭವ ನಮಗೆ ಅನ್ನುವ ಸಂತಸ ನಮಗೆ.

ಹೀಗಿರುವಾಗ ನಾವು ಇಂದಿನ ಈ ಲೇಖನಿಯಲ್ಲಿ ಕುಪ್ಪೆ ಗಿಡದ ಪ್ರಯೋಜನದ ಕುರಿತು ಮಾತನಾಡುತ್ತಿದ್ದೇವೆ, ಈ ಗಿಡವನ್ನು ಮನೆಯಲ್ಲಿಟ್ಟರೆ ಎಂದಿಗೂ ಮನೆಗೆ ಜನರ ದೃಷ್ಟಿ ಆಗುವುದಿಲ್ಲ ಹಾಗೂ ನಕಾರಾತ್ಮಕ ಶಕ್ತಿ ಮನೆ ಒಳಗೆ ಬರುವುದಿಲ್ಲ.ಆದ್ದರಿಂದಲೇ ಕೆಲವೊಂದು ಭಾಗದಲ್ಲಿ ಈ ಗಿಡವನ್ನು ದೇವರ ಕೋಣೆಯಲ್ಲಿ ಇರಿಸಿ ಇದರ ದರ್ಶನ ಪಡೆದುಕೊಂಡು ಬರುತ್ತಾರೆ ಜನರು.

ಸೋರಿಯಾಸಿಸ್ ಆಸ್ಟಿಯೋಪೊರೋಸಿಸ್ ಅಂತಹ ದೊಡ್ಡ ದೊಡ್ಡ ಸಮಸ್ಯೆಗಳಿಗೆ, ಹೀಗೆ ಚರ್ಮ ಸಂಬಂಧಿ ಸಮಸ್ಯೆ ಮೂಳೆ ಸಂಬಂಧಿ ಸಮಸ್ಯೆ ನಿಮಗಿದ್ದರೆ ಅದರ ನಿವಾರಣೆಗೆ ಕುಪ್ಪೆ ಗಿಡದ ಪ್ರಯೋಜನ ಒಂದೇ ಸಾಕು.ಹೌದು ಚರ್ಮಸಂಬಂಧಿ ಸಮಸ್ಯೆಗಳು ಅಂದರೆ ಕೆಲವರಿಗೆ ಪಿಂಪಲ್ ಹೋಗಿರುತ್ತೆ ಅದರ ಕಲೆ ಉಳಿದಿರುತ್ತದೆ ಇನ್ನೂ ಕೆಲವರಿಗೆ ಪಿಂಪಲ್ ವಿಪರೀತವಾಗಿ ಆಗುತ್ತಾ ಇರುತ್ತದೆ ಅಂಥವರು ಈ ಎಲೆಯ ರಸವನ್ನು ಮುಖಕ್ಕೆ ಹಚ್ಚುತ್ತಾ ಬಂದರೆ ಬಹಳ ನಿಯಮಿತವಾಗಿ ಇದರ ಬಳಕೆ ಮಾಡುತ್ತ ಬಂದರೆ ಸಾಕು ಈ ಚರ್ಮ ಸಂಬಂಧಿ ಸಮಸ್ಯೆಗಳಿಂದ ಪರಿಹಾರ ಪಡೆದುಕೊಳ್ಳಬಹುದು.

ಆಸ್ಟಿಯೊಪೊರೋಸಿಸ್ ಸಮಸ್ಯೆಗೆ ಎಲ್ಲೆಲ್ಲಿಂದಲೋ ಚಿಕಿತ್ಸೆ ಪಡೆದುಕೊಂಡು ಬಂದಿರುತ್ತೀರ ಆದರೆ ಈ ಕುಪ್ಪೆ ಗಿಡದ ಪ್ರಯೋಜನ ಅಪಾರ, ಸ್ವಲ್ಪ ದಿನಗಳಲ್ಲಿಯೇ ಆಸ್ಟಿಯೋಪೋರೋಸಿಸ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಇದನ್ನು ಅರಿತ ಮಂಜರಿ ಅಂತ ಕೂಡ ಕರಿತಾರೆ ಯಾರೂ ಪ್ರತಿದಿನ ಮನೆಯಲ್ಲಿ ಈ ಎಲೆಗಳಿಂದ ಮನೆಯಲ್ಲಿ ಧೂಪ ಹಾಕುತ್ತಾ ಬರುತ್ತಾರೆ ಅಂಥವರ ಮನೆಯಲ್ಲಿ ಸದಾ ಸಕಾರಾತ್ಮಕ ಶಕ್ತಿ ನೆಲೆಸಿರುತ್ತದೆ ಮುಖ್ಯವಾಗಿ ಆರೋಗ್ಯಕರ ವಾತಾವರಣ ಉಂಟಾಗುತ್ತದೆ ಮನೆಯಲ್ಲಿ.ಮತ್ತೊಂದು ಮುಖ್ಯ ಮಾಹಿತಿ ಏನಪ್ಪಾ ಅಂದರೆ ಡಯಾಬಿಟಿಸ್ ಇರೋರು ಇದರ ಪ್ರಯೋಜನ ಪಡೆದುಕೊಳ್ಳಬಹುದು. ಆದರೆ ನಿಮಗಿರುವ ಡಯಾಬಿಟಿಸ್ ಸಮಸ್ಯೆಗೆ ಈ ಕುಪ್ಪೆ ಗಿಡದ ಪ್ರಯೋಜನ ಪಡೆದುಕೊಳ್ಳುವುದಕ್ಕಿಂತ ಮೊದಲು ಮೊದಲು ವೈದ್ಯರ ಸಲಹೆ ಪಡೆದು ಕೊಂಡು ಬಳಿಕ ಇದರ ಪ್ರಯೋಜನ ಪಡೆದುಕೊಳ್ಳುವುದು ಒಳ್ಳೆಯದು.

ಪೈಲ್ಸ್ ಶೀತ ನೆಗಡಿ ಹೀಗೆ ಸಾಮಾನ್ಯವಾಗಿ ಕಾಡುವ ಸಮಸ್ಯೆಗೂ ಕುಪ್ಪಿಗಿಡ ಪರಿಹಾರ ಕೊಡುತ್ತದೆ.ಹಲ್ಲುನೋವು ಬಾಧೆ ಇದ್ದವರು ಇದನ್ನು ಹೇಗೆ ಬಳಸಬೇಕು ಅಂದರೆ ಈ ಎಲೆಗಳನ್ನು ಅರೆದು ರಸ ತೆಗೆದು ಹತ್ತಿಯೊಂದರಲ್ಲಿ ಆ ರಸವನ್ನು ತೆಗೆದುಕೊಂಡು ನೋವು ಇರುವ ಭಾಗಕ್ಕೆ ಇಡಬೇಕು ಇದರಿಂದ ನೋವು ಬೇಗ ಕಡಿಮೆಯಾಗುತ್ತದೆ.

ಎಳ್ಳೆಣ್ಣೆ ಅನ್ನು ಕುದಿಸಿ ಅದಕ್ಕೆ ಈ ಎಲೆಗಳನ್ನು ಹಾಕಿ ಇನ್ನೂ ಸ್ವಲ್ಪ ಸಮಯ ಕುದಿಸಿ ಬಳಿಕ ಅದನ್ನು ತಣಿಯಲು ಬಿಟ್ಟು ಏರ್ ಟೈಟ್ ಕಂಟೈನರ್ ಗೆ ಸಂಗ್ರಹ ಮಾಡಿ ಇಡಿ ಬಳಿಕ ಕೈಕಾಲು ನೋವು ಇದ್ದರೆ ಈ ನೋವು ನಿವಾರಕ ಎಣ್ಣೆಯಿಂದ ಮಸಾಜ್ ಮಾಡಿ ನೋವು ನಿವಾರಣೆಯಾಗುತ್ತದೆ.ಕೊಬ್ಬರಿ ಎಣ್ಣೆಗೆ ಈ ಕುಪ್ಪೆ ಗಿಡದ ಎಲೆಗಳನ್ನು ಹಾಕಿ ಕುದಿಸಿ ಇದಕ್ಕೆ ಸ್ವಲ್ಪ ಅರಿಶಿಣ ಮಿಶ್ರಣ ಮಾಡಿ, ಮುಖದ ಭಾಗದಲ್ಲಿ ಕಲೆಗಳು ಇದ್ದರೆ ಅದರ ಮೇಲೆ ಲೇಪ ಮಾಡಿ ಇದರಿಂದ ಕಲೆಗಳು ಬೇಗ ನಿವಾರಣೆ ಆಗುತ್ತೆ.