ಎದೆ ಉರಿ, ಹುಳಿ ತೇಗು , ಮಲಬದ್ದತೆ , ಗ್ಯಾಸ್ ಏನೇ ಸಮಸ್ಸೆ ಇದ್ದರು ಸಹ ಒಂದು ಬಾರಿ ಈ ಪಾನೀಯವನ್ನ ಮನೆಯಲ್ಲೇ ತಯಾರು ಮಾಡಿ ಕುಡಿದು ನೋಡಿ ..

202

ಅಸಿಡಿಟಿಗೆ ಪ್ರಭಾವಿತ ಡ್ರಿಂಕ್ ಇದು ಹೌದು ಅಳಲೆಕಾಯಿಯ ಸಹಾಯದಿಂದ ನಿಮ್ಮ ಗ್ಯಾಸ್ಟ್ರಿಕ್ ಸಮಸ್ಯೆ ಈ ಅಸಿಡಿಟಿ ಸಮಸ್ಯೆ ಮಂಗಮಾಯ.ಹೌದು ಅಳಲೆಕಾಯಿ ಯಿಂದ ಮಾಡಿದ ಇದೊಂದು ಕಷಾಯವನ್ನು ಮಾಡಿ ಕುಡಿಯುವುದರಿಂದ ಆಸಿಡಿಟಿ ಎಂಬ ಸಮಸ್ಯೆ ಬಹು ಬೇಗ ಕಡಿಮೆಯಾಗುತ್ತದೆ ಹಾಗೂ ಹೊಟ್ಟೆಗೆ ಸಂಬಂಧಿತ ಹಲವು ಸಮಸ್ಯೆಗಳು ಪರಿಹಾರ ಆಗುತ್ತದೆ ಇದನ್ನು ಮಾಡುವ ವಿಧಾನ ಹೇಗೆ ಮತ್ತು ಯಾವ ಸಮಯದಲ್ಲಿ ಕುಡಿಯಬೇಕು ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ಬಂದಾಗ ಈ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಯಾವುದಾದರೂ ಅಡ್ಡಪರಿಣಾಮಗಳು ಇದೆಯೆ?

ಇದನ್ನೆಲ್ಲಾ ತಿಳಿಯುವುದಕ್ಕಾಗಿ ಈ ದಿನದ ಈ ಪುಟವನ್ನು ಸಂಪೂರ್ಣವಾಗಿ ತಿಳಿಯಿರಿ ಹೌದು ಗ್ಯಾಸ್ಟ್ರಿಕ್ ಸಮಸ್ಯೆ ಇತ್ತೀಚೆಗೆ ಸರ್ವೇಸಾಮಾನ್ಯವಾಗಿದೆ ಎಷ್ಟರ ಮಟ್ಟಿಗೆ ಅಂದರೆ ಚಿಕ್ಕ ಮಕ್ಕಳಿಗೂ ಕೂಡ ಈ ಆಸಿಡಿಟಿ ಸಮಸ್ಯೆ ಉಂಟಾಗುತ್ತಿರುವುದು ವಿಪರ್ಯಾಸವೇ ಸರಿ.ವಾಯು ಉಂಟುಮಾಡುವಂತಹ ಆಹಾರಗಳನ್ನು ಹೆಚ್ಚಾಗಿ ತಿನ್ನುವುದರಿಂದಲೇ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ ಜೊತೆಗೆ ಸರಿಯಾದ ಸಮಯಕ್ಕೆ ಯಾವಾಗ ಊಟ ಮಾಡುವುದಿಲ್ಲ ಸರಿಯಾದ ಸಮಯಕ್ಕೆ ಊಟ ತಿಂಡಿ ಸೇವಿಸುವುದಿಲ್ಲ ಹಾಗೂ ಬೆಳಗ್ಗಿನ ತಿಂಡಿ ತಿನ್ನದೇ ಇದ್ದಾಗ ಈ ರೀತಿ ಅಸಿಡಿಟಿ ಉಂಟಾಗುತ್ತದೆ.

ಹಾಗಾಗಿ ಯಾವುದೇ ಕಾರಣಕ್ಕೂ ಬೆಳಗಿನ ತಿಂಡಿ ಬೇಡುವುದು ಸರಿಯಾದ ಸಮಯಕ್ಕೆ ಊಟ ಮಾಡದೇ ಇರುವುದು ಇಂತಹ ರೂಢಿಯನ್ನ ಮಾಡಿಕೊಳ್ಳಬೇಡಿ ಒಮ್ಮೆ ಅಸಿಡಿಟಿ ಉಂಟಾದರೆ ಮುಂದಿನ ದಿನಗಳಲ್ಲಿ ಎಷ್ಟು ಕೆಟ್ಟ ಪ್ರಭಾವವನ್ನು, ಆರೋಗ್ಯದ ಮೇಲೆ ಬೀರುತ್ತದೆ ಅಂದರೆ ನಿಜಕ್ಕೂ ಇಂತಹ ತೊಂದರೆ ಅನ್ನೋ ಅನುಭವಿಸುತ್ತಾ ಇರುವವರಿಗೆ ಗೊತ್ತಿರುತ್ತದೆ ಗ್ಯಾಸ್ಟ್ರಿಕ್ ಎಂದರೆ ಏನು ಇಂತಹ ತೊಂದರೆ ಉಂಟಾದರೆ ಏನೆಲ್ಲ ಆಗುತ್ತದೆ ಅಂತ.

ಹಾಗಾಗಿ ಇವತ್ತಿನ ಲೇಖನಿಯಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆಗೆ ತುಂಬ ಸುಲಭವಾದ ಮನೆಮದ್ದನ್ನು ತಿಳಿಸಿಕೊಡಲಿದ್ದೇವೆ ಹೌದು ಇತ್ತೀಚೆಗೆ ಮಾರುಕಟ್ಟೆಗಳಲ್ಲಿ ಸಾಕಷ್ಟು ಸಿರಪ್ಗಳು ಮಾತ್ರೆಗಳು ಇನ್ನೂ ಕೆಲವೊಂದು ಪೌಡರ್ ಗಳು ದೊರೆಯುತ್ತದೆ ಗ್ಯಾಸ್ಟ್ರಿಕ್ ಅನ್ವಯ ನಿವಾರಣೆ ಮಾಡುವುದಕ್ಕೆ.

ಹೌದು ಇಲ್ಲ ಅನ್ನುವುದಿಲ್ಲ ಈ ರೀತಿ ಮಾತ್ರೆಗಳಿಂದ ಸಿರಪ್ ಗಳನ್ನು ತೆಗೆದುಕೊಂಡಾಗ ಕೂಡಲೆ ಗ್ಯಾಸ್ಟ್ರಿಕ್ ನಿವಾರಣೆ ಆಗುತ್ತೆ ಅಂದ ಆದರೆ ಮುಂದಿನ ದಿನಗಳಲ್ಲಿ ಆರೋಗ್ಯದ ಮೇಲೆ ಎಂತಹ ಪ್ರಭಾವ ಬೀರುತ್ತದೆ ಅನ್ನೋದನ್ನ ನಾವು ಲೆಕ್ಕಿಸುವುದೇ ಇಲ್ಲ ಇಂಥ ವಿಧಾನ ಗಳನ್ನೂ ಪಾಲಿಸುತ್ತಾ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತೇವೆ, ಆದರೆ ತಕ್ಷಣಕ್ಕೆ ಶಮನ ದೊರೆಯಿತೆಂದು ಖುಷಿ ಪಡುತ್ತೇವೆ ಅಷ್ಟೆ.

ಆದರೆ ಹೀಗೆ ಮಾಡಬೇಡಿ ಹೆಚ್ಚು ಮಾತ್ರೆ ತೆಗೆದುಕೊಳ್ಳುವುದು ಸೇನೆ ಯಾವುದೇ ಸೈಡ್ ಎಫೆಕ್ಟ್ ನೀಡುವ ವಿಧಾನಗಳನ್ನು ಪಾಲಿಸುವುದು ಮಾಡಬೇಡಿ ಈ ನೈಸರ್ಗಿಕವಾಗಿ ದೊರೆಯುವ ಸೋಂಪು ಜೀರಿಗೆ ಅಜ್ವಾನ ಅಳಲೆಕಾಯಿ ಮತ್ತು ಬ್ಲ್ಯಾಕ್ ಸಾಲ್ಟ್ ಬಳಸಿ ಒಂದೊಳ್ಳೆ ಮನೆ ಮದ್ದನ್ನು ಮಾಡಿ ನೋಡಿ ಇದನ್ನ ನಿಫಾ ಮಾಡುವುದರಿಂದ ಒಳ್ಳೆಯ ತೇಗು ಬರತ್ತೆ ಮತ್ತು ಗ್ಯಾಸ್ಟ್ರಿಕ್ ನಿವಾರಣೆ ಆಗುತ್ತೆ.

ಈಗ ಮಾಡುವ ವಿಧಾನವನ್ನು ನೋಡುವುದಾದರೆ ಮೊದಲಿಗೆ ಕಪ್ಪು ಅಳಲೆ ಕಾಯಿಯನ್ನು ತೆಗೆದುಕೊಂಡು ಅದನ್ನು ಕುಟ್ಟಿ ಪುಡಿ ಮಾಡಿ ಕೊಂದು ಸಂಗ್ರಹ ಮಾಡಿ ಇಟ್ಟುಕೊಳ್ಳಿ ಬಳಿಕ ಬಾಣಲೆಗೆ ಜೀರಿಗೆ ಮತ್ತು ಅಜ್ವಾನ ಹಾಕಿ ಸ್ವಲ್ಪ ಸಮಯ ಹುರಿದುಕೊಳ್ಳಿಈಗ ಪುಡಿ ಮಾಡಿಕೊಳ್ಳಬೇಕಾದ ಸಮಯದಲ್ಲಿ ಈ ಮಿಶ್ರಣಕ್ಕೆ ಸೋಂಪು ಮತ್ತು ಕಪ್ಪು ಉಪ್ಪನ್ನು ಮಿಶ್ರ ಮಾಡಿ ಇದನ್ನ ಕುಟ್ಟಿ ಪುಡಿ ಮಾಡಿ ಕೊಳ್ಳಬಹುದು ಅಥವಾ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ ಒಣ ದಾಗಿಯೆ ಈ ಮಿಶ್ರಣವನ್ನು ಪುಡಿ ಮಾಡಿಕೊಳ್ಳಿ.

ಇದನ್ನು ಶೇಖರಣೆ ಮಾಡಿ ಎತ್ತಿಟ್ಟುಕೊಳ್ಳಿ ಗ್ಯಾಸ್ಟ್ರಿಕ್ ಆದಾಗ ಅಥವಾ ಪ್ರತಿದಿನ ಮಧ್ಯಾಹ್ನದ ಸಮಯದಲ್ಲಿ ಆಗಲಿ ರಾತ್ರಿ ಸಮಯದಲ್ಲಿ ಆಗಲಿ ಊಟದ ಬಳಿಕ 1 ಗ್ಲಾಸ್ ನೀರಿಗೆ ಈ ಮಿಶ್ರಣವನ್ನು ಹಾಕಿ ಮಿಕ್ಸ್ ಮಾಡಿಕೊಂಡು ಕುಡಿಯಿರಿ ಇದರಿಂದ ಒಳ್ಳೆಯ ತೇಗು ಬರತ್ತೆ ಜೀರ್ಣ ಶಕ್ತಿ ಕೂಡ ವೃದ್ಧಿಸುತ್ತೆ ಯಾವುದೇ ಕಾರಣಕ್ಕೂ ವಾಯು ಸಮಸ್ಯೆ ಉಂಟಾಗುವುದಿಲ್ಲ.

WhatsApp Channel Join Now
Telegram Channel Join Now