ಒಂದು ಸಮಯದಲ್ಲಿ ಹೋಟೆಲ್ ಕೆಲಸ ಮಾಡಿಕೊಂಡು ಜೀವನ ಮಾಡುತಿದ್ದ ‘ಮುನಿರತ್ನ’ ಇಂದು ಮಿನಿಸ್ಟರ್ ಆಗಿದ್ದು ಹೇಗೆ ಗೊತ್ತಾ… ರೋಚಕ ಕಥೆ

147

ಹೌದು ನಿಮಗೆ ಈಗಾಗಲೇ ನಾವು ತಿಳಿಸಲಿರುವ ಮಾಹಿತಿ ಅರ್ಧದಷ್ಟು ತಿಳಿದಿದೆ ಹೌದು ಯಾವುದೇ ವ್ಯಕ್ತಿಗೆ ಆಗಲಿ ತಮ್ಮ ಜೀವನದಲ್ಲಿ ತಾವು ಮುಂದೆ ಏನಾಗುತ್ತೆ ಎಂದು ಸಹ ಊಹಿಸಲು ಕೂಡ ಸಾಧ್ಯವಾಗಿರುವುದಿಲ್ಲ ಹೌದು ನಾವು ಜೀವನದಲ್ಲಿ ಭವಿಷ್ಯದಲ್ಲಿ ಏನಾಗಬೇಕೆಂಬ ಕನಸು ಹೊಂದಿರುತ್ತವೆ ಆದರೆ ವಿಧಿಯಾಟ ನಮ್ಮ ಹಣೆಯಲ್ಲಿ ಜೇನನ್ನು ಬರೆದಿರುತ್ತದೆ ಅದೇ ಆಗುವುದು ಅನ್ನುವುದಕ್ಕೆ ಇನ್ನೊಬ್ಬ ವ್ಯಕ್ತಿಯ ಸಾಕ್ಷಿಯಾಗಿದ್ದಾರೆ ಹೌದು ಬೀದಿ ಬದಿ ಇಡ್ಲಿ ‌ಮಾರಾಟ ಮಾಡುತ್ತಿದ್ದ ವ್ಯಕ್ತಿ ಇಂದು ಸಿನಿಮಾ ಮತ್ತು ರಾಜಕೀಯ ಕ್ಷೇತ್ರದಲ್ಲಿ ಪ್ರಭಾವಿ ವ್ಯಕ್ತಿಯಾಗಿ ಬೆಳೆದು ಬಂದ ಹಾದಿ ನಿಜಕ್ಕೂ ಕೂಡ ಅಚ್ಚರಿ ಎಂದನಿಸುತ್ತದೆ. ಸಾಮಾನ್ಯವಾಗಿ ರಾಜಕೀಯ ಕ್ಷೇತ್ರ ಅಂದಾಕ್ಷಣ ಅದು ಹಣ ಇರುವಂತಹ ಜನರಿಗೆ ಮಾತ್ರ ಸೂಕ್ತ ಹಾಗೂ ಕುಟುಂಬ,

ಪಾರಂಪರಿಕವಾಗಿ ಆಳ್ವಿಕೆ ಮಾಡಿಕೊಂಡು ಬಂದಿರುವವರಿಗೆ ಮಾತ್ರ ಇಲ್ಲಿ ಹೆಚ್ಚು ಗೌರವ ಸಲ್ಲುತ್ತದೆ ಅಂತಲ್ಲ ನಾವು ಅಂದುಕೊಂಡಿರುತ್ತೇವೆ. ಆದರೆ ರಾಜಕೀಯದಲ್ಲಿ ಮಾತ್ರ ಯಾರು ಯಾವಾಗ ಏನು ಬೇಕಾದರು ಆಗಬಹುದು. ಈ ಸಿನಿಮಾ ಮತ್ತು ರಾಜಕೀಯ ಕ್ಷೇತ್ರದಲ್ಲಿ ಹೆಸರು ಮಾಡುವುದು ಅಷ್ಟೇನು ಸುಲಭದ ಮಾತಲ್ಲಾ. ಅದರಲ್ಲಿಯು ಸಹ ಮೂರುಬಾರಿ ಕ್ಷೇತ್ರದ ಶಾಸಕರಾಗಿ ಆಯ್ಕೆ ಆಗುವುದು ಎಂದರೆ ತಮಾಷೆ ಅಲ್ಲಾ. ಅಷ್ಟರ ಮಟ್ಟಿಗೆ ಆ ಕ್ಷೇತ್ರದ ಪ್ರೀತಿ ವಿಶ್ವಾಸ ಗಳಿಸಿಕೊಂಡು ಹ್ಯಾಟ್ರಿಕ್ ಗೆಲುವು ದಾಖಲಿಸಿಕೊಂಡಿರುವ ನಿರ್ಮಾಪಕ ಮತ್ತು ಶಾಸಕರಾಗಿರುವ ಮುನಿರತ್ನ ಅವರು ನಿಜಕ್ಕೂ ಕೂಡ ಸಾಹಸಿಯೇ ಸರಿ ಎಂದು ಹೇಳಬಹುದು.

ಹೌದು ಮುನಿರತ್ನ ಅವರ ಹೆಸರನ್ನು ನೀವು ಕೇಳಿರುತ್ತೀರಾ ಇವರು ಚಿತ್ರರಂಗದಲ್ಲಿಯೂ ಸಹಾಸ ಎನ್ನಿಸಿಕೊಂಡಿರುವವರು ಅಷ್ಟೇ ಅಲ್ಲ ರಾಜಕೀಯದಲ್ಲಿಯೂ ಕೂಡ ಬಹಳ ಜನಪ್ರಿಯತೆ ಗಳಿಸಿರುವವರು. ಮುನಿರತ್ನ ಅವರು ನಾಯ್ಡು ಸಮುದಾಯದವರಾಗಿದ್ದು, ಬಡತನದ ಬೇಗೆಯಲ್ಲಿ ಬೆಂದವರು. ಜೀವನ ನಿರ್ವಹಣೆಗೆ ಅವರು ರಸ್ತೆ ಬದಿಯಲ್ಲಿ ಇಡ್ಲಿ ಮಾರಾಟ ಮಾಡುತ್ತ ಇದ್ದರು. ಅಷ್ಟೇ ಅಲ್ಲ ಮುನಿರತ್ನ ಅವರು ಆಟೊ ಅನ್ನು ಸಹ ಓಡಿಸುತ್ತಾ ಇದ್ದರಂತೆ ದಿನ ಕಳೆದಂತೆ ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ದಿ ಕಂಡರು, ಆರ್ಥಿಕ ಪರಿಸ್ಥಿತಿ ಉತ್ತಮವಾಗುತ್ತದೆ. ಹೀಗೆ ಒಂದಷ್ಟು ರಿಯಲ್ ಎಸ್ಟೇಟ್ ಉದ್ಯಮಕ್ಕೂ ಕಾಲಿಟ್ಟ ಮುನಿರತ್ನ ಅವರು ವಿವಿಧ ಟೆಂಡರ್ ಗಳನ್ನು ಪಡೆಯುತ್ತಾರೆ. ಹೇಗೆ ಈ ಮೂಲಕ ಕಾಂಟ್ರ್ಯಾಕ್ಟರ್ ಆಗಿಯೂ ಸಹ ಉತ್ತಮ ಕಾರ್ಯವನ್ನು ನಿರ್ವಹಿಸಿ ಮುನಿರತ್ನ ಅವರು ಸ್ಥಳೀಯ ಜನರ ಪ್ರೀತಿ ಅನ್ನೋ ಕಳಿಸುತ್ತಾರೆ ಆನಂತರ ಕಾರ್ಪರೇಟರ್ ಕೂಡ ಆಗುತ್ತಾರೆ. ರಾಜಕೀಯವಾಗಿ ಗುರುತಿಸಿಕೊಳ್ಳುತ್ತಾ ಕಾಂಗ್ರೆಸ್ ಪಕ್ಷದ ನಾಯಕರೊಂದಿಗೆ ಓಡಾಡಿ ಟಿಕೆಟ್ ಪಡೆದು ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿ ಗೆಲ್ಲುತ್ತಾರೆ.

ಏನೋ ಮುನಿರತ್ನ ಅವರು 2001ರಲ್ಲಿ ರಾಮ್ ಕುಮಾರ್ ಖುಷ್ಬೂ ಅಭಿನಯದ ಆಂಟಿ ಪ್ರೀತ್ಸೆ ಎಂಬ ಚಲನಚಿತ್ರಕ್ಕೆ ಬಂಡವಾಳವನ್ನು ಕೂಡಾ ಹೂಡುತ್ತಾರೆ ಈ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ಮಾಪಕರಾಗಿಯೂ ಕೂಡ ಮುನಿರತ್ನ ಪರಿಚಯ ಆದರು. ನಂತರ ರಕ್ತ ಕಣ್ಣೀರು, ಅನಾಥರು ಕಠಾರಿವೀರ ಸುರಸುಂದರಂಗಿ,ಇತ್ತೀಚೆಗೆ ದರ್ಶನ್ ಅಭಿನಯದ ಪೌರಾಣಿಕ ಕುರುಕ್ಷೇತ್ರ ಸಿನಿಮಾವನ್ನು ಅದ್ದೂರಿತನದಲ್ಲಿ ನಿರ್ಮಾಣ ಮಾಡಿ ಕನ್ನಡ ಚಿತ್ರರಂಗದ ಪ್ಯಾಶನೆಟ್ ನಿರ್ಮಾಪಕರು ಎಂದು ಸಹ ಗುರುತಿಸಿಕೊಳ್ಳುತ್ತಾರೆ.

ಹೀಗೆ ಹತ್ತು ಐವತ್ತು ರೂ.ಗೆ ದುಡಿಯುತ್ತ ಇದ್ದ ಶಾಸಕ ಮುನಿರತ್ನ ಅವರು ಇಂದು ನೂರಾರು ಕೋಟಿಯ ಒಡೆಯರಾಗಿದ್ದಾರೆ. ಹೌದು ಮುನಿರತ್ನ ಅವರು ಕುರುಕ್ಷೇತ್ರ ಸಿನಿಮಾ ನಿರ್ಮಾಣ ಮಾಡಿದಾಗ ಇವರಿಗೆ ಈ ಸಿನಿಮಾ ಸಾಕಷ್ಟು ಯಶಸ್ಸು ತಂದುಕೊಟ್ಟಿತು ಹಾಗೂ ಹೆಚ್ಚು ಜನಪ್ರಿಯತೆ ಅನ್ನೋ ಕೂಡಾ ತಂದುಕೊಟ್ಟಿತು ಆ ನಂತರ ಇವರು ಇನ್ನಷ್ಟು ಫೇಮಸ್ ಆದರು ಕೂಡಾ ನೋಡಿದ್ರಲ್ಲ ಮುನಿರತ್ನ ಅವರು ಬೆಳೆದು ಬಂದ ಹಾದಿ ಇವರು ಬೆಳೆದು ಬಂದ ಹಾದಿ ಅಷ್ಟು ಸುಲಭವಾಗಿರಲಿಲ್ಲ ಆದರೆ ಇವರು ಪಟ್ಟ ಕಷ್ಟಕ್ಕೆ ಇವರಿಗೆ ತಕ್ಕ ಫಲ ದೊರೆತಿದೆ ಆದ್ದರಿಂದ ಕಷ್ಟಪಟ್ಟು ಬೆಳೆದು ಬಂದವರಿಗೆ ಆ ದೇವರು ಸದಾ ಕೈಹಿಡಿಯುತ್ತಾನೆ ಅನ್ನೋದಕ್ಕೆ ಮುನಿರತ್ನ ಅವರು ಕೂಡ ಸಾಕ್ಷಿಯಾಗಿದ್ದಾರೆ ಇನ್ನೂ ಇವರ ಕುರಿತು ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ.

WhatsApp Channel Join Now
Telegram Channel Join Now