ಕನ್ನಡ ಒಳ್ಳೆ ಹಾಸ್ಯನಟ ಕೋಮಲ್ ಪತ್ನಿ ಹೇಗಿದ್ದಾರೆ ಗೊತ್ತ …ನೋಡಿ ಎಷ್ಟು ಕ್ಯೂಟ್

186

ಕೆಲ ಕಲಾವಿದರ ಹಾಗೆ ಅವರ ನಟನೆಯಿಂದ ಮಾತ್ರ ಜನಪ್ರಿಯತೆ ಪಡೆದುಕೊಳ್ಳುವುದಿಲ್ಲ ಅವರು ಯಾರ ಜೊತೆ ಅಭಿನಯ ಮಾಡಿರುತ್ತಾರೆ ಎಂಬುದರ ಆಧಾರದ ಮೇಲೆಯೂ ಸಹ ಅವರು ಹೆಚ್ಚು ಜನಪ್ರಿಯತೆ ಪಡೆದು ಕೊಂಡು ಬಿಡುತ್ತಾರೆ. ಅದೇ ರೀತಿ ಸಾಹಸಸಿಂಹ ವಿಷ್ಣುವರ್ಧನ್ ರೆಬಲ್ ಸ್ಟಾರ್  ಅಂಬರೀಷ್ ಅವರ ಜೊತೆ ಮೊದಲ ಬಾರಿಗೆ ಅಭಿನಯ ಮಾಡಿ ಬಹಳ ಜನಪ್ರಿಯತೆ ಪಡೆದುಕೊಂಡ ಈ ನಟ ಹೆಚ್ಚಿನದಾಗಿ ಹಾಸ್ಯ ಪಾತ್ರಗಳಲ್ಲಿ ಕಾಣಿಸಿಕೊಂಡು ನಮ್ಮನೆಲ್ಲ ಮನರಂಜಿಸಿದ್ದಾರೆ.

ಹೌದು ನಾವು ಈ ದಿನ ಮಾತನಾಡುತ್ತಾ ಇರುವುದು ನವರಸ ನಾಯಕ ಎಂದೇ ಖ್ಯಾತಿ ಗಳಿಸಿರುವ ನಮ್ಮ ಸ್ಯಾಂಡಲ್ ವುಡ್ ನ ದಿಗ್ಗಜರು ಜಗ್ಗೇಶ್ ಅವರ ಸಹೋದರ ಆಗಿರುವ ನಟ ಕೋಮಲ್ ಅವರ ಕುರಿತು. ಹೌದು  ನಟ ಜಗ್ಗೇಶ್ ಹಾಗೂ ನಟ ಕೋಮಲ್ ಅವರು ಒಟ್ಟಿಗೆ ಬೆಳ್ಳಿ ತೆರೆ ಮೇಲೆ ಕಂಡು ಹಲವು ಜನರಿಗೆ ಹೆಚ್ಚು ಮನರಂಜನೆ ನೀಡಿದ್ದಾರೆ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸಿದ್ದಾರೆ. ಹೌದು ಇವರಿಬ್ಬರೂ ಜೊತೆಗೆ ಸಿನಿಮಾಗಳನ್ನ ಮಾಡಿ ಆ ಸಿನಿಮಾಗಳು ಸೂಪರ್ ಹಿಟ್ ಕೂಡ ಆಗಿದ್ದು ಇವರ ಅಭಿನಯವನ್ನು ನೀವು ಸಹ ನೋಡಿ ನಕ್ಕು ನಕ್ಕು ಸುಸ್ತಾಗಿರುತ್ತೀರಿ.

ಹೌದು  ನಟ ಕೋಮಲ್ ಅವರ ಕಾಮಿಡಿ ನೋಡುವುದಕ್ಕಾಗಿ ಅಂತಾನೆ ಸೆಪರೇಟ್ ಫ್ಯಾನ್ ಬೇಸ್ ಇದೆ. ಅಣ್ಣನ ಮುದ್ದು ತಮ್ಮನಾಗಿರುವ ನಟ ಕೋಮಲ್ ಅವರು ಕನ್ನಡ ಸಿನಿಮಾ ರಂಗ ಹೊರತುಪಡಿಸಿ ಬೇರೆ ಯಾವ ಭಾಷೆಗಳಲ್ಲಿಯೂ ಕೊಡ ಅಭಿನಯಿಸಲ್ಲ.  ಆದರೆ ಕನ್ನಡಾಭಿಮಾನವನ್ನು ಅಪಾರ ಹೊಂದಿರುವ, ನಟ ಕೋಮಲ್ ಅವರು ಇತ್ತೀಚೆಗೆ ಯಾವ  ಸಿನಿಮಾಗಳಲ್ಲಿಯೂ ಕೂಡ ಅಷ್ಟಾಗಿ  ಕಾಣಿಸಿಕೊಳ್ಳುತ್ತಿಲ್ಲಾ. ಆದರೆ ಹಲವು ಸಿನಿಮಾಗಳಲ್ಲಿ ಜನರನ್ನ ನಕ್ಕು ನಲಿಸಿರುವ ನಟ ಕೋಮಲ್ ಅವರ ಕೊಡುಗೆ ಸಿನಿಮಾರಂಗಕ್ಕೆ ಅಪಾರ. ಹೌದು ನಟ ಕೋಮಲ್ ಅವರು ಹಾಸ್ಯ ಕಲಾವಿದರಾಗಿ ಮಾತ್ರವಲ್ಲ ಖಳನಾಯಕನಾಗಿಯೂ ಸಹ ಕೆಲ ಸಿನಿಮಾಗಳಲ್ಲಿ ಅಭಿನಯ ಮಾಡಿದ್ದಾರೆ ಇನ್ನು ಇವರು ನಟ ಮಾತ್ರವಲ್ಲ ಪೋಷಕ ಪಾತ್ರದಲ್ಲಿ ಅಭಿನಯ ಮಾಡಿದ್ದಾರೆ. ನಟ ಕೋಮಲ್ ಅವರು ತಮ್ಮ ಅಣ್ಣನೇ ಸಿನೆಮಾ ರಂಗದಲ್ಲಿ ದೊಡ್ಡ ನಟ ಆಗಿದ್ದರೂ ಸಿನಿಮಾರಂಗಕ್ಕೆ ಯಾರ ಸಹಾಯವಿಲ್ಲದೆ ಎಂಟ್ರಿಕೊಡುತ್ತಾರೆ ಮತ್ತು ಅವಕಾಶಗಳನ್ನು ಸಹ ಗಳಿಸುತ್ತಾರೆ ಜನಪ್ರಿಯ ನಟನಾಗಿಯೂ ಸಹ ಬೆಳೆದು ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ನಟ ಕೋಮಲ್.

ಇನ್ನು ಜಗ್ಗೇಶ್ ಅವರ ಬಗ್ಗೆ ಕೂಡ ನಾವು ಮಾತನಾಡವುದಾದರೆ  ಅಣ್ಣ ತಮ್ಮ ಕನ್ನಡ ಸಿನಿಮಾ ರಂಗದಲ್ಲಿ ಅಪಾರ ಯಶಸ್ಸನ್ನು ಕಂಡಿದ್ದಾರೆ, ಹೌದು ನವರಸ ನಾಯಕ ಅಂತಾನೇ ಹೆಸರು ಗಳಿಸಿರುವ ಇವರು ಜೀ ಕನ್ನಡ ವಾಹಿನಿಯಲ್ಲಿ ಕಾಮಿಡಿ ಶೋ ಆಗಿರುವ ಕಾಮಿಡಿ ಕಿಲಾಡಿ ಎಂಬ ಶೋನಲ್ಲಿ ಜಡ್ಜ್ ಆಗಿಯೂ ಸಹ ಕೆಲಸ ನಿಲ್ಲಿಸಿ ಜನರಿಗೆ ಬಹಳಷ್ಟು ಮನರಂಜನೆ ನೀಡಿದ್ದಾರೆ. ವಾರಾಂತ್ಯದಲ್ಲಿ ವಿವರ ಶೋ ನೋಡುತ್ತಾ ಇದ್ದರೆ ಸಮಯ ಕಳೆಯುವುದೇ ನಮಗೆ ತಿಳಿಯುವುದಿಲ್ಲ ಅಷ್ಟರಮಟ್ಟಿಗೆ ಮನರಂಜನೆ ನೀಡುತ್ತಾರೆ ಜಗ್ಗೇಶ್ ಮತ್ತು ಈ ಕಾಮಿಡಿ ಕಿಲಾಡಿ ಶೋ ಹಾಗೆ ಈ ಕಾರ್ಯಕ್ರಮದ ಮೂಲಕ ಜನರನ್ನು ನಗಿಸುತ್ತಾ ಒಳ್ಳೆಯ ಕಿವಿ ಮಾತನ್ನ ಹೇಳುತ್ತಾ ತಮ್ಮ ಜೀವನದ ಅನುಭವಗಳನ್ನು ಹಂಚಿಕೊಳ್ಳುತ್ತಾ ನಟ ಜಗ್ಗೇಶ್ ಅವರು ಬಹಳ ಉತ್ತಮವಾಗಿ ಈ ಶೋ ನಡೆಸಿಕೊಡುತ್ತಾ ಬಂದಿದ್ದಾರೆ.

ಇನ್ನೂ ಹಲವು ಮಂದಿ ಕಾಮಿಡಿ ಕಿಲಾಡಿ ಷೋ ಮತ್ತೆ ಮೂಡಿ ಬರಲಿ ಎಂದು ಬಯಸುತ್ತಾ ಇದ್ದು ಅಣ್ಣನಂತೆ ತಮ್ಮ ಸಹ ಉತ್ತಮವಾಗಿ ನಟನೆ ಮಾಡುತ್ತಾರೆ ಹಾಗೆ ಈ ಅಣ್ಣ ತಮ್ಮನ ಬಗ್ಗೆ ನಾವು ಈಗಾಗಲೇ ಮಾತನಾಡಿದೆವು ಆದರೆ ನಟ ಕೋಮಲ್ ಅವರ ಪತ್ನಿಯ ಬಗ್ಗೆ ನೀವು ಎಲ್ಲಿಯೂ ಕೇಳಿರುವುದಿಲ್ಲ ಹೌದು ಬಹಳ ಸರಳ ವ್ಯಕ್ತಿಯಾಗಿರುವ ಕೋಮಲ್ ಅವರು ಮತ್ತು ಅವರ ಪತ್ನಿ ಇವರಿಬ್ಬರ ಫೋಟೋ ಅನ್ನು ನೀವು ಈ ಲೇಖನದಲ್ಲಿ ಕಾಣಬಹುದು. ನಟ ಕೋಮಲ್ ಅವರ ಕುರಿತು ನಿಮ್ಮ ಅನಿಸಿಕೆ ಕಮೆಂಟ್ ಮಾಡಿ ಶುಭದಿನ ಧನ್ಯವಾದ.

WhatsApp Channel Join Now
Telegram Channel Join Now