ಗೆಜ್ಜೆ ವಸ್ತ್ರಗಳು ಮನೆಯಲ್ಲೇ ಹೇಗೆ ಸುಲಭವಾಗಿ ತಯಾರಿಸಬಹುದು ಗೊತ್ತ .. ನೋಡಿ ಹೇಗೆ

201

ಗೆಜ್ಜೆವಸ್ತ್ರವನ್ನು ನಾವು ಸಾಮಾನ್ಯವಾಗಿ ಹಬ್ಬಗಳಲ್ಲಿ ಅಥವಾ ವಿಶೇಷ ವ್ರತಗಳಲ್ಲಿ ಅಥವಾ ದೇವಸ್ಥಾನಗಳಿಗೆ ಪೂಜೆ ಗೆ ಹೋಗುವಾಗ ತೆಗೆದುಕೊಂಡು ಹೋಗ್ತೇವೆ ಮತ್ತು ದೇವರಿಗೆ ಹಾಕುತ್ತೇವೆ. ಆದರೆ ಮನೆಯಲ್ಲಿ ವಿಶೇಷವಾಗಿ ನಿಮ್ಮ ಕೈಯಾರೆ ಗೆಜ್ಜೆವಸ್ತ್ರವನ್ನು ಮಾಡುವುದು ಹೇಗೆ ಗೊತ್ತಾ?

ನಮಸ್ಕಾರ ಪ್ರಿಯ ಓದುಗರೆ, ನಮ್ಮ ಹಿಂದೂ ಸಂಪ್ರದಾಯದಲ್ಲಿ ದೇವರ ಪೂಜೆಗೆ ಎಂತಹ ಅಗಾಧವಾದ ಸ್ಥಾನವಿದೆ ಎಂಬುದು ನಿಮಗೂ ಕೂಡ ಗೊತ್ತಿದೆ. ನಾವು ಪ್ರತಿದಿನ ಬೆಳಿಗ್ಗೆ ಎದ್ದರೆ ದೇವರ ಮುಖವನ್ನು ನೋಡುವ ಮೂಲಕ ಅಥವಾ ದೇವರ ಆರಾಧನೆ ಮಾಡುವ ಮೂಲಕ ದಿನ ಶುರುಮಾಡುತ್ತೇವೆ, ಆ ದಿನ ಪೂರ್ತಿ ಸಕರಾತ್ಮಕವಾಗಿ ಇರಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇವೆ ಹಾಗೂ ನಮಗೆ ಯಾವುದೇ ಕಷ್ಟಗಳು ಬಾರದಿರುವ ಹಾಗೆ ನೋಡಿಕೋ ಎಂದು ದೇವರಲ್ಲಿ ಪ್ರಾರ್ಥನೆ ಇಡುತ್ತೇವೆ.

ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುವಾಗ ನಾವು ದೇವರನ್ನು ಅಲಂಕಾರ ಮಾಡಿ ದೇವರ ಅಂದವನ್ನೂ ಕಣ್ತುಂಬಿಕೊಳ್ಳುತ್ತೇವೆ. ದೇವರ ಆರಾಧನೆ ಮಾಡುವ ದೇವರನ್ನ ನೋಡುವುದೇ ಚಂದ ಇರುತ್ತದೆ ಹಾಗೂ ದೇವರಿಗೆ ನಾವು ಕ್ರಮಬದ್ಧವಾಗಿ ಆರಾಧನೆ ಮಾಡುವಾಗ ದೇವರಿಗೆ ವಿಶೇಷವಾಗಿ ಗೆಜ್ಜೆವಸ್ತ್ರವನ್ನು ಕೂಡ ಸಮರ್ಪಣೆ ಮಾಡುತ್ತೇವೆ. ಹೇಗೆ ಹೂವ ಮುಡಿಸಿ ದೇವರನ್ನ ಅಂದವಾಗಿ ಸುತ್ತೇವೆ ಹಾಗೆ ಗೆಜ್ಜೆವಸ್ತ್ರವನ್ನು ದೇವರಿಗೆ ಸಮರ್ಪಣೆ ಮಾಡಿ ದೇವರನ್ನು ಅಲಂಕಾರ ಮಾಡುತ್ತೇವೆ.

ಹೆಚ್ಚಿನ ಮಂದಿ ಈ ಗೆಜ್ಜೆವಸ್ತ್ರವನ್ನು ಅಂಗಡಿಯಿಂದ ತಂದು ದೇವರಿಗೆ ಸಮರ್ಪಣೆ ಮಾಡುತ್ತಾರೆ, ಆದರೆ ಗೆಜ್ಜೆವಸ್ತ್ರವನ್ನು ಕೆಲವರು ಮನೆಯಲ್ಲಿಯೇ ಮಾಡಿಕೊಂಡು ಅದನ್ನು ದೇವರಿಗೆ ಸಮರ್ಪಣೆ ಮಾಡುತ್ತಾರೆ ಈ ರೀತಿ ನೀವಾಗೇ ಕೈಯಾರೆ ಮಾಡಿದ ಗೆಜ್ಜೆವಸ್ತ್ರವನ್ನು ದೇವರಿಗೆ ಸಮರ್ಪಣೆ ಮಾಡಿದಾಗ ಅದೊಂದು ವಿಶೇಷ ಅನುಭವ ಹಾಗೂ ಏನೋ ಒಂಥರಾ ನೆಮ್ಮದಿ ನಮಗೆ ಸಿಗುತ್ತದೆ ಹಾಗೆಯೇ ನಮ್ಮ ಕೈಯ್ಯಾರೆ ಮಾಡಿದ ಗೆಜ್ಜೆವಸ್ತ್ರವನ್ನು ನಾವು ದೇವರಿಗೆ ಮಾಡಿ ಹಾಕಿದಾಗ ನಮ್ಮಲ್ಲಿಯೂ ಕೂಡ ಸಕಾರಾತ್ಮಕವಾದ ಭಾವನೆ ಉಂಟಾಗುತ್ತದೆ ಆಗ ನಾವು ದೇವರನ್ನು ನೋಡೋದೆ ಏನೋ ಚೆಂದವಾಗಿರುತ್ತದೆ.

ಆ ಕಾರಣಕ್ಕಾಗಿ ಇಂದಿನ ಲೇಖನಿಯಲ್ಲಿ ಮನೆಯಲ್ಲೀಗ ಗೆಜ್ಜೆವಸ್ತ್ರವನ್ನು ಮಾಡೋದು ಹೇಗೆ ಅಂತಾ ತಿಳಿಸಿಕೊಡುತ್ತೇವೆ ಬನ್ನಿ ಗೆಜ್ಜೆವಸ್ತ್ರ ಮಾಡುವುದು ಕಷ್ಟದ ವಿಚಾರವೇನು ಅಲ್ಲ ಸಾಮಾನ್ಯವಾಗಿ ಇದನ್ನು ವರಮಹಾಲಕ್ಷ್ಮಿ ದೇವಿಯ ವ್ರತದ ಸಮಯದಲ್ಲಿ ಗಣಪತಿಯ ಆರಾಧನೆ ಮಾಡುವಾಗ ಅಥವಾ ಮನೆಯಲ್ಲಿ ಯಾವುದೇ ವಿಶೇಷವಾದ ಸಂಭ್ರಮ ನಡೆಯುವ ದೇವರ ಫೋಟೋಗೆ ಅಥವಾ ದೇವರ ವಿಗ್ರಹಕ್ಕೆ ಗೆಜ್ಜೆವಸ್ತ್ರವನ್ನು ಹಾಕುತ್ತೇವೆ ಇದನ್ನು ಹತ್ತಿಯಿಂದ ತಯಾರಿ ಮಾಡಿಕೊಳ್ಳುತ್ತಾರೆ ಶುದ್ಧವಾದ ಹತ್ತಿಯ ತೆಗೆದುಕೊಂಡು, ಅದರೊಳಗೆ ಬೀಜ ಇಲ್ಲದಿರುವ ಹಾಗೆ ನೋಡಿಕೊಳ್ಳಬೇಕು ಈ ಗೆಜ್ಜೆವಸ್ತ್ರವನ್ನು ಮಾಡುವಾಗ ನಿಮ್ಮ ಕೈಗಳು ಸ್ವಚ್ಛವಾಗಿರಬೇಕು.

ಗೆಜ್ಜೆವಸ್ತ್ರವನ್ನು ಮಾಡುವುದಕ್ಕಾಗಿಯೇ ಅಂಗಡಿಗಳಲ್ಲಿ ಚಂದ್ರ ಎಂಬ ವಸ್ತು ಸಿಗುತ್ತದೆ, ಅದನ್ನು ತಂದು ಹಾಲು ಶುದ್ಧ ಜಲದೊಂದಿಗೆ ಮಿಶ್ರ ಮಾಡಿ ಅದಕ್ಕೆ ಸ್ವಲ್ಪ ಕುಂಕುಮ ಮಿಶ್ರಮಾಡಿ. ನಂತರ ಹತ್ತಿಯನ್ನು ತೆಗೆದುಕೊಂಡು ನಿಮಗೆ ಎಷ್ಟು ಉದ್ದವಾಗಿ ಗೆಜ್ಜೆವಸ್ತ್ರ ಬೇಕಿರುತ್ತದೆ ಅಷ್ಟು ಉದ್ದವಾಗಿ ಹೂವಿನ ಮಾಲೆಯಂತೆ ಮಾಡಿಕೊಳ್ಳಬೇಕು ಬಳಿಕ ಹಾಲು ಮತ್ತು ಚಂದ್ರ ಮಿಶ್ರಿತ ನೀರಿನಿಂದ ನಿಮ್ಮ 2 ಬೆರಳುಗಳ ಸಹಾಯದಿಂದ ಹತ್ತಿಯಲ್ಲಿ ಒಂದೊಂದು ಇಂಚಿಗೆ ಬತ್ತಿ ಹೊಸೆದು ಆಕೆ ಬೆರಳುಗಳಿಂದ ಹೊಸೆಯಬೇಕು ಇರಿತ ಮಾಡುತ್ತಾ ಬಂದರೆ ಗೆಜ್ಜೆವಸ್ತ್ರ ತಯಾರಾಗುತ್ತದೆ ಸುಲಭವಾಗಿ ಶುದ್ಧವಾಗಿ ಮನೆಯಲ್ಲಿ ಗೆಜ್ಜೆವಸ್ತ್ರವನ್ನು ಈ ರೀತಿ ತಯಾರಿ ಮಾಡಿಕೊಳ್ಳಬಹುದು.

ಇದೇ ವಿಧಾನದಲ್ಲಿ ಅರಿಶಿಣದಿಂದ ಮಾಡಿದ ಗೆಜ್ಜೆವಸ್ತ್ರವನ್ನು ಕೂಡ ತಯಾರಿ ಮಾಡಿಕೊಳ್ಳಬಹುದು ಹೇಗೆಂದರೆ ಮೊದಲು ಹತ್ತಿಯನ್ನು ಉದ್ದವಾಗಿ ಮಾಲೆಯ ರೀತಿಯಲ್ಲಿ ಮಾಡಿಕೊಳ್ಳಬೇಕು ಬಳಿಕ ಅರಿಶಿಣದ ನೀರಿನಿಂದ ನಿಮ್ಮ ಬೆರಳುಗಳ ಸಹಾಯದಲ್ಲಿ ಒಂದೊಂದು ಇಂಚಿಗೆ ಮಧ್ಯಾಹ್ನ ಹೊಸೆಯಬೇಕು. ಈ ವಿಧಾನದಿಂದ ಸುಲಭವಾಗಿ ಮನೆಯಲ್ಲಿಯೇ ಗೆಜ್ಜೆವಸ್ತ್ರವನ್ನು ಮಾಡಿಕೊಳ್ಳಬಹುದು…

WhatsApp Channel Join Now
Telegram Channel Join Now